ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 16/10/2021  ರಂದು  ಬೆಳಿಗ್ಗೆ ಸುಮಾರು 11:30 ಗಂಟೆಗೆ  ಕುಂದಾಪುರ  ತಾಲೂಕಿನ ಕೆಂಚನೂರು ಗ್ರಾಮದ ಮಲಾರಿ ಶ್ರೀ ದುರ್ಗಾ ಸ್ಟೋರ್‌ ಬಳಿ  ರಸ್ತೆಯಲ್ಲಿ,   ಆಪಾದಿತ ಚೇತನ್‌  ಎಂಬವರು  KA20-EP-4462ನೇ ಬುಲೆಟ್‌‌‌ ಬೈಕನ್ನು ನೆಂಪು ಕಡೆಯಿಂದ ಹೆಮ್ಮಾಡಿ  ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ ಸವಾರಿ   ಮಾಡಿಕೊಂಡು ಬಂದು, ಹೆಮ್ಮಾಡಿ ಕಡೆಯಿಂದ ನೆಂಪು ಕಡೆಗೆ ಪಿರ್ಯಾದಿ ಜಗದೀಶ ಪ್ರಾಯ 44 ವರ್ಷ ತಂದೆ ರಾಮ ದೇವಾಡಿಗ ವಾಸ:  ಶಿವಮೊಗ್ಗ ರಸ್ತೆ, ಕೊಲ್ಲೂರು ಗ್ರಾಮ,  ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ  KA20-EW-2752ನೇ ಯಮಹಾ ಫ್ಯಾಸಿನೋ ಸ್ಕೂಟರ್‌ ಗೆ  ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ,  ಜಗದೀಶ ರವರ  ಬಲ ಕೈಗೆ ಮೂಳೆ  ಮುರಿತವಾದ ಗಾಯ, ಹಾಗೂ ಬಲ ಹಣೆ, ಕೆನ್ನೆ  ಮತ್ತು ಹೊಟ್ಟೆಯ ಹತ್ತಿರ ತರಚಿದ ಗಾಯವಾಗಿ ಕುಂದಾಪುರ  ಚಿನ್ಮಯಿ   ಆಸ್ಪತ್ರೆಯಲ್ಲಿ   ಒಳ  ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 79/2021 ಕಲಂ 279, 338  ಐಪಿಸಿ  ಯಂತೆ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ:  ದಿನಾಂಕ: 08/10/2021 ರಂದು 20:30 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮ ಬೇರೊಂದೊಟ್ಟು ಎಂಬಲ್ಲಿ ಹಾದು ಹೋಗಿರುವ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕೆ,ಎ20-ಇ,ಎಮ್-4830 ನೇ ನಂಬ್ರದ ಸ್ಕೂಟಿ ಸವಾರ ವಿಶ್ವನಾಥ್ ರವರು ತಮ್ಮ  ಸ್ಕೂಟಿಯಲ್ಲಿ ಕಾರ್ಕಳ ಕಡೆಯಿಂದ ನಿಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿರುವ ಪಿರ್ಯಾದಿ ಶ್ರೀ ವಿಲ್ಸನ್ ಕುವೆಲ್ಲೋ ಪ್ರಾಯ: 42 ವರ್ಷ ತಂದೆ: ಮೈಕಲ್ ಕುವೆಲ್ಲೋ ವಾಸ: ಮನೆ ನಂಬ್ರ: 3-63 ಕುವೆಲ್ಲೋ ವಿಲ್ಲಾ, ದೂಪದಕಟ್ಟೆ, ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ವಿಲ್ಸನ್ ರವರ ಎಡಕೈ ಮೊಣಗಂಟಿನ ಬಳಿ ತೀವ್ರ ಸ್ವರೂಪದ ಮೂಳೆ ಮುರಿತದ ಗಾಯವಾಗಿದ್ದು, ಅಪಘಾತದ ಸಮಯ ಆರೋಫಿ ಚಾಲಕನು ಪಿರ್ಯಾದುದಾರರನ್ನು ಚಿಕಿತ್ಸೆಗೆ ಕರದುಕೊಂಡು ಹೋಗುವುದಾಗಿ ತಿಳಿಸಿದಾಗ ಪಿರ್ಯಾದುದಾರರು ಚಿಕಿತ್ಸೆಗೆ ಹೋಗದೇ ಮನೆಗೆ ಹೋಗಿದ್ದು ದಿನಾಂಕ: 11/10/2021 ರಂದು ನೋವು ಜಾಸ್ತಿಯಾದ್ದರಿಂದ ಪಿರ್ಯಾದುದಾರರು ಚಿಕಿತ್ಸೆ ಬಗ್ಗೆ ಕಾರ್ಕಳ ಸಿ,ಟಿ ಆಸ್ಪತ್ರೆಗೆ ಹೋಗಿದ್ದು ಆ ಸಮಯ ವೈದ್ಯರಲ್ಲಿ ಅಪಘಾತವಾದ ಬಗ್ಗೆ ಮಾಹಿತಿ ನೀಡದೇ ಇದ್ದು ಅಲ್ಲಿ ವೈದ್ಯರು ಪಿರ್ಯಾದುದಾರರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದು  ಈ ದಿನ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಸಮಯ ವೈದ್ಯರಲ್ಲಿ ಅಪಘಾತದ ಬಗ್ಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 119/2021 ಕಲಂ: 279,338  ಐಪಿಸಿ ಯಂತೆ  ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತರ ಪ್ರಕರಣ

 • ಬೈಂದೂರು: ಪಿರ್ಯಾಧಿದಾರರು ಶ್ರೀಮತಿ ಆಫಿಯಾ ಬಾನು ಪ್ರಾಯ: 20  ವರ್ಷ ಗಂಡ: ಅಮೀರ್ ಖಾನ್  ವಾಸ: 2/175ಬಿ, ಬುಕಾರಿ ಕಾಲೋನಿ, ಶಿರೂರು ಗ್ರಾಮ ಬೈಂದೂರು ಇವರು ದಿನಾಂಕ; 13/07/2019 ರಂದು 1ನೇ ಆರೋಪಿತನಾದ ಅಮೀರ್ ಖಾನ್ ಎಂಬುವವರನ್ನು ಮದುವೆಯಾಗಿದ್ದು, ಮದುವೆಯ ನಿಶ್ಚಿತಾರ್ಥದ ಸಮಯ ಆರೋಪಿತರಾದ 1, ಅಮೀರ್ ಖಾನ್ (26), ತಂದೆ; ಅನ್ವರ್ ಖಾನ್, ವಾಸ; ಅಜಾದ್ ನಗರ, 4ನೇ ಅಡ್ಡ ರಸ್ತೆ, ಸಫೀಯಾ ಮಜೀದ್  ಹತ್ತಿರ, ಭಟ್ಕಳ ತಾಲೂಕು,  2, ಅನ್ವರ್ ಖಾನ್ (55) ವಾಸ; ಅಜಾದ್ ನಗರ, 4ನೇ ಅಡ್ಡ ರಸ್ತೆ, ಸಫೀಯಾ ಮಜೀದ್ ಹತ್ತಿರ, ಭಟ್ಕಳ ತಾಲೂಕು,  3, ಸಲ್ಮಾ (51)  ಗಂಡ; ಅನ್ವರ್ ಖಾನ್ ವಾಸ; ಅಜಾದ್ ನಗರ, 4ನೇ ಅಡ್ಡ ರಸ್ತೆ, ಸಫೀಯಾ ಮಜೀದ್ ಹತ್ತಿರ, ಭಟ್ಕಳ ತಾಲೂಕು, 4, ಸಜೀದಾ ಬಾನು (48) ಗಂಡ; ಅನ್ವರ್ ಖಾನ್ ವಾಸ; ಕಾಪ್ತಿ ನಗರ, ಭಟ್ಕಳ 5, ಕೈಫತುಲ್ಲಾ ಪ್ರಾಯ 50 ವರ್ಷ, ತಂದೆ; ಉಮ್ಮರ್ ವಾಸ; ಕಾಪ್ತಿ ನಗರ, ಭಟ್ಕಳ6, ನಯೀಮ್ (45)  ವಾಸ; ಮೂಸ ನಗರ, ಭಟ್ಕಳ ಇವರೆಲ್ಲರು ಪಿರ್ಯಾಧಿದಾರರ ಹೆತ್ತವರಿಂದ  ವರದಕ್ಷಿಣೆಯ ರೂಪದಲ್ಲಿ ಒತ್ತಾಯ ಮಾಡಿ 3 ಲಕ್ಷ ಹಣ ಹಾಗೂ 25 ಪವನ್‌ ಚಿನ್ನವನ್ನು ಪಡೆದುಕೊಂಡಿರುತ್ತಾರೆ. ಅಲ್ಲದೆ ಸುಮಾರು 10 ಲಕ್ಷ ಮದುವೆಯ ಖರ್ಚನ್ನು ಫಿರ್ಯಾದಿದಾರರ ಮನೆಯವರು ಮಾಡಿರುತ್ತಾರೆ. ನಂತರ 1ನೇ ಆರೋಪಿಯು ಉದ್ಯೋಗದ ನಿಮಿತ್ತ ಕುವೈತ್ ಹೋಗಿದ್ದು ಫಿರ್ಯಾದಿದಾರರು ಆರೋಪಿತರ ಮನೆಯಲ್ಲಿಯೇ ಇದ್ದು ಆರೋಪಿತರೆಲ್ಲರು ಸ್ವಲ್ಪ ಸಮಯ ಪಿರ್ಯಾದಿದಾರರನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿದ್ದು, 1ನೇ ಆರೋಪಿಯು ಫಿರ್ಯಾದಿದಾರರ ಖರ್ಚಿಗೆ ಯಾವುದೇ ಹಣ ಕಳುಹಿಸುತ್ತಿರಲಿಲ್ಲ. ಹಣ ಕಳುಹಿಸದಿದ್ದಕ್ಕೆ ಫಿರ್ಯಾದಿದಾರರೇ ಕಾರಣವೆಂದು ತಿಳಿದು ಆರೋಪಿತರೆಲ್ಲರೂ ಫಿರ್ಯಾದಿದಾರರನ್ನು ಒಳ್ಳೇಯ ರೀತಿಯಿಂದ ನೋಡಿಕೊಳ್ಳುತ್ತಿರಲಿಲ್ಲ ಅಲ್ಲದೆ ಹೀಯಾಳಿಸಿ ಮಾತನಾಡುತ್ತಿದ್ದರು ಈ ವಿಚಾರವನ್ನು ಫಿರ್ಯಾದಿದಾರರು 1ನೇ ಆರೋಪಿಯಲ್ಲಿ ಹೇಳಿದಾಗ 1ನೇ ಆರೋಪಿಯು ಫಿರ್ಯಾದಿದಾರರು 1 ಲಕ್ಷ ಹಣ ತಂದರೆ ಆರೋಪಿತರೆಲ್ಲರೂ ಫಿರ್ಯಾದಿದಾರರನ್ನು ಒಳ್ಳೇಯ ರೀತಿಯಿಂದ ನೋಡಿಕೊಳ್ಳುವುದಾಗಿ ಮಾತ್ರವಲ್ಲದೇ ಕುವೈತ್ ಗೆ ಕರೆದುಕೊಂಡು ಹೋಗುತ್ತೇನೆ ಹೇಳಿದ್ದು ಫಿರ್ಯಾದಿದಾರರು ಅವರ ಮನೆಯವರು ಹಣ ಕೊಡುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದಾಗ 1ನೇ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾರೆ. ನಂತರ ಉಳಿದ ಆರೋಪಿತರೆಲ್ಲರು ವರದಕ್ಷಿಣೆ ಹಣ ತರುವಂತೆ ಒತ್ತಾಯ ಮಾಡಿದ್ದು ಇಲ್ಲದಿದ್ದರೆ 1ನೇ ಅರೋಪಿಗೆ ಬೇರೆ ಮದುವೆ ಮಾಡುವುದಾಗಿ ಬೆದರಿಸುತ್ತಿದ್ದರು. ಅಲ್ಲದೇ 1ನೇ ಆರೋಪಿಯು ಆಗಾಗ ಹಣಕ್ಕಾಗಿ ಪೀಡಿಸಿ ಫಿರ್ಯಾದಿದಾರರಿಗೆ ಹೊಡೆಯುತ್ತಿದ್ದರು. 4 ರಿಂದ 6ನೇ ಆರೋಪಿತರು 1ನೇ ಆರೋಪಿಗೆ ಪ್ರಚೋದನೆ ನೀಡುತ್ತಿದ್ದರು. ಅಲ್ಲದೆ 1ನೇ ಆರೋಪಿಯು ಪಿರ್ಯಾದಿದಾರರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಫಿರ್ಯಾದಿದಾರರು ದಿನಾಂಕ; 15/05/2020 ರಂದು ಅಮಾನ್ ಖಾನ್ ಎಂಬ ಮಗುವಿಗೆ ಜನ್ಮ ನೀಡಿದ್ದು 6 ತಿಂಗಳ ನಂತರ ವೈವಾಹಿಕ ಮನೆಗೆ ಹೋದಾಗ ಆರೋಪಿತರೆಲ್ಲರೂ ಫಿರ್ಯಾದಿದಾರರಿಗೆ ಬೈದು ಮಾನಸಿಕ ಹಿಂಸೆ ನೀಡಿ 2021 ನೇ ಜುಲೈ ತಿಂಗಳಿನಲ್ಲಿ ಫಿರ್ಯಾದಿದಾರರನ್ನು ಮನೆಯಿಂದ ಹೊರೆಗೆ ಹಾಕಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 164/2021  ಕಲಂ 498(ಎ) 323, 504, 506, ಜೊತೆಗೆ  34 ಐಪಿಸಿ 3. 4, 6  ವರದಕ್ಷಿಣೆ ನಿಷೇಧ  ಕಾಯಿದೆ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ:  ದಿನಾಂಕ 11/10/2021 ರಂದು 17:00 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್  ಠಾಣೆಗೆ ಭೇಟಿ ನೀಡಿದ ಆರೋಪಿತ ಅರ್ಚಿತ್ ಸುರೇಶ್, ಪ್ರಾಯ:23 ವರ್ಷ, ತಂದೆ: ಜೆ ಸುರೇಶ್, ವಾಸ: ಸ್ವರ್ಣಗಿರಿ ಅಪಾರ್ಟ್ ಮೆಂಟ್,ನಂ 101, ವಿದ್ಯಾರತ್ನ ನಗರ, ಮಣಿಪಾಲ.  ಎಂಬಾತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಹೆಚ್.ಸಿ 1094 ಇಮ್ರಾನ್‌ರವರು ಸದರಿ ಆರೋಪಿಯನ್ನು  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ  ವೈದ್ಯರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಆರೋಪಿತನು ಗಾಂಜಾವನ್ನು  ಸೇವಿಸಿದ ಬಗ್ಗೆ ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗದ ವೈದ್ಯರು ಈ ದಿನ ದಿನಾಂಕ 16/10/2021 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ  ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 131/2021 ಕಲಂ: 27(b) NDPS Act ರಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ: ದಿನಾಂಕ 11/10/2021 ರಂದು 17:00 ಗಂಟೆ ಸಮಯಕ್ಕೆ ಮಣಿಪಾಲ ಪೊಲೀಸ್  ಠಾಣೆಗೆ ಭೇಟಿ ನೀಡಿದ ಆರೋಪಿತನಾದ   ನಿಲಾಮುದ್ದೀನ್  ಪ್ರಾಯ:23 ವರ್ಷ, ತಂದೆ:ನಿಲಾರುದ್ದೀನ್, ವಾಸ:8ಇ,ಅರ್ಕಾಟಿಕ್ ದಿಪಾಮ್,ತಿರುವೇಂದ್ರೆಮ್, ಕೇರಳಎಂಬಾತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದ ಮೇರೆಗೆ ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಹೆಚ್.ಸಿ 1094 ಇಮ್ರಾನ್‌ರವರು ಸದರಿ ಆರೋಪಿಯನ್ನು  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ  ವೈದ್ಯರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ನಿಲಾಮುದ್ದೀನ್  ಎಂಬಾತನು  ಗಾಂಜಾವನ್ನು  ಸೇವಿಸಿದ ಬಗ್ಗೆ ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗದ ವೈದ್ಯರು ಈ ದಿನ ದಿನಾಂಕ 16/10/2021 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ  ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 133/2021 ಕಲಂ: 27(b) NDPS Act ರಂತೆ ಪ್ರಕರಣ ದಾಖಲಿಸಲಾಗಿದೆ.
 • ಗಂಗೊಳ್ಳಿ: ಫಿರ್ಯಾದಿ ಅಣ್ಣಯ್ಯ ಗಾಣಿಗ ಪ್ರಾಯ: 58 ವರ್ಷ, ತಂದೆ: ದಿ: ಶಂಕರ ಗಾಣಿಗ ವಾಸ: ಮುಲ್ಲಿ ಮನೆ, ಕುಂದಬಾರಂದಾಡಿ ರವರು  ದಿನಾಂಕ: 16-10-2021 ರಂದು ಮದ್ಯಾಹ್ನ ಸಮಯ ಸುಮಾರು 12:00 ಗಂಟೆಗೆ ಕುಂದಾಪುರ ತಾಲೂಕು ಕುಂದಬಾರಂದಾಡಿ ಗ್ರಾಮದ ಕುಂದಬಾರಂದಾಡಿ ರೈಲ್ವೆ ಬ್ರಿಡ್ಜ್ ಬಳಿ ಫಿರ್ಯಾದಿದಾರರ ಮನೆಗೆ ಹೋಗುವ ದಾರಿಯಲ್ಲಿ ಜೆಸಿಬಿಯಿಂದ ಮಣ್ಣನ್ನು ಅಗೆದು ಸಮತಟ್ಟು ಮಾಡಿ ಟಿಪ್ಪರ್ ನಿಂದ ಮಣ್ಣನ್ನು ಹಾಕಿಸುತ್ತಿದ್ದ ನರಸಿಂಹ ಮೊಗವೀರರವರ ಹತ್ತಿರ ಹೋಗಿ ಈ ಸ್ಥಳ ಸರ್ವೆ ಆಗಿ ವಿಂಗಡಣೆ ಆಗಿಲ್ಲ ನೀನು ಈ ಸ್ಥಳದಲ್ಲಿ  ಕೃತ್ಯ ಮಾಡುವುದು ಸರಿಯಲ್ಲ ಎಂದು ಹೇಳಿದಾಗ ನರಸಿಂಹ ಮೊಗವೀರರವರು ಈ ಜಾಗದಲ್ಲಿ ಏನೆಂದು  ನಾನು ನೋಡಿಕೊಳ್ಳುತ್ತೇನೆ ಸುಮ್ಮನೆ ಮನೆಗೆ ನಡೆ ಎಂದು ಬೈದು ಕೈಯಿಂದ ದೂಡಿ ಕೈಯಲ್ಲಿದ್ದ ಕತ್ತಿಯಿಂದ ಫಿರ್ಯಾದಿದಾರರನ್ನು ಕಡಿಯಲು ಬಂದಿದ್ದು  ಅಲ್ಲಿಯೇ ಹತ್ತಿರದಲ್ಲಿದ್ದ ಫಿರ್ಯಾದಿದಾರರ ಮಗ ಸಚಿನ್ ತಪ್ಪಿಸಲೆಂದು ಬಂದಾಗ ನರಸಿಂಹ ಮೋಗವೀರರವರು ಸಚಿನ್ ಕೈಗೆ ಕಚ್ಚಿದ್ದು ಆ ಸಮಯ ಕತ್ತಿ ಬೀಸಿದ ಪರಿಣಾಮ ಫಿರ್ಯಾದಿದಾರರ ತುಟಿಗೆ ಕತ್ತಿ ತಾಗಿ ಮೇಲಿನ ತುಟಿ ಊದಿಕೊಂಡಿರುತ್ತದೆ. ಗಲಾಟೆ ತಪ್ಪಿಸಲು ಬಂದ ಚಂದ್ರ ಮೇಸ್ತ್ರಿ, ಶರತ್, ರಾಜಾ ಎಂಬವರಿಗೂ ಹೊಡೆದಿರುತ್ತಾರೆ. ನರಸಿಂಹ ಮೋಗವೀರರವರು ಫಿರ್ಯಾದಿದಾರರು ಹಾಗೂ ಸಚಿನ್ ನನ್ನು ಉದ್ದೇಶಿಸಿ ಈ ದಿನ ತಪ್ಪಿದ್ದೀರಿ ಇನ್ನೊಂದು ದಿನ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವಬೆದರಿಕೆ ಹಾಕಿರುತ್ತಾರೆ. ಫಿರ್ಯಾದಿದಾರರು ಹಾಗೂ ಸಚಿನ್ ಚಿಕಿತ್ಸೆ ಬಗ್ಗೆ ಕುಂದಪುರ ಸರಕಾರಿ ಆಸ್ಪತ್ರೆಯಲ್ಲಿಒಳರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಕೃತ್ಯಕ್ಕೆ ಬ್ಯಾಂಕಿನ ಹಣಕಾಸಿನ ವ್ಯವಹಾರವೇ ಕಾರಣವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 98/2021  ಕಲಂ: 323, 324, 506  ಐಪಿಸಿ  ರಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ : ದಿನಾಂಕ 15/10/2021 ರಂದು ಸಂಜೆ ಉಡುಪಿ ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಕಾರ್ಯಕರ್ತರು ಯಾವುದೇ ಪೂರ್ವಾನುಮತಿಯಿಲ್ಲದೆ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಿಂದ ಅಂಬಲಪಾಡಿ ಮಹಾಕಾಳಿ ಅಮ್ಮನವರ ಸನ್ನಿಧಾನದವರೆಗೆ ಪಾದಯಾತ್ರೆಯನ್ನು ನಡೆಸಿ ಕೋವಿಡ್‌-19 ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ ಸರಕಾರ/ಜಿಲ್ಲಾಧಿಕಾರಿಯವರ ಆದೇಶವನ್ನು ಪಾಲನೆ ಮಾಡದೆ, ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ಈ ಬಗ್ಗೆ  ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 152/2021 ಕಲಂ: 188, 269 IPC & ಕಲಂ: 5(1), 5(4) The Karnataka Epidemic Diseases Act  2020 ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು:

 • ಕುಂದಾಪುರ: ಪಿರ್ಯಾದುದಾರ ಗಣೇಶ ಕುಂದರ್, ಪ್ರಾಯ: 51 ವರ್ಷ, ತಂದೆ: ಕಾಳ ನಾಯ್ಕ್  ವಾಸ: ಕೃಷ್ಣ ನಿಲಯ ವಾಸ: ನ್ಯೂ ಮಾರ್ಕೆಟ್ ಯಾರ್ಡ್ ಎದುರು ಕಸಬಾ ಗ್ರಾಮ ಕುಂದಾಪುರ ತಾಲೂಕು ಇವರ ತಮ್ಮ ಸಂದೀಪ್ ಪ್ರಾಯ: 40 ವರ್ಷ ರವರು ಚಾಲಕ ಕೆಲಸ ಮಾಡಿಕೊಂಡಿದ್ದು, ತನ್ನ ಮೊದಲನೆ ಹೆಂಡತಿಗೆ 2 ಮಕ್ಕಳಿದ್ದು ಅವಳಿಂದ ದೂರವಾಗಿ 2ನೇ ಹೆಂಡತಿಯಾದ ಯಶೋದಾ ಎಂಬವರ ಜೊತೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ವಿನಾಯಕ ಟಾಕೀಸ್ ರಸ್ತೆಯ ಪರಿಮಳ ಸ್ಟೋರ್ ಬಳಿ ಇರುವ ಪಿಯುಸ್ ಡಿಸೋಜಾ ಎಂಬವರ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು,  ದಿನಾಂಕ: 16/10/2021 ರಂದು ಆತನ ಹೆಂಡತಿ ಯಶೋದಾ ಕೆಲಸಕ್ಕೆಂದು ಬೆಳಿಗ್ಗೆ 06:00 ಗಂಟೆಗೆ ಮನೆಯಿಂದ  ಹೋಗಿದ್ದು ಸಂಜೆ 19:00 ಗಂಟೆಗೆ ಮನೆಗೆ ಬಂದು ನೋಡಿದಾಗ ಸಂದೀಪನು ಬಾಡಿಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದು ಫಿರ್ಯಾಧಿದಾರರ ತಮ್ಮ ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಹಾಗೂ ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ  ಕುಂದಾಪುರ ಪೊಲೀಸ್ ಠಾಣಾ ಯುಡಿಆರ್‌  ಸಂಖ್ಯೆ 40/2021 ಕಲಂ: 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 17-10-2021 10:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080