ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಮಲ್ಪೆ: ಪಿರ್ಯಾದಿ ವಿವೇಕ್ ಇವರ  ಚಿಕ್ಕಮ್ಮ  ಶಶಿಕಲಾ(41ವರ್ಷ)  ಮಲ್ಪೆ ಮಹಾಲಕ್ಷ್ಮೀ ಹೋಟೆಲ್ ನಲ್ಲಿ  ಕಿಚನ್ ನಲ್ಲಿ ಸಹಾಯಕಿ ಆಗಿ ಕೆಲಸ ಮಾಡಿಕೊಂಡಿರುತ್ತಾರೆ ದಿನಾಂಕ: 11-06-2022 ರಂದು  ಹೋಟೆಲ್ ನಲ್ಲಿ ಕೆಲಸ ಮುಗಿಸಿ ರಾತ್ರಿ 10:30 ಗಂಟೆಗೆ  ಅಲ್ಲೆ ಕೆಲಸ ಮಾಡಿಕೊಂಡಿದ್ದ  ಸುಧಾಕರ ಶಶಿಧರ ಸನಿಲ್  ಇವರ ಜೊತೆ KA19HF7483 ಸ್ಕೂಟರ್ ನಲ್ಲಿ ಮಹಾಲಕ್ಷ್ಮೀ ಹೋಟೆಲ್ ನಿಂದ  ಮಲ್ಪೆ ಮಾರ್ಗವಾಗಿ ಮನೆಯಾದ ಕಲ್ಮಾಡಿಗೆ ಹೋಗುತ್ತಿರುವಾಗ  ಮಲ್ಪೆಯ ಏಳೂರು ಮೊಗವೀರ ಭವನದ   ಬಳಿ ಸುಧಾಕರ ರವರು ಸ್ಕೂಟರ್ ನ್ನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬರುತ್ತಿರುವಾಗ  ಒಂದು ನಾಯಿ ಅಡ್ಡ ಬಂದಾಗ ಸುಧಾಕರ ಶಶಿಧರ ಸನಿಲ್  ರವರು ಸ್ಕೂಟರ್ ನ್ನು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ  ಬಿದ್ದಿದ್ದು  ಸ್ಕೂಟರ್ ನ ಹಿಂಬದಿ ಕುಳಿತಿದ್ದ  ಪಿರ್ಯಾದಿದಾರರ ಚಿಕ್ಕಮ್ಮ ಶಶಿಕಲಾ  ರವರಿಗೆ ಎಡಕಾಲಿಗೆ  ಮತ್ತು ಮುಖಕ್ಕೆ ತರಚಿದ ಗಾಯವಾಗಿದ್ದು ಅಲ್ಲದೆ ಎಡಬದಿಯ ದವಡೆಯ ಹಲ್ಲಿನ ಒಳ ಜಖಂ ಆಗಿದ್ದು , ಕೂಡಲೇ ಅವರನ್ನು ಚಿಕಿತ್ಸೆಯ  ಬಗ್ಗೆ  ಜಿಲ್ಲಾ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡುಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ   ಉಡುಪಿಯ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಒಳರೋಗಿಯಾಗಿ  ದಾಖಲು ಮಾಡಿರುವುದಾಗಿದೆ.  ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2022 ಕಲಂ: 279, 338 ಐಪಿಸಿರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ಕೃಷ್ಣ ಪೂಜಾರಿ ಇವರು ದಿನಾಂಕ: 16.06.2022 ರಂದು ರಾತ್ರಿ ಕೆಲಸ ಮುಗಿಸಿ ತನ್ನ  ಮಿನಿ ಬಸ್ಸನ್ನು ಸಾಲಿಗ್ರಾಮದಲ್ಲಿ ನಿಲ್ಲಿಸಿ ಮಧ್ಯರಾತ್ರಿ ಬೈಕಿನಲ್ಲಿ ವಾಪಾಸು ರಾ.ಹೆ. 66 ಉಡುಪಿ - ಕುಂದಾಪುರ ಮುಖ್ಯರಸ್ತೆಯಲ್ಲಿ ಸಾಲಿಗ್ರಾಮ ಕಡೆಯಿಂದ ಮಾಬುಕಳ ಕಡೆಗೆ ಬರುತ್ತಿದ್ದು ಸಾಸ್ತಾನ ಟೋಲ್ ಗೇಟ್ ಬಳಿ ಬರುವಾಗ ಪಿರ್ಯಾದಿದಾರರ  ಮುಂದಿನಿಂದ ಮಾಬುಕಳ ಕಡೆಗೆ KA 20 EY 2654 ನೇ ಇಲೆಕ್ಟ್ರಿಕ್ ದ್ವಿಚಕ್ರ ವಾಹನದ ಚಾಲಕ ಕಾರ್ತಿಕ್ ಎಂಬಾತನು ತನ್ನ ಬಾಬ್ತು ಇಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದು ಪಿರ್ಯಾದಿದಾರರು  ಟೋಲ್ ಗೇಟ್ ದಾಟಿ ಸ್ವಲ್ಪ ಮುಂದೆ ಹೋದಾಗ ಅಂದರೆ ದಿನಾಂಕ: 17.06.2022 ರಂದು 00:30 ಗಂಟೆಗೆ ರಸ್ತೆ ಮಧ್ಯದಲ್ಲಿ ಒಂದು ಟ್ಯಾಂಕರ್ ಲಾರಿಯನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ಮತ್ತು ಮುಂಜಾಗೃತಾ ಕ್ರಮ ವಹಿಸದೇ ನಿರ್ಲಕ್ಷ್ಯತನದಿಂದ ರಸ್ತೆ ಮಧ್ಯೆ ನಿಲ್ಲಿಸಿಕೊಂಡಿದ್ದು ಆಗ ಪಿರ್ಯಾದಿದಾರರ  ಮುಂದಿನಿಂದ ಸಾಗುತ್ತಿದ್ದ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಸವಾರನು ಸದ್ರಿ ಟ್ಯಾಂಕರ್ ನ ಹಿಂಬದಿಗೆ ಹೋಗಿ ಢಿಕ್ಕಿ ಹೊಡೆದನು. ಪರಿಣಾಮ ಸವಾರನು ವಾಹನ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಹಿಂದೆ ಬರುತ್ತಿದ್ದ ಪಿರ್ಯಾದಿದಾರರು  ಕೂಡಲೇ ಬೈಕ್ ಅನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ಆತನ ಬಳಿ ಹೋಗಿ ನೋಡಿದಾಗ ಆತನ ಬಾಯಿಗೆ ಎರಡೂ ಕಾಲುಗಳಿಗೆ ಹಾಗೂ ಬಲಕೈಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ.  ಈ ಅಪಘಾತಕ್ಕೆ ನಂ. KA 27 B 7759 ನೇ ಟ್ಯಾಂಕರ್ ಲಾರಿಯನ್ನು ಅದರ ಚಾಲಕ ಮೊಹಮದ್ ಎಂಬಾತನು ಯಾವುದೇ ಸೂಚನೆ ನೀಡದೇ ಹಾಗೂ ಮುಂಜಾಗೃತಾ ಕ್ರಮ ವಹಿಸದೇ ನಿರ್ಲಕ್ಷ್ಯತನದಿಂದ ರಸ್ತೆಮಧ್ಯೆ ನಿಲ್ಲಿಸಿದ್ದೇ ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2022 ಕಲಂ: 279, 283, 338 ಐಪಿಸಿರಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಫಿರ್ಯಾದಿ ಅಲೆಕ್ಸ್‌ ಲಾರೆನ್ಸ್‌ ಇವರ ಮಗ  ಲಾಯ್ಡ್‌‌  ಅಶ್ವಿನ್ ವಾಜ್  ಪ್ರಾಯ: 27 ವರ್ಷ  ಈತನು ಸುಮಾರು 6 ವರ್ಷಗಳಿಂದ ಮಾನಸಿಕ  ಕಾಯಿಲೆಯಿಂದ ಬಳಲುತ್ತಿದ್ದು ಅದೇ ಕಾರಣದಿಂದ ಖಿನ್ನತೆಯಿಂದ ಇದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ: 16.06.2022 ರಂದು ರಾತ್ರಿ 9.15 ಗಂಟೆಯಿಂದ ದಿನಾಂಕ 17.6.2022 ರಂದು ಬೆಳಿಗ್ಗೆ 8.10 ಗಂಟೆಯ ಮಧ್ಯಾವಧಿಯಲ್ಲಿ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಒಬ್ಬೊಟ್ಟು ಎಂಬಲ್ಲಿರುವ ಪಿರ್ಯಾದಿದಾರರ ಮನೆಯ ಎದುರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ . ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 17-06-2022 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080