ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರೇಣವ್ವ ಫಕಿರೇಶ್ ಗಾನಿಗೇರ್( 22), ಗಂಡ: ಫಕೀರಪ್ಪ, ವಾಸ: ಹೌಸ್ ನಂ: 361 ಗಾಣಿಗೇರ್ ಮಾಗಾಡಿ ಗ್ರಾಮ ಶಿರಹಟ್ಟಿ ತಾಲೂಕು ಗದಗ ಜಿಲ್ಲೆ ಇವರು ದಿನಾಂಕ 15/06/2022 ರಂದು ನಾದಿನಿ ನೇತ್ರಾವತಿ ರವರೊಂದಿಗೆ  ಕಲ್ಸಂಕದಲ್ಲಿರುವ  ಟೈಮ್ ಸ್ಕಾವೆರ್ ಎದುರುಗಡೆ ನಿಂತಿರುವಾಗ 5:00 ಗಂಟೆಗೆ ಅಂಬಾಗಿಲು ಕಡೆಯಿಂದ ಕಲ್ಸಂಕದ ಕಡೆಗೆ KA-20-EL-9753ನೇ ಬುಲೇಟ್ ಸವಾರ ಸಮರ್ಥ ತನ್ನ ಬುಲೇಟ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಎಡಬದಿಯಲ್ಲಿ ರಸ್ತೆ ದಾಟಲು ನಿಂತಿದ್ದ ನೇತ್ರಾವತಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ನೇತ್ರಾವತಿಯವರು ರಸ್ತೆಗೆ ಬಿದ್ದು, ಕೈ ಕಾಲುಗಳಿಗೆ ತರಿಚಿದ ಗಾಯವಾಗಿದ್ದು, ಹೊಟ್ಟೆಯ ಬಲಭಾಗಕ್ಕೆ ಗುದ್ದಿದ ಒಳನೋವು ಉಂಟಾಗಿರುತ್ತದೆ. ಹಾಗೂ ಬುಲೆಟ್ ಸವಾರ ಬುಲೇಟ್ ಸಮೇತ ರಸ್ತೆಗೆ ಬಿದ್ದು ಗಾಯವಾಗಿರುತ್ತದೆ. ಗಾಯಾಳುಗಳನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ನೇತ್ರಾವತಿಯವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 14/06/2022 ರಂದು ಪಿಯಾದಿದಾರರಾದ ಜೋಯ್ಸನ್ ಕ್ಲೇರೆನ್ಸ್ ಡಿ ಆಲ್ಮೇಡಾ (27), ತಂದೆ: ಜೋನ್ ಡಿ ಆಲ್ಮೇಡಾ, ವಾಸ: ಶಾಲೋಮ್ ಕೀಳಂಜೆ ಫರಾರಿ ಹಾವಂಜೆ ಗ್ರಾಮ ಮತ್ತು ಪೋಸ್ಟ್ ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರು KA-20-ES-9175 ನೇ ಮೋಟಾರ್ ಸೈಕಲ್ ನಲ್ಲಿ ಮಣಿಪಾಲ- ಕೊಳಲಗಿರಿ  ಮಖ್ಯ ರಸ್ತೆಯಲ್ಲಿ  ಹೋಗುತ್ತಿರುವಾಗ 19:00 ಗಂಟೆಗೆ ಶಿಂಬ್ರಾದ ವ್ಯಾಲಿ ವ್ಯೂ ಕೌಂಟಿ ಕ್ಲಬ್ ಬಳಿ ತಲುಪುತ್ತಿದ್ದಂತೆ ರಸ್ತೆಯಲ್ಲಿ  ಪಿರ್ಯಾದಿದಾರರ ಎದುರಿನಿಂದ ಕೊಳಲಗಿರಿ ಕಡೆಯಿಂದ ಮಣಿಪಾಲ ಕಡೆಗೆ MH-04-X-2414 ನೇ ಮಾರುತಿ 800 ಕಾರನ್ನು ಅದರ ಚಾಲಕ ಗಿರೀಶ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಅವರ ಬಲಗಾಲಿನ ಮೂಳೆ ಮುರಿತ ಹಾಗೂ ಎಡಗಾಲಿನ ಮೊಣಗಂಟಿಗೆ ತರಚಿದ ಗಾಯ ಉಂಟಾಗಿರುತ್ತದೆ. ಅಪಘಾತದಲ್ಲಿ  ಎರಡು ವಾಹನಗಳು ಜಖಂಗೊಂಡಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಮಂಜುನಾಥ ಪೂಜಾರಿ (48), ತಂದೆ: ರಾಮ ಪೂಜಾರಿ, ವಾಸ: ಸಸಿಹಿತ್ಲು,  ಹಿಲ್ಗಾರು , ಗೋಳಿಹೊಳೆ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 15/06/2022 ರಂದು ಸಂಜೆ 5:30 ಗಂಟೆಗೆ ಅವರ ಕಾರಿನಲ್ಲಿ ಕೆಲಸದ ಬಗ್ಗೆ ಬಾವ ಶಿವಯ್ಯರವರೊಂದಿಗೆ ಗೋಳಿಹೊಳೆ ಗ್ರಾಮದ ಹಿಲ್ಗಾರು ತಿಮ್ಮಣ್ಣಾಯಕೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಿಂದ ಸ್ವಲ್ಪ ಮುಂದಕ್ಕೆ ಕಂಬದಕೋಣೆ ಕಡೆಗೆ ಹೋಗುತ್ತಿರುವಾಗ ಕಂಬದಕೋಣೆ –ಗೋಳಿಹೊಳೆ ರಸ್ತೆಯ ಇಳಿಜಾರಿನಲ್ಲಿ  KA-20-W-2751 ನೇ ಮೋಟಾರು ಸೈಕಲ್ ಸವಾರ ನಾಗರಾಜ   ಮೋಟಾರು ಸೈಕಲ್ ನ್ನು ಗೋಳಿಹೊಳೆ ಮೂರು ಕೈ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರನ್ನು ಹಿಂದಿಕ್ಕಿ ಮುಂದೆ ಹೋಗಿ ತಿರುವಿನಲ್ಲಿ ಕಂಬಂದಕೋಣೆ ಕಡೆಯಿಂದ ಮೂರು ಕೈ ಕಡೆಗೆ ಬರುತ್ತಿದ್ದ KA-20-EJ-5288 ನೇ ಮೋಟಾರು ಸೈಕಲ್ ಸವಾರ ಚಂದ್ರ ನಾಯ್ಕ ಹಾಗೂ ಸಹ ಸವಾರ ರಾಮ ಮರಾಠಿಯವರ ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದ  ಪರಿಣಾಮ ಮೋಟಾರು ಸೈಕಲ್ ಸವಾರರು ರಸ್ತೆ ಗೆ ಬಿದ್ದಿದ್ದು ಪರಿಣಾಮ  ಮೋಟಾರು ಸೈಕಲ್ ಸವಾರ ಚಂದ್ರ ನಾಯ್ಕರವರಿಗೆ ಎಡ ಕೈಗೆ ಮೊಣ ಕೈಗೆ ಜಖಂ, ತಲೆಗೆ ,ಎರಡೂ ಕಾಲುಗಳಿಗೆ ತರಚಿದ ಗಾಯವಾಗಿದ್ದು, ಸಹ ಸವಾರರಾಗಿದ್ದ  ಠಾಮ ಮಠಾಠಿಯವರಿಗೆ ಎಡಕಾಲಿನ ಪಾದದ ಗಂಟಿನ ಜಖಂ, ಬೆನ್ನಿಗೆ, ತಲೆಗೆ, ಎರಡೂ ಕೈಗಳಿಗೆ ತರಚಿದ ಗಾಯವಾಗಿದ್ದು ಹಾಗೂ  ನಾಗರಾಜ ರವರಿಗೂ ಎರಡೂ ಕೈಗಳಿಗೆ ತರಚಿದ ಗಾಯ , ಬೆನ್ನಿಗೆ ಸೊಂಟಕ್ಕೆ ಗುದ್ದಿದ  ಒಳಜಖಂ ಆಗಿರುತ್ತದೆ. ಪಿರ್ಯಾದಿದಾರರು ಹಾಗೂ ಅವರ ಬಾವ ಶಿವಯ್ಯ ಗಾಯಾಳುಗಳನ್ನು ಎತ್ತಿ ಉಪಚರಿಸಿ  ಚಂದ್ರ ನಾಯ್ಕ ರವರ ಚಿಕ್ಕಪ್ಪ ಸತೀಶ್ ನಾಯ್ಕ ರವರಿಗೆ ಕರೆಮಾಡಿ ತಿಳಿಸಿದ್ದು  ನಂತರ  ಸತೀಶ್ ನಾಯ್ಕ ರವರು ಗಾಯಾಳು ಚಂದ್ರ ನಾಯ್ಕ ಹಾಗೂ ರಾಮ ಮರಾಠಿಯನ್ನು, ಪಿರ್ಯಾದಿದಾರರು ನಾಗರಾಜ ರವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 15/06/2022 ರಂದು ಪಿರ್ಯಾದಿದಾರರಾದ ರಾಘವೇಂದ್ರ (42), ತಂದೆ: ನಟರಾಜ, ವಾಸ: ಸೀತಾಲಕ್ಷ್ಮೀ ಮೂಡುಭೀರ್ತಿ ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರು KA-20-ET-3977 ನಂಬ್ರದ TVS JOPITER  ದ್ವಿಚಕ್ರ ವಾಹನದಲ್ಲಿ ರಾತ್ರಿ 8:20 ಗಂಟೆಗೆ ಬ್ರಹ್ಮಾವರ ಬಸ್ಸು ನಿಲ್ದಾಣದಿಂದ ಪ್ಲೈಓವರ್‌ ಅಂಡರ್‌ ಪಾಸ್‌ ಬಳಸಿಕೊಂಡು ಪಿರ್ಯಾದಿದಾರರ ಮನೆಯಾದ ವಾರಂಬಳ್ಳಿ ಮೂಡುಭಿರ್ತಿಗೆ ಹೋಗುತ್ತಿರುವಾಗ ರಾತ್ರಿ 8:30 ಗಂಟೆಗೆ ಪ್ಲೈಓವರ್‌ ಬಳಿಯ ಭಾಷಾ ಟ್ರಾನ್ಸ್ ಪೋರ್ಟ್‌ ಬಳಿ ಸರ್ವಿಸ್‌ ರಸ್ತೆಯ ಮಧ್ಯ ಭಾಗದಲ್ಲಿ KA-52-B-3526 ನಂಬ್ರದ ಲಾರಿಯೊಂದನ್ನು ಅದರ ಚಾಲಕನು ಯಾವುದೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸದೇ ಬ್ರೈಕ್‌‌ ಲೈಟ್‌ ಹಾಗೂ ಇಂಡಿಕೇಟರ್‌ ಹಾಕದೇ ಸರ್ವಿಸ್‌ ‌ರಸ್ತೆಯ ಮಧ್ಯ ಭಾಗದಲ್ಲಿ ನಿಲ್ಲಿಸಿದ್ದು ಪಿರ್ಯಾದಿದಾರರು ಎದುರಿನಿಂದ ಬರುತ್ತಿದ್ದ ವಾಹನ ನೋಡಿ ಬದಿಗೆ ತರಲು ಪ್ರಯತ್ನಿಸುತ್ತಿದಾಗ ಪಿರ್ಯಾದಿದಾರರು ಚಲಾಯಿಸುತ್ತಿದ  ದ್ವಿಚಕ್ರ ವಾಹನ ಹತೋಟಿ ತಪ್ಪಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇಲ್ಲದೆ ಇರುವುದರಿಂದ  KA-52-B-3526 ನಂಬ್ರದ ಲಾರಿಗೆ  ಡಿಕ್ಕಿ ಹೊಡೆದ ಪಿರ್ಯಾದಿದಾರರು ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎದೆಗೆ ಗುದಿದ್ದ ನೋವು ಹಾಗೂ ಬಲಕಣ್ಣು ಊದಿಕೊಂಡಿರುತ್ತದೆ. ಹಾಗೂ ಬಲಕಣ್ಣಿನ ಮೇಲ್ಭಾಗದ ಹಣೆಯು ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರ ಮೋಟಾರ್‌ ಸೈಕಲ್‌ ಹೆಡಲೈಟ್‌ ಹಾಗೂ ಮುಂಭಾಗ  ಜಖಂಗೊಂಡಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 106/2022 ಕಲಂ : 27̧9, 338 ಐಪಿಸಿ ಮತ್ತು  134(a)(b) ಜೊತೆಗೆ 187  IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಶ್ರೀನಿವಾಸ ಶ್ಯಾನುಭಾಗ್ (51), ತಂದೆ: ವೆಂಕಟೇಶ ಶ್ಯಾನುಭಾಗ್, ವಾಸ: ಸದಾಶಿವ, ಶಾಂತೇರಿ ಕಾಮಾಕ್ಷೀ ಹಾಲ್ ಹಿಂದುಗಡೆ, ರೈಲ್ವೆ ಟ್ರಾಕ್ ಹತ್ತಿರ ನಾಗೂರು ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಇವರ ತಮ್ಮ ಸದಾಶಿವ ಶ್ಯಾನುಭಾಗ್ (44) ಇವರು ದಿನಾಂಕ 16/06/2022 ರಂದು ಸಂಜೆ 5:45 ಗಂಟೆಗೆ ನಾಗೂರಿನಲ್ಲಿರುವ ಹಾಲು ಡೈರಿಗೆ ಹಾಲನ್ನು ಕೊಟ್ಟು ವಾಪಾಸ್ಸು ಮನೆಗೆ ಬರಲು ಕಿರಿಮಂಜೇಶ್ವರ ಗ್ರಾಮದ ನಾಗೂರು ಎಂಬಲ್ಲಿ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಕಾರ್ಯಾಲಯದ ಎದುರು ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಡಿವೈಡರ್ ನ ಬದಿಯಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದಾಗ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ MH-03-AW-6894 ನೇ ಕಾರು ಚಾಲಕ ಇರ್ಷಾದ್ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವ  ಬರದಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ರಸ್ತೆಯ ಡಿವೈಡರ್ ನ ಬದಿಯಲ್ಲಿ ನಿಂತುಕೊಂಡಿದ್ದ  ಸದಾಶಿವ ಶ್ಯಾನುಭಾಗ್ ರವರಿಗೆ ಡಿಕ್ಕಿ ಹೊಡೆದ ಅಪಘಾತದ  ಪರಿಣಾಮ ಸದಾಶಿವ ಶ್ಯಾನುಭಾಗ್ ರವರಿಗೆ ಹಣೆಯ ಎಡ ಭಾಗ, ಕೆನ್ನೆಗೆ ಗುದ್ದಿದ ಗಾಯ ಹಾಗೂ ತಲೆಯ ಎಡಭಾಗದಲ್ಲಿ ಒಳಗೆ ಜಜ್ಜಿ ಹೋದ ತೀವ್ರ ತರಹದ ರಕ್ತಗಾಯ ಉಂಟಾದವರನ್ನು ಪಿರ್ಯಾದಿದಾರರು ರವೀಂದ್ರ ಶ್ಯಾನುಭಾಗ್ ಹಾಗೂ ಇತರರ ಸಹಾಯದಿಂದ 108 ವಾಹನದಲ್ಲಿ ಚಿಕಿತ್ಸೆಬಗ್ಗೆ ಬೈಂದೂರು ಸಮುದಾಯ ಆರೋಗ್ಯಕೇಂದ್ರಕ್ಕೆ ಕರೆತಂದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿ ಸದಾಶಿವ ಶ್ಯಾನುಭಾಗ್ ರವರು ಚಿಕಿತ್ಸೆಗೆ ಕರೆ ತರುವಾಗ  ದಾರಿ ಮದ್ಯದಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಸಂಜೆ 6:30 ಗಂಟೆಗೆ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/2022 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತರ ಪ್ರಕರಣ

  • ಉಡುಪಿ: ದಿನಾಂಕ 12/06/2022 ರಂದು ಲಕ್ಷ್ಮಣ,  ಪೊಲೀಸ್ ಉಪ-ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ಉಡುಪಿ ತಾಲೂಕು ಕಡೆಕಾರ್ ಗ್ರಾಮದ ಸರ್ವಿಸ್ ರಸ್ತೆಯಲ್ಲಿರುವ ಸುಜುಕಿ ಶೋ ರೂಂ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಮೊಹಮ್ಮದ್ ಪರ್ವೆಜ್ (23), ತಂದೆ: ದಿ. ಉಮ್ಮರ್ ಸಾಹೇಬ್, ವಾಸ: ಕಿನ್ನಿಮುಲ್ಕಿ ರೂಮ್  ನಂಬ್ರ 005 ಮಾಂಡವಿ ಪ್ರೆಸಿಡೆಸ್ಸಿ ರಾಮಚಂದ್ರ ಲೇನ್  ಕಿನ್ನಿಮುಲ್ಕಿ  ವಿ.ಆರ್.ಎಲ್ ಬಳಿ,  ಕಡೆಕಾರು ಗ್ರಾಮ ಮತ್ತು ಪೊಸ್ಟ್ ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ದಿನಾಂಕ 16/06/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿದ್ದು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದದಾಗಿದೆ. ಈ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2022  ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-06-2022 09:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080