ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕೋಟ: ಪಿರ್ಯಾದಿದಾರರಾದ ಕೃಷ್ಣ ಕುಲಾಲ್ (32), ತಂದೆ: ಬಸವ ಕುಲಾಲ್, ವಾಸ: ಪಂಜುರ್ಲಿ ಕೃಪಾ ನಡೂರು ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 16/07/2021 ರಂದು ಬೆಳಿಗ್ಗೆ ತನ್ನ ಪಿಕಪ್ ವಾಹನ KA-20-D-6382 ನೇದರಲ್ಲಿ ವಾಹನವನ್ನು ಚಾಲನೆ ಮಾಡಿಕೊಂಡು ಸೈಬ್ರಕಟ್ಟೆ ಬಿದ್ಕಲ್ ಕಟ್ಟೆ ಡಾಮರು ರಸ್ತೆಯಲ್ಲಿ  ಸೈಬ್ರಕಟ್ಟೆ ಕಡೆಯಿಂದ ಎತ್ತಿನಟ್ಟಿ ಕಡೆಗೆ ಹೊರಟಿದ್ದು, ಬೆಳಿಗ್ಗೆ 07:40 ಗಂಟೆಗೆ ಶಿರಿಯಾರ ಗ್ರಾಮದ ಕಳ್ಳಾಡಿ ಸೇತುವೆಯ  ಬಳಿ ತಲುಪುವಷ್ಟರಲ್ಲಿ  KA-35-B-9534 ನೇ ನಂಬ್ರದ ಭಾರತ್ ಪೆಟ್ರೋಲಿಯಂ ಟ್ಯಾಂಕರ್ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತನ ಎದುರಿನಲ್ಲಿ  ಹೋಗುತ್ತಿರುವ ಕಾರೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ  ಪಿರ್ಯಾದಿದಾರರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿಕಪ್  ವಾಹನದ ಬ್ಲೇಡ್ ಸೆಟ್ ತುಂಡಾಗಿ ರಸ್ತೆಯ ಪೂರ್ವ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದಿರುತ್ತದೆ. ವಾಹನದಲ್ಲಿ ವಾಹನದಲ್ಲಿದ್ದ ಪಿರ್ಯಾದಿದಾರರಿಗೆ  ಬಲ ಕೈ ಮೊಣ ಗಂಟಿಗೆ, ಬಲ ಕಾಲು ಮೊಣ ಗಂಟಿಗೆ ಹಾಗೂ ಎದೆಯಲ್ಲಿ  ಗುದ್ದಿದ ಒಳ ಗಾಯ ಮತ್ತು ತರಚಿದ ಗಾಯಗಳಾಗಿರುತ್ತದೆ. ಟ್ಯಾಂಕರ್ ವಾಹನದ ಚಾಲಕ ವಾಹನವನ್ನು  ಸ್ವಲ್ಪ ಮುಂದಕ್ಕೆ ನಿಲ್ಲಿಸಿದ್ದು ಚಾಲಕನ ಹೆಸರು ಜಫರ್ ಖಾನ್ ಎಂಬುವುದಾಗಿದ್ದು, ಟ್ಯಾಂಕರ್ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 141/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
  • ಗಂಗೊಳ್ಳಿ: ದಿನಾಂಕ 16/07/2021 ರಂದು ಪಿರ್ಯಾದಿದಾರರಾದ ಶಿವರಾಜ ಆಚಾರ್ಯ (22), ತಂದೆ: ಮಂಜುನಾಥ ಆಚಾರ್ಯ, ವಾಸ: ಜನತಾ ಕಾಲೋನಿ, ಪೃಥ್ವಿ ನಿಲಯ, ನಾಯಕ್‌ವಾಡಿ, ಗುಜ್ಜಾಡಿ ಗ್ರಾಮ ಕುಂದಾಪುರ ತಾಲೂಕು ಇವರು ನಾಗರಾಜ ಎಂಬುವವರು ಸವಾರಿ ಮಾಡುತ್ತಿದ್ದ KA-20-EV-6265 ನೇ Royal Enfield ಮೋಟಾರ್‌ ಸೈಕಲ್‌ ನಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಜನತಾ ಕಲೋನಿ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವಾಗ ಮೋಟಾರ್‌ ಸೈಕಲ್ ಸಿಂಧೂರ ಐಸ್‌ ಪ್ಲ್ಯಾಂಟ್‌ ಕಂಪೌಂಡ್‌ ಸಮೀಪ ತಲುಪುವಾಗ  ಮಧ್ಯಾಹ್ನ 3:40 ಗಂಟೆಗೆ ರಸ್ತೆಯ ಪಕ್ಕದ ಮನೆಯ ಕಡೆಯಿಂದ ನಂಬರ್‌ ಪ್ಲೇಟ್ ಇಲ್ಲದ TVS REDEON ಮೋಟಾರ್‌ ಸೈಕಲನ್ನು ಅದರ ಸವಾರ ಮಂಜುನಾಥ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮುಖ್ಯ ರಸ್ತೆಗೆ ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲ್‌ ಗೆ ಅಡ್ಡವಾಗಿ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಗುದ್ದಿದ ನೋವಾಗಿದ್ದು, ನಾಗರಾಜ ಅವರಿಗೆ ತೀವೃ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣಗಳು

  • ಕಾಪು: ದಿನಾಂಕ 15/07/2021 ರಂದು ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಪಾಂಗಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಸರ್ವಿಸ್ ರಸ್ತೆಯ ಸಮೀಪ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸ್ಥಳದಲ್ಲಿ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನು ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನ ಗೊಂಡು ಅವನ ಬಳಿ ಹೋಗಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವನು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ವಿಳಾಸ ತಿಳಿದುಕೊಳ್ಳಲಾಗಿ ಆತನ ಹೆಸರು ಅನಿಕೇತ್, ಪ್ರಾಯ: 26 ವರ್ಷ, ತಂದೆ: ಜಗನ್ನಾಥ, ವಾಸ:ವಿದ್ಯಾವರ್ಧಕ  ಹೈಸ್ಕೂಲ್ ಎದುರು ಆಳಂದ ಹೌಸ್ ಪಾಂಗಾಳ ಗ್ರಾಮ , ಕಾಪು ತಾಲೂಕು, ಉಡುಪಿ ಜಿಲ್ಲೆ ಎಂದು ತಿಳಿಸಿದ್ದು ಆತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ  ಮುಂದೆ ಹಾಜರು ಪಡಿಸಿದ್ದು ಕಳಿಸಿದ್ದು ಅದರಂತೆ  ಪರೀಕ್ಷಿಸಿದ ವೈದ್ಯರು ದಿನಾಂಕ 16/07/2021 ರಂದು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 116/2021  ಕಲಂ: 27(ಬಿ) ಎನ್ ಡಿ ಪಿ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 15/07/2021 ರಂದು ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಕಾಪು ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಕಾಪು ತಾಲೂಕು ಕೊಪ್ಪಲಂಗಡಿ ಕೆ1 ಹೋಟೆಲ್ ಬಳಿ  ರೌಂಡ್ಸ್ ಕರ್ತವ್ಯದಲ್ಲಿರುವಾಗ  ಸ್ಥಳದಲ್ಲಿ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನು ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನ ಗೊಂಡು ಅವನ ಬಳಿ ಹೋಗಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವನು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ವಿಳಾಸ ತಿಳಿದುಕೊಳ್ಳಲಾಗಿ ಆತನ ಹೆಸರು ಸೌರಬ್, ಪ್ರಾಯ: 27 ವರ್ಷ ತಂದೆ: ಪುರಂದರ ,ವಾಸ: ಸಮೃದ್ದಿ ನಿಲಯ  ವಿದ್ಯಾನಿಕೇತನ ಶಾಲೆ ಹತ್ತಿರ, ಕೊಪ್ಪಲಂಗಡಿ , ಕಾಪು ತಾಲೂಕು, ಉಡುಪಿ ಜಿಲ್ಲೆ ಎಂದು ತಿಳಿಸಿದ್ದು, ಆತನನ್ನು ಪ್ರೊಫೆಸರ್ ಅಂಡ್ ಹೆಡ್ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ ಮುಂದೆ ಹಾಜರುಪಡಿಸಿದ್ದು ಪರೀಕ್ಷಿಸಿದ ವೈದ್ಯರು ದಿನಾಂಕ 16/07/2021 ರಂದು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 117/2021  ಕಲಂ : 27(ಬಿ) ಎನ್ ಡಿ ಪಿ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-07-2021 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080