ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ಅಕ್ತರ್ ಹುಸೇನ್ ಪ್ರಾಯ 38 ವರ್ಷ ತಂದೆ: ಅಕ್ರಮ್ ಹುಸೇನ್ ವಾಸ: ಬರಹುವಾ ಅಂಚೆ, ಕೈರಾಹುವಾ ಗ್ರಾಮ , ಬಸ್ತಿ ಜಿಲ್ಲೆ, ಬಂಕಟಿ ಬಝಾರ್ ಉತ್ತರ ಪ್ರದೇಶ ರಾಜ್ಯ ಇವರು   MH46F6163 ನೇ ಟ್ಯಾಂಕರಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 16/09/2022 ರಂದು ಸಾಯಾಂಕಾಲ 7:05 ಗಂಟೆಗೆ ಪುತ್ತೂರು ಗ್ರಾಮದ ಸಂತೆಕಟ್ಟೆ ಜಂಕ್ಷನ್‌ಗಿಂತ ಸ್ವಲ್ಪ ಹಿಂದೆ  ಹಾದು ಹೋಗಿರುವ ರಾಹೆ-66 ನೇ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ KA20S9120 ನೇ ಮೋಟಾರ್ ಸೈಕಲ್‌ನ್ನು ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ  ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಏಕಮುಖ ಸಂಚಾರದ ವ್ಯವಸ್ಥೆ ಇರುವ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಸವಾರಿ ಮಾಡಿಕೊಂಡು ಬಂದು ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಪಿರ್ಯಾದಿದಾರರು ನಿರ್ವಾಹಕರಾಗಿರುವ ಚಾಲಕ ಇಸ್ತಿಕಾರ್ ರವರು ಚಲಾಯಿಸಿಕೊಂಡು ಬರುತ್ತಿದ್ದ MH46F6163 ನೇ ಟ್ಯಾಂಕರಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರನು ಬೈಕ್ ಸಮೇತ ರಸ್ತೆಗೆ ಬಿದ್ದು, ತಲೆಗೆ ಗಂಬೀರ ಸ್ವರೂಪದ ಗಾಯವಾಗಿದ್ದು, ಅಲ್ಲದೇ ಮೈಕೈಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 72/2022 ಕಲಂ: 279, 338 ಐ.ಪಿ.ಸಿ. ಮತ್ತುಕಲಂ 218 ಐ.ಎಂ.ವಿ ರೂಲ್ಸ್ ಜೊತೆಗೆ 177 ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿಪ್ರಕಾಶ್ ಶೆಣೈ ಪ್ರಾಯ: 39 ವರ್ಷ ತಂದೆ: ದಿ| ರಘು ರಾಮ್ ಶೆಣೈ ವಾಸ: ಹರಿರಘು ನಿವಾಸ, ಪೊಸಾರ್, ಕಟಪಾಡಿ ಮೂಡಬೆಟ್ಟು ಗ್ರಾಮ, ಇವರು ದಿನಾಂಕ:16-09-2022 ರಂದು ಶಾಲೆ ಬಿಟ್ಟ ನಂತರ ಸೈಕಲ್‌ನಲ್ಲಿ ಬರುತ್ತಿದ್ದ ಮಗ ಪ್ರಥಮ್ ಶೆಣೈ(12) ನನ್ನು ರಾ ಹೆ 66 ರಸ್ತೆ ದಾಟಿಸಿ ಮನೆಗೆ ಕರೆದುಕೊಂಡು ಹೋಗುವರೇ  ಎಂದಿನಂತೆ  ಸಂಜೆ 4:15 ಗಂಟೆಯ ಸುಮಾರಿಗೆ ಮಗನನ್ನು ಕರೆದುಕೊಂಡು ಬರಲು ಪಿರ್ಯಾದಿದಾರರು ಮೂಡಬೆಟ್ಟು ಗ್ರಾಮದ ಕಟಪಾಡಿ  ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ಕಾಲು ದಾರಿಯ ಬಳಿ ನಿಂತಿಕೊಂಡಿರುವಾಗ ಸಂಜೆ 4:30 ಗಂಟೆಯ ಸುಮಾರಿಗೆ ಮಂಗಳೂರು ಉಡುಪಿ ರಾ ಹೆ 66 ರ ಸರ್ವಿಸ್ ರಸ್ತೆಯ ಕಡೆಯಿಂದ ಪೊಸಾರಿನ ಕಡೆಗೆ ರಸ್ತೆಯ ಎಡಬದಿಯಲ್ಲಿ ಪಿರ್ಯಾದಿದಾರರ  ಮಗ ಸೈಕಲ್ ಸವಾರ ಮಾಡಿಕೊಂಡು ಬರುತ್ತಾ ವೆಂಕಟರಣ ದೇವಸ್ಥಾನಕ್ಕೆ ಹೋಗುವ ಕಾಲು ದಾರಿಯನ್ನು ತಲುಪುವ ವೇಳೆಗೆ ರಾ.ಹೆ 66 ಮಂಗಳೂರು- ಉಡುಪಿ ಏಕಮುಖ ಸಂಚಾರ ರಸ್ತೆಯಲ್ಲಿ ಧರ್ಮಪಾಲ ರವರು ತನ್ನ  TS-08-UB-6391 ನೇ A.P.M ಬಸ್ಸನ್ನು ಅತೀ ವೇಗ & ತೀವೃ ಅಜಾಗರೂಕತೆಯಿಂದ ಸರ್ವೀಸ್ ರಸ್ತೆಯ ಕಡೆಗೆ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದ ಪಿರ್ಯಾದಿದಾರರ ಮಗನ ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದು. ಪರಿಣಾಮ ಪಿರ್ಯಾದಿದಾರರ ಮಗ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಪಿರ್ಯಾದಿದಾರರು ಮಗನ ಬಳಿ ಹೋಗಿ ಉಪಚರಿಸಲಾಗಿ ಅವನ ತಲೆಗೆ ತೀವೃ ರಕ್ತಗಾಯವಾಗಿದ್ದು, ಕೈ ಹಾಗೂ ಕಾಲಿಗೆ ಅಲ್ಲಿಲ್ಲಿ  ತರಚಿದ ರೀತಿಯ ಗಾಯಗಳಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ರಿಕ್ಷಾವೊಂದರಲ್ಲಿ ಉಡುಪಿಯ Hi-Tech ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಪ್ರಥಮ್ ನನ್ನು ಪರೀಕ್ಷಿಸಿದ ವೈಧ್ಯರು ಎಡಗೈ ನ ಭುಜದ ಮೂಳೆ ಮುರಿತವಾಗಿದ್ದು, ತಲೆ ತೀವೃವಾದ ರಕ್ತ ಗಾಯವಾಗಿರುತ್ತದೆ ಎಂಬುದಾಗಿ ತಿಳಿಸಿರುತ್ತಾರೆ. ದಿನಾಂಕ 16-09-2022 ರಂದು ಆಸ್ಪತ್ರೆಗೆ ಕಾಪು ಠಾಣಾ ಪೊಲೀಸರು ದೂರು ಪಡೆಯಲು ಬಂದ ಸಮಯ ಪಿರ್ಯಾದಿದಾರರು ಮಗನ ಆರೈಕೆಯಲ್ಲಿದ್ದ ಕಾರಣ ದೂರು ನೀಡಲು ಅನಾನೂಕೂಲವಾಗಿದ್ದು, ಈ ದಿನ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 105/2022 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿ ಪ್ರತಿಮಾ ಮನೋಹರ್ ((40ಡೃರೆಕ್ಟರ್ ಪ್ಯಾರಡೈಸ್ ಐಸಲೆ ಬೀಚ್ ರೆಸಾರ್ಟ್‌ ಇವರು ಮಲ್ಪೆ ಪ್ಯಾರಡೈಸ್ ಐಸಲೆ ಬೀಚ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್  ಹೋಟೆಲ್ ನ ಡೈರೆಕ್ಟರ್ ಯಾಗಿದ್ದು .ದಿನಾಂಕ: 15-09-2022 ರಂದು ಸಂಜೆ 4 ಗಂಟೆಗೆ ಸುಮಾರು 10-12 ಜನ ಅಪರಿಚಿತರು ಪಿರ್ಯಾದಿದಾರರ  ಹೋಟೆಲ್ ನ ಎದುರು ತೋಡಿಗೆ ಮಣ್ಣು ಹಾಕಿದಾಗ ಹೋಟೆಲ್ ನ ಸಿಬ್ಬಂದಿಯವರು ಆಕ್ಷೇಪ ವ್ಯಕ್ತಪಡಿಸಿರುತ್ತಾರೆ. ಈ ದಿನ ದಿನಾಂಕ: 16.09.2022 ರಂದು ಬೆಳಿಗ್ಗೆ 10.00 ಗಂಟೆಗೆ ಮಲ್ಪೆ ಬೀಚ್ ಎದುರು ಇರುವ ಪಿರ್ಯಾದುದಾರರ ಹೋಟೆಲ್ ಎದುರು ಸುಮಾರು 10 ರಿಂದ 12 ಜನ ಅಪರಿಚಿತ ಅರೋಪಿತರು ಅಕ್ರಮ ಕೂಟ ಸೇರಿಕೊಂಡು ಪಿರ್ಯಾದಿದಾರರ ಹೋಟೆಲ್ ನ ಅವರಣದ ಒಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರ ಹೋಟೆಲ್ ಎದುರು ಇರುವ ತೋಡಿಗೆ ಪುನ: ಲಾರಿಯಲ್ಲಿ ಮಣ್ಣನ್ನು ತಂದು ಹಾಕಿದ್ದು  ಪಿರ್ಯಾದುದಾರರ ಹೋಟೆಲ್ ಸಿಬ್ಬಂದಿಯವರು ಆಕ್ಷೇಪ ವ್ಯಕ್ತ ಪಡಿಸಿದಾಗ  ಹೋಟೆಲ್ ಸಿಂಬ್ಬಂದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಪಿರ್ಯಾದಿದಾರರಿಗೆ ನಷ್ಟವುಂಟು ಮಾಡಿರುವುದಾಗಿದೆ. ಈ ಬಗ್ಗೆ ಮಲ್ಪೆ  ಠಾಣಾ ಅಪರಾಧ ಕ್ರಮಾಂಕ 80/2022 . ಕಲಂ 427,506, 504, 143,147,149,447,323 IPC ರಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ : ಶ್ರೀ ಜೋನ್ ಸಾಂಕ್ತಿಸ್ (64) ತಂದೆ: ದಿವಂಗತ ಲಾರೆಂನ್ಸ್ ಸಾಂಕ್ತಿಸ್ ವಾಸ: ಪೆರಲದ್ದ ಬೆಟ್ಟು ರೆಂಜಾಳ ಇವರ ತಮ್ಮ ಮಥಾಯಸ್ ಸಾಂಕ್ತಿಸ್ (55) ಎಂಬವರು ಅವಿವಾಹಿತರಾಗಿದ್ದು ಸುಮಾರು 15 ವರ್ಷಗಳ ಹಿಂದೆ ಮನೆಯಿಂದ ಹೋದವರು ಅಲ್ಲಲ್ಲಿ ಹೋಟೆಲ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು ಈತನು ವಿಪರೀತ ಮದ್ಯ ಸೇವನೆ ಮಾಡುವ ಚಟದವರಾಗಿರುತ್ತಾರೆ,   ದಿನಾಂಕ 16/09/2022 ರಂದು ಮದ್ಯಾಹ್ನ 12:00 ಗಂಟೆಗೆ ಮಥಯಸ್ ಸಾಂಕ್ತಿಸ್ ರವರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವುದನ್ನು ಊರಿನ ಗೌತಮ್ ಎಂಬವರು ನೋಡಿರುತ್ತಾರೆ, ಪಿರ್ಯಾದುದಾರರು ದಿನಾಂಕ 17/09/2022 ರ ಬೆಳಿಗ್ಗೆ 07:00 ಗಂಟೆಗೆ ತಂದೆ ತಾಯಿಯ ಮನೆಯ ಬಳಿ ಇರುವ ಕೊಟ್ಟೆಗೆಯಲ್ಲಿನ   ಜಾನುವಾರುಗಳಿಗೆ ಹುಲ್ಲು ನೀರು ಇಟ್ಟು ವಾಪಾಸು ಬರುತ್ತಿರುವಾಗ ಮನೆಯ ಕಿಟಕಿಯ ಬಳಿ ಪರ್ಸ ಒಂದು ಇದ್ದು ಅದರಲ್ಲಿ ಪಿರ್ಯಾದುದಾರರ ತಮ್ಮನ ಫೋಟೊ ಇದ್ದುದನ್ನು ನೋಡಿ ಗಾಬರಿಯಿಂದ ಅಕ್ಕಪಕ್ಕದಲ್ಲಿ ಹುಡುಕಾಡಿ ಬಾವಿಯಲ್ಲಿ ನೋಡಿದಾಗ ಚಪ್ಪಲು ನೀರಿನಲ್ಲಿ ತೇಲುತ್ತಿದ್ದನ್ನು ಕಂಡು ಗಾಬರಿಗೊಂಡು ಚರ್ಚಿನ ನಾಯಕರಾದ ಜೆರಾಲ್ಡ್  ಡಿಸೋಜ ರವರಿಗೆ ವಿಷಯ ತಿಳಿಸಿದ್ದು, ಜೆರಾಲ್ಡ್ ಡಿಸೋಜ ಮತ್ತು ಸಂಬಂದಿಕರು ಸ್ಥಳಕ್ಕೆ ಬಂದು ನೋಡಿದಾಗ ನೀರಿನಲ್ಲಿ ಪಿರ್ಯಾದುದಾರರ ತಮ್ಮನ ಮೃತ ದೇಹ ತೇಲುತ್ತಿದ್ದು ಕಂಡುಬಂದಿರುತ್ತದೆ, ಈತನು ಮಾನಸಿಕವಾಗಿ ಜೀವನದಲ್ಲಿ ನೊಂದು  ದಿನಾಂಕ 16/09/2022 ರಂದು ಮದ್ಯಾಹ್ನ 12:00 ಗಂಟೆಯಿಂದ ಈ ದಿನ ದಿನಾಂಕ 17/09/2022 ರ ಬೆಳಿಗ್ಗೆ 07:00 ಗಂಟೆಯ ಮದ್ಯ ಅವದಿಯಲ್ಲಿ ಪಿರ್ಯಾದುದಾರರ  ತಂದೆ ತಾಯಿಗೆ ಸೇರಿದ ಜಾಗದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ  ಯು,ಡಿ,ಆರ್ ನಂಬ್ರ: 31/2022 ಕಲಂ: 174 ಸಿ,ಆರ್,ಪಿ,ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 17-09-2022 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080