ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಶಂಶುದ್ದೀನ್ (35), ತಂದೆ: ದಿ. ಅಬುಬಕ್ಕರ್,  ವಾಸ : ಜನತಾ ಕಾಲೋನಿ, ಚಂದ್ರ ನಗರ, ಪಾದೂರು ಗ್ರಾಮ ಮತ್ತು ಅಂಚೆ, ಕಾಪು  ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 16/05/2023 ರಂದು ಮನೆಯಲ್ಲಿರುವಾಗ ಮಧ್ಯಾಹ್ನ 2:50 ಗಂಟೆಗೆ ತಂಗಿ ಶೈನಾಜ್ (31) ಪಿರ್ಯಾದಿದಾರರಿಗೆ ಕರೆ ಮಾಡಿ ಮೂಡಬೆಟ್ಟುವಿನಲ್ಲಿ ನಮಗೆ ರಸ್ತೆ ಅಪಘಾತವಾಗಿದ್ದು, ಚಿಕಿತ್ಸೆಯ ಬಗ್ಗೆ ಕಾರಿನಲ್ಲಿದ್ದವರನ್ನು ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು, ಬರುವಂತೆ ತಿಳಿಸಿರುತ್ತಾರೆ. ಪಿರ್ಯಾದಿದಾರರು ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ಹೋಗಿ ರಸ್ತೆ ಅಪಘಾತಗೊಂಡು ಎಮರ್ಜೇನ್ಸಿ ವಾರ್ಡಿನಲ್ಲಿ  ಚಿಕಿತ್ಸೆ ಶೈನಾಜ್ ರವರ ಬಳಿ ಹೋಗಿ ಘಟನೆಯ ಬಗ್ಗೆ  ವಿಚಾರಿಸಿದ್ದಲ್ಲಿ ಚಿಕ್ಕಪ್ಪ ಇಮ್ತಿಯಾಜ್ ರವರ KA-51-MA-3730  ನೇ ಕಾರಿನಲ್ಲಿ ಚಂದ್ರನಗರ ಕಡೆಗೆ ಬರಲು ಉಡುಪಿಯಿಂದ ಅವರ ಕಾರಿನಲ್ಲಿ  ಚಿಕ್ಕಮ್ಮ ತಾಹಿರಾ ಹಾಗೂ ಕಾರಿನ ಹಿಂಬದಿ ಸೀಟಿನಲ್ಲಿ  ಮಗಳು ಶಮ್ನಾ ರವರೊಂದಿಗೆ ನಾನು ಕುಳಿತುಕೊಂಡು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ ಮಂಗಳೂರು ರಸ್ತೆಯಲ್ಲಿ ಬರುತ್ತಿರುವಾಗ ಸಮಯ ಮಧ್ಯಾಹ್ನ 2:40 ಗಂಟೆಗೆ ಮೂಡಬೆಟ್ಟು ಗ್ರಾಮದ ಹೆಚ್.ಪಿ. ಪೇಟ್ರೊಲ್ ಪಂಪ್  ಸಮೀಪ ತಲುಪುತ್ತಿದ್ದಂತೆ ಅದೇ  ರಸ್ತೆಯಲ್ಲಿ  ನಮ್ಮ ಕಾರಿನ ಹಿಂದೆ ಓರ್ವ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿನ ಹಿಂಬದಿಗೆ ಢಿಕ್ಕಿ  ಹೊಡೆದ, ಪರಿಣಾಮ ನಮ್ಮ ಕಾರು ರಸ್ತೆಯ ಬದಿಯಲ್ಲಿದ್ದ ಸಿಮೆಂಟ್ ಲೈಟ್‌ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಮಗುಚಿ ಬಿದಿದ್ದು, ಅದರಿಂದ ಚಿಕ್ಕಪ್ಪ  ಇಮ್ತಿಯಾಜ್ (40)  ರವರಿಗೆ  ತಲೆಯ ಹಿಂಭಾಗ ಪೆಟ್ಟಾಗಿ ರಕ್ತಗಾಯವಾಗಿದ್ದು ಮತ್ತು ಎಡಕ್ಕೆ ಜಖಂ ಆಗಿದ್ದು, ಚಿಕಿತ್ಸೆಯ ಬಗ್ಗೆ ತೀವೃ  ನಿಗಾ ಘಟಕದಲ್ಲಿ ಇರಿಸಿರುವುದಾಗಿ ತಿಳಿಸಿ, ನನಗೆ ಬೆನ್ನಿಗೆ ಗುದ್ದಿದ್ದ ಒಳನೋವಾಗಿದ್ದು ಮತ್ತು ಮುಖಕ್ಕೆ ತರಚಿದ ಗಾಯವಾಗಿರುವುದಾಗಿ ತಿಳಿಸಿರುತ್ತಾರೆ. ನಂತರ  ಅಲ್ಲೇ ಇದ್ದ ಚಿಕ್ಕಮ್ಮ ತಾಹಿರಾ (38) ರವರಿಗೆ ನೋಡಲಾಗಿ ಅವರಿಗೆ ಬೆನ್ನಿಗೆ ಗುದ್ದಿದ್ದ ಗಾಯವಾಗಿದ್ದು, ತಂಗಿಯ ಮಗಳು ಶಮ್ನಾ(6)ಳಿಗೆ  ತಲೆಗೆ ಗಾಯವಾಗಿದ್ದು ಹಾಗೂ ಬಲಕಾಲಿಗೆ ಮೂಳೆ, ಎಡಕೈಯ ಮೂಳೆ ಮುರಿತದ  ಗಾಯವಾಗಿರುತ್ತದೆ. ಚಿಕಿತ್ಸೆಯಲ್ಲಿದ್ದ  ಚಿಕ್ಕಪ್ಪ ಇಮ್ತಿಯಾಜ್ ರವರ ಚಿಕಿತ್ಸೆ ಫಲಕಾರಿಯಾಗದೇ ಸಂಜೆ 4:00 ಗಂಟೆಗೆ ಮೃತ ಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿರುತ್ತಾರೆ.  ನಂತರ ಪಿರ್ಯಾದಿದಾರರು ಅಪಘಾತ ಸ್ಥಳಕ್ಕೆ ಬಂದು  ಅಪಘಾತ  ಸ್ಥಳ ನೋಡಿ, ಸ್ಥಳದಲ್ಲಿ ಅಪಘಾತ ಪಡಿಸಿದ ಕಾರಿದ್ದು ಅದರ ನಂಬ್ರ KA-22-MA-0827  ಆಗಿದ್ದು, ಇದರ ಚಾಲಕನ ಹೆಸರು ಸುರೆಶ ಬಿ ಶೆಟ್ಟಿ ಎಂಬುದಾಗಿ ತಿಳಿದಿರುತ್ತದೆ.  ಈ ಅಪಘಾತದಿಂದ ಎರಡು ಕಾರು ಸಂಪೂರ್ಣ ಜಖಂಗೊಂಡಿದ್ದು  ಹಾಗೂ ಸಿಮೆಂಟ್ ಲೈಟ್ ಕಂಬ ಕೂಡ ಜಖಂ ಗೊಂಡಿರುತ್ತದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2023 ಕಲಂ: 279, 337, 338 304(A), 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ದಯಾನಂದ (52),, ತಂದೆ: ದಿ. ಬೂದ ಶೆಟ್ಟಿಗಾರ್, ವಾಸ: ಕೆಳಸಿಬೆಟ್ಟು ಹೌಸ್, ಹಳೆಯಂಗಡಿ ಗ್ರಾಮ, ಮಂಗಳೂರು ತಾಲೂಕು, ದ.ಕ. ಜಿಲ್ಲೆಇವರು ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದು, ಅವರು ದಿನಾಂಕ 16/05/2023 ರಂದು ಬೆಳಿಗ್ಗೆ ಕೆಲಸದ ನಿಮಿತ್ತ ಮಂಚಕಲ್ಲಿಗೆ ಹೋಗಲು KA-19-AC-9195 ನೇ ನಂಬ್ರದ ರೇಷ್ಮಾ ಬಸ್ಸಿನಲ್ಲಿ ಹಳೆಯಂಗಡಿಯಲ್ಲಿ ಹತ್ತಿ ಕುಳಿತು ಕಾರ್ಕಳ ಕಡೆಗೆ ಪ್ರಯಾಣಿಸುತ್ತಾ ಬಸ್ಸು ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಗೆ ಬಂದು ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ಹೋಗುತ್ತಾ 08:20 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ-66 ರ ಪಡುಬಿದ್ರಿಯ ಕಾರ್ಕಳ ಜಂಕ್ಷನ್‌‌ನಲ್ಲಿ ಬಸ್ಸನ್ನು ಅದರ ಚಾಲಕ ಕಾರ್ತಿಕ್  ತೀರಾ ನಿರ್ಲಕ್ಷತನ ಹಾಗೂ ದುಡುಕುತನದಿಂದ ಉಡುಪಿ–ಮಂಗಳೂರು ಏಕಮುಖ ಸಂಚಾರದ ರಸ್ತೆಗೆ ಚಲಾಯಿಸಿ, ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ KA-25-D-8000 ನೇ ನಂಬ್ರದ ಲಾರಿಗೆ ಡಿಕ್ಕಿ ಹೊಡೆದು ಬಲಕ್ಕೆ  ಚಲಿಸಿ, ಜಂಕ್ಷನ್‌‌ನಲ್ಲಿ ಇರಿಸಿದ್ದ ಟ್ರಾಫಿಕ್ ಬೂತ್ ಗೆ ಡಿಕ್ಕಿ ಹೊಡೆದು ಅದನ್ನು ತಳ್ಳಿಕೊಂಡು ಮುಂದಕ್ಕೆ ಚಲಿಸಿ, ಕಾರ್ಕಳ ರಸ್ತೆಯ ಬದಿಯಲ್ಲಿ ರಿಕ್ಷಾ ನಿಲ್ದಾಣದಲ್ಲಿ ನಿಲ್ಲಿಸಿದ್ದ KA-20-AB-2849 ನೇ ನಂಬ್ರದ ರಿಕ್ಷಾ ಕ್ಕೆ ಡಿಕ್ಕಿ ಹೊಡೆದು ಅದನ್ನು ತಳ್ಳಿಕೊಂಡು ಮುಂದೆ ಹೋಗಿ ನಿಂತಿರುತ್ತದೆ.  ಅಪಘಾತದಿಂದ ರಿಕ್ಷಾ ಮಗುಚಿ ಬಿದ್ದು ಜಖಂಗೊಂಡಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಿಗೆ ಹಣೆಗೆ ಗಾಯ ಹಗೂ ಬಲಕೈ ಭುಜದ ಹಿಂಭಾಗಕ್ಕೆ ಗುದ್ದಿದ ಒಳ ಜಖಂ ಉಂಟಾಗಿದ್ದು, ಅಲ್ಲದೇ ಬಸ್ಸಿನ ಕಂಡಕ್ಟರ್ ಪ್ರಮೋದ್, ಪ್ರಯಾಣಿಕರಾದ ಸುಪ್ರೀತ್ ರೈ ಮತ್ತು ಸುಮಿತ್ರ ಎಂಬುವವರಿಗೆ ಸಾಧಾರಣ ಸ್ವರೂಪದ ಗಾಯಗಳಾಗಿದ್ದು, ಇನ್ನು ಕೆಲವರಿಗೆ ಗುದ್ದಿದ ನೋವಾಗಿರುತ್ತದೆ. ನಂತರ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸುಮಿತ್ರಾರವರು ಹೊರ ರೋಗಿಯಾಗಿ ಚಿಕಿತ್ಸೆಪಡೆದಿದ್ದು, ಇನ್ನುಳಿದ 3 ಜನ ಒಳರೋಗಿಗಳಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2023, ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬ್ರಹ್ಮಾವರ: ದಿನಾಂಕ 16/05/2023 ರಂದು ಪಿರ್ಯಾದಿದಾರರಾದ ಗಣಪತಿ ಆಚಾರ್ಯ(65), ತಂದೆ: ದಿ. ಮಂಜುನಾಥ ಆಚಾರ್ಯ, ವಾಸ: ಶ್ರಿ ಪದ್ಮ ಆರೂರು ಅಡ್ಪು ಕುಂಜಾಲು ಅಂಚೆ ಆರೂರು ಗ್ರಾಮ ಬ್ರಹ್ಮಾವರ ತಾಲೂಕು ಇವರು  ಬೆಳಿಗ್ಗೆ ಮನೆಯಿಂದ ಹಸುವಿನ ಹಾಲನ್ನು ಕರೆದು ಸೈಕಲ್ಗೆ ಕ್ಯಾನ್ ಅನ್ನು ಕಟ್ಟಿಕೊಂಡು ಸೈಕಲ್ ಸವಾರಿ ಮಾಡಿಕೊಂಡು ಮುಂಡ್ಕಿನಜಡ್ಡು ಹಾಲಿನ  ಡೈರಿಗೆ ಹೋಗುವರೆ ಬ್ರಹ್ಮಾವರ ಹೆಬ್ರಿ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಾ ಚೇರ್ಕಾಡಿ ಗ್ರಾಮದ ಮುಡ್ಕಿನಜಡ್ಡು  ಶಾರದಾ ಇಂಗ್ಲಿಷ್ ಮಿಡಿಯಂ ಶಾಲೆಯ ಎದುರುಗಡೆ ಬೆಳಿಗ್ಗೆ 8:00 ಗಂಟೆಯ ಸಮಯಕ್ಕೆ ತಲುಪುವಾಗ ಬ್ರಹ್ಮಾವರ ಕಡೆಯಿಂದ ಹೆಬ್ರಿ ಕಡೆಗೆ KA-22-N-3066 ಹೊಂಡಾ ಕಾರನ್ನು ಅದರ ಚಾಲಕ ಪಂಕಜ್  ಅತಿವೇಗ ಹಾಗೂ ಅಜಾಗರುಕತೆಯಿಂದ  ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸೈಕಲ್ ಸಮೇತ ಡಾಮಾರು ರಸ್ತೆಯ ಮೇಲೆ ಬಿದ್ದು ತಲೆಯ ಭಾಗಕ್ಕೆ ಎಡ ಕಣ್ಣಿನ ಕೆಳಭಾಗ ಹುಬ್ಬು ಗಲ್ಲ ಬಲ ಕೈಗೆ ರಕ್ತಗಾಯವಾಗಿರುತ್ತದೆ‌ ಹಾಗೂ ಎರಡು ಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102/2023 : ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 10/05/2023 ರಂದು ಬೆಳಿಗ್ಗೆ 9:40 ಗಂಟೆಗೆ ಪಿರ್ಯಾದಿದಾರರಾದ ವಿಘ್ನೇಶ್‌ಪೂಜಾರಿ (24), ತಂದೆ: ಲಕ್ಷ್ಮಣ ಪೂಜಾರಿ, ವಾಸ; ಕೊಮೆ ತೆಕ್ಕಟ್ಟೆ ಗ್ರಾಮ ಕುಮದಾಪುರ ತಾಲೂಕು ಇವರು ಮೋಟಾರು ಸೈಕಲ್‌ ನಂಬ್ರ KA-20-HA-5793 ನೇದರಲ್ಲಿ ರಾಷ್ಟ್ರೀಯ ಹೆದ್ದಾರಿ 66 ಉಡುಪಿ-ಕುಂದಾಪುರ ಮುಖ್ಯರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಕ್ರಮದಂತೆ ಹೋಗುತ್ತಿದ್ದಾಗ ಪಿರ್ಯಾದಿದಾರರ ಎದುರುಗಡೆ ಅದೇ ಮಾರ್ಗವಾಗಿ ಕುಂದಾಪುರ ಉಡುಪಿ ರಸ್ತೆಯಲ್ಲಿ KA-20-W-0563 ನೇ ಮೋಟಾರು ಸೈಕಲ್‌ನ್ನು ಅದರ ಚಾಲಕ ಒಮ್ಮಲೇ ನಿಧಾನ ಮಾಡಿ ಯಾವುದೇ ಸೂಚನೆ ನೀಡದೇ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಆಯತಪ್ಪಿ ಮುಂದುಗಡೆ ಹೋಗುತ್ತಿದ್ದ KA-20-W-0563 ನೇ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿರರು ಬೈಕ್‌ನಿಂದ ದೂರಕ್ಕೆ ಎಸೆಯಲ್ಪಟ್ಟು ನೆಲಕ್ಕೆ ಬಿದ್ದಿರುತ್ತಾರೆ. ಇದರಿಂದ ಪಿರ್ಯಾದಿದಾರರಿಗೆ ಭುಜಗಳು,ಕಾಲುಗಳು ಮತ್ತು ದೇಹದ ಇತರ ಭಾಗಗಳಿಗೆ ಗಾಯವಾಗಿರುತ್ತದೆ. ಆರೋಪಿ ಮೋಟಾರು ಸೈಕಲ್‌ ಸವಾರನಿಗೂ ಸಣ್ಣಪುಟ್ಟ ಗಾಯವಾಗಿರುತ್ತದೆ. ಕೂಡಲೇ ಸ್ಥಳೀಯರು ಪಿರ್ಯಾದಿದಾರನ್ನು ಕೋಟೇಶ್ವರ ಎನ್‌ಆರ್‌ ಆಚಾರ್ಯ ಆಸ್ಪತ್ರೆಗೆ ದಾಖಲಿಸಿ , ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದುಕೊಂಡಿದ್ದು, ಪ್ರಸ್ತುತ ವೆನ್‌ಲಾಕ್‌ ಆಸ್ಪತ್ರೆ ಮಂಗಳೂರು ಇಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. KA-20-W-0563 ನೇ ಮೋಟಾರ್‌ಸೈಕಲ್‌ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ತನ್ನ ಮೋಟಾರು ಸೈಕಲ್‌ನ್ನು ಯಾವುದೇ ಸೂಚನೆ ನೀಡದೇ ಒಮ್ಮಲೇ ಬಲಕ್ಕೆ ತಿರುಗಿಸಿರುವುದೇ ಈ ಅಪಘಾತಕ್ಕೆ ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 92/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 16/05/2023 ರಂದು ಪಿರ್ಯಾದಿದಾರರಾದ ಈರಣ್ಣ (32), ತಂದೆ: ಸಂಗಪ್ಪ  ಹಡಗಲಿ,  ವಾಸ: ಮುಗಳಿ ರೋಣ ತಾಲೂಕು ಗದಗ ಜಿಲ್ಲೆ  ಇವರು ಬೆಳಿಗ್ಗೆ 8:30  ಗಂಟಗೆ   ಗದಗದಿಂದ ಉದಯ ಕುಮಾರ್  ದೇಸಾಯಿರವರ  ವಾಹನ ನಂಬ್ರ KA-04-ML-3064 ನೇದನ್ನು ಸಿದ್ದಲಿಂಗೇಶ್ವರ  ಶಿವಕುಮಾರಯ್ಯ  ಹಿರೇಮಠ ಇವರ  ಮನೆಯಿಂದ  ಚಲಾಯಿಸಿಕೊಂಡು  ಹುಬ್ಬಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಧರ್ಮಸ್ಥಳಕ್ಕೆ  ಹೊರಟು  ಉಡುಪಿ ಜಿಲ್ಲೆಯ  ಬ್ರಹ್ಮಾವರದ   ಉಪ್ಪೂರು ಕೆಜಿ ರಸ್ತೆಯ  ಬಳಿ  ಹೋಗುವಾಗ    ಮುಂದಿನಿಂದ  ಒಂದು 407 ಮಿನಿ  ಬಸ್  ಅದರ  ನಂಬ್ರ KA-51-AC-5769 ನ್ನು  ಅದರ  ಚಾಲಕ ನಿಲರ್ಕ್ಷದಿಂದ ಚಲಾಯಿಸುತ್ತಿದ್ದು ಅದರಲ್ಲಿ 30 ರಿಂದ 40 ಜನ ಪ್ರಯಾಣಿಕರಿದ್ದು. ಬಸ್ ಚಾಲಕನು ಬಲಗಡೆಯ ಇಂಡಿಕೇಟರ್ ತೋರಿಸಿ  ಎಡಭಾಗಕ್ಕೆ ಬಂದು ಎಕಾಎಕಿ ಒಂದೇ   ಸಮನೇ ಬ್ರೇಕ್  ಹಾಕಿದ್ದು  ಅದಕ್ಕೆ ಬ್ರೇಕ್  ಲೈಟ್ ಕೂಡ  ಇದ್ದಿರುವುದಿಲ್ಲ.   ಪರಿಣಾಮ ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ  ಕಾರು  ಹಿಂದನಿಂದ  ಡಿಕ್ಕಿ ಹೊಡೆದ ಪರಿಣಾಮ ಸ್ಕ್ರೋಪಿಯೋ  ಕಾರಿನ ಬಲಭಾಗದ    ಹೆಡ್ ಲೈಟ್  ಹಾಗೂ ವೀಲ್  ಬಂಪರ್ ಮತ್ತು ಬಲಭಾಗದ ಬಾಗಿಲು ಹಾಗೂ ಮಿರರ್ ಜಖಂಗೊಂಡಿರುತ್ತದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 103/2023 : ಕಲಂ 279,  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಮಣಿಪಾಲ: ದಿನಾಂಕ 14/05/2023 ರಂದು ಸಂಜೆ ಪಿರ್ಯಾದಿದಾರರಾದ ಲೀಲಾವತಿ (55 ), ಗಂಡ : ದಿ. ಸದಾಶಿವ ಆಚಾರ್ಯ, ವಾಸ: ಅರುಣ ಪಾರ್ಮ ಹತ್ತಿರ ಪೆರಂಪಳ್ಳಿ ಕುಂಜಿಬೆಟ್ಟು ಪೋಸ್ಟ್‌ ಉಡುಪಿ ಇವರು  ತಮ್ಮ ಮನೆಯಲ್ಲಿರುವಾಗ ಅವರ ಮಗ ಕಿರಣ ತನ್ನ ಹೆಂಡತಿ ಗೀತಾ ಹಾಗೂ ಮಕ್ಕಳೊಂದಿಗೆ ಚಿಕ್ಕಮಗಳೂರಿನಿಂದ ಪಿರ್ಯಾದಿದಾರರ ಮನೆಗೆ ಬಂದಿದ್ದು, ಪಿರ್ಯಾದಿದಾರರ ಮಗ ಕಿರಣ ರಾತ್ರಿ 08:00 ಗಂಟೆಗೆ ಪಿರ್ಯಾದಿದಾರರಿಗೆ   ಅವಾಚ್ಯ ಶಬ್ದಗಳಿಂದ ಬೈದು ಮನೆಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು, ಜಾಗ ಮತ್ತು ಮನೆ ನನಗೆ ಸೇರಿದ್ದು ನೀನು ಇಲ್ಲಿ ಇರಬಾರದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ, ಅಲ್ಲದೇ ಕಿರಣ ನ ಹೆಂಡತಿ ಗೀತಾ ಪಿರ್ಯಾದಿದಾರರ ಸೊಂಟಕ್ಕೆ ಕಾಲಿನಿಂದ ತುಳಿದಿರುತ್ತಾರೆ,  ಕಿರಣ ಪಿರ್ಯಾದಿದಾರರಿಗೆ ಕೈ ಯಿಂದ ಬಲ ದವಡೆಗೆ ಬಲವಾಗಿ ಹೊಡೆದಿದ್ದು ಪಿರ್ಯಾದಿದಾರರು ಜೋರಾಗಿ ಬೊಬ್ಬೆ  ಹಾಕಿದ್ದು ತಲೆಯಿಂದ ರಕ್ತ ಸುರಿಯುತ್ತಿತ್ತು, ಚಿಕಿತ್ಸೆಯ ಬಗ್ಗೆ ಮುರುದಿನ ದಿನಾಂಕ 15/05/2023 ರಂದು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿರುವುದಾಗಿದೆ,  ಪಿರ್ಯಾದಿದಾರರು ವಾಸವಿರುವ ಮನೆ ಹಾಗೂ ಜಾಗವನ್ನು ಆತನ ಹೆಸರಿಗೆ ಮಾಡಿಕೊಡಬೇಕೆಂಬ ಉದ್ದೇಶದಿಂದ ಗಲಾಟೆ ಮಾಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2023 ಕಲಂ: 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  
  • ಕೋಟ: ಪಿರ್ಯಾದಿದಾರರಾದ ಹರೀಶ್‌ ನಾಯಕ್‌ (49), ತಂದೆ; ಸಿ. ಆರ್‌ ನಾಯಕ್‌, ವಾಸ; ವಾತ್ಸಲ್ಯ ಕಾರ್ಕಡ ಗ್ರಾಮ ಬ್ರಹ್ಮಾವರ ತಾಲೂಕು  ಹಾಗೂ ಆರೋಪಿತರಾದ 1.ಗುರುದಾಸ ನಾಯಕ್‌, 2 ವಿಜಯಲಕ್ಷ್ಮೀ ನಾಯಕ್‌, 3. ಚಂದನ ನಾಯಕ್‌ ಇವರಿಗೂ ನಡೆದಾಡಲು ಇರುವ ಜಂಟಿ ಹಕ್ಕಿನ ದಾರಿಯ ವಿಚಾರದಲ್ಲಿ ಈ ಮೊದಲಿನಿಂದಲೂ ತಕರಾರು ಇದ್ದು ಹಾಗೂ ಇದೇ ವಿಚಾರದಲ್ಲಿ ಸಿವಿಲ್‌ನ್ಯಾಯಾಲಯದಲ್ಲಿ ವ್ಯಾಜ್ಯವು ವಿಚಾರಣೆಗೆ ಬಾಕಿ ಇರುತ್ತದೆ. ಹೀಗಿರುವಾಗ ಆರೋಪಿಗಳು ತಮ್ಮ ಕೆಲಸದವರಾದ ಪಂಜು ಪೂಜಾರಿ, ವಸಂತ ಹಾಗೂ ಇತರರ ಸಹಾಯದಿಂದ  ಜಂಟಿ ಹಕ್ಕಿನ ದಾರಿಗೆ ನಡೆದಾಡದಂತೆ ಅಡ್ಡಲಾಗಿ ಶಿಲೆಕಲ್ಲು ರಾಶಿ ಹಾಕಿದ್ದು ಅಲ್ಲದೇ ಆ ಜಾಗಕ್ಕೆ ತ್ರಾಜ್ಯಗಳನ್ನು ಎಸೆದು ತೊಂದರೆ ಉಂಟು ಮಾಡಿದ್ದು, ಇದನ್ನು ಕೇಳಲು ಹೋದ ಪಿರ್ಯಾದಿದಾರರಿಗೆ ಆರೋಪಿಗಳಾದ ಗುರುದಾಸ ನಾಯಕ್‌, ಅವರ ಹೆಂಡತಿ ವಿಜಯಲಕ್ಷ್ಮೀ ನಾಯಕ್‌ ಹಾಗೂ ಮಗಳು ಚಂದನ ನಾಯಕ್‌ರವರು ಪಿರ್ಯಾದಿದಾರನ್ನು ತಡೆದು ನಿಲ್ಲಿಸಿ ಅವರನ್ನು ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2023 ಕಲಂ: 341, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಗಣೇಶ (22), ತಂದೆ: ನಾರಾಯಣ ಪೂಜಾರಿ, ವಾಸ: ಗಣೇಶ  ನಿಲಯ    ಗೋರಿಜೆಡ್ಡು  ಆಜ್ರಿ ಗ್ರಾಮ ಕುಂದಾಪುರ  ತಾಲೂಕು ಹಾಗೂ  ಅವರ ಮಾವ  ರಾಘವೇಂದ್ರ  ಪೂಜಾರಿ ಇವರು ದಿನಾಂಕ  15/05/2023  ರಂದು ರಾತ್ರಿ ಸಮಯ   ಮನೆಯಲ್ಲಿ  ಇರುವಾಗ  ಅವರ  ಮನೆಯ  ಸಾಕು  ನಾಯಿಗೆ  ಬೀದಿ ನಾಯಿಗಳು   ಅವರ  ಮನೆಯಿಂದ  ಸ್ವಲ್ಪ  ದೂರದಲ್ಲಿ ಇರುವ    ಕುಂದಾಪುರ  ತಾಲೂಕು  ಆಜ್ರಿ ಗ್ರಾಮದ  ಗೋರಿಜೆಡ್ಡು ಬ್ರಹ್ಮಲಿಂಗೇಶ್ವರ  ಸರ್ವಿಸ್  ಸ್ಟೇಶನ್  ಬಳಿ ಕಚ್ಚುತ್ತಿದ್ದು, ಈ   ಸಮಯ   ಅಲ್ಲಿಗೆ  ಹೋದಾಗ  ಅರೋಪಿಗಳಾದ 1.ನಾಗೇಶ  , 2.ಸದಾಶಿವ, 3.ವಿಷ್ನೇಶ, 4.ರಾಮಕೃಷ್ಣ ಎಲ್ಲರೂ  ಗೋರಿಜೆಡ್ಡು ಆಜ್ರಿ ಗ್ರಾಮ ಕುಂದಾಪುರ  ತಾಲೂಕು ಇವರು  ಸಮಾನ  ಉದ್ದೇಶದಿಂದ ಅವಾಚ್ಯ ಶಬ್ದದಿಂದ ಬೈದಿದ್ದು, ಈ ಸಮಯ ಪಿರ್ಯಾದಿದಾರರು  ಅವರಲ್ಲಿ ನಾವು ನಾಯಿ ಬಿಡಿಸಿಕೊಂಡು  ಹೋಗಲು  ಬಂದಿದ್ದು ಎಂದು  ಹೇಳಿದಾಗ  ಅವರು  ನಿಮ್ಮಗೆ  ಬುದ್ದಿ  ಕಲ್ಲಿಸುತ್ತೇವೆ, ಎಂದು  ಹೇಳಿ  ಪಿರ್ಯಾದಿದಾರರ  ಬಳಿ ಇದ್ದ  ಕತ್ತಿಯನ್ನು  ಕಸಿದುಕೊಂಡ  ಆರೋಪಿ  ನಾಗೇಶ   ರಾಘವೇಂದ್ರ ಪೂಜಾರಿ ಇವರ  ತಲೆಯ  ಹಿಂಬದಿಗೆ  ಹೊಡೆದ ಪರಿಣಾಮ  ಅವರ  ತಲೆಗೆ   ಗಂಭಿರ  ಸ್ವರೂಪದ  ರಕ್ತಗಾಯವಾಗಿರುತ್ತದೆ. ಆಗ ಅರೋಪಿಗಳು  ಸೇರಿ ಅವರನ್ನು ಕೊಂದು ಹಾಕುತ್ತೇವೆ ಎಂದು ಜೀವ ಬೆದರಿಕೆ  ಹಾಕಿರುತ್ತಾರೆ, ನಾಗರಾಜ ಪೂಜಾರಿ ಇವರ  ತಲೆಗೆ ಗಂಭಿರ ಸ್ವರೂಪದ  ಗಾಯವಾಗಿ  ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2023   ಕಲಂ: 326, 504, 506 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಅಪ್ಪು ಜತ್ತನ್‌(58),  ತಂದೆ:ದಿ. ಕುಪ್ಪ ಪೂಜಾರಿ, ವಾಸ:ಪಕ್ಕಿಬೆಟ್ಟು ಕಲ್ಯಾಣಪುರ ಮೂಡುತೋನ್ಸೆ ಗ್ರಾಮ ಇವರ ಮನೆಯು ಸೇರಿ ಸುಮಾರು 15 ರಿಂದ 20 ವಾಸದ ಮನೆಯಿದ್ದು  ಹತ್ತಿರದ ಜಾಗವು ಸುಮಾರು  45 ಸೆಂಟ್ಸ್‌ಇದ್ದು ಇದನ್ನು ಅನಸೂಯ ಇವರು  ಪ್ಲಾನೆಟ್‌ ಮಾರ್ಸ್ ಫೌಂಡೇಶನ್‌ಗೆ ನೀಡಿದ್ದು ಅದರಲ್ಲಿ ಅನಾಥ ಬಾಲಕಿಯರ ಹಾಸ್ಟೆಲ್‌ನಿರ್ಮಾಣ ಮಾಡುತ್ತಿದ್ದು ಅದಕ್ಕೊಸ್ಕರ ಬಾವಿಯನ್ನು ತೆಗೆದಿದ್ದು ಆ ಸಮಯ ಬಾವಿಯಲ್ಲಿ ಬಂಡೆ ಕಲ್ಲು ಬಂದ ಕಾರಣ ಅದನ್ನು ಒಡೆಯಲು  ಸಂಬಂಧ ಪಟ್ಟ ಇಲಾಖೆಯಿಂದ  ಅನುಮತಿ ಪಡೆಯದೆ ಮತ್ತು ಅಕ್ಕ ಪಕ್ಕದ ಮನೆಯವರ  ಒಪ್ಪಿಗೆಯನ್ನು ಪಡೆಯದೆ ಏಕಾ ಏಕಿ ದಿನಾಂಕ 11/05/2023 ರಂದು ಮದ್ಯಾಹ್ನ 02:00 ಗಂಟೆ ಸಮಯದಲ್ಲಿ ಸಿಡಿಮದ್ದು ಸ್ಪೋಟಕ ಬಳಸಿ ಬಂಡೆಯನ್ನು  ಒಡೆದಿರುತ್ತಾರೆ ಇದರಿಂದ ಪಿರ್ಯಾದಿದಾರರ ಮನೆಯ ಗೋಡೆಯು ಬಿರುಕು ಬಿಟ್ಟಿದ್ದು ಇದರಿಂದ ನಷ್ಟ ಉಂಟಾಗಿರುತ್ತದೆ, ಇನ್ನು ಕೂಡ  ಬಾವಿಯಲ್ಲಿ ಬಂಡೆ ಕಲ್ಲು ಇರುವುದರಿಂದ ಸಿಡಿಮದ್ದು ಬಳಸಿ ಬಂಡೆ ಒಡೆಯುವ ಸಾಧ್ಯತೆ ಇರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023 ಕಲಂ: 3,5 Explosive Substance Act-190̧8  286,427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-05-2023 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080