ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ನಿತಿನ್ ಮೊಯಿಲಿ (29), ತಂದೆ: ನಾರಾಯಣ ದೇವಾಡಿಗ,  ವಾಸ: ಮನೆ ನಂಬ್ರ : 7-25(ಎ) , ಸಗ್ರಿ ಗ್ರಾಮ ಕುಂಜಿಬೆಟ್ಟು ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ತಂದೆ ನಾರಾಯಣ ದೇವಾಡಿಗ (62) ರವರು ಎಂ.ಜಿ.ಎಂ ಕೆ.ಇ.ಬಿ ವಸತಿ ಗೃಹದ ಬಳಿ ಗೂಡಂಗಡಿ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 15/08/2022 ರಂದು ರಾತ್ರಿ ಗೂಡಂಗಡಿ ಬಂದ್ ಮಾಡಿ ಎದುರುಗಡೆ ಇರುವ ಹೋಟೆಲಿಗೆ ಹೋಗಿ ವಾಪಾಸು ಮನೆಗೆ ಬರಲು ಶಿವಳ್ಳಿ ಗ್ರಾಮದ ಎಂ.ಜಿ.ಎಂ ಕೆನೆರಾ ಬ್ಯಾಂಕ್ ಎ.ಟಿ.ಎಂ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-169A ನೇ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ರಸ್ತೆಯ ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ರಾತ್ರಿ 8:00 ಗಂಟೆಗೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ KA-20-ME-1701 ನೇಕಾರಿನ ಚಾಲಕನು ತಾನು ಚಲಾಯಿಸುತ್ತಿದ್ದ ಕಾರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದ ಪಿರ್ಯಾದಿದಾರರ ತಂದೆ ನಾರಾಯಣ ದೇವಾಡಿಗ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ತಲೆಗೆ ಗಂಬೀರ ಸ್ವರೂಪದ ಗಾಯ , ಎಡಕೈಯ ಬೆರಳಿಗೆ, ಎಡಕಾಲಿಗೆ ಮೂಳೆ ಮುರಿತದ ಗಂಬೀರ ಸ್ವರೂಪದ ಜಖಂ ಆಗಿದ್ದು, ಈ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2022 ಕಲಂ: 279 ,338  ಐಪಿಸಿ ಮತ್ತು 134(ಎ)(ಬಿ) ಜೊತೆಗೆ 187 ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕೋಟ: ಪಿರ್ಯಾದಿದಾರರಾದ ಹರೀಶ (18), ತಂದೆ: ಷಣ್ಮುಖ, ವಾಸ: ಕೊರ್ಗಿ ದೊಡ್ನರಿ ಕಲ್ಲು  ಕೊರ್ಗಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 15/08/2022 ರಂದು ಕಾಲೇಜಿಗೆ ರಜೆ ಇದ್ದುದರಿಂದ ಮಧ್ಯಾಹ್ನ ದೊಡ್ಡಪ್ಪನ ಮಗ ಚಂದ್ರಕಾಂತ ಹಾಗೂ ತಮ್ಮ ಶಶಾಂಕ ನೊಂದಿಗೆ ಗಿಳಿಯಾರುವಿನಲ್ಲಿರುವ ಹೊಳೆಗೆ ಮೀನು ಹಿಡಿಯಲು ಹೊರಟಿದ್ದು  ತಮ್ಮ ಶಶಾಂಕನು ಚಂದ್ರ ಕಾಂತನ  ಸ್ಕೂಟಿ KA-20-EH-0746 ನೇದರಲ್ಲಿ ಹಿಂಬದಿ ಸವಾರನಾಗಿ  ಕುಳಿತಿದ್ದು  ಹಾಗೂ ಪಿರ್ಯಾದಿದಾರರು ತನ್ನ ಮೊಟಾರ್ ಸೈಕಲಿನಲ್ಲಿ ಅವರ ಹಿಂದಿನಿಂದ ಹೋಗುತ್ತಿದ್ದು  ಮೀನು ಹಿಡಿದು ವಾಪಾಸ್ಸು ಮನೆಯ ಕಡೆಗೆ ಗಿಳಿಯಾರು- ಬೇಳೂರು ರಸ್ತೆಯಲ್ಲಿ ಹೊರಟು ಬೇಳೂರು ಪಂಚಾಯತ್ ಕಛೇರಿಯ ಸ್ವಲ್ಪ ಹಿಂದೆ  ತಿರುವಿನಲ್ಲಿ  ಹೋಗುವಾಗ  ಬೇಳೂರು ಕಡೆಯಿಂದ  ಗಿಳಿಯಾರು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದ KA-25-MC-3389 ನೇ ಕಾರು  ಚಾಲಕ  ಅಶೋಕ ಶೆಟ್ಟಿ ರವರು ಚಂದ್ರಕಾಂತನ ಸ್ಕೂಟಿಗೆ ಢಿಕ್ಕಿ ಹೊಡೆದನು. ಸ್ಕೂಟಿ ಸಮೇತ ರಸ್ತೆಗೆ ಬಿದ್ದ ಪರಿಣಾಮ ಚಂದ್ರಕಾಂತನ ಬಲ ಹಣೆಗೆ, ಬಲ ದವಡೆ ಹಾಗೂ ಬಲ ಭುಜ ಹಾಗೂ ಬಲ ಕೈಗೆ  ತೀವೃ ತರಹದ ಗಾಯವಾಗಿದ್ದು , ಶಶಾಂಕ ನಿಗೆ ಬಲ ಕೋಲುಕಾಲಿನ ಮೂಳೆ ಮುರಿತದ ಗಾಯವಾಗಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 133 /2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಿರ್ವಾ: ದಿನಾಂಕ 16/08/2022 ರಂದು ಮಧ್ಯಾಹ್ನ 02:30 ಗಂಟೆಗೆ ಐವನ್ ಪಿಂಟೋ, ರೊನಾಲ್ಡ್ ಪಿಂಟೋ, ಅನಿಲ್ ನಜರತ್ ರವರು ಪಿರ್ಯಾದಿದಾರರಾದ ವಿನೋದ್ ಕುಮಾರ್ (36), ತಂದೆ: ಲೆಸ್ಲಿ  ಕರ್ಡೋಜ, ವಾಸ: ಕೊಲ್ಲಬೆಟ್ಟು, ಪಾದೂರು ಗ್ರಾಮ, ಕಾಪು ತಾಲೂಕು ಇವರ ಬಾಡಿಗೆ ಮನೆಗೆ ಏಕಾಏಕಿ ಬಂದು ಮನೆಯೊಳಗೆ ನುಗ್ಗಿ ಐವನ್ ಪಿಂಟೋ ಎಂಬಾತ ಹೆಲ್ಮಟ್ ನಿಂದ ಪಿರ್ಯಾದಿದಾರರ ಕೆನ್ನೆಗೆ ಹೊಡೆದು ಹಲ್ಲೆ ಮಾಡಿ, ನಂತರ ಮೂವರೂ ಸೇರಿ ಮನೆಯ ಕಿಟಕಿ ಗಾಜುಗಳನ್ನು,ಮನೆ ಬಾಗಿಲನ್ನು ಕಲ್ಲಿನಿಂದ ಹೊಡೆದು ಒಡೆದು ಹಾಕಿ 15,000/- ರೂಪಾಯಿ ನಷ್ಟವನ್ನು ಉಂಟುಮಾಡಿರುತ್ತಾರೆ. ಅಲ್ಲದೇ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54 /2022  ಕಲಂ: 447,  427,  448, 324, 504, 506,341 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-08-2022 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080