ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯದಿ ರಾಜೇಂದ್ರ ಪೂಜಾರಿ ಇವರ ಮಾವ ರಾಜಶೇಖರ ಪೂಜಾರಿ ಪ್ರಾಯ: 68 ವರ್ಷ ರವರು ಈ ದಿನ ದಿನಾಂಕ 17/04/2023 ರಂದು ಬೆಳಿಗ್ಗಿನ ಜಾವ ರೂಮಿನಿಂದ ತ್ರಿವೇಣಿ ಹೋಟೇಲಿಗೆ ಕೆಲಸ ಬಗ್ಗೆ ಬರುವಾಗ ತ್ರಿವೇಣಿ ಸರ್ಕಲ್ ಬಳಿ ಹಾದುಹೋಗಿರುವ ಸಾರ್ವಜನಿಕ ರಸ್ತೆಯನ್ನು ದಾಟಿ ರಸ್ತೆಯ ಪೂರ್ವ ಬದಿಯ ಅಂಚಿನಲ್ಲಿರುವಾಗ ಸಮಯ ಸುಮಾರು ಬೆಳಿಗ್ಗೆ 04:15 ಗಂಟೆಗೆ ಉಡುಪಿ ಕೆಎಮ್ ಮಾರ್ಗ ಕಡೆಯಿಂದ ಉಡುಪಿ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಕಡೆಗೆ KA19F3548 ನೇ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ನಾಗರಾಜ ಎಂಬಾತನು ತಾನು ಚಲಾಯಿಸುತ್ತಿದ್ದ ಬಸ್ಸನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಬದಿಗೆ ಬಂದು ರಸ್ತೆ ದಾಟಿ ರಸ್ತೆಯ ಪೂರ್ವ ದಿಕ್ಕಿನ ಅಂಚಿನಲ್ಲಿದ್ದ ರಾಜಶೇಖರ ಪೂಜಾರಿ (68) ರವರಿಗೆ ಡಿಕ್ಕಿಹೊಡೆದ ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗಾಯ ಆದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ರಾಜಶೇಖರ್ ಪೂಜಾರಿಯವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023 ಕಲಂ 279 304(a)  ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ಸ್ವರೂಪ್‌ರಾಜ್‌ ಇವರು ತಮ್ಮ ಮಾಲೀಕತ್ವದ Hero X Pulse 200 ಮೋಟಾರ್‌ ಸೈಕಲ್‌ ನಂಬ್ರ KA20EX6998 ಅನ್ನು  ದಿನಾಂಕ 13/04/2023 ರಂದು 21:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಡಿಯಾಳಿ ಓಕುಡೆ ಟವರ್‌ ಬಳಿ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು, ಮರುದಿನ ದಿನಾಂಕ 14/04/2023 ರಂದು ಬೆಳಿಗ್ಗೆ 05:30 ಗಂಟೆಗೆ ಬಂದು ನೋಡಲಾಗಿ, ಮೋಟಾರ್‌ ಸೈಕಲ್‌ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಸದರಿ ಮೋಟಾರ್‌ ಸೈಕಲ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ ನ ಅಂದಾಜು ಮೌಲ್ಯ ರೂ. 80,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2023 ಕಲಂ:  379 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 16.04.2023 ರಂದು ಪ್ರಸಾದ್‌ ಕುಮಾರ ಕೆ ಪಿ.ಎಸ್‌.ಐ ಕುಂದಾಪುರ ಪೊಲೀಸ್‌ ಠಾಣೆ ಇವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ  ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಕರ್ತವ್ಯದಲ್ಲಿರುವ ಸಮಯ ಬಾತ್ಮೀದಾರರೊಬ್ಬರು ಕರೆ ಮಾಡಿ ತಲ್ಲೂರ್ ಗ್ರಾಮದ ತಲ್ಲೂರ್ ಜಂಕ್ಷನ್ ಬಳಿ ಗಾಂಜಾ ಸೇವನೆ  ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು ಅದರಂತೆ, ಸಿಬ್ಬಂದಿಯವರೊಂದಿಗೆ 17:30 ಗಂಟೆಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಓರ್ವ ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ನೌಶದ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿ ಹೆಸರು ವಿಳಾಸ ತಿಳಿದುಕೊಂಡು ಆತನಿಗೆ ಮಾಹಿತಿ ನೀಡಿ ವೈದ್ಯಕೀಯ ತಪಾಸಣೆ ಬಗ್ಗೆ ಠಾಣಾ ಸಿಬ್ಬಂದಿಯವರ ಮುಖೇನ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಇತನನ್ನು  ಪರೀಕ್ಷಿಸಿದ ವೈದ್ಯರು ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ  ದಿನಾಂಕ: 16/04/2023 ರಂದು ವರದಿ ನೀಡಿರುತ್ತಾರೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2023 ಕಲಂ: 27(b)   NDPS Act  ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 16.04.2023 ರಂದು ಈರಯ್ಯ ಡಿ ಎನ್‌,  .ಎಸ್‌.ಐ ಕುಂದಾಪುರ ಪೊಲೀಸ್‌ ಠಾಣೆ ಇವರು ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಕರ್ತವ್ಯದಲ್ಲಿರುವ ಸಮಯ ಬಾತ್ಮೀದಾರರೊಬ್ಬರು ಕರೆ ಮಾಡಿ ತಲ್ಲೂರ್ ಗ್ರಾಮದ ಪ್ರವಾಸಿ ಬಾರ್ ಬಳಿ ಗಾಂಜಾ ಸೇವನೆ  ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು ಅದರಂತೆ, ಸಿಬ್ಬಂದಿಯವರೊಂದಿಗೆ 18:30 ಗಂಟೆಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಓರ್ವ ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಮಹಮ್ಮದ್‌ ಇರ್ಷಾದ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿ ಹೆಸರು ವಿಳಾಸ ತಿಳಿದುಕೊಂಡು ಆತನಿಗೆ ಮಾಹಿತಿ ನೀಡಿ ವೈದ್ಯಕೀಯ ತಪಾಸಣೆ ಬಗ್ಗೆ ಠಾಣಾ ಸಿಬ್ಬಂದಿಯವರ ಮುಖೇನ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಇತನನ್ನು  ಪರೀಕ್ಷಿಸಿದ ವೈದ್ಯರು ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ  ದಿನಾಂಕ: 16/04/2023 ರಂದು ವರದಿ ನೀಡಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023 ಕಲಂ: 27(b)   NDPS Act  ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 16/4/2023  ರಂದು ಪಿರ್ಯಾದಿ ಶಾಲಿನ್ ಡಿಕೋಸ್ತಾ   ಇವರು  ಕರ್ನಾಟಕ ರಾಜ್ಯದ 2023 ನೇ ಸಾಲಿನ ವಿಧಾನ ಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆಯ ಬಗ್ಗೆ ಉಡುಪಿ ಜಿಲ್ಲೆಯ ಉಡುಪಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕರ್ತವ್ಯದ  ಬಗ್ಗೆ ಮಾನ್ಯ ಜಿಲ್ಲಾಧಿಕಾರಿ ಉಡುಪಿ ಜಿಲ್ಲೆ ಇವರ ಆದೇಶ ಸಂಖ್ಯೆ :ನಂ ಇಎಲ್ ಎನ್.(1) ಸಿ.ಆರ್ .21/2022/ಇ-96943 ದಿನಾಂಕ 24/3/2023  ರಂತೆ ಸರ್ಪ್ರೈಸ್ ಚೆಕ್ ಪೋಸ್ಟ್ ಕರ್ತವ್ಯದ ಬಗ್ಗೆ ಮಲ್ಪೆ ಠಾಣಾ ವ್ಯಾಪ್ತಿಯ  ಮೂಡುತೋನ್ಸೆ ಗ್ರಾಮದ ಹಂಪನ ಕಟ್ಟೆ ಚೆಕ್ ಪೋಸ್ಟ್ ಕರ್ತವ್ಯದಲ್ಲಿ ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ  ಕರ್ತವ್ಯದಲ್ಲಿ ಇರುವಾಗ ರಾತ್ರಿ 7:00 ಗಂಟೆ ಸಮಯಕ್ಕೆ ಕೆಮ್ಮಣ್ಣುವಿನಿಂದ ನೇಜಾರಿನ ಕಡೆಗೆ ಬರುತ್ತಿದ್ದ KA 20 Z 9295 ನೇ ಕಾರು ಬರುತ್ತಿದ್ದು. ಸದ್ರಿ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಸದ್ರಿ ಕಾರಿನ ಹಿಂಬದಿ ಸೀಟಿನಲ್ಲಿ ಒಂದು ಪ್ಲಾಸ್ಟಿಕ್ ತೊಟ್ಟೆ ಇದ್ದು ಸದ್ರಿ ತೊಟ್ಟೆಯನ್ನು ಪರಿಶೀಲಿಸಲಾಗಿ Black& white Blended Scotch Whisky  ಮದ್ಯದ 750 Ml ನ 5 ಬಾಟಲಿ ಹಾಗೂ Heineken Silver 100./.  Malt Lager Beer 500 Ml ನ 6 ಬಿಯರ್  ಟಿನ್  ಇದ್ದು ಈ ಬಗ್ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ಗಿರಿಧರ ಬಾಳಿಗ ಪ್ರಾಯ: 56 ವರ್ಷ ತಂದೆ: ತಾರನಾಥ ಬಾಳಿಗ ವಾಸ: ಮನೆ ನಂಬ್ರ 9-18 ಕಲ್ಯಾಣಪುರ ಮಖ್ಯ ರಸ್ತೆ ಮೂಡುತೋನ್ಸೆಗ್ರಾಮ ಉಡುಪಿ ಎಂದು ತಿಳಿಸಿದ್ದು ಸದ್ರಿ ಮದ್ಯದ ಬಗ್ಗೆ ವಿಚಾರಿಸಲಾಗಿ ತಾನು ದಿನಾಂಕ 15/4/2023 ರಂದು ಮಂಗಳೂರಿನ ಕದ್ರಿಯ WINES & SPIRITZ  ಮದ್ಯದ ಅಂಗಡಿಯಲ್ಲಿ  ಖರೀದಿ ಮಾಡಿರುವುದಾಗಿ ತಿಳಿಸಿ ಬಿಲ್ಲನ್ನು ಹಾಜರು ಪಡಿಸಿದ್ದು ಸದ್ರಿ ಬಿಲ್ಲನ್ನು ಪರಿಶೀಲಿಸಲಾಗಿ ಬಿಲ್ಲು ನಂಬ್ರ 7273 ಅದರಲ್ಲಿ BL&WT SC 750 ನ 3 ಬಾಟಲಿಯ ದರ 7392 ಹಾಗೂ ಇನ್ನೊಂದು ಬಿಲ್ಲು ನಂಬ್ರ 7274 ಅದರಲ್ಲಿ BL&WT SC 750 ನ 2 ಬಾಟಲಿ ದರ 4928 ನಮೂದು ಇರುತ್ತದೆ. ಹಾಗೂ Heineken Silver 100./.  Malt Lager Beer 500 Ml ನ 6 ಬಿಯರ್  ಟಿನ್   ಗಳಿಗೆ ಯಾವುದೇ ಬಿಲ್ಲು ಇರುವುದಿಲ್ಲವಾಗಿ ತಿಳಿಸಿರುತ್ತಾರೆ.ಗಿರಿಧರ ಬಾಳಿಗ ಇವರು ಒಟ್ಟು 6,750 ML ಮದ್ಯವನ್ನು ಹೊಂದಿದ್ದು ಇದು ಸ್ವಾದೀನತೆಯ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ ಹಾಗೂ ಸಾಗಾಟ ಮಾಡಲು ಯಾವುದೇ ಪರವಾನಿಗೆ ಹೊಂದಿರುವುದಿಲ್ಲ ಈ ಮದ್ಯವನ್ನು ಮಾರಾಟ ಮಾಡಿದ ಮಂಗಳೂರಿನ ಕದ್ರಿಯ WINES & SPIRITZ  ಮಧ್ಯದ ಅಂಗಡಿಯವರು ಸಹಾ ನಿಯಮ ಉಲ್ಲಂಘಿಸಿ ಒಬ್ಬನೇ ವ್ಯಕ್ತಿಗೆ   750 mlನ 5 ಮದ್ಯದ ಬಾಟಲಿಗಳುಹಾಗೂ ರಶೀದಿ ಇಲ್ಲದೆ 500 Mlನ 6 ಬಿಯರ್ ಟಿನ್ ಗಳನ್ನು ಮಾರಾಟ ಮಾಡಿರುವುದಾಗಿದೆ   ಈ  ಕಾರಣ ಸದ್ರಿ ಮದ್ಯ Black& white Blended Scotch Whisky  ಮದ್ಯದ 750 Ml ನ 5 ಬಾಟಲಿಗಳನ್ನು ಬಿಲ್ಲು ಸಮೇತ ಹಾಗೂ Heineken Silver 100./.  Malt Lager Beer 500 Ml ನ 6 ಬಿಯರ್  ಟಿನ್  ಗಳನ್ನು ಮುಂದಿನ ಕ್ರಮದ ಬಗ್ಗೆಸ್ವಾದೀನ ಪಡಿಸಿಕೊಡಿಸಿಕೊಂಡಿದ್ದು. ಸ್ವಾಧೀನ ಪಡಿಸಿಕೊಂಡ Black& white Blended Scotch Whisky  ಮದ್ಯದ 750 Ml ನ 5 ಬಾಟಲಿ   ಒಟ್ಟು ಮೌಲ್ಯ 12320 ರೂಪಾಯಿ ಮತ್ತು  Heineken Silver 100./.  Malt Lager Beer 500 Ml ನ 6 ಬಿಯರ್  ಟಿನ್  ನ ಒಟ್ಟು ಮೌಲ್ಯ 960 ಆಗಿದ್ದು ಸ್ವಾದೀನ ಪಡಿಸಿಕೊಂಡ ಮದ್ಯದ ಬಾಟಲಿಯ ಒಟ್ಟು ಮೌಲ್ಯ 13,280 ರೂಪಾಯಿ ಆಗಬಹುದು. ಅಲ್ಲದೆ ಅಕ್ರಮವಾಗಿ ಮಧ್ಯ ಸಾಗಾಟ ಮಾಡುತ್ತಿದ್ದ KA 20 Z 9295 ನೇ  TIANIUM- TDCI-ECO SPORT ಕಾರನ್ನು ಮುಂದಿನ ಕ್ರಮದ ಬಗ್ಗೆ ಪಂಚರ ಸಮಕ್ಷಮದಲ್ಲಿ ಸ್ವಾದೀನ ಪಡಿಸಿಕೊಂಡಿದ್ದು ಸ್ವಾದೀನ ಪಡಿಸಿಕೊಂಡ KA 20 Z 9295 ನೇ  TIANIUM- TDCI-ECO SPORT ಕಾರಿನ ಅಂದಾಜು ಮೌಲ್ಯ ರೂಪಾಯಿ 3,00,000 ಆಗಬಹುದು.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2023 ಕಲಂ 32 , 34 KE ACT ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿ ಯಲ್ಲವ್ವ ಅಡಿವೆಪ್ಪ ಗೌಡಗೇರಿ ಇವರ ತಮ್ಮ ರಮೇಶ ಪ್ರಾಯ 28 ವರ್ಷ ಸುಮಾರು 16 ವರ್ಷಗಳ ಹಿಂದೆ ಉಡುಪಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದು, ಉಡುಪಿ ಬಸ್‌ ನಿಲ್ದಾಣದಲ್ಲಿಯೇ ರಾತ್ರಿ ಮಲಗಿಕೊಂಡು ಜೀವನ ಸಾಗಿಸುತ್ತಿದ್ದು, ವಿಪರೀತ ಮದ್ಯ ಸೇವಿಸುವ ಚಟ ಹೊಂದಿದು, ಸುಮಾರು 8 ವರ್ಷಗಳಿಂದ ಪಿಡ್ಸ್‌ ಖಾಯಿಲೆಯಿಂದ ಬಳಲುತ್ತಿದ್ದು ಇದಕ್ಕೆ ಸರಿಯಾಗಿ ಚಿಕಿತ್ಸೆಯನ್ನು ಪಡೆದಿರುವುದಿಲ್ಲ. ದಿನಾಂಕ 16/04/2023 ರಂದು 17:00 ಗಂಟೆಗೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಮಲಗಿದ ಸ್ಥಿತಿಯಲ್ಲಿಯೇ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 15/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿ Saltant Bektenova ಇವರು ಮೂಲತ ರಷ್ಯ ದೇಶದವರಾಗಿರುತ್ತಾರೆ, ಪಿರ್ಯಾದಿದಾರರ ಗಂಡ ಕುಲಿನ್‌ ಮಹೇಂದ್ರ ಶಾ (61 ವರ್ಷ) ಇವರು ಮೂಲತ ಅಹಮದಬಾದ್‌ ನವರಾಗಿದ್ದು ಆನ್‌ಲೈನ್‌ ಟ್ರೆಡಿಂಗ್‌ ಕೆಲಸ ಮಾಡುತ್ತಿದ್ದರು ಅವರಿಗೆ 3 ವರ್ಷಗಳ ಹಿಂದೆ ಹರ್ನಿಯ ಖಾಯಿಲೆ ಕಾಣಿಸಿಕೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ದಿನಾಂಕ: 16.04.2023 ರಂದು ರಾತ್ರಿ ಸುಮಾರು 08:30 ಗಂಟೆಗೆ ಇಂದ್ರಾಳಿ ಟೆಂಪಲ್‌ ರಸ್ತೆಯಲ್ಲಿರುವ ಮನೆಯಲ್ಲಿ ಇರುವಾಗ ವಾಂತಿ ಮತ್ತು ಉಸಿರಾಟದ ತೊಂದರೆ ಉಂಟಾಗಿ ಅಸ್ವಸ್ಥಗೊಂಡವರನ್ನು ಪಿರ್ಯಾದಿದಾರರು ಅಂಬುಲೆನ್ಸ್‌ ನಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದು ರಾತ್ರಿ 10:00 ಗಂಟೆಗೆ ವೈದ್ಯರು ಪರೀಕ್ಷಿಸಿ ಕುಲಿನ್‌ ಮಹೇಂದ್ರ ಶಾ ಇವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 17/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ; 17/04/2023 ರಂದು ಪಿರ್ಯಾದಿ ಸಂಜೀವ ನಾಯ್ಕ ಇವರು ಬೆಳಂಜೆ ಗ್ರಾಮದ ಹಣೆಗೋಡು ಎಂಬಲ್ಲಿ ತನ್ನ ಮನೆಯ ಜಾಗದಲ್ಲಿರುವ ವಾಂಟೆ ಹುಳಿ ಮರವನ್ನು ಹತ್ತಿ ಹುಳಿಕಾಯಿಯನ್ನು ಕೊಯ್ಯುತ್ತಿದ್ದು. ಅವರ ಭಾವ ಕೃಷ್ಣ ನಾಯ್ಕ್ ( 40 ವರ್ಷ) ಇವರು ಕೆಳಗೆ ನಿಂತು ಕೊಂಡು ಕೆಳಗೆ ಬಿದ್ದ ಹುಳಿ ಕಾಯಿಯನ್ನು ಹೆಕ್ಕುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11-15 ಗಂಟೆಗೆ ಅಲ್ಲಿಯೇ ಕುಸಿದು ಬಿದ್ದು ಮಾತನಾಡುತ್ತಿರದ ಕಾರಣ ಅವರನ್ನು ಮದ್ಯಾಹ್ನ 12-30 ಗಂಟೆಗೆ ಹೆಬ್ರಿ ಸರಕಾರಿ ಅಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಾಗ ಕೃಷ್ಣ ನಾಯ್ಕ್ ರವರು ದಾರಿ ಮಧ್ಯೆ ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 14/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 17-04-2023 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080