ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

 • ಮಣಿಪಾಲ: ದಿನಾಂಕ 17/10/2021 ರಂದು ಬೆಳಿಗ್ಗೆ 8:30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಹುಲ್ಲೇಶ (26), ತಂದೆ: ಬಸನಗೌಡ, ಶಾಂಭವಿ ಸೋವರಿನ್,ಪೆರಂಪಳ್ಳಿ ರಸ್ತೆ,ವಿದ್ಯಾರತ್ನನಗರ,ಮಣಿಪಾಲ ಮತ್ತು ಪಿರ್ಯಾದಿದಾರರ ಸಹೋದ್ಯೋಗಿ ವಿಠಲ್‌ ಮೈಂದನ್‌ ರವರು ಮಣಿಪಾಲ ಇಂದಿರಾ ಕ್ಯಾಂಟಿನ್ ನಿಂದ ಶಾಂಭವಿ ಸೊವರಿನ್‌ ಅಪಾರ್ಟ್‌ ಮೆಂಟ್‌ ಕಡೆಗೆ ಡಿಸಿ ಕಛೇರಿ ರಸ್ತೆ ಬದಿಯ ಕಚ್ಚಾ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವಿದ್ಯಾರತ್ನ ನಗರ ಪೆಪ್‌ ಕೆಫೆ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಸಿಂಡಿಕೇಟ್‌ ಸರ್ಕಲ್‌ ನಿಂದ ಡಿ ಸಿ ಕಛೇರಿ ರಸ್ತೆಯ ಕಡೆಗೆ KA-20-MB-3981 ನೇ ನಂಬರಿನ ಕಾರನ್ನು ಮಹಾನ್ ರಾವ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಾರಿನ ನಿಯಂತ್ರಣ ಕಳೆದುಕೊಂಡು ಸಹೋದ್ಯೋಗಿ ವಿಠಲ್‌ ಮೈಂದನ್‌ ಗೆ ಢಿಕ್ಕಿ ಹೊಡೆದ ಪರಿಣಾಮ ವಿಠಲ್‌ ಮೈಂದನ್‌ ಮುಖ,ತಲೆ, ಕೈ ಕಾಲಿಗೆ ತೀವ್ರ ಸ್ವರೂಪದ ಗಾಯ ಉಂಟಾಗಿ ಪ್ರಜ್ಞಾಹೀನಗೊಂಡಿರುತ್ತಾರೆ. ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 135/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 16/10/2021 ರಂದು ಪಿರ್ಯಾದಿದಾರರಾದ ನಿತಿನ್ ರಾವ್ (33),ತಂದೆ: ದಿ.ಕೃಷ್ಣ ರಾವ್ ,ವಾಸ: ಫ್ಲಾಟ್ ನಂ: 4 ಜಿ.ಎಸ್.ಜೆ ಮೌಂಟ್ ಬ್ರಿಡ್ಜ್ ರಾಜೀವ ನಗರ ಮಣಿಪಾಲ 80 ಬಡಗುಬೆಟ್ಟು ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ತನ್ನ KA-20-W-2772 ನೇ ಮೋಟಾರು ಸೈಕಲ್ ನಲ್ಲಿ ಮಣಿಪಾಲದಿಂದ ಉಡುಪಿ ರಾ.ಹೆ 169(ಎ)ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಬೆಳಿಗ್ಗೆ 11:00 ಗಂಟೆಗೆ ಕಲ್ಸಂಕ ಹತ್ತಿರ ಕ್ಯಾಂಡಿ ಕ್ರಶ್ ಐಸ್ ಕ್ರೀಮ್ ಅಂಗಡಿಯ ಎದುರು ತಲುಪುವಾಗ ಹಿಂದಿನಿಂದ ಮಣಿಪಾಲದಿಂದ ಉಡುಪಿ ಕಡೆಗೆ KA-20-A-9773ನೇ ಬಸ್ ಚಾಲಕ ಮಾಧವ ಪಿರ್ಯಾದಿದಾರರ ಮೋಟಾರು ಸೈಕಲ್ ನ್ನು ಓವರ್ ಟೇಕ್ ಮಾಡುವಾಗ ಮೋಟಾರು ಸೈಕಲ್ ನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಸೊಂಟದ ಮೂಳೆ ಮುರಿತವಾಗಿ ಚಿಕಿತ್ಸೆಯ ಬಗ್ಗೆ ಸಿ.ಟಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2021 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ಶೈಲೇಶ್ ಶೆಟ್ಟಿ (37), ತಂದೆ: ದಿ: ಜಯರಾಮ ಶೆಟ್ಟಿ, ವಾಸ: ಕೊಡಮಜಲು ಮನೆ, ಬಳಕುಂಜೆ ಅಂಚೆ ಮಂಗಳೂರು ಇವರು ನವಯುಗ ಕಂಪೆನಿಯಲ್ಲಿ ಸೇಫ್ಟಿ ಆಫಿಸರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 17/10/2021 ರಂದು ಸ್ಥಳೀಯರೊಬ್ಬರು ಅವರಿಗೆ ಪೋನ್ ಮಾಡಿ 05:30 ಗಂಟೆಗೆ ಓರ್ವ ಸ್ಕಾರ್ಪಿಯೋ ಕಾರು ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಾಷ್ಟ್ರೀಯ .ಹೆದ್ದಾರಿ . 66 ರ ಉಡುಪಿ - ಮಂಗಳೂರು ರಸ್ತೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬಂದು ಪಾಂಗಾಳ ಬ್ಯಾಂಕ್ ಆಫ್‌ ಬರೋಡಾ ಬ್ಯಾಂಕ್‌‌ನ ಹತ್ತಿರದ ತಿರುವಿನಲ್ಲಿ ಅಳವಡಿಸಿರುವ ನವಯುಗ ಕಂಪೆನಿಯ ಸೋಲಾರ್ ಬ್ಲಿಂಕರ್, ಮೆಟಲ್ ಬಿಮ್, ಕ್ರ್ಯಾಶ್ ಬಾರಿಯರ್, ರೆಡ್ ರಿಪ್ಲೆಕ್ಟರ್ ಢಿಕ್ಕಿ ಹೊಡೆದು ಜಖಂಗೊಳಿಸಿರುವುದಾಗಿ ಮಾಹಿತಿ ನೀಡಿದಂತೆ ಪಿರ್ಯಾದಿದಾರರು ಕೂಡಲೇ ಪಾಂಗಾಳ ತಿರುವಿನಲ್ಲಿ ಹೋಗಿ ನೋಡುವಾಗ ಉಡುಪಿ ಮಂಗಳೂರು ಮತ್ತು ಮಂಗಳೂರು ಉಡುಪಿ ರಾಷ್ಟ್ರೀಯ .ಹೆದ್ದಾರಿ 66 ರ ಮಧ್ಯದಲ್ಲಿನ ತಿರುವಿನಲ್ಲಿ ಅಳವಡಿಸಿದ ನವಯುಗ ಕಂಪೆನಿಗೆ ಸಂಬಂಧಪಟ್ಟ ಸೋಲಾರ್ ಬ್ಲಿಂಕರ್, ಮೆಟಲ್ ಬಿಮ್, ಕ್ರ್ಯಾಶ್ ಬಾರಿಯರ್, ರೆಡ್ ರಿಪ್ಲೆಕ್ಟರ್ ಜಖಂಗೊಂಡಿದ್ದು 1,05,270/- ರೂಪಾಯಿ ನಷ್ಟ ಉಂಟಾಗಿರುವುದಾಗಿದೆ. ಅಪಘಾತ ನಡೆಸಿದ ಸ್ಕಾರ್ಪಿಯೋ ಕಾರಿನ ನಂಬ್ರ ನೋಡಲಾಗಿ KL-05-AF-717 ಆಗಿದ್ದು ಚಾಲಕನ ಹೆಸರು ಜೇಸನ್ ರಾಜು ಎಂದು ತಿಳಿದಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 160/2021 ಕಲಂ :279, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

 • ಕಾರ್ಕಳ : ಪಿರ್ಯಾದಿದಾರರಾದ ಹೇಮಲತಾ (35), ಗಂಡ: ಸುದೀಶ್ ಪೂಜಾರಿ , ವಾಸ: ಹೆಕ್ಕರಬೆಟ್ಟು ಮನೆ ಮಾಳ ಅಂಚೆ ಮಲ್ಲಾರ್ ಮಾಳ ಗ್ರಾಮ ಮತ್ತು ಅಂಚೆ , ಕಾರ್ಕಳ ತಾಲೂಕು ಇವರ ಗಂಡ ಶ್ರೀ ಸುಧೀಶ್ ಪೂಜಾರಿ (39) ಇವರು ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದು, ಸುಧೀಶ್ ಪೂಜಾರಿ ಇವರಿಗೆ ಹೃದಯ ಸಂಬಂಧಿ ಖಾಯಿಲೆ ಇದ್ದು ಈ ಬಗ್ಗೆ ಕಾರ್ಕಳ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಎರಡು ತಿಂಗಳ ಹಿಂದೆ ಎದೆನೋವು ಜಾಸ್ತಿಯಾದ್ದರಿಂದ ಕಾರ್ಕಳ ಸಿಟಿ ಆಸ್ಪತ್ರೆಯಲ್ಲಿ ಒಂದು ವಾರ ದಾಖಲಿಸಿಕೊಂಡು ಚಿಕಿತ್ಸೆ ಕೊಡಿಸಿದ್ದು ವೈದ್ಯರು ಅವರ ಹೃದಯದ ಬಳಿ ಊದಿಕೊಂಡಿರುವುದಾಗಿ ತಿಳಿಸಿ ಚಿಕಿತ್ಸೆ ನೀಡಿದ್ದು ಅದೇ ಕಾರಣದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮನನೊಂದು ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15/10/2021 ರಂದು ಮಧ್ಯಾಹ್ನ 3:15 ಗಂಟೆಯಿಂದ ಈ ದಿನ ದಿನಾಂಕ 17/10/2021 ರಂದು 10:00 ಗಂಟೆ ಮಧ್ಯಾವಧಿಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 36/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 17-10-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080