ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಚಂದ್ರ (51), ಕಾರ್ಯದರ್ಶಿ ಗ್ರಾಮ ಪಂಚಾಯತ್ ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕು ಇವರು ಕಳೆದ 9 ವರ್ಷ ದಿಂದ ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 16/05/2022 ರಂದು ಪಂಚಾಯತ್ ಗೆ ಸಾರ್ವಜನಿಕರು ಕರೆ ಮಾಡಿ ತೆಕ್ಕಟ್ಟೆ ಪಂಚಾಯತ್ ವ್ಯಾಪ್ತಿಯಲ್ಲಿ ಅಳವಡಿಸಿದ ಸೋಲಾರ್ ವಿದ್ಯುತ್ ದೀಪ ಒಂದು ವಾರದಿಂದ ಹಾಳಾಗಿರುವ ಬಗ್ಗೆ ತಿಳಿಸಿದ್ದು  ಪಿಡಿಓ ರವರು ಹೋಗಿ ನೋಡಿ ಬರುವಂತೆ ತಿಳಿಸಿದ ಮೇರೆಗೆ ಪಂಚಾಯತ್ ನ ಸಿಬ್ಬಂದಿಯವರೊಂದಿಗೆ ಹೋಗಿ ನೋಡಿದಾಗ ಕೊಮೆ ಬೊಬ್ಬರ್ಯ ದೇವಸ್ಥಾನದ ಬಳಿ ಕಂಬಕ್ಕೆ ಅಳವಡಿಸಿದ ಬಾಕ್ಸನಲ್ಲಿ  ಸೋಲಾರ್  ಬ್ಯಾಟರಿ ಇಲ್ಲದೇ ಇದ್ದು ನಂತರ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗಡೆ ಇರುವ ಸೊಲಾರ್ ಕಂಬದ ಬಳಿ ಇರುವ ಸೋಲಾರ್ ಬ್ಯಾಟರಿ  ಇರುವುದಿಲ್ಲ.  ನಂತರ ತೆಕ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದ  ಬಳಿ ಮತ್ತು ರಾಘವೇಂದ್ರ ಸ್ವಾಮಿ ಮಠದ ಬಳಿ ,ಹಾಗೂ ಕೊಮೆ ಮಾರ್ಸ ಮನೆ ಬಳಿಯಲ್ಲಿ ,ತೆಕ್ಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಬಳಿ ,ತೆಕ್ಕಟ್ಟೆ ಸುನಾಮಿ ಕಟ್ಟಡದ ಬಳಿ ರಾಘವೇಂದ್ರ ಮಠಕ್ಕೆ ಹೋಗುವ ಮಾರ್ಗದಲ್ಲಿ ಅಳವಡಿಸಿದ ಸೋಲಾರ ನ್ನು ಪರಿಶೀಲಿಸಿದಾಗ ಸೋಲಾರ್ ಬ್ಯಾಟರಿ ಕಾಣದೇ ಇದ್ದು ಯಾರೋ ಕಳ್ಳರು ದಿನಾಂಕ 10/05/2022 ರಿಂದ 16/05/2022 ರ ಬೆಳಿಗ್ಗೆ 11:00 ಗಂಟೆಯ ಮಧ್ಯಾವಧಿಯಲ್ಲಿ  ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.  ಒಟ್ಟು 8 ಸೋಲಾರ್ ಬ್ಯಾಟರಿಗಳು ಕಳ್ಳತನವಾಗಿದ್ದು ಬ್ಯಾಟರಿಯ ಮೌಲ್ಯ  32,000/- ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 67/2022 ಕಲಂ:379 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿದಾರರಾದ ಸದಾಶಿವ ಗೊಂಡ (24), ತಂದೆ: ಸೊಮಯ್ಯ ಗೊಂಡ, ವಾಸ: ಮಾರುಕೆರೆ, ಕಿತ್ರೆ ಗ್ರಾಮ, ಭಟ್ಕಳ ತಾಲೂಕು ಉತ್ತರ ಕನ್ನಡ ಜಿಲ್ಲೆ ಇವರ ಅಣ್ಣ ಚಂದ್ರು ಗೊಂಡ(42) ಇವರು ದಿನಾಂಕ 04/05/2022 ರಂದು ಮಲ್ಪೆಗೆ ಮೀನುಗಾರಿಕೆ ಕೆಲಸದ ಬಗ್ಗೆ ಬಂದಿದ್ದು ದಿನಾಂಕ 15/05/2022 ರಂದು ರಾತ್ರಿ 11:15 ಸಮಯಕ್ಕೆ ಸಮುದ್ರದಲ್ಲಿ ಮೀನುಗಾರಿಕೆ ಬೋಟ್ ನಲ್ಲಿ ಕೆಲಸ ಮಾಡಿಕೊಂಡಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದು ಹುಡುಕಾಡಿದರೂ ಸಿಗದೇ ಇದ್ದು ದಿನಾಂಕ 17/05/2022 ರಂದು ಬೆಳಿಗ್ಗೆ 05:30 ಗಂಟೆಗೆ ಚಂದ್ರು ಗೊಂಡ ರವರ ಮೃತ ಶರೀರವು ಮಲ್ಪೆ ಲೈಟ್ ಹೌಸ್ ಬಳಿ ದೊರೆತಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 28/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 16/05/2022 ರಂದು ರಾತ್ರಿ 09:15 ಗಂಟೆಗೆ ಕಂದಾವರ ಗ್ರಾಮದ ಸಾಂತಾವರ ಬಳಿ ಹಾಡಿಯಲ್ಲಿ  ಪಿರ್ಯಾದಿದಾರರಾದ ಭಾಸ್ಕರ ದೇವಾಡಿಗ (45), ತಂದೆ: ಚಂದಯ್ಯ ದೇವಾಡಿಗ, ವಾಸ: ಅರಿಕ್ಲು ಬೆಟ್ಟು, ಚಾಂತಾರು ಗ್ರಾಮ ಬ್ರಹ್ಮಾವರ ತಾಲೂಕು ಇವರ ಅಣ್ಣ ಶೇಖರ ದೇವಾಡಿಗ (48) ರವರು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿ  ಅಸ್ವಸ್ಥರಾಗಿದ್ದು ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುತ್ತಿರುವುದಾಗಿ ಪಿರ್ಯಾದಿದಾರರ ಹೆಂಡತಿ ಮನೆಯರು ತಿಳಿಸಿದ ಮೇರೆಗೆ  ಪಿರ್ಯಾದಿದಾರರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಂದು ನೋಡುವಾಗ ಶೇಖರ ದೇವಾಡಿಗ(48) ರವರು ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಅಪಾದಿತರಾದ 1. ಸುರೇಶ್ ಸುಂದರ ಶೆಟ್ಟಿ, 2. ಭಾಸ್ಕರ ಬೈರಿ ಶೆಟ್ಟಿ, 3. ಬಾಲು ಬಂದುಭಿಸೆ, 4. ಸತೀಶ್ ಸುಂದರ್ ಶೆಟ್ಟಿ, 5. ರಮೇಶ್ ಕುಮಾರ್ ಗೋಮಾಲ್ ಇವರು ಕಾರ್ಕಳ ಕಸಬಾದಲ್ಲಿರುವ ಸಮೃದ್ಧಿ ಹಿಲ್ಸ್ ಎಂಬ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಪ್ರವರ್ತಕರಾಗಿರುತ್ತಾರೆ. ಅಪಾದಿತರು ಸಮೃದ್ಧಿ ಹಿಲ್ಸ್ ನ ಅಪಾರ್ಟ್ಮೆಂಟ್ ನಂಬ್ರ 505, 603, 705, 805 ನ್ನು ಖರೀದಿಸುವಂತೆ ಪಿರ್ಯಾದಿದಾರರಾದ ಶ್ರೀಮತಿ ಉಷಾ ಜಯಂತ್ (53), ಗಂಡ: ದಿ. ಜಯಂತ್ ಕೆ, ವಾಸ: ಶಿವಕೃಪಾ, ತಾಲೂಕು ಆಫೀಸು ಬಳಿ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರಿಗೆ ವಿನಂತಿಸಿದ್ದು ಹಾಗೂ ಕಟ್ಟಡದ ದಾಖಲೆಗಳು ಸರಿಯಾಗಿದೆ ಎಂದು ನಂಬಿಸಿದ್ದು ರೂಪಾಯಿ 72,00,000/- ರೂಪಾಯಿಗೆ ಖರೀದಿಸಲು ನಿರ್ಧರಿಸಿ ಕ್ರಯ ಕರಾರು ಮಾಡಿಕೊಂಡು ಸಂಪೂರ್ಣ ಮೊತ್ತವನ್ನು ಪಾವತಿಸಿರುತ್ತಾರೆ. ಹಾಗೂ ಪಿರ್ಯಾದಿದಾರರ ಗಂಡ ಮೃತ ಜಯಂತ್ ರವರು ಫ್ಲಾಟ್ ನಂಬ್ರ 102, 203, 307, ನ್ನು ದಿನಾಂಕ 20/01/2012 ರಂದು ಖರೀದಿಸಲು.ಕ್ರಯ ಕರಾರು ಮಾಡಿಕೊಂಡಿರುತ್ತಾರೆ ಹಾಗೂ ಕಾರ್ಕಳ ಕಸಬಾದ ಸ ನಂ 123/1ಎ2, ಸ ನಂ 123/1ಬಿ2, ಸ ನಂ 123/11ಬಿ .  ಸ್ಥಳ ಹಾಗೂ ಸಮೃದ್ಧಿ ಹಿಲ್ಸ್ ನ ಅಂಗಡಿ ಕೋಣೆ ಸಂಖ್ಯೆ 1 ಮತ್ತು 2 ನ್ನು ಖರೀದಿ  ಮಾಡಲು ಹಂತ ಹಂತವಾಗಿ ದಿನಾಂಕ 20/01/2012 ರಿಂದ 20/08/2013 ವರೆಗೆ ರೂಪಾಯಿ 58,00,000/ನ್ನು ಪಾವತಿಸಿರುತ್ತಾರೆ. ಅಪಾದಿತರು 2016 ರ ಎಪ್ರಿಲ್  ಒಳಗೆ ನಿರ್ಮಾಣ ಕಾರ್ಯ ಪೂರ್ತಿಗೊಳಿಸುವುದಾಗಿ ನಂಬಿಸಿ ಕಾಮಗಾರಿ ಪೂರ್ತಿಗೊಳಿಸದೇ ಪಿರ್ಯಾದಿದಾರರಿಗೆ ಮತ್ತು ಅವರ ಗಂಡನಿಗೆ ಮೋಸ ಮತ್ತು ವಂಚನೆಯನ್ನು ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2022  ಕಲಂ: 406, 420, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಪೂರ್ಣಿಮಾ(37), ಗಂಡ: ಶ್ರೀ ವೆಂಕಟ ರಾಜ್, ವಾಸ: ಸಾಯಿ  ಗಣೇಶ್ ಪ್ಲಾಟ್ ನಂಬ್ರ:103, ಅಂಬಾಗಿಲು,ಉಡುಪಿ ತಾಲೂಕು ಇವರಿಗೆ ಆಪಾದಿತ ವೆಂಕಟರಾಜ್ ರೊಂದಿಗೆ 14 ವರ್ಷದ ಹಿಂದೆ ಮದುವೆ ಆಗಿದ್ದು  ಮಗನಿರುತ್ತಾನೆ.  2-3 ವರ್ಷದಿಂದ ಪಿರ್ಯಾದಿದಾರರಿಗೂ ಆಪಾದಿತನಿಗೂ ವೈ ಮನಸ್ಸು ಇದ್ದು 1 ನೇ  ಆಪಾದಿತ ಪಿರ್ಯಾದಿದಾರರಿಗೆ  ಹಾಗೂ ಮಗನಿಗೆ ವಸ್ತ್ರ ಬಟ್ಟೆಗೂ  ಸರಿಯಾಗಿ ಖರ್ಚಿಗೆ ಹಣ ಕೊಡುತ್ತಿರಲಿಲ್ಲ.  ಪಿರ್ಯಾದಿದಾರರು ಎನಾದರೂ ಮಾತಾನಾಡಲು ಹೋದರೆ ಅವಾಚ್ಯ ಶಬ್ದಗಳಿಂದ ಬೈಯುವುದು, ಹೊಡೆಯುವುದು  ಮಾಡುತ್ತಿದ್ದರು. ಇದರಿಂದ ಬೇಸತ್ತು ಪಿರ್ಯಾದಿದಾರರು ಸುಮಾರು 3 ತಿಂಗಳಿಂದ ತನ್ನ ಮಗನೊಂದಿಗೆ ತವರು ಮನೆಗೆ ಬಂದು ವಾಸ ಮಾಡಿಕೊಂಡಿರುವುದಾಗಿದೆ. ದಿನಾಂಕ 16/05/2022 ರಂದು ಬೆಳಿಗ್ಗೆ 11:00 ಗಂಟೆಗೆ  ಪಿರ್ಯಾದಿದಾರರು ಬಟ್ಟೆ ತರಲು  ಗಂಡನ ಮನೆಯಾದ ತಾಂಗದಗಡಿ ಹೋಗಿ ಮನೆಯೊಳಗೆ ಇದ್ದ ಗೋಡ್ರೇಜ್ ನ ಬಾಗಿಲು ತೆಗೆಯುತ್ತಿದ್ದಾಗ ಪಿರ್ಯಾದಿದಾರರ ಗಂಡ  ಬಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ದೂಡಿದ್ದು,  2 ನೇ ಆಪಾದಿತ ನಾಗರಾಜ  ಪಿರ್ಯಾದಿದಾರರನ್ನು ದೂಡಿರುತ್ತಾರೆ. 3 ನೇ ಆಪಾದಿತೆ ಶ್ರೀಮತಿ ಗೋಪಿ ನೆಲ ಒರೆಸುವ ಕೋಲಿನಿಂದ  ಪಿರ್ಯಾದಿದಾರರ ತಲೆಗೆ ಹೊಡೆದಿದ್ದು ಪಿರ್ಯಾದಿದಾರರು  ತಲೆ ತಿರುಗಿ ಬಿದ್ದು ಪಿರ್ಯಾದಿದಾರರ ಜೊತೆಯಲ್ಲಿ ಬಂದಿದ್ದ  ತಂಗಿ ಹಾಗೂ ಮಗ ಪಿರ್ಯಾದಿದಾರರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು   ಒಳರೋಗಿಯಾಗಿ  ದಾಖಲಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2022  ಕಲಂ: 498(A), 323, 324, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 17-05-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080