ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಗಣೇಶ (38), ತಂದೆ: ಅಣ್ಣು, ವಾಸ: ಆಶಾ ನಿಲಯ, ಗುಡ್ಡೆಯಂಗಡಿ, ಹೊಸೂರು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರು ದಿನಾಂಕ 08/05/2022ರಂ ದು ಬಾವಿ ಕೆಲಸದ ಬಗ್ಗೆ ಮನೆಯಿಂದ ಹೊರಟು ಗುಡ್ಡೆಯಂಗಡಿ ಬಳಿ ನಿಂತುಕೊಂಡಿರುವಾಗ ಬಾವಿ ಕೆಲಸದ ಬಗ್ಗೆ ಬಂದಂತಹ ಕ್ರೇನ್‌ ಚಾಲಕನು ದಾರಿ ತೋರಿಸುವಂತೆ ತಿಳಿಸಿದಾಗ ಪಿರ್ಯಾದಿದಾರರು ದಿಲ್‌ಶಾನ್‌ ಕುಮಾರ್‌ ಚಲಾಯಿಸಿಕೊಂಡು ಬಂದಿದ್ದ KA-19-MB-6764ನೇ ಕ್ರೆನ್‌ ಹತ್ತಿ ಕುಳಿತುಕೊಂಡು ಹೋಗುತ್ತಿರುವಾಗ ಕ್ರೈನ್‌ ಬೆಳಿಗ್ಗೆ 08:30 ಗಂಟೆಗೆ ಕುರ್ಪಾಡಿ ಶಾಲೆಯ ಬಳಿ ತಲುಪಿದಾಗ ಕ್ರೈನ್‌ ಚಾಲಕನು ತಾನು ಚಲಾಯಿಸಿಕೊಂಡಿದ್ದ ಕ್ರೈನ್‌ನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಬ್ರೇಕ್‌ ಹಾಕಿದಾಗ ಕ್ರೈನ್‌ ಚಾಲಕನ ಹತೋಟಿ ತಪ್ಪಿ ಪಲ್ಟಿಯಾಗಿ ಬಿದ್ದು ರಸ್ತೆ ಬದಿ ಇದ್ದ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದಿರುತ್ತದೆ. ಪಿರ್ಯಾದಿದಾರರು ಕ್ರೈನ್‌ನಿಂದ ಕೆಳಗಡೆ ಬಿದ್ದು, ಅವರ ಕಾಲು ಕ್ರೈನ್‌ನ ಅಡಿ ಸಿಕ್ಕಿ ಹಾಕಿಕೊಂಡಿರುತ್ತದೆ. ಕೂಡಲೇ ಅಲ್ಲಿ ಇದ್ದ ದೇವು ಹಾಗೂ ಪುಟ್ಟಣ್ಣ ಸೇರಿಕೊಂಡು ಪಿರ್ಯಾದಿದಾರರ ಕಾಲನ್ನು ಕ್ರೇನ್‌ನ ಅಡಿಯಿಂದ ಎಳೆದು ಉಪಚರಿಸಿರುತ್ತಾರೆ. ಈ ಅಪಘಾತದಿಂದ ಪಿರ್ಯಾದಿದಾರರ ಬಲಕಾಲಿನ ಪಾದದ ಮೇಲೆ ಮೂಳೆ ಮುರಿತದ ಒಳ ಜಖಂ ಉಂಟಾಗಿರುತ್ತದೆ. ಅವರನ್ನು ಪಿರ್ಯಾದಿದಾರರ ಬಾವ ರಾಜೇಶ ಹಾಗೂ ದೇವು ಸೇರಿಕೊಂಡು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಅಪಘಾತದ ದಿನ ಕ್ರೈನ್‌ ಮಾಲಕರು ಚಿಕಿತ್ಸೆಯ ವೆಚ್ಚ ಭರಿಸುವುದಾಗಿ ತಿಳಿಸಿ ನಂತರ ನೀಡದೇ ಇದ್ದುದರಿಂದ ಪಿರ್ಯಾದಿದಾರರು ತಡವಾಗಿ ದೂರು ನೀಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸುಲೋಚನಾ (40), ತಂದೆ : ಪ್ರಕಾಶ ರಾವ್,  ವಾಸ: ಸಮರ್ಪಣ ಕೋಟೆ ಗ್ರಾಮ ಕಟಪಾಡಿ ಕಾಪು ತಾಲೂಕು  ಉಡುಪಿ ಜಿಲ್ಲೆ ಇವರ ಗಂಡ ಪ್ರಕಾಶ ರಾವ್ (46) ಇವರು ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ವ್ಯವಹಾರದಲ್ಲಿ ತುಂಬಾ ನಷ್ಟವಾಗಿದ್ದು ಈ ಬಗ್ಗೆ ಕೆಲವು ಜನರಲ್ಲಿ ಸಾಲ ಮಾಡಿರುವ ವಿಚಾರ ಪಿರ್ಯಾದಿದಾರಿಗೆ ತಿಳಿದಿದ್ದು, ಪಿರ್ಯಾದಿದಾರರ ಗಂಡ ಪ್ರಕಾಶ ರಾವ್‌ ರವರು ದಿನಾಂಕ 09/05/2022 ರಂದು ಬೆಳಗ್ಗೆ 09:00 ಗಂಟೆಗೆ ಕೋಟದ ಗರಿಕೆಮಠ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಪಿರ್ಯಾದಿದಾರರಲ್ಲಿ ಹೇಳಿ ಹೋಗಿದ್ದು ಸಂಜೆಯಾದರೂ ಮನೆಗೆ ಬಂದಿರುವುದಿಲ್ಲ. ಮರುದಿನ ಬೆಳಗ್ಗೆ ಮನೆಗೆ ಬಾರದೇ ಇರುವುದರಿಂದ ಪಿರ್ಯಾದಿದಾರರು ಅವರ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದ್ದಲ್ಲಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಪಿರ್ಯಾದಿದಾರರ ಗಂಡ ಈ ಮೊದಲು ಜನವರಿ ತಿಂಗಳಲ್ಲಿ ಒಮ್ಮೆ ಮನೆಬಿಟ್ಟು ಹೋದವರು ವಾಪಾಸ್ಸು ಬಂದಿದ್ದು ಅದೇ ರೀತಿ ವಾಪಾಸು ಬರಬಹುದೆಂದು, ಅಲ್ಲದೇ ಪಿರ್ಯಾದಿದಾರರು ಅವರ ಗಂಡನವರ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿ ದೂರು ಕೊಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  47/2022  ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ರೆನಾಲ್ಡ್ ರವಿರಾಜ್ ಸೋನ್ಸ್ (36), ತಂದೆ: ಜೋಸೆಫ್ ಸೋನ್ಸ್, ವಾಸ: ಕನ್ನಡರಬೆಟ್ಟು, ಚಂದ್ರನಗರ, ಕಳತ್ತೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ  ಅಣ್ಣ ಸುನೀಲ್ ದೇವಪ್ರಸಾದ ಸೋನ್ಸ್ (38) ರವರಿಗೆ ವಿಪರೀತ ಶರಾಬು ಕುಡಿಯುವ ಚಟ ಹಾಗೂ ಮಾನಸಿಕ ಖಾಯಿಲೆಯಿದ್ದು, ಹೆಂಡತಿ ಬಿಟ್ಟು ಹೋಗಿರುತ್ತಾರೆ. ಇದೇ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16/05/2022 ರಂದು ಬೆಳಿಗ್ಗೆ 11:00 ಗಂಟೆಯಿಂದ 12:30 ಗಂಟೆಯ ನಡುವಿನ ಅವಧಿಯಲ್ಲಿ ಕಳತ್ತೂರು ಗ್ರಾಮದ ಕನ್ನಡರಬೆಟ್ಟುವಿನ ಮನೆಯಲ್ಲಿ ಬಚ್ಚಲು ಮನೆಯ ಮಾಡಿನ ಜಂತಿಗೆ ನೈಲಾನ್ ಶಾಲನ್ನು ಬಿಗಿದು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12 /2022  ಕಲಂ: 174  CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಮಂಜಿ ಕುಲಾಲ್ತಿ (70), ಗಂಡ: ಕಾಳ ಕುಲಾಲ, ವಾಸ: ಬೆಳ್ಳಾಲ ರಾಗಿಜೆಡ್ಡು, ಮೂಡುಮುಂದ, ಬೆಳ್ಳಾಲ ಗ್ರಾಮ, ಕುಂದಾಪುರ ತಾಲೂಕು ಇವರ ಗಂಡ ಕಾಳ ಕುಲಾಲರವರಿಗೆ  ಕುಂದಾಪುರ ತಾಲೂಕು ಬೆಳ್ಳಾಲ ಗ್ರಾಮದ, ಸರ್ವೇ ನಂ 120/1P5, ರಲ್ಲಿ 2.56 ಎಕರೆ ಪುಂಜ ಸ್ಥಳವನ್ನು ಕುಂದಾಪುರ ತಹಶೀಲ್ದಾರರು N.CR.D.R ನಂ 429/1998-1999 ರಂತೆ ಮಂಜೂರು ಮಾಡಿದ್ದು ಪಿರ್ಯಾದಿದಾರರು ಹಾಗೂ ಅವರ ಗಂಡ  ಭೂಮಿಯನ್ನು ಅನುಭವಿಸಿಕೊಂಡಿರುವುದಾಗಿದೆ. ಹೀಗಿರುತ್ತಾ ದಿನಾಂಕ 07/02/2014 ರಂದು ಕುಂದಾಪುರ ಸಬ್ ರಿಜಿಸ್ಟ್ರಾರ್ ಆಫೀಸಿನ 3 ನೇ ಪುಸ್ತಕದ ದಸ್ತಾವೇಜು ನಂ KUN-3-00135-2013-2014 ಆಗಿ ಸಿಡಿ ನಂ KUND 163 ರಂತೆ ಪಿರ್ಯಾದಿದಾರರ ಗಂಡನಿಗೆ ಆರೋಪಿತರಾದ 1) ನಾಗು ಕುಲಾಲ್ತಿ (50), ಗಂಡ: ವಿ.ಆರ್ ಸೂರ್ಯ ಕುಲಾಲ, ವಾಸ: ರಾಗಿ ಜೆಡ್ಡು, ಮೂಡು ಮುಂದ, ಬೆಳ್ಳಾಲ ಗ್ರಾಮ,ಕುಂದಾಪುರ ತಾಲೂಕು, 2) ವಿ ಆರ್ ಸೂರ್ಯ ಕುಲಾಲ (55), ತಂದೆ: ರಾಮ ಕುಲಾಲ, ವಾಸ: ರಾಗಿ ಜೆಡ್ಡು, ಮೂಡು ಮುಂದ, ಬೆಳ್ಳಾಲ ಗ್ರಾಮ,ಕುಂದಾಪುರ ತಾಲೂಕು ಇವರು ಪುಸಲಾಯಿಸಿ, ವಂಚಿಸಿ ಮೋಸದಿಂದ ವೀಲುನಾಮೆಯನ್ನು ಬರಿಸಿಕೊಂಡು ಹಾಗೂ ಮೋಸದ ಒಪ್ಪಿಗೆ ಪತ್ರವನ್ನು ಸೃಷ್ಠಿಸಿ ದಿನಾಂಕ 16/10/2017 ರಂದು ಕುಂದಾಪುರ ತಹಶೀಲ್ದಾರರ ಮುಂದೆ ಹಾಜರು ಪಡಿಸಿ ಮೋಸದಿಂದ ಖಾತೆ ಬದಲಾವಣೆ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರು ಒಪ್ಪಿಗೆ ನೀಡಿದ್ದಾರೆ ಎನ್ನುವ ಒಪ್ಪಿಗೆ ಪತ್ರದಲ್ಲಿರುವ ಹೆಬ್ಬೆಟ್ಟಿನ ಗುರುತು ಪಿರ್ಯಾದಿದಾರರದ್ದಾಗಿರುವುದಿಲ್ಲ ಅಲ್ಲದೇ ಪಿರ್ಯಾದಿದಾರರು ಆಸ್ತಿ ಪರಭಾರೆಗೆ ಯಾವುದೇ ಒಪ್ಪಿಗೆ ಸೂಚಿಸಿರುವುದಿಲ್ಲವಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2022 ಕಲಂ: 451, 416, 417, 419, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 17-05-2022 09:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080