ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 16/07/2022 ರಂದು 18:00 ಗಂಟೆಗೆ ಪಿರ್ಯಾದಿದಾರರಾದ ರಂಜಿತ್‌ಪೂಜಾರಿ (29), ತಂದೆ: ದಿ: ಆನಂದ ಪೂಜಾರಿ, ವಾಸ: ಪಿಂಟೋ ಕಂಪೌಂಡ್‌ಮೋಡರ್ನ್‌ರೈಸ್‌ಮಿಲ್‌ಬಳಿ, ಅಶೋಕ ನಗರ ಮಂಗಳೂರು ಇವರು ತನ್ನ ಭಾಬ್ತು KA-19 ML-9695 ಕಾರಿನಲ್ಲಿ ಚಾಲಕ ವರುಣ್‌ ಕಾರನ್ನು ಕಾರ್ಕಳದಿಂದ ರೆಂಜಾಳ ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಚಲಾಯಿಸಿಕೊಂಡು ಕಾರ್ಕಳ ತಾಲೂಕು, ರೆಂಜಾಳ ಗ್ರಾಮದ ಕೋಂಟಡ್ಕ ಎಂಬಲ್ಲಿ ತಲುಪುವಾಗ್ಗೆ  ರೆಂಜಾಳ ಕಡೆಯಿಂದ ಕಾರ್ಕಳ ಕಡೆಗೆ ಕಾರು ನಂಬ್ರ KA-19 MB-3954 ರ ಚಾಲಕನು ತನ್ನ ಬಾಬ್ತು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನನ್ನ ಕಾರಿನ ಬಲಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ 2 ಕಾರುಗಳು ಜಖಂಗೊಂಡು ರಸ್ತೆಯಂಚಿಗೆ ಜಾರಿಕೊಂಡಿದ್ದು ಆಲ್ಟೋ ಕಾರಿನಲ್ಲಿದ್ದ ಮೀನಾಕ್ಷಿ (54) ಎಂಬವರಿಗೆ ಮೂಳೆ ಮುರಿತದ ಗಾಯವಾಗಿರುವುದಾಗಿ ಮತ್ತು ರಂಜಿತ್‌ಪೂಜಾರಿ ಇವರಿಗೆ ಬಲ ಕೈ ಹೆಬ್ಬೆರಳಿಗೆ ಮತ್ತು ಜೊತೆಗಾರ ಅರ್ಜುನ್‌ರವರಿಗೆ ದೇಹದ ಎಡಭಾಗ ಮತ್ತು ತಲೆಯ ಬಲಭಾಗಕ್ಕೆ ಗುದ್ದಿದ ನೋವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಪ್ರಕಾಶ್‌ ರಾವ್‌(53) ಸಂಚಾಲಕರು, ಹಿಂದೂ ರುದ್ರಭೂಮಿ ವ್ಯವಸ್ಥಾಪಾನಾ ಸಮಿತಿ, ಕರಿಯಕಲ್ಲು, ಕಾರ್ಕಳ ಇವರು ಕಾರ್ಕಳ ಪುರಸಭೆಯ ಅಧೀನದಲ್ಲಿರುವ ಕಸಬಾ ಗ್ರಾಮದ ಕರಿಯಕಲ್ಲು ಹಿಂದೂ ರುದ್ರ ಭೂಮಿಯ ವ್ಯವಸ್ಥಾಪನ ಸಮಿತಿಯ ಸಂಚಾಲಕರಾಗಿದ್ದು, ಪ್ರಕಾಶ್‌ ರಾವ್‌ ಇವರು ದಿನಾಂಕ 14/07/2022 ರಂದು ಸಂಜೆ 5:30 ಗಂಟೆಗೆ ರುದ್ರಭೂಮಿಯ ಆವರಣದ ಗೇಟಿಗೆ ಬೀಗವನ್ನು ಹಾಕಿ ಹೋಗಿದ್ದು ವಾಪಾಸು ದಿನಾಂಕ 16/07/2022 ರಂದು ಬೆಳಿಗ್ಗೆ 9:00 ಗಂಟೆಗೆ ರುದ್ರಭೂಮಿಗೆ ಬಂದು ಒಳಗಡೆ ಹೋಗಿ ನೋಡಿದಾಗ ಮೃತ ದೇಹವನ್ನು ಸುಡುವ ಸ್ಥಳದಲ್ಲಿ ಇರಿಸಿದ ಸಿಲಿಕಾನ್‌ ಒಲೆಯಲ್ಲಿ ಹಾಕಿದ ನಾಲ್ಕು ಬ್ಲಾಕ್‌ಗಳ ಪೈಕಿ ಒಂದು ಬ್ಲಾಕ್‌ ಕಾಣದೇ ಇದ್ದು, ಕಾಣೆಯಾದ ಸಿಲಿಕಾನ್‌ ಒಲೆಯ ಬ್ಲಾಕ್‌ನ ಅಂದಾಜು ಮೌಲ್ಯ 7,000/- ರೂಪಾಯಿ ಆಗಿದ್ದು, ಯಾರೋ ಕಳ್ಳರು ದಿನಾಂಕ 14/07/2022 ರಂದು ಸಂಜೆ 5:30 ಗಂಟೆಯಿಂದ ದಿನಾಂಕ 16/07/2022 ರಂದು ಬೆಳಿಗ್ಗೆ 9:00 ಗಂಟೆಯ ಮದ್ಯಾವಧಿಯಯಲ್ಲಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ ೯೯/2022 ಕಲಂ: ೩೭೯ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಮಹೇಂದ್ರ ಕುಮಾರ್‌ (40), ತಂದೆ: ದಿ. ಪದ್ಮನಾಭ, ವಾಸ: ಕಳುವಿನ ಬೆಟ್ಟು, ನೀಲಾವರ ಗ್ರಾಮ, ಬ್ರಹ್ಮಾವರ ಇವರು ಕೇದೋರೊತ್ಥಾನ ಟ್ರಸ್ಟ್‌ (ರಿ.) ಉಡುಪಿ ಇದರ  ಸದಸ್ಯರಾಗಿರುತ್ತಾರೆ, ಅವರು 2021-22 ನೇ ಸಾಲಿನಲ್ಲಿ ಹಡಿಲು ಭೂಮಿ ಕೃಷಿ ಯೋಜನೆಯಡಿ ರೂಪಾಯಿ 12 ಲಕ್ಷ ಮೌಲ್ಯದ 4 ಭತ್ತ ನಾಟಿ ಯಂತ್ರಗಳನ್ನು ಖರೀದಿಸಿ, ಈ ವರ್ಷದ ನಾಟಿ ಪ್ರಾರಂಭವಾಗುವ ಮುಂಚೆ ಯಂತ್ರಗಳನ್ನು ದುರಸ್ಥಿ ಮಾಡುವ ಸಲುವಾಗಿ ಬ್ರಹ್ಮಾವರ ಕೃಷಿಕೇಂದ್ರದ ವಠಾದಲ್ಲಿ ಇಟ್ಟಿರುತ್ತಾರೆ. ಎಪ್ರಿಲ್‌ ತಿಂಗಳಲ್ಲಿ ಸದ್ರಿ 4 ಯಂತ್ರಗಳನ್ನು ಆರೋಪಿಯು ರಿಪೇರಿ ಮಾಡುವ ನೆಪದಲ್ಲಿ ತೆಗೆದುಕೊಂಡು ಹೋಗಿದ್ದು, ಮಹೇಂದ್ರ ಕುಮಾರ್‌ ಇವರು ಈ ತಿಂಗಳಲ್ಲಿ ನಾಟಿ ಮಾಡುವ ಸಂಧರ್ಭದಲ್ಲಿ ಆ ಯಂತ್ರಗಳನ್ನು ಹಲವು ಬಾರಿ ಕೇಳಿದಾಗ ಆರೋಪಿ ಶ್ರೀಕಾಂತ್‌ ಭಟ್‌, [ ಮಾಲಕರು, ಜೀವನ್‌ ಯಂತ್ರ ಕೊಟೇಶ್ವರ ಇವರು ಇದುವರೆಗೂ ಯಂತ್ರಗಳನ್ನು ವಾಪಾಸ್ಸು ನೀಡದೆ ಮಹೇಂದ್ರ ಕುಮಾರ್‌ ಇವರಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 120/2022 ಕಲಂ: 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವರದಕ್ಷಿಣೆ ಕಿರುಕುಳ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀಮತಿ ಜಿ ಹೀನಾ ಕೌಸರ್‌ (31) ತಂದೆ: ಜಿ ಮೊಹಮ್ಮದ್‌ರಫೀಕ್‌, ವಾಸ: ರೆಹಾನ್‌ ಮಂಜಿಲ್‌, ತ್ರಾಸಿ ಗ್ರಾಮ, ಕುಂದಾಪುರ ರವರು ಹಾಗೂ  ಆರೋಪಿ ಇರ್ಫಾನ್‌ ಸತ್ತರ್‌ರವರು ದಿನಾಂಕ 29/07/2018 ರಂದು ತ್ರಾಸಿ ಕ್ಲಾಸಿಕ್‌ ಆಡಿಟೋರಿಯಂ ಹಾಲ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿತ್ತಾರೆ. ಮದುವೆಯ ಪೂರ್ವದಲ್ಲಿ ಆರೋಪಿಯು ಶ್ರೀಮತಿ ಜಿ ಹೀನಾ ಕೌಸರ್‌ ರವರ ತಂದೆಯವರಲ್ಲಿ 30 ಪವಾನ್‌ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದು ಶ್ರೀಮತಿ ಜಿ ಹೀನಾ ಕೌಸರ್‌ ರವರ ತಂದೆ ನಿರಾಕರಿಸಿದಾಗ ಆರೋಪಿಯು ಶ್ರೀಮತಿ ಜಿ ಹೀನಾ ಕೌಸರ್‌ ರವರ ತಂದೆಗೆ ಹೇರಿದ ಒತ್ತಡಕ್ಕೆ ಮಣಿದು ಇವರ ತಂದೆ ಬೇರೆ ದಾರಿ ಕಾಣದೆ 15 ಪವನ್‌ ಚಿನ್ನಾಭರಣವನ್ನು ನೀಡಲು ಒಪ್ಪಿಕೊಂಡು ಮದುವೆ ಸಮಯ ನೀಡಿರುತ್ತಾರೆ.  ಮದುವೆ ನಂತರ ಆರೋಪಿಯು ಉಡುಪಿ ಸಂತೆಕಟ್ಟೆ ಯಲ್ಲಿರುವ ತನ್ನ ಮನೆಗೆ ಶ್ರೀಮತಿ ಜಿ ಹೀನಾ ಕೌಸರ್‌ ರವರನ್ನು ಕರೆದುಕೊಂಡು ಹೋಗಿ ಸಂಸಾರ ಮಾಡಿದ್ದು, ಆ ಸಮಯ ಇವರು ವರದಕ್ಷಿಣೆ ರೂಪದಲ್ಲಿ ತಂದಿರುವ ಚಿನ್ನಾಭರಣಗಳು ತೀರಾ ಕಡಿಮೆಯಾಗಿದೆ ಎಂದು ಮುದಲಿಸಿ ಬೈದು ಮಾನಸಿಕ ಹಿಂಸೆ ನೀಡುತ್ತಿದ್ದನು, ಅಲ್ಲದೇ ಶ್ರೀಮತಿ ಜಿ ಹೀನಾ ಕೌಸರ್‌ ರವರ ತವರು ಮನೆಗೆ ಬಂದು ಹೆಚ್ಚಿನ ವರದಕ್ಷಿಣೆಯಾಗಿ 30 ಪವನ್‌ ಚಿನ್ನಾಭರಣವನ್ನು ಕೇಳಿರುತ್ತಾರೆ.  ಹಾಗೂ ಆರೋಪಿಯು ಮದುವೆಯಾದ ಸಲ್ಪ ದಿನದ ನಂತರ ಉದ್ಯೋಗದ ನಿಮಿತ್ತ ವಿದೇಶಕ್ಕೆ ಹೋಗಿದ್ದು ಊರಿಗೆ ಬಂದಾಗ ಶ್ರೀಮತಿ ಜಿ ಹೀನಾ ಕೌಸರ್‌ ರವರು ಆರೋಪಿಯ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಮೂದಲಿಸಿ ಮಾನಸಿಕ ಹಿಂಸೆ ನೀಡುತ್ತಿದ್ದನು. ಹಾಗೂ ಆರೋಪಿಯು ದಿನಾಂಕ 08/07/2022 ರಂದು ಉಡುಪಿ ಸಂತೆಕಟ್ಟೆ ಯಲ್ಲಿರುವ ತನ್ನ ಮನೆಯಲ್ಲಿ ಶ್ರೀಮತಿ ಜಿ ಹೀನಾ ಕೌಸರ್‌ ಇವರ ಮೇಲೆ ಸಿಟ್ಟು ಮಾಡಿಕೊಂಡು ತವರು ಮನೆಗೆ ಕಳುಹಿಸಿ ವೈವಾಹಿಕ ಮನೆಗೆ ಬರಬಾರದೆಂದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2022 ಕಲಂ: 498(ಎ), 504, 506 ಐಪಿಸಿ & ಕಲಂ:3, 4, ವರದಕ್ಷಿಣೆ ನಿಷೇಧ ಕಾಯ್ದೆ-1961ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ರುಡಾಲ್ಫ್ ಡಿ`ಸೋಜಾ, (44) ತಂದೆ: ಫೆಡ್ರಿಕ್ ಡಿ`ಸೋಜಾ, ವಾಸ: ಬಂಗ್ಲೆಗುಡ್ಡೆ ಮನೆ, ಕುಕ್ಕುಂದೂರು ಅಂಚೆ, ಕಾರ್ಕಳ ಇವರು 2018-19 ನೇ ಸಾಲಿನಲ್ಲಿ TBO Tak Ltm. ನ Skyline Enterprises and travels ನಲ್ಲಿ Air ticket, train ticket ಬುಕ್ ಮಾಡುವ ಬಗ್ಗೆ ಫ್ರಾಂಚೈಸಿ ಮಾಲಕನಾಗಿದ್ದು, ಸದ್ರಿ ಸಂಸ್ಥೆಯಿಂದ IXES112 ಯೂಸರ್ ಐ.ಡಿ.ಯನ್ನು ಹೊಂದಿರುತ್ತಾರೆ. ಆದರೆ, 2022 ರ ಎಪ್ರಿಲ್ ತಿಂಗಳಿನ ಕೊನೆಯಲ್ಲಿ TBO ಕಂಪೆನಿಯಿಂದ ರುಡಾಲ್ಫ್ ಡಿ`ಸೋಜಾ ರವರಿಗೆ ಕರೆ ಮಾಡಿ, ನಿಮ್ಮ ಐ.ಡಿ. ಗೆ ರೂಪಾಯಿ 14,76,284/- ಹಣವನ್ನು ಪಾವತಿಸಲಾಗಿದೆ ಅದನ್ನು ಕೂಡಲೇ ಮರುಪಾವತಿ ಮಾಡುವಂತೆ ತಿಳಿಸಿರುತ್ತಾರೆ. ಆದರೆ ರುಡಾಲ್ಫ್ ಡಿ`ಸೋಜಾ ರವರು ಸದ್ರಿ ಐ.ಡಿ.ಯನ್ನು ಕಳೆದ 2 ½  ವರ್ಷಗಳಿಂದ ಬಳಸಿರುವುದಿಲ್ಲ. ಸದ್ರಿ ಸಂಸ್ಥೆಯಲ್ಲಿ ಸೆಲ್ಸ್ ಮೆನ್ ಆಗಿ ಕೆಲಸ ಮಾಡುವ 1 ನೇ ಆರೋಪಿಯು ರುಡಾಲ್ಫ್ ಡಿ`ಸೋಜಾ ರವರ ಐ.ಡಿ.ಯನ್ನು ಕದ್ದು, 2 ನೇ ಆರೋಪಿಯ ಮುಖಾಂತರ ಕಂಪೆನಿಯಿಂದ ಸದ್ರಿ ಐ.ಡಿ.ಯ ಪಾಸ್‌ವರ್ಡ್‌ರಿಸೆಟ್ ಮಾಡಿಸಿಕೊಂಡು, ರುಡಾಲ್ಫ್ ಡಿ`ಸೋಜಾ ರವರೇ ಸದ್ರಿ ಸಂಸ್ಥೆಯ ಐ.ಡಿ.ಯನ್ನು ಬಳಸುತ್ತಿರುವಂತೆ ಬಿಂಬಿಸಿ, ಕಂಪೆನಿಯಿಂದ ಬಂದಿರುವ ಹಣವನ್ನು ಟಿಕೆಟ್ ಬುಕ್ಕಿಂಗ್ ಖರ್ಚು ಮಾಡಿ, ಹಣ ಮರುಪಾವತಿಸದೇ ಕಂಪೆನಿಗೆ ಹಾಗೂ ರುಡಾಲ್ಫ್ ಡಿ`ಸೋಜಾ ರವರಿಗೆ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2022 ಕಲಂ : 66(c), 66(d) ಐ.ಟಿ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಫು: ಪಿರ್ಯಾದಿದಾರರಾದ ಕಲಂದರ್ (28) ತಂದೆ: ಯೂಸುಫ್ ವಾಸ: ಮನೆ ನಂಬ್ರ 3-325 ಎಸ್ ಎಂ.ಎಸ್. ಮಂಜಿಲ್, ಫಕೀರನಕಟ್ಟೆ ಮಲ್ಲಾರು ಗ್ರಾಮ ಕಾಪು ಇವರು ಕೆಎ-20 ಎಬಿ-0750 ನೇ ಅಶೋಕ್ ಲೇಲ್ಯಾಂಡ್ ಗೂಡ್ಸ್‌ಕ್ಯಾರಿಯರ್ ವಾಹನದ ಮಾಲೀಕರಾಗಿದ್ದು, ಉದ್ಯೋಗ ನಿಮಿತ್ತ ವಿದೇಶದಲ್ಲಿರುತ್ತಾರೆ. ಕಲಂದರ್ ರವರು ದಿನಾಂಕ 19/10/2020 ರಂದು ಉಡುಪಿಯ ಮೂಡನಿಡಂಬೂರಿನಲ್ಲಿರುವ ಆದಿ ಉಡುಪಿ ಎಂಬಲ್ಲಿರುವ ಚೋಳಮಂಡಲಂ ಇನವೆಸ್ಟ್ ಮೆಂಟ್ ಆಂಡ್ ಫೈನಾನ್ಸ್ ಕಂ.ಲಿ. ಇಲ್ಲಿಂದ 6,63,214-00 ರೂ ವಾಹನ ಸಾಲವನ್ನು ಪಡೆದು ವಾಹನವನ್ನು ಖರೀದಿಸಿರುತ್ತಾರೆ. ಸದ್ರಿ ವಾಹನದ ಸಾಲದ ಬಾಬ್ತು ತಿಂಗಳ ಕಂತನ್ನು ರೂಪಾಯಿ 15,346/- ರಂತೆ ಮರು ಪಾವತಿಸಲು ಖರೀದಿದಾರರಾದ ಕಲಂದರ್ ರವರು ಒಪ್ಪಿ ಸಾಲ ಪಡೆದುಕೊಂಡಿರುತ್ತಾರೆ. ವಾಹನ ಖರೀದಿಸಿದ ನಂತರ ಸರಿಯಾದ ಬಾಡಿಗೆ ವ್ಯಾಪಾರವಿಲ್ಲದ ಕಾರಣ ಕಲಂದರ್ ಇವರು ವಾಹನವನ್ನು ಮಾರಾಟ ಮಾಡಲು ಇಚ್ಚಿಸಿದ್ದು ಈ ವಿಷಯವನ್ನು ತಿಳಿದ ಆರೋಪಿ ಅಕ್ಬರ್ ಆಲಿ (50) ತಂದೆ: ಹೆಚ್ ಕೆ ಅಬ್ದುಲ್ ರಹಿಮಾನ್ ವಾಸ:ಇಕ್ಬಾಲ್ ಮಂಜಿಲ್, ಲಿಂಗಯ್ಯ ಕಾಡು, ಕೊಲ್ನಾಡು, ಮುಲ್ಕಿ ಮಂಗಳೂರು ಎಂಬವರು ಕಲಂದರ್ ರವರನ್ನು ಸಂಪರ್ಕಿಸಿ ವಾಹನವನ್ನು ಖರೀದಿಸುವ ಸಲುವಾಗಿ ದಿನಾಂಕ 22/04/2021ರಂದು ಕರಾರನ್ನು ಮಾಡಿರುತ್ತಾರೆ. ಸದ್ರಿ ಕರಾರಿನ ಷರತ್ತಿನಂತೆ ಆರೋಪಿಯು 60,000/- ರೂ ಮಾತ್ರ ಮುಂಗಡವಾಗಿ ಪಾವತಿಸಿ ವಾಹನವನ್ನು ಖರೀದಿಸಿ ಸಾಲದ ತಿಂಗಳ 15,346/- ನ್ನು ಪ್ರತೀ ತಿಂಗಳು ಪಾವತಿಸಲು ಒಪ್ಪಿರುತ್ತಾನೆ. ಹಾಗೂ ಸಾಲ ಮುಗಿದ ಕೂಡಲೇ ಆರೋಪಿತನು ತನ್ನ ಹೆಸರಿಗೆ ವಾಹನವನ್ನು ಬದಲಾಯಿಸಿಕೊಳ್ಳುವುದು ಅಥವಾ ಸಾಲವನ್ನು ತನ್ನ ಹೆಸರಿಗೆ ಬದಲಾಯಿಸಿ ವಾಹನದ ನೊಂದಣಿ ಪ್ರಮಾಣ ಪತ್ರವನ್ನು ಸಹ ತನ್ನ ಹೆಸರಿಗೆ ಬದಲಾಯಿಸಿಕೊಳ್ಳುವುದೆಂದು ಇಬ್ಬರ ಮಧ್ಯೆಯೂ ಮಾತುಕತೆಯಾಗಿರುತ್ತದೆ. ಆರೋಪಿಯು ಕಲಂದರ್ ರವರ ವಾಹನವನ್ನು ಖರೀದಿಸಿಕೊಂಡು ಹೋದ ನಂತರ ಕರಾರಿನ ಷರತ್ತಿನಂತೆ ಸಾಲದ ಮರುಪಾವತಿಗಾಗಿ ತುಂಬಬೇಕಾಗಿರುವ ಸಾಲದ ಕಂತನ್ನು ಮರು ಪಾವತಿ ಮಾಡದೇ ಸತಾಯಿಸಿರುತ್ತಾನೆ. ಸದ್ರಿ ಸಾಲದ ಕಂತನ್ನು ಕಲಂದರ್ ರವರೇ ಪಾವತಿ ಮಾಡುತ್ತಾ ಬಂದಿರುತ್ತಾರೆ. ವಾಹನವನ್ನು ಆರು ತಿಂಗಳ ಒಳಗಾಗಿ ಆರೋಪಿತನ ಹೆಸರಿಗೆ  ವರ್ಗಾಯಿಸಿಕೊಳ್ಳಬೇಕೆಂದು ಷರತ್ತನ್ನು ವಿಧಿಸಿದ್ದು ಆದರೆ ಆರೋಪಿತನು ಯಾವುದನ್ನು ಮಾಡದೇ ಕಲಂದರ್ ಇವರಿಗೆ ಸೇರಿದ ವಾಹನವನ್ನು ಆರೋಪಿತನು ಅಕ್ರಮವಾಗಿ ಉಪಯೋಗಿಸಿ ಅಕ್ರಮ ಲಾಭ ಗಳಿಸುತ್ತಿದ್ದಾನೆ. ಸದ್ರಿ ವಾಹನದ ನೋಂದಣಿ ಪ್ರಮಾಣ ಪತ್ರವು ಕಲಂದರ್ ಇವರ ಹೆಸರಿನಲ್ಲಿರುವುದರಿಂದ  ಆರೋಪಿತನು ಸದ್ರಿ ವಾಹನವನ್ನು ಯಾವುದಾದರೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗಿಸುವ ಸಾಧ್ಯತೆ ಇರುವುದಾಗಿದೆ. ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಕಾಫು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/2022 ಕಲಂ: 403,406,418,420,426 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-07-2022 11:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080