ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 16/04/2022  ರಂದು ರಾತ್ರಿ ರಾತ್ರಿ 8:50 ಗಂಟೆಗೆ ಕುಂದಾಪುರ  ತಾಲೂಕಿನ,  ಕೊಟೇಶ್ವರ ಗ್ರಾಮದ  ಅಂಕದಕಟ್ಟೆ ಸರ್ಜನ್‌ ಆಸ್ಪತ್ರೆಯ ಬಳಿ ಆಪಾದಿತ ಉಮೇಶ್‌ ಹೆಬ್ಬಾರ್‌  KA-20-P-5740ನೇ  ಸ್ಯಾಂಟ್ರೋ  ಕಾರನ್ನು  ಕುಂದಾಪುರ ಕಡೆಯಿಂದ  ಕೊಟೇಶ್ವರ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದ  ಚಾಲನೆ ಮಾಡಿಕೊಂಡು ಬಂದು, ಪೂರ್ವ ಬದಿಯ NH  66 ರಸ್ತೆಯಿಂದ ಓಪನ್‌ ಡಿವೈಡರ್‌ ಮುಖೇನ ಪಶ್ಚಿಮ ಬದಿಯ NH  66 ರಸ್ತೆಗೆ ತಿರುಗಿಸಿ, ಅದೇ  ದಿಕ್ಕಿನಲ್ಲಿ ಕಾರಿನ ಮುಂಭಾಗದಲ್ಲಿ ಪಿರ್ಯಾದಿದಾರರ ಅಣ್ಣ  ರಘುರಾಮ ಕುಲಾಲರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EK-1187 TVS XL ಮೋಟಾರ್‌ ಸೈಕಲ್‌‌‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಘುರಾಮ ಕುಲಾಲರವರ ಬಲಕಾಲಿನ ಪಾದದ ಮೇಲೆ ಸೀಳಿ ಹೋದ ಆಳ ರಕ್ತಗಾಯವಾಗಿದ್ದು, ಅವರನ್ನು  ಕೊಟೇಶ್ವರ  ಎನ್‌. ಆರ್‌ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ   ಮೃತಪಟ್ಟಿರುವುದಾಗಿ  ತಿಳಿಸಿದ್ದು,  ಬಳಿಕ ಅಲ್ಲಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಾಗ  ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2022  ಕಲಂ: 279, 304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಚಂದ್ರ (34), ತಂದೆ: ಗೋಪಾಲ ಪೂಜಾರಿ, ವಾಸ: ಪ್ರೇಮಾ  ನಿಲಯ, ಮೂಡುಬೆಟ್ಟು, ಯಡ್ತಾಡಿ ಗ್ರಾಮ ಮತ್ತು ಅಂಚೆ. ಬ್ರಹ್ಮಾವರ ತಾಲೂಕು ಇವರು ದಿನಾಂಕ 15/04/2022 ರಂದು  ತನ್ನ ಹೆಂಡತಿ ಮನೆಯಾದ ಕಾವಡಿ ಗ್ರಾಮದ ಸಸಿಹಿತ್ಲು  ಎಂಬಲ್ಲಿಗೆ  ಬಂದಿದ್ದು  , ಹೆಂಡತಿಯ ಮಾವ ರಮೇಶ್  ಮತ್ತು ಅವರ ತಾಯಿ ವೆಂಕಮ್ಮ ವಾಸಮಾಡಿಕೊಂಡಿರುತ್ತಾರೆ. ಎದುರು ಮನೆಯವರಾದ ಮಂಜುನಾಥರವರು ಜೆ.ಸಿ.ಬಿ ಮುಖಾಂತರ ಜಾಗವನ್ನು ಸ್ವಚ್ಛಗೊಳಿಸುತ್ತಿದ್ದರು. ಪಿರ್ಯಾದಿದಾರರ ಹೆಂಡತಿಯ ಮಾವ  ಜೆ.ಸಿ.ಬಿ ಚಾಲಕರಾದ  ಚಂದ್ರಶೇಖರರವರಿಗೆ  ಬೀಳುವ ಸ್ಥಿತಿಯಲ್ಲಿದ್ದ  ತೆಂಗಿನ ಮರವನ್ನು ತೆಗೆಯಲು ಹೇಳಿರುತ್ತಾರೆ. ಅದರಂತೆ ಮಧ್ಯಾಹ್ನ  12:50 ಗಂಟೆಗೆ  ಜೆ.ಸಿ.ಬಿ ನಂಬ್ರ: KA-20-P-5945 ಮುಖಾಂತರ ತೆಂಗಿನ ಮರ ತೆಗೆಯುವಾಗ  ಪಿರ್ಯಾದಿದಾರರು ಹಾಗೂ ರಮೇಶರವರು ನೋಡುತ್ತಿದ್ದು ಅಷ್ಟರಲ್ಲಿ ಜೆ.ಸಿ.ಬಿ ಚಾಲಕ ಯಾರಿಗೂ  ಸೂಚನೇ ನೀಡದೇ ಒಮ್ಮೇಲೆ ಮರವನ್ನು ದೂಡಿದ ಕಾರಣ ರಮೇಶ ರವರ ಮೇಲೆ ಮರ ಬಿದ್ದಿರುತ್ತದೆ.  ಪರಿಣಾಮ ರಮೇಶ್ ರವರಿಗೆ ತಲೆಗೆ, ಎಡಕಾಲು ಮೂಳೆ ಮುರಿತದ ಗಾಯವಾಗಿ ಅಲ್ಲಿಯೇ ಕುಸಿದು ಬಿದ್ದರು. ಮೂಗಿನಿಂದ ರಕ್ತ ಬರುತ್ತಿದ್ದು ಪ್ರಜ್ಞೆ  ತಪ್ಪಿರುತ್ತದೆ. ಪಿರ್ಯಾದಿದಾರರು ಹಾಗೂ ಹತ್ತಿರದ ಮನೆಯವರು ಎತ್ತಿ ಉಪಚರಿಸಿ  ಅಂಬ್ಯಲೆನ್ಸ್ ನಲ್ಲಿ ಮಣಿಪಾಲ ಕೆ.ಎಂ.ಸಿ ಗೆ  ಕರೆದುಕೊಂಡು  ಹೋದಾಗ ವೈದ್ಯರು ಪರೀಕ್ಷಿಸಿ  ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ.   ದಿನಾಂಕ 15/04/2022 ರಂದು  ಸಂಜೆ 07:45 ಗಂಟೆಗೆ  ಚಿಕಿತ್ಸೆ ಫಲಿಸದೇ ರಮೇಶರವರು ಮೃತಪಟ್ಟಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52 /2022 ಕಲಂ: 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು:  ದಿನಾಂಕ 14/04/2022 ರಂದು ರಾತ್ರಿ 9:45 ಗಂಟೆಗೆ ಪಿರ್ಯಾದಿದಾರರಾದ ಕಿರಣ್ ಜೋಗಿ (33), ತಂದೆ: ಕೊಲ್ಲೂರಾ ಬಳೆಗಾರ, ವಾಸ: ಹೆಗ್ಡೆಹಕ್ಲು ಕೊಲ್ಲೂರು ಗ್ರಾಮ  ಬೈಂದೂರು  ತಾಲೂಕು ಇವರು KA-20-D-6993 ನೇ ಜೀಪನ್ನು ಕೆಲಸದ ನಿಮಿತ್ತ ಹೆಗ್ಡೆಹಕ್ಲು ಕಡೆಯಿಂದ ಕೊಲ್ಲೂರು ಕಡೆಗೆ ನಿಧಾನವಾಗಿ ರಸ್ತೆಯ ಎಡಬದಿಯಿಂದ  ಚಲಾಯಿಸಿಕೊಂಡು ಹೋಗುತ್ತಾ  ಕೊಲ್ಲೂರು ಗ್ರಾಮದ NH-766 (ಸಿ)  ಹೆಗ್ಡೆಹಕ್ಲು  ರಾಮಚಂದ್ರ ಅಡಿಗರವರ  ಮನೆಯಬಳಿ ತಿರುವು ರಸ್ತೆಯಲ್ಲಿ ತಲುಪಿದಾಗ  ಪಿರ್ಯಾದುದಾರರ ಜೀಪಿನ ಎದುರಿನಿಂದ  ಕೊಲ್ಲೂರು ಕಡೆಯಿಂದ ಹೆಗ್ಡೆಹಕ್ಲು  ಕಡೆಗೆ ಆರೋಪಿ  ಪ್ರದೀಪ @ ನೇಪಾಳಿ KA-20-EP-3108 ನೇ ಸ್ಕೂಟರ್‌ನ್ನು ವೇಗ ಮತ್ತು ಅಜಾಗರೂಕತೆಯಿಂದ ಅಡ್ಡದಿಡ್ಡಿ ಯಾಗಿ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ರಸ್ತೆಯ ತೀರ ಬಲಬದಿಗೆ ಚಲಾಯಿಸಿ  ಪಿರ್ಯಾದಿದಾರರ  ಜೀಪಿನ  ಬಲ ಬದಿಗೆ ಡಿಕ್ಕಿ ಹೊಡೆದು  ಸ್ಕೂಟರ್ ಸಮೇತ ರಸ್ತೆಗೆ ಬಿದ್ದ  ಪರಿಣಾಮವಾಗಿ ಪ್ರದೀಪನಿಗೆ ತಲೆಗೆ ಮತ್ತು ಬಲಭುಜ ಹೊಟ್ಟೆಗೆ ರಕ್ತಗಾಯ ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತದ ಪರಿಣಾಮ ಪಿರ್ಯಾದಿದಾರರ ಜೀಪು ಮಗುಚಿ ಬಿದ್ದು ಜಖಂ ಗೊಂಡಿರುತ್ತದೆ. ಆರೋಪಿ ಪಿರ್ಯಾದಿದಾರರಿಗೆ ಜೀಪು ರಿಪೇರಿಯ ಖರ್ಚು ವೆಚ್ಚವನ್ನು ನೀಡುವುದಾಗಿ ಹೇಳಿ ಈಗ ಕೊಡಲು ನಿರಾಕರಿಸಿದ ಕಾರಣ ದೂರು ನೀಡಲುವಿಳಂಭವಾಗಿರುತ್ತದೆ  ಹಾಗೂ ಆರೋಪಿ ಸ್ಕೂಟರ್‌ ಜಖಂಗೊಂಡಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 20/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 11/04/2022 ರಂದು  ಸಂಜೆ 7:30  ಗಂಟೆಗೆ ಪಿರ್ಯಾದಿದಾರರಾದ ಗಣೇಶ್ (38), ತಂದೆ: ನಾರಾಯಣ, ವಾಸ: ವಿದ್ಯಾನಗರ , ಬೈಂದೂರು ಗ್ರಾಮ ಮತ್ತು ತಾಲೂಕು ಇವರು ಕೆಲಸ ಮುಗಿಸಿ ಬೈಂದೂರಿನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ  ಪಿರ್ಯಾದಿದಾರರ ಪರಿಚಯದ ಶಂಕರ ಎಂಬುವವರು ಯಡ್ತರೆ ಕಡೆಯಿಂದ ನಾಕಟ್ಟೆ ಕಡೆಗೆ  ಸೈಕಲಿನಲ್ಲಿ  ಹೋಗುತ್ತಿರುವಾಗ KA-47-M-4114 ನೇ ಮಾರುತಿ ಸುಜುಕಿ ಆಲ್ಟೋ ಕಾರನ್ನು ಅದರ ಚಾಲಕನು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಯಡ್ತರೆ  ಗ್ರಾಮದ ನಾಕಟ್ಟೆ ದುರ್ಗಾಶ್ರೀ ಹೊಟೇಲ್  ಎದುರು ತಲುಪಿದಾಗ  ಅತೀ ವೇಗದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ ತೀರಾ ಎಡಬದಿಗೆ ಚಲಾಯಿಸಿ ಶಂಕರ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಶಂಕರ ರವರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ  ಶಂಕರ ರವರ ಎರಡೂ ಕಾಲುಗಳಿಗೆ ಹಾಗೂ ಎರಡೂ ಕೈಗಳಿಗೆ ಪೆಟ್ಟಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ  ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು  ನಂತರ  ದಿನಾಂಕ 16/04/2022 ರಂದು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ದಾಖಲು ಮಾಡಿದ್ದಾಗಿದೆ. ಕಾರು ಚಾಲಕನು ಆಸ್ಪತ್ರೆಯ ಖರ್ಚು ಕೊಡುವುದಾಗಿ ತಿಳಿಸಿದ್ದು  ಖರ್ಚು  ಜಾಸ್ತಿಯಾದ  ಕಾರಣ ಖರ್ಚು ನೀಡುವುದಿಲ್ಲವಾಗಿ ತಿಳಿಸಿದ್ದರಿಂದ ದೂರು ನೀಡಲು ವಿಳಂಭವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಮುತ್ತಪ್ಪ ಹನುಮಂತ ವಡ್ಡರ್‌ (26), ತಂದೆ: ಹನುಮಂತ, ವಾಸ: ಚಂದ್ರಾವತಿ ನಿಲಯ ಕಂಪೌಂಡ್‌, ಶ್ರೀಪತಿಯವರ ತಗಡಿನ ಶೆಡ್‌, ಡಿಸಿಎಂ ಕಾಲೋನಿ, ಎಂಜಿಎಂ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಹೆಂಡತಿ ಶ್ರೀಮತಿ ಪದ್ಮ (22) ರವರು ದಿನಾಂಕ 15/04/2022 ರಂದು 14:40 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಎಂ.ಜಿ.ಎಂ ಬಳಿ ಡಿಸಿಎಂ ಕಾಲೋನಿಯಲ್ಲಿರುವ ಶ್ರೀಪತಿ ಎಂಬುವವರ ಬಾಡಿಗೆಯ ತಗಡು ಶೆಡ್‌ನ ಮನೆಯಿಂದ ಬಟ್ಟೆ ತರುವುದಾಗಿ ಹೇಳಿ, ಮಗಳು ಪ್ರಣತಿ (2) ರವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು,  ವಾಪಾಸು ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ: ಹೆಂಗಸು ಮತ್ತು ಮಗು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ಶೆಡ್ತಿ (48), ಗಂಡ:ನಾರಾಯಣ ಶೆಟ್ಟಿ, ವಾಸ: ಶಾಲೆಜೆಡ್ಡು  ಉಳ್ಳೂರು  74 ಗ್ರಾಮ  ಕುಂದಾಪುರ  ತಾಲೂಕು ಇವರ ಗಂಡ ನಾರಾಯಣ ಶೆಟ್ಟಿ(52) ಇವರು ಬೆಂಗಳೂರಿನ  ಬಿಡದಿ  ಎಂಬಲ್ಲಿ  ಹೊಟೇಲ್  ಕೆಲಸ ಮಾಡಿಕೊಂಡಿದ್ದು,    ದಿನಾಂಕ  07/04/2022  ರಂದು   ಕೆಲಸ  ಮಾಡಿಕೊಂಡಿದ್ದು  ಹೊಟೇಲ್‌‌ನಿಂದ  ಕಾಣೆಯಾಗಿದ್ದು,  ಈ  ಬಗ್ಗೆ  ಬಿಡದಿ  ಪೊಲೀಸ್  ಠಾಣೆಯಲ್ಲಿ  ಆತನ  ಸಂಬಂಧಿಕರು   ಕಾಣೆಯಾದ ಬಗ್ಗೆ  ದೂರು ನೀಡಿರುತ್ತಾರೆ.  ದಿನಾಂಕ  16/04/2022  ರಂದು ಕುಂದಾಪುರ  ತಾಲೂಕಿನ ಉಳ್ಳೂರು 74 ಗ್ರಾಮದ ಸೂರಾಲು  ಕಾಡಿನಲ್ಲಿ  ಒಂದು ಗಂಡಸಿನ ಶವ   ಇದ್ದು,  ಶವವು  ನಾರಾಯಣ   ಶೆಟ್ಟಿ  ಇವರ ಶವ  ಆಗಿರುತ್ತದೆ,  ನಾರಾಯಣ  ಶೆಟ್ಟಿ ಇವರು ಯಾವುದೊ ವೈಯುಕ್ತಿಕ ಕಾರಣದಿಂದ   ಮನನೊಂದು  ದಿನಾಂಕ  07/04/2022  ರಿಂದ  ದಿನಾಂಕ  16/04/2022  ರ ಮದ್ಯದ  ಅವಧಿಯಲ್ಲಿ ಸೂರಾಲು ಕಾಡಿನಲ್ಲಿ  ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 07/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾದ ಮಂಜುಳಾ (40), ಗಂಡ: ರವೀಂದ್ರ, ವಾಸ: ಶ್ರೀದೇವಿ ಕೃಪಾ ಕುತ್ಯಾರು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು,  ಉಡುಪಿ ಜಿಲ್ಲೆ ಇವರ ತಮ್ಮ ಸಂತೋಷ (37) ರವರು ಯಾವುದೋ ಸಮಸ್ಯೆಯಿಂದ ಜೀವನದಲ್ಲಿ ಮನನೊಂದು ದಿನಾಂಕ:15/4/2022 ರಂದು ಮದ್ಯಾಹ್ನ 03:00 ಗಂಟೆಯಿಂದ ದಿನಾಂಕ 16/4/2022 ರ ಮದ್ಯಾಹ್ನ 01:00 ಗಂಟೆಯ ನಡುವಿನ ಅವಧಿಯಲ್ಲಿ ಕುತ್ಯಾರುವಿನ ಸಾಧು ಮೂಲ್ಯ ರವರ ಖಾಲಿ ಮನೆಯ ಪಡಸಾಲೆಯ ಮಾಡಿನ ಜಂತಿಗೆ ಬಿಳಿ ಬಣ್ಣದ ಬೈರಾಸ್ ಗೆ ಕಟ್ಟಿದ ಹುರಿಹಗ್ಗದಿಂದ  ಕಟ್ಟಿ  ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 08/2022  ಕಲಂ: 174(3)(ಸಿ) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.       

ಇತರ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಝೀನತ್ (22),  ತಂದೆ: ಮೊಹಮ್ಮದ್, ವಾಸ: ಅಲ್ಲಾಝ್ ಮಂಜಿಲ್, ಇನ್ನಾ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 25/10/2018 ರಂದು ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಡೀನ್ ಸ್ಟ್ರೀಟ್ ನಲ್ಲಿರುವ  ಮೀರಾ ಕಂಪೌಂಡ್‌‌ನ ಫ್ಲಾಟ್ ನಂಬ್ರ 6 ರ ನಿವಾಸಿ ಮೊಹಮ್ಮದ್ ಇಲಿಯಾಸ್ ಎಂಬುವರ ಜೊತೆ ಪಡುಬಿದ್ರಿಯ ಮೊಹಿಯುದ್ದೀನ್ ಜುಮ್ಮಾ  ಮಸೀದಿಯಲ್ಲಿ ಮದುವೆಯಾಗಿದ್ದು, ಮದುವೆಯ ಹೊಸದರಲ್ಲಿ ಆರೋಪಿತರಾದ 1) ಮೊಹಮ್ಮದ್ ಇಲಿಯಾಸ್, 2)  ಜೀನತ್, 3) ಶಮೀನಾ, 4) ಅಬ್ದುಲ್ ಸಲಾಂ, 5) ಮೊಹಮ್ಮದ್ ಶರೀಫ್, 6) ಬಿಫಾತಿಮಾ, 7) ಇಬ್ರಾಹಿಂ ಇವರುಪಿರ್ಯಾದಿದಾರರೊಂದಿಗೆ ಅನ್ಯೋನ್ಯವಾಗಿರುವಂತೆ ನಟಿಸಿ, ನಂತರದ ದಿನಗಳಲ್ಲಿ ಮದುವೆಯ ಸಮಯ ನೀಡಿದ ಚಿನ್ನದ ಒಡವೆ ಮತ್ತು ವರದಕ್ಷಿಣೆ ಹಣ ಸಾಕಾಗಲಿಲ್ಲವೆಂದು ಜಗಳ ಪ್ರಾರಂಭಿಸಿ, ನಂತರ ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ಮತ್ತು ನಿನ್ನ ಮನೆಯವರು ಬಿಕಾರಿಗಳು ಎಂದು ಬೈದು ನಿರಂತರ ಕಿರುಕುಳ ನೀಡುತ್ತಿದ್ದು,  ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ. ಇದೇ ವೇಳೆ ಪಿರ್ಯಾದಿದಾರರ ನಾದಿನಿಯರಾದ ಜೀನತ್, ಶಮಿನಾ, ಅತ್ತೆ ಬಿಫಾತಿಮಾ, ಮಾವ ಇಬ್ರಾಹಿಂ, ನಾದಿನಿಯ ಗಂಡ ಅಬ್ದುಲ್ ಸಲಾಂ ರವರರು ಪಿರ್ಯಾದಿದಾರರ ಗಂಡನಿಗೆ ಹೊಡೆಯಲು ಪ್ರಚೋದನೆ ನೀಡಿದ್ದಲ್ಲದೇ, 6 ನೇ ಆಪಾದಿತರು ತಲೆ ಕೂದಲನ್ನು ಹಿಡಿದು ಗೋಡೆಗೆ ಹೊಡೆದಿದ್ದು, 7 ನೇ ಆಪಾದಿತರು ಸೊಂಟದ ಬೆಲ್ಟ್‌‌ನಿಂದ ಹೊಡೆದು ಹಲ್ಲೆ ಮಾಡಿದ್ದು ಉಳಿದವರು ಕೈಗಳಿಂದ ಕನ್ನೆಗೆ ಮತ್ತು ಮೈಗೆ ಹೊಡೆದಿರುತ್ತಾರೆ. ಅಲ್ಲದೇ  5 ನೇ ಆಪಾದಿತನು ವಿದೇಶದಲ್ಲಿದ್ದುಕೊಂಡು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದು, ಊರಿಗೆ ಬಂದಾಗಲೂ ಹಿಂಸೆ ನೀಡಿರುತ್ತಾರೆ. 1 ನೇ ಆಪಾದಿತನು ಪಿರ್ಯಾದಿದಾರರಿಗೆ  ತಲಾಖ್ ನೀಡುವುದಾಗಿ ಹೇಳಿ, ಇದೇ ವಿಚಾರವಾಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ. 4ನೇ ಆಪಾದಿತನು ಕಿರುಕುಳ ನೀಡುತ್ತಾ ಹೆದರಿಸುತ್ತಿದ್ದು , ಕಿರುಕುಳದಿಂದ ಬೇಸತ್ತು ಪಿರ್ಯಾದಿದಾರರು ತಾಯಿಯ ಮನೆಗೆ ಹೋದಾಗ, ಆರೋಪಿತರು ಅಲ್ಲಿಗೂ ಬಂದು ಬೈದು ಹಲ್ಲೆ ನಡೆಸಿರುತ್ತಾರೆ. ಇದರಿಂದ ಮನನೊಂದು ಪಿರ್ಯಾದಿದಾರರು ದಿನಾಂಕ 04/03/2022 ರಂದು ಯಾರಿಗೂ ಹೇಳದೇ  ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 07/03/2022 ರಂದು ಉಳ್ಳಾಲ ದರ್ಗಾದ ಬಳಿ ಪತ್ತೆ ಮಾಡಿದ್ದು, ನಂತರ ಪಿರ್ಯಾದಿದಾರರು ಅವರ ಮಗುವಿನೊಂದಿಗೆ ಅವರ ತಾಯಿಯ ಮನೆಗೆ ಹೋಗಿದ್ದು, ನಂತರವೂ ಆರೋಪಿತರು ಪಿರ್ಯಾದಿದಾರರಿಗೆ ಹಾಗೂ ಅವರ ಮನೆಯವರಿಗೆ ಮೊಬೈಲ್ ಗೆ  ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2022, ಕಲಂ: 498(A), 504, 506, 323, 324, 354. 109, 114 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-04-2022 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080