ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸುರೇಶ (30) ತಂದೆ: ಸುಬ್ರಾಯ ಬಳೆಗಾರ ವಾಸ: ಪಾರ್ವತಿ ನಿಲಯ ತೆಂಕಬೆಟ್ಟು ಹಳಗೇರಿ,ಕಂಬದಕೋಣೆ ಗ್ರಾಮ ಬೈಂದೂರು ಇವರು  ದಿನಾಂಕ 17/07/2022 ರಂದು ಬೆಳಿಗ್ಗೆ 10:00 ಗಂಟೆಗೆ ಅವರ ಕಾರಿನಲ್ಲಿ ನಾಗೂರಿನಿಂದ ಬೈಂದೂರಿಗೆ ಹೋಗುವರೇ ರಾಷ್ಟ್ರೀಯ ಹೆದ್ದಾರಿ 66ರ ಪಶ್ಚಿಮ ಬದಿಯ ರಸ್ತೆಯಲ್ಲಿ ಕಿರಿಮಂಜೇಶ್ವರ ಗ್ರಾಮದ ಗೋಳಿಮರ ಕ್ರಾಸ್ ತಿರುವಿನಲ್ಲಿ ಹೋಗುತ್ತಿರುವಾಗ ಪಿರ್ಯಾದಿದಾರರ  ಹಿಂದಿನಿಂದ ಯಮಹಾ ಕಂಪೆನಿಯ KA-20 EX-3355 ನೇ  ಮೋಟಾರು ಸೈಕಲ್ ಸವಾರನು ಹಿಂಬದಿಯಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಸುರೇಶ ಇವರು  ಚಲಾಯಿಸುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿ, ಮುಂದೆ ಹೋಗಿ ಚತುಷ್ಪಧ ರಸ್ತೆಯ ಮಧ್ಯದ ಡಿವೈಡರ್ ಗೆ ಢಿಕ್ಕಿ ಹೊಡೆದು ಮೋಟಾರ್ ಸೈಕಲ್ ಡಿವೈಡರ್ ಮೇಲೆ ಹತ್ತಿ, ಡಿವೈಡರ್ ನಲ್ಲಿರುವ ರಿಪ್ಲೆಕ್ಟರ್ ಕಂಬಕ್ಕೆ ಢಿಕ್ಕಿ ಹೊಡೆದು, ಮುಂದೆ ಹೋಗಿ ಸಂಚಾರ ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದು, ಡಿವೈಡರ್ ನ ಇಳಿಜಾರಿನಲ್ಲಿ ಸುಮಾರು 50 ಅಡಿಯಷ್ಡು ಚಲಿಸಿ, ಮುಂದೆ ಹೋಗಿ ರಸ್ತೆಯ ಪೂರ್ವ ಬದಿಯ ರಸ್ತೆಗೆ ಚಲಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು, ಪರಿಣಾಮ ಮೋಟಾರ್ ಸೈಕಲ್ ಸವಾರ ಹಾಗೂ ಸಹಸವಾರರಿಗೆ ತಲೆಗೆ ಕೈಗೆ, ಕಾಲುಗಳಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಅವರುಗಳು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು, ಅಲ್ಲಿ ಸೇರಿದ ಜನರು  ಗಾಯಾಳುಗಳನ್ನು ಉಪಚರಿಸಿದ್ದು, ಗಾಯಗೊಂಡ ತರುಣ್ ಕುಮಾರ್ ರೆಡ್ಡಿ ಹಾಗೂ ಆದಿತ್ಯ ರವರನ್ನು ಪಿರ್ಯಾದಿದಾರರು ಮತ್ತು ಪ್ರದೀಪ ಖಾರ್ವಿ ರವರು  ಸೇರಿ ಒಂದು ಅಂಬುಲೆನ್ಸ್ ನಲ್ಲಿ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ, ಅಲ್ಲಿಯ ವೈದ್ಯರು ಪರೀಕ್ಷಿಸಿ ತರುಣ್ ಕುಮಾರ್ ರೆಡ್ಡಿಯವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಆದಿತ್ಯನನ್ನು ಚಿಕಿತ್ಸೆಗೆ ದಾಖಲಿಸಿಕೊಂಡಿದ್ದು, ಆದಿತ್ಯನು ಚಿಕಿತ್ಸೆಯಲ್ಲಿರುತ್ತಾ ಸಮಯ ಸುಮಾರು 11:00 ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 141/2022 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾಧ ಎಮ್. ಲಕ್ಷ್ಮಣ (55)  ತಂದೆ : ಚಿನ್ನ ಆರ್. ಅಂಚನ್ ವಾಸ : ಅಳಿಂಜೆ, ಮಟ್ಟು ಗ್ರಾಮ ಕಟಪಾಡಿ ಅಂಚೆ ಕಾಪು ತಾಲ್ಲೂಕು ಇವರು ಮಟ್ಟು ಗ್ರಾಮ ಮಾಜಿ ಪಂಚಾಯತ್ ಸದಸ್ಯ ಹಾಗೂ ಕೃಷಿ ಮತ್ತು ವಿಪತ್ತು ನಿರ್ವಹಣಾ ಧರ್ಮಸ್ಥಳ ಸಂಘದ ಸದಸ್ಯನಾಗಿದ್ದು, ದಿನಾಂಕ 17/07/2022  ರಂದು ಎಮ್. ಲಕ್ಷ್ಮಣ ರವರು ಮನೆಯ ಬಳಿ ಇರುವ ಪಿನಾಕಿನಿ ನದಿಯ ನೀರಿನಲ್ಲಿ  ಬೆಳಗ್ಗೆ 11:30 ಗಂಟೆಗೆ  ಪಾಂಗಾಳ ಕಡೆಯಿಂದ ತೇಲಿಕೊಂಡು  ಇವರ ಗದ್ದೆಯ ಧಕ್ಕೆ ಹತ್ತಿರ ಸುಮಾರು 40 ರಿಂದ 45 ವಯಸ್ಸಿನ ಗಂಡಸಿನ ಅಪರಿಚಿತ ದೇಹವನ್ನು ಬಂದಿದ್ದು, ಸದ್ರಿ ಮೃತ ದೇಹವು ಅರೆ ಕೊಳೆತ ಸ್ಥೀತಿಯಲ್ಲಿದ್ದು, ಸುಮಾರು ಒಂದು ವಾರದ ಹಿಂದೆ ಆಕಸ್ಮಿಕವಾಗಿ ಅಥವಾ ಹೊಳೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 25/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-07-2022 05:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080