ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಮೋಹನ್‌ಶೆಟ್ಟಿ (62), ತಂದೆ: ದಿ. ಕೊರಗ ಶೆಟ್ಟಿ, ವಾಸ: ಮನೆ ನಂಬ್ರ: 7/98, ನಾಗ ನಿಲಯ, ನಿಟ್ಟೂರು, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರ ಮನೆಯ ಎದುರಿನ ಅಂಗಳದಲ್ಲಿ ಬೀಗ ಹಾಕಿ ನಿಲ್ಲಿಸಿದ್ದ ಅವರ ಮಾಲೀಕತ್ವದ ಬಜಾಜ್‌ ಪಲ್ಸರ್‌ 220 ಸಿಸಿ ಮೋಟಾರ್‌ಸೈಕಲ್‌ನಂಬ್ರ: KA-20-ET-8042 (Chassis No: MD2A13EY6KCA24528 & Engine No: DKYCKA94515) ನೇದನ್ನು ದಿನಾಂಕ 14/09/2022 ರಂದು 18:00 ಗಂಟೆಯಿಂದ ದಿನಾಂಕ 15/09/2022 ರಂದು ಬೆಳಿಗ್ಗೆ 07:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ಸೈಕಲ್‌ ನ ಮೌಲ್ಯ ರೂಪಾಯಿ 1,50,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 142/2022 ಕಲಂ:  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ಮಹೇಂದ್ರ (23) , ತಂದೆ: ಪೊಕ್ರು  ವಾಸ: ಪುಣಿಲ್ ಕಟ್ಟೆ    ಮನೆ, ಕುಕ್ಕುಜೆ ಗ್ರಾಮ ಕಾರ್ಕಳ ತಾಲೂಕು ಇವರು ತನ್ನ ತಂದೆ,ತಾಯಿ,ಅಣ್ಣ, ತಮ್ಮ ತಂಗಿ ಹಾಗೂ ಅತ್ತಿಗೆಯವರೊಂದಿಗೆ ಕುಕ್ಕುಜೆ ಗ್ರಾಮದ ಪುಣಿಲ್ ಕಟ್ಟೆಯಲ್ಲಿ ವಾಸ ಮಾಡಿಕೊಂಡಿದ್ದು , ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಸಂಜೆ 5:00 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬರುತ್ತಿರುವಾಗ ತಂಗಿ ಜಯಶ್ರೀ ರವರು ಕರೆ ಮಾಡಿ ಅಣ್ಣ ಕೃಷ್ಣ (29) ರವರು ಮನೆಯಲ್ಲಿ ನೈಲನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಒದ್ದಾಟ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದ ಕೊಡಲೇ ಪಿರ್ಯಾದಿದಾರರು ಬೈಕಿನಲ್ಲಿ ಮನೆಗೆ ಬಂದು ನೋಡಲಾಗಿ ಕೃಷ್ಣ ರವರು ಮಲಗುವ ಕೋಣೆಯಲ್ಲಿ ಮರದ ಜಂತಿಗೆ ನೃಲನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ಉರುಳು ಹಾಕಿಕೊಂಡು ನೇತಾಡುತ್ತಿದ್ದು ಕೊಡಲೇ ಹಗ್ಗವನ್ನು ತುಂಡು ಮಾಡಿ ಕೆಳಗಿಳಿಸಿ ಕಡ್ತಲದ ಖಾಸಗಿ ಆಸ್ವತ್ರೆಯ ವೈದ್ಯಧಿಕಾರಿಯವರನ್ನು ಬರಮಾಡಿಕೊಂಡು ಪರೀಕ್ಷಿಸಿದಲ್ಲಿ ಕೃಷ್ಣ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ., ಕೃಷ್ಣ ರವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16/09/2022 ರಂದು ಬೆಳಿಗ್ಗೆ 11:30 ಗಂಟೆಯಿಂದ ಸಂಜೆ 5:00 ಗಂಟೆಯ ಮಧ್ಯಾವದಿಯಲ್ಲಿ ಮಲಗುವ ಕೋಣೆಯಲ್ಲಿ ಮರದ ಜಂತಿಗೆ ನೃಲನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 13/2022  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ಪಿರ್ಯಾದಿದಾರರಾದ ನವೀನ್ ಕುಮಾರ್ ಶೆಟ್ಟಿ(37), ತಂದೆ:ದಿ ರಾಮಣ್ಣ ಶೆಟ್ಟಿ, ವಾಸ:ಅತ್ತಿಕೊಡ್ಲು. ಹೊಸಂಗಡಿ ಗ್ರಾಮ  ಕುಂದಾಪುರ ತಾಲೂಕು ಇವರ ತಮ್ಮ ವಿನಯ್ ಕುಮಾರ್ ಶೆಟ್ಟಿ (33) ರವರು ಹೊಸಂಗಡಿ ಗ್ರಾಮದ ಅತ್ತಿಕೊಡ್ಲು ಗ್ರಾಮದಲ್ಲಿ  ತಾಯಿ ತಂಗಿಯೊಂದಿಗೆ  ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ   ತಮ್ಮ  ಈ ಹಿಂದೆ ಬೆಂಗಳೂರಿನ ಹೋಟೆಲ್ ನಲ್ಲಿ ಕೆಲಸಮಾಡಿಕೊಂಡಿದ್ದು ಆಗಲೇ ಮಾನಸಿಕ ಖಾಯಿಲೆ ಕಾಣಿಸಿಕೊಂಡಿತ್ತು. ನಂತರ ಊರಿಗೆ ಬಂದು ಕುಂದಾಪುರ ಶ್ರೀಮಾತಾ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದು ವೈದ್ಯರು ಹೇಳಿದಂತೆ ಸರಿಯಾಗಿ ಔಷಧಿ ತೆಗೆದುಕೊಳ್ಳದೇ ಇರುವುದರಿಂದ ಖಾಯಿಲೆ ಗುಣ ಮುಖವಾಗಿರುವುದಿಲ್ಲ. ದಿನಾಂಕ 15/09/2022 ರಂದು ಬೆಳಗ್ಗೆ ಖಾಯಿಲೆ ಜೋರಾಗಿ ಬೊಬ್ಬೆ ಹೊಡೆಯುತ್ತಾ ಅತಿರೇಕವಾಗಿ ವರ್ತಿಸಿ ರಾತ್ರಿ  09:00 ಗಂಟೆಗೆ ಮನೆಯ ಹತ್ತಿರವಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 13/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಮಲ್ಪೆ: ದಿನಾಂಕ 15/09/2022 ರಂದು ಸಕ್ತಿವೇಲು.ಈ, ಪೊಲೀಸ್ ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು  ರೌಂಡ್ಸ ಕರ್ತವ್ಯದಲ್ಲಿರುವಾಗ ಪಡುತೋನ್ಸೆ ಗ್ರಾಮ ದ ಹೂಡೆ ಉರ್ದುಶಾಲೆ ಎದುರಿಗೆ  ಒಬ್ಬ ವ್ಯಕ್ತಿಯು ಅಮಲಿನಲ್ಲಿರುವುದು ಕಂಡು ಆತನನ್ನು  ವಿಚಾರಿಸಲಾಗಿ ಆತನ ತನ್ನ ಹೆಸರು ಎಫ್ ಎಮ್ ನಾಜಿಲ್(28) ಎಂದು ತಿಳಿಸಿದ್ದು ,ಅವನ  ಬಾಯಿಯಿಂದ ಗಾಂಜಾದಂತಹ ವಾಸನೆ ಬಂದಿರುತ್ತದೆ. ಅವನು ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಇದ್ದು ,ಅವನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ಬಗ್ಗೆ  ಪ್ರೊಫೆಸರ್ ಅಂಡ್ ಹೆಡ್  ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ವೈದ್ಯರು ಎಫ್ ಎಂ ನಾಜಿಲ್ ಗಾಂಜಾ ಸೇವಿಸಿರುವ ಬಗ್ಗೆ ದಿನಾಂಕ 16/09/2022 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79/2022  ಕಲಂ: 27(B) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 17-09-2022 09:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080