ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ: 17/08/2022 ರಂದು ಬೆಳಗ್ಗೆ 8:40  ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸ್ವಾಗತ ಗೋಪುರದ ಮುಂಭಾಗದಲ್ಲಿ ಹಾದು ಹೊಗುವ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಾರು ನಂಬ್ರ KA19ME6261 ನೇದರ ಚಾಲಕನು ತನ್ನಬಾಬ್ತು ಕಾರನ್ನು ಹಾಳೆಕಟ್ಟೆಯಿಂದ ನಿಟ್ಟೆ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಬರುವಾಗ ನಿರ್ಲಕ್ಷತನದಿಂದ ಒಮ್ಮೆಲೆ ತನ್ನ ತೀರ ಬಲಭಾಗಕ್ಕೆ ಚಲಾಯಿಸಿದ ಪರಿಣಾಮ ಹಾಳೆಕಟ್ಟೆಯಿಂದ ನಿಟ್ಟೆ ಕಡೆಗೆ ಸುಹಿತ್ ಶೆಟ್ಟಿಯವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬುಲೆಟ್ ನಂಬ್ರ KA20EV4830 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬುಲೆಟ್ ಸವಾರ ಮತ್ತು ಸಹಸವಾರರಾದ ಪಿರ್ಯಾದಿ ಮಂಗಳಾ ಇವರು ಬುಲೆಟ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕಾಲಿಗೆ ಬಲ ಕೈ, ಎಡ ಕಾಲಿಗೆ ತರಚಿದ ಗಾಯ ಹಾಗೂ ಮೋಟಾರ್ ಸೈಕಲ್ ಸವಾರನ ಎಡಕಾಲು ಮತ್ತು ಎಡ ಕೈಗೆ ಮೂಳೆ ಮುರಿತವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ 105/2022 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ದಿನಾಂಕ:14/08/2022 ರಂದು ಇಸ್ಮಾಯಿಲ್ ರವರು ಚಲಾಯಿಸುತ್ತಿದ್ದ KA 16 B 0403 ನೇ ಓಮ್ನಿ ಕಾರಿನಲ್ಲಿ ಸಹ ಪ್ರಯಾಣಿಕರಾಗಿ ಲತೀಫ್ ಮತ್ತು ಯಾಸಿರ್ ರವರು ಮಂಗಳೂರುನಿಂದ ಕಾರ್ಕಳ ಮಾರ್ಗವಾಗಿ ಸಾಗರಕ್ಕೆ ಹೋಗುತ್ತಿರುವಾಗ ಮಧ್ಯಾಹ್ನ ಸಮಯ ಸುಮಾರು 03:00 ಗಂಟೆಗೆ ಮುದ್ರಾಡಿ ಗ್ರಾಮದ ಮುದ್ರಾಡಿ ಗಣಪತಿ ದೇವಸ್ಥಾನದ ಹತ್ತಿರ ತಲುಪುವಾಗ ಇಸ್ಮಾಯಿಲ್ ರವರು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ರಸ್ತೆಯ ಪಕ್ಕದಲ್ಲಿರುವ ಅಶ್ವಥ ಕಟ್ಟೆಗೆ ಢಿಕ್ಕಿಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ. ಕಾರಿನಲ್ಲಿದ್ದ  ಚಾಲಕ ಇಸ್ಮಾಯಿಲ್ ರವರಿಗೆ ಬಲಕಾಲು ಮೂಳೆ ಮುರಿತವಾಗಿರುತ್ತದೆ. ಲತೀಫ್ ರವರಿಗೆ ಹೊಟ್ಟೆಗೆ ಗುದ್ದಿದ ನೋವಾಗಿರುತ್ತದೆ, ಯಾಸಿರ್ ರವರ ತಲೆಗೆ ಪೆಟ್ಟಾಗಿರುತ್ತದೆ. ಈ ಬಗ್ಗೆ ಹೆಬ್ರಿ ಠಾಣೆ ಅಪರಾಧ ಕ್ರಮಾಂಕ 35/2022 ಕಲಂ:279 , 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ:16.08.2022 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಸುಜನ್‌ ಶೆಟ್ಟಿ ( 20 ವರ್ಷ) ಎಂಬವರು ಬ್ರಹ್ಮಾವರ ಕಾಲೇಜಿಗೆ ಹೋಗುವರೇ ಮನೆಯಿಂದ ಅವರ ಬಾಬ್ತು KA.19.EG.9694 ನೇ ಮೋಟಾರ್‌ ಸೈಕಲ್‌ನಲ್ಲಿ ಸವಾರಿ ಮಾಡಿಕೊಂಡು ಸಾಯಿಬ್ರಕಟ್ಟೆ  - ಬಾರ್ಕೂರು ರಾಜ್ಯ ರಸ್ತೆಯಲ್ಲಿ ಬಾರ್ಕೂರು ಕಡೆಗೆ ಹೋಗುತ್ತಾ ಬೆಳಿಗ್ಗೆ 08:45 ಗಂಟೆಗೆ ಹೇರಾಡಿ ಗ್ರಾಮದ ಕಾವಡಿ ಕ್ರಾಸ್‌ ರಸ್ತೆ ತಲುಪುವಾಗ ಅವರ ಮುಂದುಗಡೆಯಿಂದ ಆರೋಪಿ ಶಿವರಾಮ ಪೂಜಾರಿ ಎಂಬವರು ಅವರ ಬಾಬ್ತು KA.20.C.4774 ನೇ Ace goods ವಾಹನ ವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಯಾವುದೇ ಸೂಚನೆಯನ್ನು ನೀಡದೇ ಎಡ ಭಾಗದಿಂದ ಬಲಭಾಗಕ್ಕೆ ಚಲಾಯಿಸಿ  ಪಿರ್ಯಾದಿದಾರರ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರು ರಸ್ತೆಯ ಮೇಲೆ ಬಿದ್ದು ಅವರ ಎಡ ಕಾಲಿನ ಮೊಣಗಂಟು ಮೂಳೆ ಮುರಿತ, ಎಡ ಕಣ್ಣಿ ಕೆಳ ಭಾಗ, ಬಲ ಕಣ್ಣಿನ ಕೆಳ ಭಾಗ ಭುಜಕ್ಕೆ ತರಚಿದ ಗಾಯವಾಗಿರುತ್ತದೆ, ಅಲ್ಲದೇ ಮೋಟಾರ್‌ ಸೈಕಲ್‌ ಮುಂದಿನ ಭಾಗ ಹಾಗೂ ಹೆಲ್ಮೆಟ್‌ ಜಖಂಗೊಂಡಿರುತ್ತದೆ, ಗಾಯಗೊಂಡವರನ್ನು ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 138/2022 ಕಲಂ :279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹಿರಿಯಡ್ಕ: ರಮೇಶ್ ನಾಯ್ಕ(50)  ರವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟದವರಾಗಿದ್ದು ಹಾಗೂ  ತನ್ನ ಹಿರಿಯ ಮಗ ಈ ಹಿಂದೆ ಹೊಳೆಯಲ್ಲಿ ಕಾಲು ಜಾರಿ ಮೃತ ಪಟ್ಟ  ಬಳಿಕ ಅದೇ ಚಿಂತೆಯಲ್ಲಿದ್ದು ಅಲ್ಲದೇ ಮಾನಸಿಕವಾಗಿ ಅಸ್ಥವ್ಯಸ್ಥರಾಗಿದ್ದು ನಿನ್ನೆ ದಿನಾಂಕ 16/08/2022 ರಂದು ಅಡಿಕೆ ಮರಕ್ಕೆ ಮದ್ದು ಬಿಡಲು ಮನೆಯಿಂದ  ಹೋದವರು ಈ ದಿನ ದಿನಾಂಕ ಬೆಳಿಗ್ಗೆ 06:00 ಗಂಟೆಗೆ ಬಾವಿಯಲ್ಲಿ ಅವರ ಮತ ದೇಹ ತೇಲುತ್ತಿದ್ದು ಮೃತ ರಮೇಶ್ ನಾಯ್ಕ ರವರು ಇದೇ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಅಥವಾ ಇನ್ಯಾವುದೋ ಕಾರಣದಿಂದ  ದಿನಾಂಕ 16/08/2022 ರಂದು ರಾತ್ರಿ 7:00 ಗಂಟೆಯಿಂದ ಈ ದಿನ ದಿನಾಂಕ 17/08/2022 ರ ಬೆಳಿಗ್ಗೆ 06:00 ಗಂಟೆಯ ಮದ್ಯಾವದಿಯಲ್ಲಿ ತನ್ನ ಮನೆಯ ಆವರಣ ಗೋಡೆ ಇಲ್ಲದ ಬಾವಿಗೆ ನೀರು ಸೇದುವರೇ ಹೋದಾಗ ಕಾಲು ಜ್ಯಾರಿ ಅಥವಾ ಬಾವಿಗೆ ಹಾರಿ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 34/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ದಿನಾಂಕ 17/08/2022 ರಂದು ಬೆಳಿಗ್ಗೆ 06:00 ಗಂಟೆ ಸುಮಾರಿಗೆ  ಪಿರ್ಯಾದಿ ಗಂಗಾಧರ ಮೊಗವೀರ ಇವರು ಮತ್ತು  ನಾರಾಯಣ ಹಾಗೂ ಬಿಂದುಮನೆ ಹೊಸಹಿತ್ಲು ನಿವಾಸಿ ನಾರಾಯಣ  (60) ತಂದೆ: ಮಂಜ ಇವರು ಮೂವರು ಸೇರಿಕೊಂಡು  ಕಿರಿಮಂಜೇಶ್ವರ ಗ್ರಾಮದ   ನಾಗೂರು ಹೊಸಹಿತ್ಲು ಎಂಬಲ್ಲಿ ಸಮುದ್ರ ಕಿನಾರೆಯಿಂದ ದೋಣಿಯಲ್ಲಿ ಮೀನುಗಾರಿಕೆಗೆ ಅರಬ್ಬೀ ಸಮುದ್ರಕ್ಕೆ ಹೋಗಿದ್ದು, ಮೀನುಗಾರಿಕೆ ಮಾಡುತ್ತ ಬೆಳಿಗ್ಗೆ ಸಮಯ ಸುಮಾರು  8:15 ಗಂಟೆಗೆ ದಡದಿಂದ 3 ಮಾರು ದೂರದ ಅರಬ್ಬೀ ಸಮುದ್ರದಲ್ಲಿ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವ ಸಮಯ  ನಾರಾಯಣ  (60) ತಂದೆ:ಮಂಜ ರವರು ದೋಣಿಯಲ್ಲಿ  ಕುಸಿದು ಬಿದ್ದು, ಆಕಸ್ಮಿಕವಾಗಿ ಆಯತಪ್ಪಿ ಅರಬ್ಬೀ ಸಮುದ್ರದ ನೀರಿಗೆ ಬಿದ್ದವರನ್ನು ಜೊತೆಯಲ್ಲಿದ್ದ ಫಿರ್ಯಾಧಿದಾರರು ಮತ್ತು ನಾರಾಯಣ ಎಂಬವರು ಸಮುದ್ರದಿಂದ ಮೇಲೆಕ್ಕೆತ್ತಿ ದೋಣಿಗೆ ಹಾಕಿ ದಡಕ್ಕೆ ತಂದು ಉಪಚರಿಸಿ 108 ಆಂಬುಲೆನ್ಸ್ ನಲ್ಲಿ  ಫಿರ್ಯಾಧಿದಾರರು ಮತ್ತು ಮೃತ ನಾರಾಯಣರವರ ಮನೆಯವರು  ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆತಂದಲ್ಲಿ 10:00 ಗಂಟೆಯ ಸಮಯಕ್ಕೆ ವೈದ್ಯಾಧಿಕಾರಿಯವರು ಪರೀಕ್ಷಿಸಿ ನಾರಾಯಣರವರನ್ನು ಆಸ್ಪತ್ರೆಗೆ ಕರೆತರುವಾಗ ದಾರಿ ಮದ್ಯೆ ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 42/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-08-2022 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080