ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 16/04/2023 ರಂದು  ಪಿರ್ಯಾದಿದಾರರಾದ ಗಣೇಶ್‌ ಎ (24), ತಂದೆ: ಅಣ್ಣು ವಿ, ವಾಸ: ಪೆಲತಡ್ಕ ಮನೆ ಪೆರ್ವಾಜೆ ಗ್ರಾಮ ಮಣಿಕರ್‌ ಅಂಚೆ ಸುಳ್ಯ ತಾಲೂಕು ಮಂಗಳೂರು ದ.ಕ. ಜಿಲ್ಲೆ ಇವರು KA-21-EC-9498 ಬುಲೆಟ್‌ ಮೋಟಾರ್‌ನಲ್ಲಿ ಬಾಲಚಂದ್ರರನ್ನು ಕುರಿಸಿಕೊಂಡು ಇನ್ನೊಂದು ಮೋಟಾರ್‌ ಸೈಕಲ್ KA21-ED-1150 ಹೀರೋ ಹೋಂಡಾ ಸ್ಪೆಂಡರ್ನಲ್ಲಿ ಕೌಶಿಕ್‌ (20) ಸಹಸವಾರಿಣಿಯಾಗಿ ಪುಣ್ಯ ರವರನ್ನು ಕುಳ್ಳಿರಿಸಿಕೊಂಡು ಸುಳ್ಯದಿಂದ ಮರವಂತೆ ಬೀಚ್‌ ಕಡೆಗೆ ಹೊರಟಿದ್ದು ಬೆಳಿಗ್ಗೆ 08:45 ಗಂಟೆಗೆ ವಾರಂಬಳ್ಳಿ ಗ್ರಾಮದ ಆಕಾಶವಾಣಿ  ಜಂಕ್ಷನ್‌ ಬಳಿ ಇರುವ ಶ್ರೀ ವಿನಾಯಕ ಗ್ಯಾಸ್‌ ಬಂಕ್‌ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ಕಡೆ ಹೋಗುತ್ತಿರುವಾಗ KA-20-EV-5428 Honda Matrix Dio ಸವಾರ ಮಹಮ್ಮದ್‌ ಉಸ್ಮಾನ್‌ ಯಾವುದೇ ಸೂಚನೆ ನೀಡದೆ ಒಮ್ಮೆಲೇ ತೀರಾ ಬಲಬದಿಗೆ  ಯಾವುದೇ ಸೂಚನೆ ನೀಡದೆ ಒಮ್ಮೆಲೇ ತೀರಾ ಬಲಬದಿಗೆ ಡಿವಡರ್‌ ಕಡೆ ಸವಾರಿ ಮಾಡಿದ್ದು  ಕೌಶಿಕ್‌ ಸವಾರಿ ಮಾಡಿಕೊಂಡಿದ್ದ ಮೋಟಾರ್‌ ಸೈಕಲ್ಲನ್ನು ಅಪಘಾತ ತಪ್ಪಿಸಲು ತೀರಾ ಬಲಬದಿಗೆ ಸವಾರಿ ಮಾಡಿದ್ದು ಅಷ್ಟರೊಳಗೆ ಮಹಮ್ಮದ್‌ ಊಸ್ಮಾನ್‌ ಚಲಾಯಿಸುತ್ತಿದ್ದ ಸ್ಕೂಟರ್ನ ಬಲ ಭಾಗ ಕೌಶಿಕ್ನ ಮೋಟಾರ್‌ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ ಸೈಕಲ್‌ ಸಮೇತ ಡಿವೈಡರ್‌ ಮೇಲೆ ಬಿದ್ದು ಕೌಶಿಕ್‌ ನ ಬಲಕಾಲಿನ  ಮೋಣಗಂಟಿನ ಕೆಳಗೆ ಪಾದದ ಗಂಟಿಗೆ ತೀವ್ರ ಮೂಳೆ ಮುರಿತ ಮೈಕೈಗಳಿಗೆ ತರಚಿದ ಗಾಯವಾಗಿರುತ್ತದೆ. ಸಹಸವಾರಿಣಿಯಾದ ಪುಣೈಳಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಅಪಘಾತವೆಸಗಿದ ಮಹಮ್ಮದ್‌ ಉಸ್ಮಾನ್‌ರವರಿಗೂ ಮೈಕೈಗೆ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2023 : ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದುದಾರರಾದ ಸುರೇಶ್‌ ನಾಯ್ಕ್‌(35) , ತಂದೆ: ದಿ. ಪಪ್ಪು ನಾಯ್ಕ್‌, ವಾಸ: ಪಯ್ಯಾರು ಕೆ.ಎಸ್‌ಪ್ರೌಡ ಶಾಲೆ ಬಳಿ, ಕಳತ್ತೂರು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಅಣ್ಣ ಹರೀಶ್‌ನಾಯ್ಕ್‌(45) ರವರು ದಿನಾಂಕ 16/04/2023 ರಂದು ಸಂಜೆ 05:00 ಗಂಟೆಗೆ ಶಿರ್ವ ಪೇಟೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿರುತ್ತಾರೆ. ಸಂಜೆ 06:00 ಗಂಟೆ ಸಮಯಕ್ಕೆ ಸಾರ್ವಜನಿಕರೊಬ್ಬರು ಪಿರ್ಯಾದಿದಾರರಿಗೆ ಕರೆ ಮಾಡಿ ಅಣ್ಣ ಹರೀಶ್‌ ನಾಯ್ಕ್‌ ರವರು ಶಿರ್ವ ಗ್ರಾಮದ ಚೆಕ್‌ಪಾದೆ ಬಳಿ ಬಸ್‌ನಿಲ್ದಾಣದಲ್ಲಿ ಬಿದ್ದಿದ್ದು ಯಾವುದೇ ಪ್ರತಿಕ್ರಿಯೇ ನೀಡಿರುವುದಿಲ್ಲ ಎಂಬುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಸ್ಥಳಕ್ಕೆ ಬಂದು ನೋಡಿದಾಗ ಅಣ್ಣ ಹರೀಶ್‌ ನಾಯ್ಕ್‌ ರವರು ಮಾತನಾಡುತ್ತಿರಲಿಲ್ಲ. ಸಾರ್ವಜನಿಕರಲ್ಲಿ ವಿಚಾರಿಸಲಾಗಿ ಅಣ್ಣ ಹರೀಶ್‌ ನಾಯ್ಕ್‌ರವರು ಯಾವುದೋ ಒಂದು ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಬಂದು ಶಿರ್ವ ಗ್ರಾಮದ ಚೆಕ್‌ಪಾದೆ ಬಳಿ ತಲುಪಿದಾಗ ದ್ವಿಚಕ್ರ ವಾಹನದ ಸವಾರರಲ್ಲಿ ತನಗೆ ತಲೆಗೆ ಚಕ್ರ ಬರುತ್ತಿರುವುದಾಗಿ ತಿಳಿಸಿ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿರುತ್ತಾರೆ. ಅದರಂತೆ ದ್ವಿಚಕ್ರ ವಾಹನದ ಸವಾರ ವಾಹನವನ್ನು ನಿಲ್ಲಿಸಿದಾಗ ಅಣ್ಣ ಹರೀಶ್‌ನಾಯ್ಕ್‌ರವರು ಅಲ್ಲಿಯೇ ಬಿದ್ದವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಎತ್ತಿ ಉಪಚರಿಸಿ ಚೆಕ್‌ಪಾದೆ ಬಸ್‌ನಿಲ್ದಾಣದಲ್ಲಿ ಅಂಗಾತನೆ ಮಲಗಿಸಿಟ್ಟ ವಿಚಾರವನ್ನು ತಿಳಿಸಿದರು.     ಪಿರ್ಯಾದಿದಾರರ ಅಣ್ಣ ಹರೀಶ್‌ ನಾಯ್ಕ್‌ ರವರು ಕುಡಿತದ ಚಟವನ್ನು ಹೊಂದಿದ್ದು, ಯಾವುದೋ ಕಾರಣದಿಂದ ಮೃತಪಟ್ಟಿರುತ್ತಾರೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 07/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಪುರ: ದಿನಾಂಕ 15/04/2023 ರಂದು ಪಿರ್ಯಾದಿದಾರರಾದ ಮರಿಯಾ ಡಿಸೋಜಾ ಯಾನೆ ಕವಿತಾ (43),  ಗಂಡ: ಬಾಪು, ವಾಸ: ಐಕ್ಯ, ಬಡಾಕೇರೆ, ಪ್ರೇಂಡ್‌ ಶಿಪ್‌ ಬಾಜಲ್‌ ಪ್ಯಾಕ್ಟರಿ ಹತ್ತಿರ, ಅಂಕದಕಟ್ಟೆ, ಕೊಟೇಶ್ವರ ಗ್ರಾಮ ಕುಂದಾಪುರ ತಾಲೂಕು ಇವರು  ತನ್ನ ಮಗಳೊಂದಿಗೆ ಕಾರ್ಕಳದ ಬೋಳ ಎಂಬಲ್ಲಿಗೆ ಹೋಗಿದ್ದು, ದಿನಾಂಕ 15/04/2023 ರಂದು  ಸಂಜೆ 04:30 ಗಂಟೆಯಿಂದ  ರಾತ್ರಿ 11:45 ಗಂಟೆಯ ಮಧ್ಯಾವದಿಯಲ್ಲಿ ಅವರ ಮನೆಯ ಅಡುಗೆ ಮನೆಯ ಬಾಗಿಲಿನಿಂದ ಯಾರೋ ಕಳ್ಳರು ಮನೆಯ ಒಳ ಪ್ರವೇಶಿಸಿ ರೂಮಿನಲ್ಲಿದ್ದ ಕಪಾಟಿನ ಬಾಗಿಲನ್ನು ಜಕಂ ಗೊಳಿಸಿ ಕಪಾಟಿನ ಒಳಗಿದ್ದ 504 ಗ್ರಾಮ್‌ ಚಿನ್ನಾಭರಣಗಳು  ಮತ್ತು ನಗದು ಇರುವ ಕಬ್ಬಿಣದ ಲಾಕರ್‌ ಸಮೇತ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ 504 ಗ್ರಾಮ್‌ ಚಿನ್ನಾಭರಣದ ಮೌಲ್ಯ 21,63,000/- ಹಾಗೂ ಸೇಫ್‌ ಲಾಕರ್‌ ನ ಮೌಲ್ಯ 25000/- ಆಗಿರುತ್ತದೆ.ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2023 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಮಟ್ಕಾ ಜುಗಾರಿ ಪ್ರಕರಣ

  • ಹಿರಿಯಡ್ಕ: ದಿನಾಂಕ 16/04/2023 ರಂದು ಅನಿಲ್ ಬಿ ಮಾದರ, ಪೊಲೀಸ್ ಉಪನಿರೀಕ್ಷಕರು, ಹಿರಿಯಡಕ ಪೊಲೀಸ್ ಠಾಣೆ ಇವರು ಠಾಣೆಯಲ್ಲಿ ಇರುವಾಗ ಪೆರ್ಡೂರು ಗ್ರಾಮದ ಮುತ್ತುರ್ಮೆ ಬಳಿ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ  ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ  ಕೃಷ್ಣ ಹರಿಜನ (40) ಎಂಬಾತನನ್ನು ವಶಕ್ಕೆ ಪಡೆದು  ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ನಗದು ಹಣ 1395/- ರೂಪಾಯಿ ಮಟ್ಕಾ ನಂಬ್ರ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು -1ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2023 ಕಲಂ: 78 (I)(III) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಪಡುಬಿದ್ರಿ: ಕರ್ನಾಟಕ ವಿಧಾನಸಭಾ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ 121-ಕಾಪು ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ 3 ನೇ ತಂಡದ ಅಧಿಕಾರಿಯಾಗಿರುವ ಪಿರ್ಯಾದಿದಾರರಾದ ಮುಸ್ತಾಫ್(40) ರವರಿಗೆ ದಿನಾಂಕ 16/04/2023 ರಂದು ಬೆಳಿಗ್ಗೆ 10:50 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಚುನಾವಣಾ ವಿಭಾಗದಿಂದ ಬಂದ C-VIGIL 1 D; 648887 ದೂರಿನಂತೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದಲ್ಲಿರುವ ಮಾಧವ ಮಂಗಳ ಸಭಾಭವನ ಮೊಗವೀರ ಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಪರವಾಗಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುತ್ತಿರುವ ವ್ಯಕ್ತಿಗಳಿಗೆ ಮಹಾಲಕ್ಷ್ಮಿ ಸಭಾ ಭವನ ಉಚ್ಚಿಲ ಇಲ್ಲಿ ಕಾಪು ತಾಲೂಕು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ಶ್ರೀಕಾಂತ್‌ನಾಯಕ್ ರವರು ಯಾವುದೇ ಅನುಮತಿ ಪಡೆಯದೇ ಸುಮಾರು100 ಜನರಿಗೆ ಚಹಾ, ಇಡ್ಲಿ, ವಡೆ, ಸಾಂಬಾರ್ ಉಪಹಾರ ವಿತರಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿಯೊಂದಿಗೆ ದೂರು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2023 ಕಲಂ: 171(ಇ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-04-2023 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080