ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 15/10/2022 ರಂದು ಸಂಜೆ ಸುಮಾರು 7:00 ಗಂಟೆಗೆ, ಕುಂದಾಪುರ ತಾಲೂಕಿನ, ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆಯ ತುಳಸಿ ಶಾಲೆಯ ಕ್ರಾಸ್‌ಬಳಿ SH52 ರಸ್ತೆಯಲ್ಲಿ, ಆಪಾದಿತ ಸಂತೋಷ ಶೆಟ್ಟಿ ಎಂಬವರು KA20-X-3970ನೇ ಬೈಕನ್ನು ಕುಂದಾಪುರ ಕಡೆಯಿಂದ ಅಂಪಾರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ಯಾವುದೇ ಸೂಚನೆ ನೀಡದೇ ರಸ್ತೆಯ ಎಡಬದಿಯಿಂದ ಬಲಬದಿಯ ತುಳಸಿ ಶಾಲೆಯ ಕಡೆಗೆ ತಿರುಗಿಸಿ, ಅಂಪಾರು ಕಡೆಯಿಂದ ಕುಂದಾಪುರ ಕಡೆಗೆ ಪಿರ್ಯಾದಿದಾರರಾದ ಶ್ತಾಮಶೇಖರ (34) ತಂದೆ ಬಾಬು ಪೂಜಾರಿ ವಾಸ: ಬುಗ್ರಿಕಡು, ಸಂತೋಷ ನಗರ,ಹೆಮ್ಮಾಡಿ ಎಂಬವರು KA19-ER-4422 Bajaj ಅವೆಂಜರ್ ಬೈಕಿನಲ್ಲಿ ಜೀವನ್‌(16ವ) ಎಂಬವರನ್ನು ಸಹ ಸವಾರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ ಸದ್ರಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕೈಗೆ ಮೂಳೆ ಮುರಿತವಾದ ಗಾಯ, ಆಪಾದಿತನ ಬಾಯಿ, ದವಡೆ ಹಾಗೂ ಎಡಕಾಲಿಗೆ ಗಾಯ ನೋವು ಹಾಗೂ ಜೀವನ್‌‌ನಿಗೆ ಹಣೆ ಮತ್ತು ತುಟಿಗೆ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪಿರ್ಯಾದಿ ಹಾಗೂ ಆಪಾದಿತ ಸಂತೋಷ ಶೆಟ್ಟಿ ಒಳರೋಗಿಯಾಗಿ ದಾಖಲಾಗಿದ್ದು, ಜೀವನ್‌ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 110/2022 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾಧ ವರ್ಕಿ (33) ತಂದೆ: ಜೇಮ್ಸ್‌ ವಾಸ: ಕಳಕಿತೊಟ್ಟೆ ಮನೆ ಹರ್ಕೋಡು ಜಡ್ಕಲ್‌ಗ್ರಾಮ ಬೈಂದೂರು ತಾಲೂಕು ಇವರು ಅವರ ತಮ್ಮನಾದ ಜೋಸೆಫ್‌ರವರೊಂದಿಗೆ ಜಡ್ಕಲ್‌ ಗ್ರಾಮದಲ್ಲಿ ಸರ್ವಿಸ್‌ಸ್ಟೇಷನ್‌ ವ್ಯವಹಾರ ನಡೆಸಿಕೊಂಡಿದ್ದು ದಿನಾಂಕ 15/10/2022 ರಂದು ಸಂಜೆ ಸರ್ವಿಸ್‌ ಸ್ಟೇಷನ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ಜೋಸೆಫ್‌ರವರ KA-20 EM-3592 Activa Honda ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸಹ ಸವಾರನಾಗಿ ಕುಳಿತು ಜಡ್ಕಲ್‌ಕಡೆಯಿಂದ ಕಾನ್ಕಿ ಕಡೆಗೆ ಹೋಗುತ್ತಿರುವಾಗ ಆರೋಪಿ ಜೋಸೆಫ್‌ಮೋಟಾರ್ ಸೈಕಲ್‌ನ್ನು ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿ ರಾತ್ರಿ 8:30 ಗಂಟೆಗೆ ಬೈಂದೂರು ತಾಲೂಕು ಜಡ್ಕಲ್‌ ಗ್ರಾಮದ ಜಡ್ಕಲ್‌ಮುದೂರು ಮುಖ್ಯರಸ್ತೆಯ ಕಾನ್ಕಿ ಶೇಖರ ಶೆಟ್ಟಿಯವರ ಮನೆ ಸಮೀಪ ತಿರುವು ರಸ್ತೆಯಲ್ಲಿ ಮೋಟಾರ್ ಸೈಕಲ್‌ನ ವೇಗವನ್ನು ನಿಯಂತ್ರಿಸಲಾಗದೇ ಹತೋಟಿ ತಪ್ಪಿ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ವರ್ಕಿ ರವರಿಗೆ ಎಡ ಕೈ ಗೆ ಒಳ ಜಖುಂ ನೋವು ಮತ್ತು ಹಣೆಗೆ ರಕ್ತ ಗಾಯ ಉಂಟಾಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಆರೋಪಿಗೂ ಎಡಕಾಲಿಗೆ ಗುದ್ದಿದ ಒಳನೋವು ಉಂಟಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 45/2022 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾಧ ಮಹಮ್ಮದ್ ಸಫ್ವಾನ್ (21), ತಂದೆ: ಸುಭಾನ್ ಖಾದರ್ ವಾಸ: ವಜೀರ್ ಮಂಜಿಲ್, ಜಮೀಯಾ ಮಸೀದಿ ಬಳಿ, ಕೊಂಬಗುಡ್ಡೆ, ಮಲ್ಲಾರು ಗ್ರಾಮ, ಕಾಪು ತಾಲೂಕು, ಉಡುಪಿ ಇವರು ದಿನಾಂಕ 16/10/2022 ರಂದು ಸಾಯಂಕಾಲ ಸಮಯ ಸುಮಾರು 4:55 ಗಂಟೆಗೆ ಅಂಬಾಗಿಲು – ಕಲ್ಸಂಕ ರಸ್ತೆಯಲ್ಲಿ ಬರುವ ಅಂಬಾಗಿಲು ಮೀನು ಮಾರ್ಕೆಟ್ ಎದುರುಗಡೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ಬ್ರಿಜೇಶ್ ಎಂಬಾತನು KA-20 EZ-0909 ನೇ ಮೊಟಾರ್ ಸೈಕಲನ್ನು ಸಹ ಸವಾರಳಾಗಿ ಧನುಷಾ ಎಂಬವಳನ್ನು ಹಿಂಬದಿ ಕುಳ್ಳರಿಸಿ ಅಂಬಾಗಿಲು ಕಡೆಯಿಂದ ಕಲ್ಸಂಕದ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಂಬಾಗಿಲು ಮೀನು ಮಾರ್ಕೆಟ್ ಬಳಿ ಇರುವ ಡಿವೈಡರ್ ಬಳಿ ಅಂಬಾಗಿಲು ಕಡೆ ಹೋಗುವರೇ KA-20 ER-0882 ನೇ ಸ್ಕೂಟರನ್ನು ರಸ್ತೆಯ ಬಲಭಾಗಕ್ಕೆ ತಿರುಗಿಸಲು ನಿಲ್ಲಿಸಿದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಂದೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗುದ್ದಿದ ಒಳ ಜಖಂ ಆಗಿದ್ದು ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ. ಒಳರೋಗಿಯಾಗಿ ದಾಖಲಾಗಿದ್ದು, ಸಹ ಸವಾರಳಾದ ಧನುಷಾರವರಿಗೆ ತಲೆಗೆ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 84/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 16/10/2022 ರಂದು ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಹಿಂದುಳಿದ ವರ್ಗಗಳ ಮೋರ್ಚಾ ಶ್ರೀ ಯಶಪಾಲ್ ಸುವರ್ಣ ರವರ ಅಂಗ ರಕ್ಷಕನಾಗಿ ಕರ್ತವ್ಯ ನಿರ್ವಹಿಸಲು ತನ್ನ KA-20 X-682 ನೇ ಮೊಟಾರ್ ಸೈಕಲಿನಲ್ಲಿ ಅಜ್ಜರಕಾಡುನಲ್ಲಿರುವ ಶ್ರೀ ಯಶಪಾಲ್ ಸುವರ್ಣ ರವರ ಮನೆಗೆ ಕರಾವಳಿ ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ಅಜ್ಜರಕಾಡಿಗೆ ಹೋಗುತ್ತಿರುವಾಗ ಸಮಯ ಸುಮಾರು 16:50 ಗಂಟೆಗೆ ಅಂಬಲಪಾಡಿ ಜಂಕ್ಷನ್ ಕಡೆಯಿಂದ ಕರಾವಳಿ ಕಡೆಗೆ KA-20 EW-3131 ನೇ ಸ್ಕೂಟರ್ ಸವಾರ ರಾಹಿಲ್ ಅನ್ವರ್ ರವರು ತಾನು ಸವಾರಿ ಮಾಡುತ್ತಿದ್ದ ಸ್ಕೂಟರನ್ನು ಅಂಬಲಪಾಡಿ ಅಭಿನಂದನ್ ಪೆಟ್ರೋಲ್ ಬಂಕ್ ಬಳಿ ರಾ.ಹೆ 66 ಸಾರ್ವಜನಿಕ ರಸ್ತೆಯ ಸರ್ವಿಸ್ ರಸ್ತೆಯನ್ನು ಸೇರುವ ಸ್ಥಳದಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿಮಾಡಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿಯಾಗಿ ಸರ್ವಿಸ್ ರಸ್ತೆಗೆ ಬಂದು ಪಿರ್ಯಾದುದಾರರಾಧ ಗಣೇಶ್ (46), ತಂದೆ: ಗೋಪಾಲ ಪೂಜಾರಿ ವಾಸ: ಚಾಚನ ಬೈಲು, ಮನೆ ನಂಬ್ರ 17-88, ಕೊಡವೂರು ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು, ಇವರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡ ಕೈಯ ಮೊಣಗಂಟಿನ ಕೆಳಗಡೆ ಮೂಳೆ ಮುರಿತ ಆಗಿರುತ್ತದೆ ಹಾಗೂ ಬಲ ಕಾಲಿನ ಪಾದದ ಮೇಲೆ ತರಚಿದ ರಕ್ತ ಗಾಯವಾಗಿದ್ದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 85/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾಧ ವಿನೇಶ ಜೆ, (28)ತಂದೆ: ಜಯರಾಮ ಪೂಜಾರಿ, ವಾಸ: ಶ್ರೀ ರಾಮ ನಿಲಯ, ಕೋಣಿ ರೋಡ್, ಮಾರ್ಕೊಡು, ಕೋಟೆಶ್ವರ ಗ್ರಾಮ, ಕುಂದಾಪುರ ಇವರ ತಂದೆ ಜಯರಾಮ ಪೂಜಾರಿ, (55) ಎಂಬುವವರು ದಿನಾಂಕ 16/10/2022 ರಂದು ಸಂಜೆ 04:30 ಗಂಟೆಗೆ ಕುಂದಾಪುರ ತಾಲೂಕು ಕೋಟೆಶ್ವರ ಗ್ರಾಮದ ಕೋಣಿ ರೋಡ್ ನ ಪಿರ್ಯಾದಿದಾರರ ಮನೆಯ ಕಿಟಕಿಯ ಸರಳಿಗೆ ಹಗ್ಗವನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ ವಿನೇಶ ಜೆ, ರವರ ಪತ್ನಿ ಇವರಿಗೆ ತಿಳಿಸಿದಂತೆ, ನೆರೆಕೆರೆಯವರು ಸೇರಿಕೊಂಡು ನೇಣು ಹಗ್ಗವನ್ನು ಬಿಡಿಸಿ, ಜಯರಾಮ ಪೂಜಾರಿಯವರನ್ನು ಒಂದು ವಾಹನದಲ್ಲಿ ಕೋಟೆಶ್ವರದ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ,. ಇವರ ತಂದೆಯವರಿಗೆ ಸುಮಾರು 15 ವರ್ಷಗಳಿಂದ ಮಾನಸಿಕ ಖಾಯಿಲೆಯಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 39/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 17-10-2022 10:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080