ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 16/05/2021 ರಂದು ಬೆಳಿಗ್ಗೆ 11:00 ಗಂಟೆಗೆ  ಕುಂದಾಪುರ  ತಾಲೂಕು ಕಸಬಾ   ಗ್ರಾಮದ, ಶಾಸ್ತ್ರಿಸರ್ಕಲ್‌‌ ಫ್ಲೈಓವರ್  ಹತ್ತಿರದ   KSRTC  ಬಸ್‌‌ನಿಲ್ದಾಣದ ಬಳಿ NH 66 ರಸ್ತೆಯಲ್ಲಿ, ಆಪಾದಿತ ಸುಮಂತ  KA-25-Z-2351 ನೇ ಇನ್ನೋವಾ ಕಾರಿನಲ್ಲಿ  ಪಿರ್ಯಾದಿದಾರರಾದ ರತ್ನಾಕರ ಪೂಜಾರಿ (54), ತಂದೆ: ಅಣ್ಣಪ್ಪ ಪೂಜಾರಿ, ವಾಸ: ಕಂಟದ ಮನೆ ಹಟ್ಟಿಕುದ್ರು ಬಸ್ರೂರು ಗ್ರಾಮ ಕುಂದಾಪುರ ತಾಲೂಕು, ಅವರ ಹೆಂಡತಿ ಶಾರದ,ಮಗಳಾದ ಅಕ್ಷತಾ ಹಾಗೂ  ಸಂಬಂದಿಕರಾದ ವಸಂತಿ,  ಸುಷ್ಮಾ, ರಕ್ಷಾ,, ಪ್ರೇಮಾ, ರವಿ ಪೂಜಾರಿ ರವರನ್ನು  ಕುಳ್ಳಿರಿಸಿಕೊಂಡು  ಸಾಸ್ತಾನ ಕಡೆಯಿಂದ  ಬಸ್ರೂರು ಹಟ್ಟಿಕುದ್ರು  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಬದಿಗೆ  ಚಲಾಯಿಸಿ,  NH 66 ರಸ್ತೆಯ ಎಡಬದಿಯ  ತಡೆಗೋಡೆಗೆ  ಡಿಕ್ಕಿ ಹೊಡೆದು ಬಳಿಕ ಬಲಮಗ್ಗುಲಾಗಿ  ರಸ್ತೆಯಲ್ಲಿ  ಉರುಳಿ ಬಿದ್ದ  ಪರಿಣಾಮ  ಕಾರಿನ ಬಲಬದಿಯಲ್ಲಿ ಕುಳೀತುಕೊಂಡಿದ್ದ  ವಸಂತಿ ರವರು ಕಾರಿಂದ  ರಸ್ತೆಗೆ  ಎಸೆದು ಬಿದ್ದು, ವಸಂತಿರರವರಿಗೆ  ಎದೆಗೆ ಹಾಗೂ ಸೊಂಟಕ್ಕೆ ಗಂಭೀರ ಒಳಜಖಂ ಗಾಯ ಹಾಗೂ ರತ್ನಾಕರ ಪೂಜಾರಿ,ಶಾರದ, ಅಕ್ಷತಾ,ಸುಷ್ಮಾ,ರಕ್ಷಾ,ಪ್ರೇಮಾ,ರವಿಪೂಜಾರಿಯವರಿಗೆ ಗಾಯ ನೋವಾಗಿ ಚಿಕಿತ್ಸೆಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ  ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿ, ಗಂಭೀರ  ಗಾಯಗೊಂಡ   ವಸಂತಿ ಯವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ  ಕೆ.ಎಂಸಿ  ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು, ವಸಂತಿಯವರು  ಚಿಕಿತ್ಸೆ  ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2021 ಕಲಂ: 279, 337, 304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಜುಬೇದ (40), ಗಂಡ : ಶಾಬನ್, ವಾಸ : ಮಣೀಪುರ ಕೋಟೆ, ಮಣೀಪುರ ಗ್ರಾಮ ಇವರ ಮಗಳು ಸುಹೇಬತ್ ಅಸ್ಲಮೀಯಾ(16) ರವರು ಒರಟು ಸ್ವಭಾವದವಳಾಗಿದ್ದು, ಯಾವಾಗಲೂ ಮೊಬೈಲ್‌ನಲ್ಲಿ ಆಟ ಆಡುತ್ತಿದ್ದು, ಈ ಬಗ್ಗೆ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ಗಂಡ ಬುದ್ದಿ ಹೇಳಿದರೂ ಕೇಳದೇ ಇದ್ದು, ಈ ಬಗ್ಗೆ ಮನೆಯಲ್ಲಿ ಹಠ ಮಾಡಿ ಮನೆಯಲ್ಲಿ ಕುಳಿತು ಕೊಳ್ಳುತ್ತಿದ್ದು, ದಿನಾಂಕ 15/05/2021 ರಂದು ರಾತ್ರಿ 8.00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಮಗಳು ಮನೆಯಲ್ಲಿ ಮೊಬೈಲ್ ಹಿಡಿದುಕೊಂಡು ಆಟ ಆಡುತ್ತಿದ್ದು, ಈ ಬಗ್ಗೆ ಪಿರ್ಯಾದಿದಾರರು ಮೊಬೈಲ್ ನಲ್ಲಿ ಆಟ ಆಡದಂತೆ  ಬುದ್ದಿ ಹೇಳಿ ಮೊಬೈಲ್‌ನ್ನು ಅವಳಿಂದ ತೆಗೆದುಕೊಂಡಿದ್ದು, ಆಗ ಅವಳು ಹಠ ಮಾಡಿ  ಮನೆಯಲ್ಲಿ ಕುಳಿತುಕೊಂಡಿದ್ದು, ಪಿರ್ಯಾದಿದಾರರು ನಮಾಜ್‌ ಗೆ ಹೋಗಿದ್ದು ಪಿರ್ಯಾದಿದಾರರ ಗಂಡ ಸ್ನಾನ ಮಾಡುತ್ತಿದ್ದು, ನಮಾಜ್ ಮುಗಿಸಿ ರಾತ್ರಿ 8:30 ಗಂಟೆಗೆ ಹೊರಗೆ ಬಂದು ನೋಡುವಾಗ ಪಿರ್ಯಾದಿದಾರರಿಗೆ ಮಗಳು ಕಾಣದೇ ಇದ್ದು, ಪಿರ್ಯಾದಿದಾರರು ಗಂಡನೊಂದಿಗೆ ಹುಡುಕಾಡಿದಲ್ಲಿ ಮನೆಯಿಂದ 200 ಮೀ. ದೂರದಲ್ಲಿರುವ ಸರ್ಕಾರಿ ಬಾವಿ ಹತ್ತಿರ ಜನ ಸೇರಿದ್ದು, ಅಲ್ಲಿ ಹೋಗಿ ಬಾವಿಯನ್ನು ನೋಡುವಾಗ ರಾತ್ರಿ 9:00 ಗಂಟೆಗೆ ನೋಡುವಾಗ ಪಿರ್ಯಾದಿದಾರರ ಮಗಳು ಸುಹೇಬತ್ ಅಸ್ಲಮೀಯಾ ಬಾವಿಯ ನೀರಿನಲ್ಲಿ ಮುಳುಗಿರುವುದು ತಿಳಿದು ಬೊಬ್ಬೆ ಹಾಕಿದ್ದು ಅಗ್ನಿ ಶಾಮಕದಳದವರು ಬಂದು ಬಾವಿಯಿಂದ ಮೇಲಕ್ಕೆತ್ತಿ ನೋಡುವಾಗ ಪಿರ್ಯಾದಿದಾರರ ಮಗಳು ಸುಹೇಬತ ಅಸ್ಲಮೀಯಾ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಅಮಾಸೆಬೈಲು: ದಿನಾಂಕ 15/05/2021 ರಂದು ಸುಬ್ಬಣ್ಣ ಬಿ, ಪೊಲೀಸ್ ಉಪನಿರೀಕ್ಷಕರು, ಅಮಾಸೆಬೈಲು ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10/05/2021 ರಿಂದ 24/05/2021  ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು  ಮದ್ಯಾಹ್ನ 14:30  ಗಂಟೆಗೆ ಶೇಡಿಮನೆ ಗ್ರಾಮದ ಗೋಳಿಯಂಗಡಿ ಕ್ರಾಸ್ ಬಳಿ ಆಪಾದಿತ ಶೇಖರ (35), ತಂದೆ: ಗಣಪಯ್ಯ ಆಚಾರಿ ಮೂಡಬೆಟ್ಟು ತೊಂಬತ್ತು  ಕ್ರಾಸ್ ಹೆಂಗವಳ್ಳಿ  ಗ್ರಾಮ , ಕುಂದಾಪುರ ತಾಲೂಕು ಇವರು KA-20-Y-0423 Heo Honda Splender ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. ಮೇಲ್ಕಂಡ ದ್ವಿಚಕ್ರ ವಾಹನ ಸವಾರ  ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು: ದಿನಾಂಕ 16/05/2021 ರಂದು ಸುಬ್ಬಣ್ಣ ಬಿ, ಪೊಲೀಸ್ ಉಪನಿರೀಕ್ಷಕರು, ಅಮಾಸೆಬೈಲು ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10/05/2021 ರಿಂದ 24/05/2021  ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು  ಮದ್ಯಾಹ್ನ 14:00 ಗಂಟೆಗೆ ಅಮಾಸೆಬೈಲು ಗ್ರಾಮದ ಮಚ್ಚಟ್ಟು  ಕ್ರಾಸ್  ಬಳಿ ಆಪಾದಿತ ಸುಧಿರ್ ಪೂಜಾರಿ (35), ತಂದೆ:ಸಂಜೀವ ಪೂಜಾರಿ,  ತೊಂಬತ್ತು ಗರನಕಟ್ಟೆ,  ಹೆಂಗವಳ್ಳಿ.ಗ್ರಾಮ ಕುಂದಾಪುರ ತಾಲೂಕು ಇವರು  KA-20-EU-7512  Honda Active Scooty ಯನ್ನು ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. ಮೇಲ್ಕಂಡ ದ್ವಿಚಕ್ರ ವಾಹನ ಸವಾರ ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021 ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ದಿನಾಂಕ 10/05/2021 ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 24/05/2021ರ ಬೆಳಿಗ್ಗೆ 6:00 ಗಂಟೆಯ ವರೆಗೆ ಲಾಕ್ ಡೌನ್ ಘೋಷಿಸಿದ್ದು ಈ ಬಗ್ಗೆ ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ದಿನಾಂಕ 16/05/2021 ರಂದು 12:00 ಗಂಟೆಯಿಂದ 13:00 ಗಂಟೆಯವರೆಗೆ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಏಣಗುಡ್ಡೆ ಗ್ರಾಮದ ಕಟಪಾಡಿ ಜಂಕ್ಷನ್ ನಲ್ಲಿ  ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ  ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ ಗುಂಪು ಸೇರಿ  ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  1) ಕೆ.ಎ. 19 ಇ. ಎ. 8885 ನೇದರ ಮೋಟಾರು ಸೈಕಲ್ ಸವಾರ ಮುಸ್ತಾಕ್ ಪ್ರಾಯ : 50 ವರ್ಷ ತಂದೆ : ಸುಕೂರ್ ವಾಸ : ದಿನಾರ್ ಹೌಸ್ ಮಲ್ಲಾರು ಗ್ರಾಮ, 2) ಕೆ.ಎ. 20 ಇ. ಎಮ್. 1001 ನೇದರ ಮೋಟಾರು ಸೈಕಲ್ ಸವಾರ ನಿಕಿ ಪೂಜಾರಿ ತಂದೆ : ಸೋಮಪ್ಪ ವಾಸ : ಸರ್ಕಾರಿ ಶಾಲೆಯ ಹತ್ತಿರ, ಕಾಪು ಪಡು ಗ್ರಾಮ, ಕಾಪು ತಾಲೂಕು,  3) ಕೆ.ಎ. 20 ಇ. ಎಮ್. 4429 ನೇದರ ಸ್ಕೂಟರ್ ಸವಾರ ಇಕ್ಬಾಲ್ ಪ್ರಾಯ : 25 ವರ್ಷ ತಂದೆ : ಮಹಮ್ಮದ್ ವಾಸ : ಫಾತಿಮಾ ಮಂಜಿಲ್ ಅಚ್ಚಡ ಮೂಡುಬೆಟ್ಟು ಗ್ರಾಮ ಕಟಪಾಡಿ  ಮತ್ತು ಸಹ ಸವಾರನಾದ ಆದಮ್ ಪ್ರಾಯ : 25 ವರ್ಷ ತಂದೆ : ಹಮೀದ್ ವಾಸ : ಆದಮ್ ಮಂಝಿಲ್ ಮಸೀದಿಯ ಹತ್ತಿರ ಮಣಿಪುರ ಗ್ರಾಮ ಮಣಿಪುರ ವೆಸ್ಟ್ ಉಡುಪಿ ತಾಲೂಕು, 4) ಕೆ.ಎ. 20 ಇ. ಆರ್. 8494 ನೇದರ ಸ್ಕೂಟರ್ ಸವಾರ ಹಿಲಾಲ್ ಪ್ರಾಯ 24 ವರ್ಷ ತಂದೆ : ಹನೀಫ್ ವಾಸ : ಅಚ್ಚಡ ಕ್ರಾಸ್ ಮೂಡಬೆಟ್ಟು ಗ್ರಾಮ ಕಟಪಾಡಿ, ಮತ್ತು ಸಹ ಸವಾರನಾದ ಮಹಮ್ಮದ್ ಸುಹೈಲ್ ಪ್ರಾಯ : 25 ವರ್ಷ ತಂದೆ : ಸಯ್ಯದ್ ಮಹಮ್ಮದ್ ವಾಸ : ಅರಫ್ ಮಸೀದಿಯ ಹತ್ತಿರ ಮಣಿಪುರ ಗ್ರಾಮ ಮಣಿಪುರ ವೆಸ್ಟ್ ಉಡುಪಿ ತಾಲೂಕು, 5) ಕೆ.ಎ. 20 ಯು 5482 ನೇದರ ಮೋಟಾರು ಸೈಕಲ್ ಸವಾರ ಇಸ್ಮಾಯಿಲ್ ಪ್ರಾಯ : 19 ವರ್ಷ ತಂದೆ : ರಫಿಕ್ ವಾಸ : ಹೈಪಾನ್ ಮಂಜಿಲ್ ಅಚ್ಚಡ ಮಸೀದಿ ಎದುರು ಅಚ್ಚಡ ಮೂಡುಬೆಟ್ಟು ಗ್ರಾಮ ಕಟಪಾಡಿ ಅಂಚೆ, 6) ಕೆ.ಎ. 20 ಇ. ಇ. 3792 ನೇದರ ಮೋಟಾರು ಸೈಕಲ್ ಸವಾರ ಶಮ್ಸಿರ್ ಪ್ರಾಯ : 33 ವರ್ಷ ತಂದೆ : ಉಸ್ಮಾನ್ ವಾಸ : ಅಚ್ಚಡ ಹೌಸ್, ಏಣಗುಡ್ಡೆ ಗ್ರಾಮ. ಕಟಪಾಡಿ ಅಂಚೆ ಇವರು ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ ತುರ್ತು ಕಾರಣವಿಲ್ಲದೇ, ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿರುತ್ತದೆ. ಆರೋಪಿಗಳು ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 17-05-2021 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080