ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಬೈಂದೂರು: ಪಿರ್ಯಾದಿ ಮಣಿಕಂಠ ಹಣಬ ಇವರು ದಿನಾಂಕ 15-09-2021 ರಂದು ಮಹೇಂದ್ರ ರವರ ಬಾಬ್ತು ಕೆಎ 20 ಈಜೆ 5658 ನೇ ಮೋಟಾರು ಸೈಕಲ್ ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಮಹೇಂದ್ರ ರವರು ಮೋಟಾರು ಸೈಕಲನ್ನು ಚಲಾಯಿಸಿಕೊಂಡಿದ್ದು  ಶಿರೂರಿನಿಂದ ಬೈಂದೂರಿಗೆ ಬಂದು ಮಧ್ಯಾಹ್ನ ಸಮಯ 2:15 ಗಂಟೆಗೆ ಬೈಂದೂರು ರಥಬೀದಿಗೆ ಹೋಗುವರೇ ಬೈಂದೂರು ಜಂಕ್ಷನ್ ತಲುಪಿದಾಗ ಯಡ್ತರೆ ಕಡೆಯಿಂದ ಶಿರೂರು ಕಡೆಗೆ ರಾ. ಹೆ 66 ರ ಸರ್ವಿಸ್ ರಸ್ತೆಯಲ್ಲಿ ಕೆಎ 20 ಈಕ್ಯೂ 4404 ನೇ ಮೋಟಾರು ಸೈಕಲ್ ಸವಾರನು  ತನ್ನ ಮೋಟಾರು ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ  ಫಿರ್ಯಾದಿದಾರ ಹೋಗುತ್ತಿದ್ದ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಫಿರ್ಯಾದುದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಪರಿಣಾಮ ಫಿರ್ಯಾದಿದಾರರಿಗೆ ಎಡಕಾಲಿಗೆ ಒಳನೋವು ಉಂಟಾಗಿರುತ್ತದೆ, ಗಾಯಗೊಂಡ ಫಿರ್ಯಾದಿದಾರರನ್ನು ಮಹೇಂದ್ರ ರವರು ಒಂದು ವಾಹನದಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 154/2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿ ಶಂಕರ ಭಟ್ ಇವರು ದಿನಾಂಕ 16/09/2021ರಂದು ಉತ್ತರ ಕನ್ನಡ ಜಿಲ್ಲೆ  ಸಿರಸಿಯ KA 31A 2955 ಅಂಬುಲೆನ್ಸ ವಾಹನದಲ್ಲಿ ಚಾಲಕ ಅಪ್ಜಲ್ ಖಾನ್ ಮಣಿಯಾರ ನೊಂದಿಗೆ  ತನ್ನ ಮಗುವಿನ ಉಸಿರಾಟದ ಸಮಸ್ಯೆಯ  ಬಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಮಗು.ಹೆಂಡತಿ ರೂಪಾ ಮತ್ತು ಅತ್ತೆ ಸರಸ್ವತಿಯೊಂದಿಗೆ ಮಣಿಪಾಲ ಕೆ.ಎಂ ಸಿ ಆಸ್ಪತ್ರೆಗೆಂದು ಬೆಳಿಗ್ಗೆ 6.30 ಗಂಟೆಗೆ ಶಿರಸಿಯಿಂದ ಹೊರಟು ಬರುತ್ತಿರುವಾಗ  ಬೆಳಿಗ್ಗೆ  10.00 ಗಂಟೆಯ ಸುಮಾರಿಗೆ ಐರೋಡಿ ಗ್ರಾಮದ  ಮಾಬುಕಳ ಬ್ರಿಡ್ಜನ ಬಳಿ ಅಂಬುಲೆನ್ಸ ಚಾಲಕ ಅಪ್ಜಲ್ ಖಾನ್ ಮಣಿಯಾರ ತನ್ನ KA 31A 2955 ಅಂಬುಲೆನ್ಸ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿದ ಚಲಾಯಿಸಿ  ರಸ್ತೆಯ ಮುಂಬದಿಯಲ್ಲಿರುವ ಒಂದು ಆಟೋ ರಿಕ್ಷಾವನ್ನು  ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸುತ್ತಾ ಹತೋಟಿ ತಪ್ಪಿ ಡಿವೈಡರ್ ಮೇಲೆ ಹತ್ತಿಸಿ ರಾ ಹೆ ಇನ್ನೊಂದು  ಪಥದ ರಸ್ತೆಗೆ ಚಲಾಯಿಸಿ ಆ ರಸ್ತೆಯ  ಬಲ ಬದಿಯಲ್ಲಿರುವ ಮಾಬುಕಳ ಬ್ರಿಡ್ಜ ನ  ತಡೆಗೋಡೆಗೆ ಉಜ್ಜಿಕೊಂಡು ಹೋಗಿ ನಿಂತ ಪರಿಣಾಮ ಅಂಬುಲೆನ್ಸ ವಾಹನದ ಚಾಲಕನ ಎಡ ಬದಿಯ ಸೀಟಿನಲ್ಲಿ ಕುಳಿತಿದ್ದ ಪಿರ್ಯಾದಿದಾರರ  ಹೆಂಡತಿ ರೂಪಾಳಿಗೆ ತಲೆಗೆ ಗಂಭೀರ ಪೆಟ್ಟಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು  ಕೂಡಲೇ ರೂಪಾ ಹಾಗೂ ಮಗುವನ್ನು ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಈ ಅಪಘಾತದಲ್ಲಿ ಪಿರ್ಯಾದಿದಾರರಿಗೆ ಹಾಗೂ ಅತ್ತೆ ಸರಸ್ವತಿಯವರಿಗೆ ಹಾಗೂ ಅಂಬುಲೆನ್ಸ ವಾಹನದ ಚಾಲಕನಿಗೆ ಯಾವುದೇ ಪೆಟ್ಟಾಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 164/2021 ಕಲಂ: 279 ,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿ ನಿಖಿಲ್ ಪೂಜಾರಿ ಇವರು ದಿನಾಂಕ : 16.09.2021 ರಂದು 15:45 ಗಂಟೆಗೆ ಸಿಂಡಿಕೇಟ್ ಸರ್ಕಲ್ ಬಳಿ ಇರುವ ತಂದೆಯ ಬಾಬ್ತು ರೋಯಲ್ ಲೀಫ್ ಪಾನ್ ಪಾರ್ಲರ್ ಅಂಗಡಿಯ ಎದುರುಗಡೆ ನಿಂತುಕೊಂಡಿರುವಾಗ ಮಣಿಪಾಲ ಟೈಗರ್ ಸರ್ಕಲ್ ಕಡೆಯಿಂದ KA20MB8934 ಮಾರುತಿ ಓಮ್ನಿ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಂಗಡಿಯ ಎದುರುಗಡೆ ನಿಲ್ಲಿಸಿದ್ದ ಎರಡು ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದು ಬಳಿಕ ಓಮ್ನಿ ಮುಂದಕ್ಕೆ ಚಲಿಸಿ ಪಿರ್ಯಾದಿದಾರರ ಬಾಬ್ತು ರೋಯಲ್ ಲೀಫ್ ಪಾನ್ ಪಾರ್ಲರ್ ಅಂಗಡಿಗೆ ಡಿಕ್ಕಿ ಹೊಡೆದಿದ್ದು. ಡಿಕ್ಕಿ ಹೊಡೆದ ಪರಿಣಾಮ KA20EW4119 Yamaha RAYZR – 125 ಮತ್ತು KA01EK3475  Activa Honda ಮೋಟಾರು ಸೈಕಲ್ ಗಳು ಜಖಂಗೊಂಡು ಕಟ್ಟಡದ ತಳ ಮಹಡಿಗೆ ಬಿದ್ದಿದ್ದು, ಅಂಗಡಿಯ ಬೋರ್ಡ್ ಹಾಗು ಕಟ್ಟಡಕ್ಕೆ ಅಳವಡಿಸಿದ ಸ್ಟೀಲ್ ರೇಲಿಂಗ್ಸ್ ಅಲ್ಲದೆ ಮಾರುತಿ ಓಮ್ನಿ ಕೂಡ ಜಖಂಗೊಂಡಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2021 ಕಲಂ:279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

 • ಕುಂದಾಪುರ: ಪಿರ್ಯಾಧಿ ವಿಶ್ವನಾಥ ಇವರು ಗುಲ್ವಾಡಿ ಗ್ರಾಮದ ಸೌಕೂರು ಸ ನಂ: 44/32 ರಲ್ಲಿ 042 ಎಕ್ರೆ ಜಾಗದ ದುರ್ಗಜ್ಜಿ ಮನೆ ನಿವಾಸಿ ಯಾಗಿರುತ್ತಾರೆ. ಸದ್ರಿ ಜಾಗಕ್ಕೆ ಮೇಲ್ಕಂಡ ಆರೋಪಿತ 1ತಾರಾನಾಥ ಶೆಟ್ಟಿ (55)  ತಂದೆ: ಸೀತಾರಾಮ ಶೆಟ್ಟಿ,ವಾಸ: ವಾಲ್ತೂರು  ಕಾವ್ರಾಡಿ ಗ್ರಾಮ ಕುಂದಾಪುರ (ತಾ),  2 ಸುರೇಶ್ ಶೆಟ್ಟಿ (38)ತಂದೆ: ಮಂಜಯ್ಯ ಶೆಟ್ಟಿ,ವಾಸ: ದುರ್ಗಜ್ಜಿ ಮನೆಸೌಕೂರು ಗುಲ್ವಾಡಿ ಗ್ರಾಮ ,3 ಗಿರಿ (30) ತಂದೆ: ವೆಂಕಟೇಶ ವಾಸ: ಶಾಂಡಾರ ಮಕ್ಕಿ  ಸೌಕೂರು ಗುಲ್ವಾಡಿ ಗ್ರಾಮ 4 ಸಂದೇಶ್ ಶೆಟ್ಟಿ (27) ತಂದೆ: ಲಕ್ಷ್ಮಣ ಶೆಟ್ಟಿ, ವಾಸ: ಪಮ್ಮಜ್ಜಿ ಮನೆ ಸೌಕೂರು ಗುಲ್ವಾಡಿ ಗ್ರಾಮ 5 ಸುಖರಾಮ ಶೆಟ್ಟಿ (25 ) ತಂದೆ: ಲಕ್ಷ್ಮಣ ಶೆಟ್ಟಿ, ಸೌಕೂರು ಗುಲ್ವಾಡಿ ಗ್ರಾಮ   6 ರಾಜು ಶೆಟ್ಟಿ (24 )ತಂದೆ: ಭುಜಂಗ ಶೆಟ್ಟಿವಾಸ: ಪಮ್ಮಜ್ಜಿ ಮನೆ, ಸೌಕೂರು ಗುಲ್ವಾಡಿ ಗ್ರಾಮ 7) ಶಿವ (23 ವ) ತಂದೆ: ಚಂದ್ರ ಶೆಟ್ಟಿ  ವಾಸ: ಚಿಕ್ಕಪೇಟೆ,  ಸೌಕೂರು 8 ರಾಘವ  ಶೆಟ್ಟಿ(29)  ತಂದೆ: ಲಕ್ಷ್ಮಣ ಶೆಟ್ಟಿ,(ಲಚ್ಚು)     ವಾಸ: ಸೌಕೂರು  9 ಭರತ್(30)  ತಂದೆ: ಭಾಲಕೃಷ್ಣ ಶೆಟ್ಟಿ,  ವಾಸ: ಸೌಕೂರು  ಚಿಕ್ಕಪೇಟೆ ಸೌಕೂರು 10 ರಾಹುಲ್ (42 ವ)ತಂದೆ: ರಾಜು  ವಾಸ: ಕುಚ್ಚೆಟ್ಟು ಸೌಕೂರು,  11 ರವಿ (40) ತಂದೆ: ನಾರಾಯಣ ಶೆಟ್ಟಿ,  ವಾಸ: ಚಿಕ್ಕಪೇಟೆ, ಕೆಳಪೇಟೆ ಸೌಕೂರು, 12)  ಸುರೇಂದ್ರ (38)  ಪಂಚಾಯತ್ ಸಧಸ್ಸರು,  ಗುಲ್ವಾಡಿ ಗ್ರಾಮ ಪಂಚಾಯತ್ ಇವರುಗಳು ಆಕ್ರಮ ಪ್ರವೇಶಿಸಿ ಕಂಪೌಂಡ್ ಒಡೆಯಲು ಪ್ರಯತ್ನಿಸಿದಾಗ ಪಿರ್ಯಾಧಿಯವರು ಮಾನ್ಯ ನ್ಯಾಯಾಲಯದಿಂದ ದಾವಾ ನಂಬ್ರ:430/2017 ರಂತೆ ಇಂಜಕ್ಷನ್ ಆರ್ಡರ್ ತಂದಿರುತ್ತಾರೆ. ಈಗಿರುವಾಗ ಆರೋಪಿತರು ತಾ:14-08-2021 ರಂದು 14-00 ಗಂಟೆ ಹಾಗೂ ತಾ:15-08-2021 ರಂದು 14-00 ರಿಂದ 19-00  ಗಂಟೆ  ತನಕ ಆರೋಪಿತರು ಮಾರಕಾಯುಧ  ಹಿಡಿದು ಪಿರ್ಯಾಧಿದಾರರ ಜಾಗಕ್ಕೆ ಆಕ್ರಮ ಪ್ರವೇಶಿಸಿ ಕಂಪೌಂಡ್ ನ್ನು ದ್ವಂಸ ಮಾಡಿದ್ದು, ಆಕ್ಷೇಪಿಸಿದ ಪಿರ್ಯಾಧಿದಾರರಿಗೆ ಹಾಗೂ ಅವರ ಪತ್ನಿಮತ್ತು ಮಗಳಿಗೆ  ಹಲ್ಲೆ ಮಾಡಿರುತ್ತಾರೆ  ಎಂಬಿತ್ಯಾದಿ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 447,323,506(2),427, R/w 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ರಾಘವೇಂದ್ರ ಸಿ. ಪಿಎಸ್ಐ ಕಾಪು ಪೊಲೀಸ್ ಠಾಣೆ ಇವರಿಗೆ ಮಣಿಪುರ ಗ್ರಾಮದ ಬದ್ರು ಎಂಬವನು  ದಿನಾಂಕ 16-09-2021 ರಂದು ಬೆಳಗ್ಗೆ 11.00 ಗಂಟೆಯ ಸಮಯಕ್ಕೆ ಮಣಿಪುರದಿಂದ ಕಟಪಾಡಿ ಕಡೆಗೆ ಸ್ಕೂಟರ್ ನಲ್ಲಿ ಅಕ್ರಮ ದನದ ಮಾಂಸ ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಲಾಖಾ ಜೀಪಿನಲ್ಲಿ  ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯಿಂದ ಹೊರಟು ಸಮಯ ಬೆಳಗ್ಗೆ 11.30 ಗಂಟೆಗೆ ಮಣಿಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಬಳಿ ಹೋಗಿ ನಿಂತು ಕಾಯುತ್ತಿರುವಾಗ ಸ್ಕೂಟರ್‌ನಲ್ಲಿ ಬದ್ರು ಬರುತ್ತಿರುವುದನ್ನು  ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಕೆ.ಎ. 20 ಯು 9353 ನೇ ನಂಬ್ರದ ಸ್ಕೂಟರ್‌ನ್ನು ನಿಲ್ಲಿಸುವ ಸೂಚನೆ ನೀಡಿ, ತಡೆದು ನಿಲ್ಲಿಸಿ, ಸದ್ರಿ ಸ್ಕೂಟರ್‌ನಲ್ಲಿ ಬಿಳಿ ಪಾಲಿಥೀನ್ ಪಾಕೇಟ್‌ನಲ್ಲಿರುವ ಮಾಂಸವನ್ನು ನೋಡಿ ಆತನ ಬಳಿ ವಿಚಾರಿಸಿದಾಗ ಆತನು ಅದು ದನದ ಮಾಂಸ ಎಂಬುದಾಗಿ ತಿಳಿಸಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ  ತಿಳಿಸಿದ್ದು.  ದನದ ಮಾಂಸ ಮಾರಾಟ ಮಾಡಲು ಪರವಾನಗಿ ಬಗ್ಗೆ ವಿಚಾರಿಸಿದಲ್ಲಿ ಯಾವುದೇ  ಪರವಾನಗಿ ಇರುವುದಿಲ್ಲವಾಗಿ ತಿಳಿಸಿದ್ದಂತೆ ಮಾಂಸವನ್ನು ಎಲ್ಲಿಂದ ತಂದಿರುವೇ ಎಂಬ ಬಗ್ಗೆ ವಿಚಾರಣೆ ಮಾಡಲಾಗಿ,  ಸುಭಾಷನಗರದ  ಅದ್ದು  ಮತ್ತು  ಫಾರೂಕ್ ಎಂಬವರ ಹತ್ತಿರ ಮಾರಾಟ ಮಾಡಲು ತೆಗೆದುಕೊಂಡು ಬಂದಿದ್ದು, ಮಾರಾಟ ಮಾಡಲು ಕಟಪಾಡಿ ಕಡೆಗೆ ಹೋಗುತ್ತಿರುವುದಾಗಿ ತಿಳಿಸಿದ ಮೇರೆಗೆ, ಆತನ ಹೆಸರು ವಿಳಾಸ ಕೇಳಲಾಗಿ ಬದ್ರುದ್ದೀನ್ ಇಬ್ರಾಹಿಂ ಪ್ರಾಯ : 38 ವರ್ಷ ತಂದೆ : ದಿ. ಇಬ್ರಾಹಿಂ ವಾಸ : ಫರಾಝ ಮಂಜಿಲ್, ಮಣಿಪುರ ಟವರ್ ಹತ್ತಿರ ಮಣಿಪುರ ಗ್ರಾಮ  ಉಡುಪಿ ತಾಲೂಕು. ಎಂದು ತಿಳಿಸಿದಂತೆ ಪಂಚರ ಸಮಕ್ಷಮ ದನದ ಮಾಂಸ, ಸ್ಕೂಟರ್‌ ಮತ್ತು ಆರೋಪಿಯನ್ನು ವಶಕ್ಕೆ  ಪಡೆದುಕೊಂಡಿರುವುದಾಗಿದೆ. ಸ್ಕೂಟರ್‌ ನಲ್ಲಿರುವ  ಸುಮಾರು 10 ಕೆ.ಜಿ. ದನದ ಮಾಂಸದ ಅಂದಾಜು ಮೌಲ್ಯ 3000/-  ಮತ್ತು ಕೆ.ಎ. 20 ಯು 9353 ನೇ ನಂಬ್ರ ಸ್ಕೂಟರ್‌ನ ಅಂದಾಜು ಮೌಲ್ಯ 30,000/-  ಆಗಬಹುದು. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 147/2021 ಕಲಂ 4, 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ 2020 ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ : ದಿನಾಂಕ 09/09/2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿ ಪುಪ್ಪಾ ಪಿ.ಎಸ್‌.ಐ, ಕೋಟ  ಪೊಲೀಸ್‌  ಠಾಣೆ  ಇವರಿಗೆ ಬಾತ್ಮೀದಾರರು ಮೊಬೈಲ್ ಕರೆ ಮಾಡಿ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕು ಗಿಳಿಯಾರು ಗ್ರಾಮದ ಅಮೃತ್‌ ಬಾರ್‌ ಮತ್ತು ರೆಸ್ಟೋರೆಂಟ್‌ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ ನೀಡಿದ ಖಚಿತ ವರ್ತಮಾನದಂತೆ ಸಿಬ್ಬಂದಿಯವರೊಂದಿಗೆ ಹಾಗೂ ಪಂಚರೊಂದಿಗೆ ಘಟನಾ  ಸ್ಥಳಕ್ಕೆ 11:05 ಘಂಟೆಗೆ ತೆರಳಿ 11:15  ಘಂಟೆಗೆ ದಾಳಿ  ನಡೆಸಿ ಮಟ್ಕಾ  ಜುಗಾರಿ  ಆಟದಲ್ಲಿ ನಿರತ  ಸಾರ್ವಜನಿಕರು  ಸ್ಥಳದಿಂದ  ಓಡಿ  ಹೋಗಿದ್ದು  ಮಟ್ಕಾ  ಜುಗಾರಿ ಆಟ  ಆಡಿಸುತ್ತಿದ್ದ  ಆರೋಪಿತ ಪ್ರವೀಣ  ಪ್ರಾಯ:41 ವರ್ಷ, ತಂದೆ: ಕರಿಯ, ವಾಸ: ವೃಧ್ಧಾಶ್ರಮದ ಬಳಿ ಗುಳ್ಳಾಡಿ, ಬೇಳೂರು ಗ್ರಾಮ, ಕುಂದಾಪುರ  ತಾಲೂಕು, ಉಡುಪಿ  ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದ್ದು, ಮಟ್ಕಾ  ಜುಗಾರಿ  ಆಟಕ್ಕೆ ಬಳಿಸಿದ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 163/2021 ಕಲಂ: 78 (i)(iii) ಕೆ.ಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಕ್ಕುಂಜೆ ವಾರ್ಡಿನ ಸರ್ವೆ ನಂ; 233/1E1P5 ರಲ್ಲಿ 15 ಸಂಟ್ಸ್‌ ಮತ್ತು 233/1EP3 ರಲ್ಲಿ 25 ಸೆಂಟ್ಸ್‌, ಹಾಗೂ 233/1E1P4 ರಲ್ಲಿ 5 ಸೆಂಟ್ಸ್‌ ಜಾಗವು ಪಿರ್ಯಾದಿ ಸರೋಜ ಆಚಾರ್ಯ, ಇವರ ಕುಟುಂಬದ ಆಸ್ತಿಯಾಗಿದ್ದು, ಆಪಾದಿತ 1) ಬಾಲಕೃಷ್ಣ ಶೆಟ್ಟಿ ಪ್ರಾಯ: 50 ವರ್ಷ ತಂದೆ: ಸುಂದರ ಶೆಟ್ಟಿ, ವಾಸ: ಉಡುಪಿ ನಗರ ಸಭೆ ಕಕ್ಕುಂಜೆ ವಾರ್ಡನ ಸದಸ್ಯ, 2) ಪ್ರತಿಮಾ ನಾಯಕ್ ಪ್ರಾಯ: 60 ವರ್ಷ ಗಂಡ: ಸುಧಾಕರ್ ನಾಯಕ್3) ಬಿ. ಗಣಪತಿ ಕಾಮತ್ ಪ್ರಾಯ: 76 ವರ್ಷ ತಂದೆ: ಸಂಜೀವ್ ಕಾಮತ್ 4) ಕೆ ಸುಧಾಕರ್ ನಾಯಕ್, ಪ್ರಾಯ : 62 ವರ್ಷ ತಂದೆ: ಕಕ್ಕುಂಜೆ ಶಿವಾನಂದ5) ಶ್ಯಾಮಲ ಯಾನೆ ವಿಜಯಲಕ್ಷ್ಮೀ ಪ್ರಾಯ: 75 ವರ್ಷ ಗಂಡ: ಗಣಪತಿ ನಾಯಕ್ 6) ಮಾಧವ ಕಾಮತ್ ಪ್ರಾಯ: 48 ವರ್ಷ ತಂದೆ: ಗಣಪತಿ ಕಾಮತ್   ವಾಸ: 2 ರಿಂದ 6ನೇ ಆರೋಪಿಗಳ ವಿಳಾಸ: ಕಕ್ಕುಂಜೆ, ಶಿವಳ್ಳಿ ಗ್ರಾಮ, ಅಂಚೆ- ಕುಂಜಿಬೆಟ್ಟು ಉಡುಪಿ ತಾಲೂಕು ಮತ್ತುಜಿಲ್ಲೆ 7) ಪ್ರಭಾಕರ್ ನಾಯಕ್ ಪ್ರಾಯ: 88 ವರ್ಷ ವಾಸ: ಶಾಂತಿ ನಿಕೇತನ, ತಾಂಗದ ಗಡಿ, ಅಂಚೆ – ಪೂತ್ತೂರು, ಉಡುಪಿ ತಾಲೂಕು ಮತ್ತು  ಜಿಲ್ಲೆ ಇವರುಗಳು ತಕ್ಷೀರು ನಡೆಸುವ ಸಮಾನ ಉದ್ದೇಶದಿಂದ ಒಟ್ಟು ಸೇರಿ ದಿನಾಂಕ 09.04.2021 ರಂದು ಬೆಳಿಗ್ಗೆ 08.30 ಗಂಟೆಗೆ ಮರ ಕಡಿಯುವ ಯಂತ್ರ, ಹಾಗೂ ಜೆಸಿಬಿಯನ್ನು ತಂದು, ಸದ್ರಿ ಜಾಗದೊಳಗೆ ಅಕ್ರಮ ಪ್ರವೇಶ ಮಾಡಿ ಜಾಗದಲ್ಲಿದ್ದ 3 ಲಕ್ಷ ಬೆಲೆಬಾಳುವ ಸಾಗುವನಿ ಮರಗಳನ್ನು ಕಡಿದು, ಪಿರ್ಯಾದಿದಾರರಿಗೆ ಬೆದರಿಕೆ ಒಡ್ಡಿ ತೆಗೆದುಕೊಂಡು ಹೋಗಿದ್ದು, ಅಲ್ಲದೇ ಸದ್ರಿ ಜಾಗದಲ್ಲಿರುವ ರೂ. 5 ಲಕ್ಷ ಮೌಲ್ಯದ ಮನೆಯನ್ನು ಜೆಸಿಬಿಯಿಂದ ಕೆಡವಿ ಹಾಕಿದ್ದು, ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸಿ, ಎರಡು ದಿನಗಳ ನಂತರ ಕಾಂಕ್ರೀಟಿಕರಣ ಮಾಡಿರುತ್ತಾರೆ.  ಆಪಾದಿತ 7 ನೇಯವರು ಪಿರ್ಯಾದಿದಾರರ ಜಾಗವನ್ನು ಸೇರಿಸಿ ನಕಲಿ ವಿನ್ಯಾಸ ನಕ್ಷೆಯನ್ನು ತಯಾರಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119/2021 ಕಲಂ:341,342,395,436,447,465,506, R/W 143,149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 15.09.2021 ರಂದು ಸಂಜೆ 06.00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿ ಬಲ್ಲೆಕುದ್ರು ಹೊಸ ರಸ್ತೆಯ ಬಳಿ ಪಿರ್ಯಾದಿ ಅಂತೋನಿ ಮಸ್ಕರೇನಸ್ ಇವರು ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಆಪಾದಿತ ವಿನೋದ್ ಡಿ’ಸೋಜಾ ವಾಸ: ಪಾಸ್ ಕುದ್ರು, ಮೂಡುಪೆರಂಪಳ್ಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಈತನು  ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ನೆರೆಪರಿಹಾರದ ಬಾಬ್ತು ಸಿಕ್ಕಿದ ಹಣದಲ್ಲಿ ಇನ್ನೂ ರೂ. 20,000/- ಹಣ ತನಗೆ ಕೊಡುವಂತೆ ಒತ್ತಾಯಿಸಿದ್ದು, ಪಿರ್ಯಾದಿದಾರರು ತನ್ನಲ್ಲಿ ಹಣ ಇಲ್ಲ ಎಂದು ಹೇಳಿದಾಗ ಆಪಾದಿತನು ಅವಾಚ್ಯ ಶಬ್ದಗಳಿಂದ ಬೈದು, ಹಣ  ಕೊಡದೇ ಇದ್ದಲ್ಲಿ ಕೈಕಾಲು ಮುರಿಯದೇ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2021 ಕಲಂ:341,504, 506 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿ ಲಕ್ಷ್ಮಣ ಪೂಜಾರಿ ಇವರಿಗೆ ಆಪಾದಿತ 1 ನೇ ಥೋಮಸ್ ರೋಡ್ರಿಗಸ್ ಇವರು ಹಲವು ಬಗೆಯ ಕಿರುಕುಳವನ್ನು ನೀಡುತ್ತಿದ್ದು, ಫಿರ್ಯಾದುದಾರರ ವಾಸ್ತವ್ಯದ ಮನೆಗೆ ಹಾಗೂ ಬಾಡಿಗೆ ನೀಡಿರುವ ಮನೆಗೆ, ದ್ವಿಚಕ್ರವಾಹನಕ್ಕೆ ಕಲ್ಲು ಬಿಸಾಕುವುದು ಮಾಡಿ ಕಿರುಕುಳ ನೀಡುತ್ತಿದ್ದು, ದಿನಾಂಕ 16-09-2021 ರ ಬೆಳಗಿನ ಜಾವ  02:00 ಗಂಟೆಯ ಸುಮಾರಿಗೆ ಆರೋಪಿತ 1.ಥೋಮಸ್ ರೋಡ್ರಿಗಸ್ ಪ್ರಾಯ 52 ವರ್ಷ .  2.ಫೆಲಿಕ್ಸ ರೋಡ್ರಿಗಸ್ ಪ್ರಾಯ 26 ವರ್ಷ.3.ಅಲೆಕ್ಸ್ ರೋಡ್ರಿಗಸ್ ಪ್ರಾಯ 24 ವರ್ಷ.4. ರೋಶನ್ ರೋಡ್ರಿಗಸ್ ಪ್ರಾಯ 20 ವರ್ಷ ವರುಗಳು ಅಕ್ರಮ ಪ್ರವೇಶ ಮಾಡಿ ಫಿರ್ಯಾದುದಾರರು ಮನೆಯ ಬಳಿ ಸಾಕಿಕೊಂಡಿದ್ದ  5 ದೊಡ್ಡ ಊರು ಕೋಳಿಗಳನ್ನು ಕೊಂದು ಹಾಕಿದ್ದು ಈ ಬಗ್ಗೆ ಫಿರ್ಯಾದಿದಾರರು ವಿಚಾರಿಸಿದಕ್ಕೆ ಫಿರ್ಯಾದುದಾರರಿಗೂ ಕೊಲೆ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 156/2021 ಕಲಂ: 447, 429, 506  ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದ  ಹೆರಾಯಿ ಬೆಟ್ಟು ಎಂಬಲ್ಲಿ ವಾಸವಾಗಿರುವ ರವಿರಾಜ  ಬಂಗೇರ  ಪ್ರಾಯ: 42 ವರ್ಷ, ಎಂಬವರು ಸುಮಾರು 10 ವರ್ಷಗಳಿಂದ  ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ  ಅವರಿಗೆ  ದೊಡ್ಡಣ್ಣಗುಡ್ಡೆ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವುದಾಗಿದೆ. ಅವರು ತನಗೆ ಇದ್ದ ಮಾನಸಿಕ ಖಾಯಿಲೇ ಇಂದಲೋ  ಅಥವಾ  ಇನ್ಯಾವುದೋ  ಹೇಳಿಕೊಳ್ಳಲಾಗದ ಕಾರಣದಿಂದಲೋ  ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ: 15-09-2021ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ: 16-09-2021ರಂದು  ಮಧ್ಯಾಹ್ನ 1:45 ಗಂಟೆಯ ಮಧ್ಯಾವಧಿಯಲ್ಲಿ ತಾನು ಮಲಗುತ್ತಿದ್ದ  ಮನೆಯ ಕೋಣೆಯಲ್ಲಿ  ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಯು.ಡಿ.ಆರ್‌ಕ್ರಮಾಂಕ 26/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-09-2021 10:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080