ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಹೆಬ್ರಿ: ಪಿರ್ಯಾದಿದಾರರಾದ ಗಣೇಶ (25) ತಂದೆ: ಭಾಸ್ಕರ ನಾಯ್ಕ ವಾಸ: ದೇವಿಪ್ರಸಾದ ಶಿವಪುರ ಪ್ರಾಥಮಿಕ ಶಾಲೆಯ ಹತ್ತಿರ ಶಿವಪುರ ಅಂಚೆ ಮತ್ತು ಗ್ರಾಮ ಹೆಬ್ರಿ ಇವರು ದಿನಾಂಕ 17/07/2021 ರಂದು ಕೆಲಸದ ನಿಮಿತ್ತ ಅವರ KA-20-ER-1690 ನೇ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಶಿವಪುರ ಕಡೆಯಿಂದ ಹೆಬ್ರಿ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 08:00 ಗಂಟೆಗೆ ಶಿವಪುರ ಗ್ರಾಮದ ಬಿಲ್ ಬೈಲು ಎಂಬಲ್ಲಿನ ತಿರುವಿನ ಬಳಿ ತಲುಪಿದಾಗ ಅವರ ಎದುರುಗಡೆಯಿಂದ ಹೆಬ್ರಿ ಕಡೆಯಿಂದ ಶಿವಪುರ ಕಡೆಗೆ KA-14-B-1747 ನೇ ನವದುರ್ಗಾ ಎಂಬ ಬಸ್ಸನ್ನು ಅದರ ಚಾಲಕ ನಾಗೇಶ ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಗಣೇಶ ರವರ ಮೋಟಾರ್ ಸೈಕಲ್ ಗೆ ಢಿಕ್ಕಿ ಪಡಿಸಿರುವುದರಿಂದ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಅವರ ಎಡಕೈ ಮುಂಗೈ ಬಳಿ ಗುದ್ದಿದ ನೋವಾಗಿರುತ್ತದೆ, ಬಲಕೈಯ ಬಳಿ ಗುದ್ದಿದ ನೋವಾಗಿದ್ದು ಮೂಳೆ ಮುರಿತವಾಗಿರುತ್ತದೆ ಮತ್ತು ಬಲಬದಿ ಭುಜದ ಬಳಿ ಗುದ್ದಿದ ನೋವಾಗಿರುತ್ತದೆ ಹಾಗೂ ಬಲಮೊಣಕಾಲು ಬಳಿ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 48/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾದ ರಜನಿ ಗಾಣಿಗ (41) ತಂದೆ; ಗಣೇಶ ಗಾಣಿಗ, ವಾಸ; ಭಗವತಿ ನಿಲಯ, ದಾಸನಾಡಿ, ಶಿರೂರು ಗ್ರಾಮ, ಬೈಂದೂರು ಇವರ ಮಗನಾದ ಅಭಿಷೇಕ್ (20) ರವರು ಕೋಟೇಶ್ವರ ವರದರಾಜ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ ಎಸ್ಸಿ ಓದುತ್ತಿದ್ದು, ಲಾಕ್ ಡೌನ್ ಆಗಿರುವುದರಿಂದ ಮನೆಯಲ್ಲಿಯೇ ಇದ್ದು, ಯಾವಾಗಲು ಮೊಬೈಲ್ ನಲ್ಲಿ ಇರುತ್ತಿದ್ದನು. ಅಲ್ಲದೇ ಅಭಿಷೇಕನು ಬೈಂದೂರಿನ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದು, ಹುಡುಗಿಯ ಮಾವ ಮನೆಗೆ ಬಂದು ಹುಡುಗಿಯನ್ನು ಪ್ರೀತಿಸುವುದು ಬೇಡಾ ಎಂದು ಬುದ್ದಿ ಮಾತು ಹೇಳಿರುತ್ತಾರೆ. ದಿನಾಂಕ 16/07/2021 ರಂದು ರಾತ್ರಿ 10:00 ಗಂಟೆಗೆ ಅಭಿಷೇಕನು ಊಟ ಮಾಡಿ ಮಲಗಿದ್ದು, ರಜನಿ ಗಾಣಿಗ ರವರು ಮಧ್ಯರಾತ್ರಿ 02:30 ಗಂಟೆಗೆ ಅಭಿಷೇಕ್ ಮಲಗಿದ್ದ ಕೋಣೆಗೆ ಹೋಗಿ ನೋಡಿದಾಗ ಅಭಿಷೇಕನು ಚೂಡಿದಾರದ ಶಾಲಿನಿಂದ ರೂಮಿನ ಫ್ಯಾನ್ ನ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದು ಪ್ರೀತಿಯ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 25/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾಧ ಕಿರಣ್ ಶೆಟ್ಟಿ (30) ತಂದೆ: ಕರುಣಾಕರ ಶೆಟ್ಟಿ ವಾಸ: ಕೊಂಗೇರಿ ಮನೆ ಕೂರಾಡಿ ಮೊಳಹಳ್ಳಿ ಗ್ರಾಮ ಕುಂದಾಪುರ ಇವರ ತಂದೆ ಕರುಣಾಕರ ಶೆಟ್ಟಿ (62) ಯವರು  ಕೃಷಿ ಕೆಲಸ ಮಾಡಿಕೊಂಡಿದ್ದವರು. ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಇದರಿಂದ ಅವರಿಗೆ ಹೊಟ್ಟೆಯಲ್ಲಿ ಕರಳು ಮತ್ತು ಕಿಡ್ನಿ ಸಮಸ್ಯೆ ಇತ್ತು. ಇದೇ ಸಮಸ್ಯೆಯಿಂದ ಮಾನಸಿಕವಾಗಿ ಕುಗ್ಗಿದ್ದು, ಮನೆಯಲ್ಲಿ ಯಾರೊಂದಿಗೂ ಸರಿಯಾಗಿ ಮಾತನಾಡದೇ ಇರುತ್ತಿದ್ದರು. 2 ದಿನಗಳ ಹಿಂದೆ ಅವರ ಮೊದಲಿನ ಮೂಲ ಮನೆಯಾದ ಮಡಾಮಕ್ಕಿಯ ಬೆಪ್ಡೆಗೆ ಹೋಗಿದ್ದು ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ದಿನಾಂಕ  16/07/2021 ರಂದು ಸಂಜೆ 06:00 ಗಂಟೆಯಿಂದ ದಿನಾಂಕ 17/07/2021 ರಂದು ಬೆಳಿಗ್ಗೆ 7:00 ಗಂಟೆಯ ಮಧ್ಯಾವಧಿಯಲ್ಲಿ ಅವರಿಗಿರುವ ಆರೋಗ್ಯ ಸಮಸ್ಯೆಯಿಂದ ಮನನೊಂದು ಕಿರಣ ಶೆಟ್ಟಿ ರವರ ಮನೆಯ  ಹಾಡಿಯಲ್ಲಿ  ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ  23/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ನಾಗೇಶ ಖಾರ್ವಿ (36), ತಂದೆ: ಶಂಕರ ಖಾರ್ವಿ, ವಾಸ: ಪಟ್ಕಾರ ಮನೆ, ಫಿಶರೀಸ್ ಕಾಲೋನಿ, ಮರವಂತೆ ಗ್ರಾಮ, ಬೈಂದೂರು ಇವರು ಲಕ್ಷ್ಮೀ  ಎಂಬವರನ್ನು ದಿನಾಂಕ 11/06/2015 ರಂದು ಮದುವೆಯಾಗಿರುತ್ತಾರೆ. ಶ್ರೀಮತಿ ಲಕ್ಷ್ಮೀ ರವರು 2ನೇ ಬಾರಿ ಗರ್ಭಿಣಿ ಆಗಿದ್ದು 15 ದಿನಗಳಿಂದ ಕುಂದಾಪುರದ ಮದ್ದುಗುಡ್ಡೆಯಲ್ಲಿ ಅವರ ಅಕ್ಕನ ಮನೆಯಲ್ಲಿ ಇದ್ದರು. ದಿನಾಂಕ 15/07/2021 ರಂದು ಹೆರಿಗೆ ನೋವು ಪ್ರಾರಂಭವಾಗಿದ್ದು ಅವರನ್ನು ಕೋಟ ಸಮುದಾಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಿದ್ದರು. ದಿನಾಂಕ 16/07/2021 ರಂದು ಮಧ್ಯಾಹ್ನ 1:00 ಗಂಟೆಗೆ ಲಕ್ಷ್ಮೀ ರವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ನಂತರ ದಿನಾಂಕ 17/07/2021 ರಂದು ಬೆಳಿಗ್ಗೆ ಜಾವ 3:00 ಗಂಟೆಗೆ  ಲಕ್ಷ್ಮೀ ರವರಿಗೆ Low ಬಿ.ಪಿ ಮತ್ತು ಪಿಡ್ಸ್ ಬಂದಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ ಮೇರೆಗೆ, ಲಕ್ಷ್ಮೀ ರವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಲಕ್ಷ್ಮೀ ರವರಿಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 17/06/2021 ರಂದು ಬೆಳಿಗ್ಗೆ 9:15 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 21/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿ ಸಂಜಯ್ ಇವರು ಹಾಗೂ ಅವರ ಅಣ್ಣ  ಸತೀಶ್ (42) ರವರು ಸ್ವಂತ ಶಾಮಿಯಾನ ಕೆಲಸ ಮಾಡಿಕೊಂಡಿದ್ದು. ಪಿರ್ಯಾದಿದಾರರು ಹಾಗೂ ಅವರ ಅಣ್ಣ ಸತೀಶ್ ರವರು ದಿನಾಂಕ 15/07/2021 ರಂದು ಸರಕಾರಿ ಗುಡ್ಡೆಯ ಸುದರ್ಶನ ಎಂಬವರ ಮನೆಯ ಗೃಹಪ್ರವೆಶಕ್ಕೆ ಹಾಕಿದ ಶಾಮಿಯಾನ ವನ್ನು ಬಿಚ್ಚಲು  ಈ ದಿನ ದಿನಾಂಕ 17/07/2021 ರಂದು 12:30 ಗಂಟೆಗೆ ಹೋಗಿ ಪಿರ್ಯಾದಿದಾರರ ಅಣ್ಣ ಸತೀಶ್ ರವರು ಶಾಮಿಯಾನವನ್ನು ಬಿಚ್ಚುತ್ತಿರುವಾಗ ಆಕಸ್ಮಿಕವಾಗಿ ಲಾಡರ್ ಮಗುಚಿ ಬಿದ್ದ ಕಾರಣ ಸತೀಶರವರು ನೆಲಕ್ಕೆ ಬಿದ್ದು ಗಾಯಗೊಂಡವರನ್ನು ಕೂಡಲೇ ಪಿರ್ಯಾದಿದಾರರು ಹಾಗೂ ಇತರರು ಸೇರಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಮಧ್ಯಾಹ್ನ 1:30 ಗಂಟೆಯ ಸಮಯಕ್ಕೆ  ಸತೀಶನು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತರು ಈ ದಿನ ಮಧ್ಯಾಹ್ನ12:30 ಗಂಟೆಗೆ ಸರಕಾರಿ ಗುಡ್ಡೆಯ ಸುದರ್ಶನ ಎಂಬವರ ಮನೆಯ ಗೃಹಪ್ರವೇಶಕ್ಕೆ ಹಾಕಿದ ಶಾಮಿಯಾನವನ್ನು ಬಿಚ್ಚುತ್ತಿರುವಾಗ ಲಾಡರ್ ಮಗುಚಿ ನೆಲಕ್ಕೆ ಬಿದ್ದು ಇದರಿಂದ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 25/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಇತರ ಪ್ರಕರಣ
    ಕಾಪು: ರುಕ್ಮಯ ಹೆಚ್ ಸಿ, ಕಾಪು ಠಾಣೆ ಇವರು ದಿನಾಂಕ 15.07.2021 ರಂದು ಸಮಯ 13:00 ಗಂಟೆಗೆ  ಸಿಬ್ಬಂದಿಯವರೊಂದಿಗೆ  ಕಾಪು ತಾಲೂಕು ಕೋಟೆ ಗ್ರಾಮದ ಪಳ್ಳಿಗುಡ್ಡೆ ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಸ್ಥಳದಲ್ಲಿ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು ಆತನು ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನ ಗೊಂಡು ಅವನ ಬಳಿ ಹೋಗಿ ಅವನ ಹೆಸರು ವಿಳಾಸ  ಕೇಳಿ ಅವನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವನು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡು ವಿಚಾರಿಸಿ ವಿಳಾಸ ತಿಳಿದುಕೊಳ್ಳಲಾಗಿ  ಆತನ ಹೆಸರು ಪ್ರವೀಣ್ ಪ್ರಾಯ : 26 ವರ್ಷ ತಂದೆ : ದಿಲೀಪ್ ರಾವ್ ವಾಸ : ಕುಸುಮ ಪ್ರೀಯ ನಿವಾಸ ಕೋಟೆ ಗ್ರಾಮ ಕಟಪಾಡಿ ಅಂಚೆ ಕಾಪು ತಾಲೂಕು ಉಡುಪಿ ಜಿಲ್ಲೆ. ಎಂದು ತಿಳಿಸಿದ್ದು ಸದ್ರಿಯವರಿಗೆ  ನೋಟಿಸ್  ನೀಡಿ ವೈದ್ಯಕೀಯ ಪರೀಕ್ಷೆಯ ಬಗ್ಗೆ ಸಿಬ್ಬಂದಿಯರನ್ನು  ನೇಮಕ ಮಾಡಿ  ಪ್ರೊಫೆಸರ್ ಅಂಡ್ ಹೆಡ್  ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ  ಮಣಿಪಾಲ  ಇವರ  ಮುಂದೆ ಹಾಜರು ಪಡಿಸಲು ಕಳಿಸಿದ್ದು ಅದರಂತೆ ಪ್ರೊಫೆಸರ್ ಅಂಡ್ ಹೆಡ್  ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ  ಮಣಿಪಾಲ  ಇವರ  ಮುಂದೆ ಹಾಜರು ಪಡಿಸಲಾಗಿರುತ್ತದೆ. ಇವರನ್ನು  ಪರೀಕ್ಷಿಸಿದ ವೈದ್ಯರು ದಿನಾಂಕ 16.07.2021 ರಂದು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುತ್ತಾರೆ. ಆದುದರಿಂದ ಸದ್ರಿ ವೈದ್ಯರ ದೃಢ ಪತ್ರದ ಆಧಾರದಲ್ಲಿ ಮೇಲಿನ ಆರೋಪಿಯ ಮೇಲೆ ಕಾಪು ಪೊಲೀಸ್ ಠಾಣಾ ಅ ಕ್ರ 118/2021 ಕಲಂ   27(ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ದಿನಾಂಕ 17.07.2021 ರಂದು  14.30 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

ಇತ್ತೀಚಿನ ನವೀಕರಣ​ : 17-07-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080