ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ 15/04/2021 ರಂದು  ಪಿರ್ಯಾದಿದಾರರಾದ ಕೆ ಅಬ್ದುಲ್ ರಜಾಕ್ (55), ತಂದೆ: ದಿ, ಕೊಯಮ್, ವಾಸ: ರೂಮ್ ನಂಬ್ರ 16, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಇವರ ಮಗ ಇಮ್ರಾನ್ ಎಂಬುವವರು KA-19-EJ-6843 ನೇ ಮೋಟಾರು ಸೈಕಲಿನಲ್ಲಿ ಪಡುಬಿದ್ರಿ ಕಡೆಯಿಂದ ಉಚ್ಚಿಲ ಕಡೆಗೆ ಹೋಗುತ್ತಿರುವಾಗ, ನಡ್ಸಾಲು ಗ್ರಾಮದ ಕೊರ್ಟ್ ಯಾರ್ಡ ಎದುರು ತಲುಪಿದಾಗ ಸಂಜೆ 17:15 ಗಂಟೆಗೆ ಪಡುಬಿದ್ರಿ ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ಹೋಗುತ್ತಿದ್ದ KA-20-AA-6008 ನೇ ಬಸ್ಸು ಚಾಲಕ ಕಂಚಿನಡ್ಕ ದಿವಾಕರ ಇವರು ಬಸ್‌ನ್ನು   ಪಡುಬಿದ್ರಿಯ ಕೋರ್ಟ್ ಯಾರ್ಡ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಕರೊಬ್ಬರನ್ನು ಹತ್ತಿಸುವ ಸಲುವಾಗಿ ಒಮ್ಮೇಲೆ ನಿರ್ಲಕ್ಷತನದಿಂದ ಬ್ರೇಕ್ ಹಾಕಿ ನಿಲ್ಲಿಸಿದ ಪರಿಣಾಮ ಇಮ್ರಾನ್ ರವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಬಸ್ಸಿನ ಹಿಂಬಾಗಕ್ಕೆ ಬಡಿದು ಅಪಘಾತ ಉಂಟಾಗಿ ಇಮ್ರಾನ್ ರವರ ಹಣೆಗೆ, ಎಡ ಕೈಗೆ , ಎಡ ಕಣ್ಣಿನ ಕೆಳಗೆ ತೀವ್ರ ಗಾಯ ವಾಗಿದ್ದು ಗಾಯಾಳು ಉಡುಪಿ ಹೈಟೇಕ್ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ರಾಘವೇಂದ್ರ (29), ತಂದೆ:  ರವಿ  ಆಚಾರ್ಯ, ವಾಸ: ದೇವಾಳಗುಜ್ಜಿ  ಮಣಿಪುರ   ಗ್ರಾಮ  ಮತ್ತು  ಅಂಚೆ   ಉಡುಪಿ  ತಾಲೂಕು  ಮತ್ತು  ಜಿಲ್ಲೆ ಇವರು ದಿನಾಂಕ  04/04/2021 ರಂದು   ಶರತ್  ರವರು ಸವಾರಿ ಮಾಡುತಿದ್ದ KA-20-ET- 6326 ನೇ  ಮೋಟಾರು  ಸೈಕಲಿನಲ್ಲಿ  ಪಿರ್ಯಾದಿದಾರರು ಹಿಂಬದಿ ಕುಳಿತು ಕರಾವಳಿ  ಜಂಕ್ಷನ್ ಕಡೆಯಿಂದ  ಸಿಟಿ ಬಸ್ಸ್ ನಿಲ್ದಾಣದ  ಕಡೆಗೆ  ರಾಷ್ಟ್ರೀಯ  ಹೆದ್ದಾರಿ  169 ( ಎ) ರಲ್ಲಿ  ಸವಾರಿಮಾಡಿಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 8:45 ಗಂಟೆಗೆ ಬನ್ನಂಜೆ  ಜಂಕ್ಷನ್ ಬಳಿ ತಲುಪುವಾಗ ಹಿಂಬದಿಯಿಂದ   ಕರಾವಳಿ  ಜಂಕ್ಷನ್ನ  ಕಡೆಯಿಂದ KA-20-EJ-7036 ನೇ ಬುಲೆಟ್ ಸವಾರ ಪ್ರಸಾದ ತನ್ನ ಬುಲೆಟ್ ನ್ನು ದುಡುಕುತನ ಮತ್ತು  ನಿರ್ಲಕ್ಷ್ಯತನದಿಂದ  ಸವಾರಿ ಮಾಡಿ  KA-20-ET- 6326 ನೇ ಮೋಟಾರು  ಸೈಕಲಿನ ಹಿಂಬದಿಗೆ  ಡಿಕ್ಕಿ  ಹೊಡೆದ ಪರೀಣಾಮ KA-20-ET- 6326 ನೇ  ಮೋಟಾರು  ಸೈಕಲಿನಲ್ಲಿದ್ದ  ಸವಾರರಿಬ್ಬರೂ  ಮೋಟಾರು  ಸೈಕಲ್  ಸಮೇತ  ರಸ್ತೆಗೆ  ಬಿದ್ದು  ಸವಾರ  ಶರತ್ ರವರಿಗೆ ಎಡಕಾಲಿನ  ಬೆರಳುಗಳಿಗೆ ಗಂಭೀರ  ಗಾಯವಾಗಿದ್ದು  ಸಹ ಸವಾರರಾದ ಪಿರ್ಯಾದಿದಾರರಿಗೆ  ಎಡಕಾಲು  ಮತ್ತು  ಮುಖಕ್ಕೆ   ಗಂಬೀರ  ಗಾಯವಾಗಿದ್ದು  ಆಪಾದಿತ  ಪ್ರಸಾದ   ಗಾಯಾಳುಗಳ  ಆಸ್ಪತ್ರೆಯ  ಖರ್ಚು ವೆಚ್ಚಗಳನ್ನು  ಕೊಡುವುದಾಗಿ  ತಿಳಿಸಿದ್ದು  ಈಗ ಕೊಡಲು ನಿರಾಕರಿಸಿರುವುದರಿಂದ ತಡವಾಗಿ ದೂರು ನೀಡಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021  ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕುಂದಾಪುರ: ದಿನಾಂಕ 16/04/2021 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್ ಉಪನಿರೀಕ್ಷಕರು,  ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ  ಕುಂದಾಪುರ ತಾಲೂಕು, ಕುಂದಾಪುರ  ಕಸಬಾ ಗ್ರಾಮದ ಎಮ್ ಕೋಡಿಯ ಮೊಯಿದ್ದೀನ್ ಸಾಹೇಬ್ ಇವರ ಮನೆಯ ಹಿಂಬದಿಯ ಶೆಡ್‌ನಲ್ಲಿ ಅಕ್ರಮವಾಗಿ ದನವನ್ನು ಮಾಂಸಕ್ಕಾಗಿ ಕಡಿಯುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ಪರಿಶೀಲಿಸಲಾಗಿ, ಮುನಾಫ್ ಎಂಬಾತನ ಮನೆಯ ಹಿಂಬದಿ ಜಾಗದ ಶೆಡ್‌ನಲ್ಲಿ  ಓರ್ವ ವ್ಯಕ್ತಿ ಕೈಯಲ್ಲಿ ಚೂರಿ ಹಾಗೂ ಮಚ್ಚನ್ನು ಹಿಡಿದುಕೊಂಡು ಅಕ್ರಮವಾಗಿ ಜಾನುವಾರನ್ನು ಕಡಿದು ಕೊಂದು ಮಾಂಸ ಮಾಡುತ್ತಿರುವುದು  ಖಚಿತಪಡಿಸಿಕೊಂಡು ಹತ್ತಿರ ಹೋಗುತ್ತಿದ್ದಂತೆಯೇ ಆತನು  ಓಡಿ ತಪ್ಪಿಕೊಂಡಿರುತ್ತಾನೆ.  ಬಳಿಕ ಪರಿಶೀಲನೆ ನಡೆಸಲಾಗಿ ಸುಮಾರು 30 ಕೆ.ಜಿ. ತೂಕ ಇರುವ ಚರ್ಮ ಸಹಿತ ದನದ ಮಾಂಸವಿದ್ದು ಅದರಲ್ಲಿ ಜಾನುವಾರಿನ ಗೊರಸು, ಚರ್ಮ ಸಹಿತ ಇರುವ ತಲೆ, ಕೊಂಬು, ಇದ್ದು,  ಮಚ್ಚು-2, ದನದ ಮಾಂಸ ಕಡಿಯಲು ಉಪಯೋಗಿಸಿದ 2 ಅಡಿ ಎತ್ತರದ  ಮರದ ದಪ್ಪದ ತುಂಡು-1 ಇದ್ದಿರುತ್ತದೆ. ದನದ ಮಾಂಸದ ಮೌಲ್ಯ 9,000/-ರೂಪಾಯಿ ಆಗಿರುತ್ತದೆ. ಆರೋಪಿತನು ಅಕ್ರಮವಾಗಿ ಹಣ ಮಾಡುವ ಉದ್ದೇಶದಿಂದ ಜಾನುವಾರನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದು ಜಾನುವಾರನ್ನು  ವಧೆ ಮಾಡಲು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಜಾನುವಾರವನ್ನು ವಧೆ ಮಾಡಿ ಮಾಂಸ ಮಾಡಿ  ಮಾರಾಟ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ: ಕಲಂ: 4, 5, 7, 11 ಕರ್ನಾಟಕ  ಗೋ ಹತ್ಯೆ ನಿಷೇಧ ಮತ್ತು ಗೋ ಸಂರಕ್ಷಣಾ ಕಾಯಿದೆ  ಮತ್ತು ಕಲಂ: 379, 429  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಸುನೀಲ್ ಕೊಟ್ಯಾನ್ (40), ತಂದೆ: ಶಂಕರ ಸಾಲ್ಯಾನ್, ವಾಸ: ಬೇಬಿ ನಿವಾಸ, ಬೈಲಡ್ಕ ಮನೆ, ಕುಂಟಲ್ಪಾಡಿ, ಕಾರ್ಕಳ ತಾಲೂಕು ಇವರು ಕೃಷಿಕರಾಗಿದ್ದು ಜೀವನ ನಿರ್ವಹಣೆಗಾಗಿ 6 ದನಗಳನ್ನು ಸಾಕಿಕೊಂಡಿದ್ದು ದಿನಾಂಕ 12/04/2021 ರಂದು ರಾತ್ರಿ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದು ದಿನಾಂಕ 13/04/2021 ರಂದು ಬೆಳಿಗ್ಗೆ 05.30 ಗಂಟೆಗೆ ಹಾಲು ಕರೆಯಲು ಹೋದಾಗ ಕಟ್ಟಿ ಹಾಕಿದ ದನಗಳ ಪೈಕಿ 5 ದನಗಳು ಮಾತ್ರ ಇದ್ದು 1 ಕಪ್ಪು ಬಣ್ಣದ ದನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ದಿನಾಂಕ 16/04/2021 ರಂದು ಪಿರ್ಯಾದಿದಾರರ ಮೊಬೈಲ್ ಗೆ ಬಂದ ಸಿಸಿ ಟಿವಿ ಫೂಟೇಜ್ ನಲ್ಲಿ ಓರ್ವ ದಡೂತಿ ವ್ಯಕ್ತಿ ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಸೇರಿ ಕಾಬೆಟ್ಟು ಶೀತಲ್ ಬಾರ್ ಬಳಿ ಕಪ್ಪು ಬಣ್ಣದ ದನವನ್ನು ಸೇರಿ ಇತರೇ 2 ದನವನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಬಿಳಿ ಬಣ್ಣದ  ಕಾರಿಗೆ ತುಂಬಿಸುತ್ತಿದ್ದು  ಕಂಡು ಬಂದಿರುವುದಾಗಿದೆ. ಕಳುವಾದ ಪಿರ್ಯಾದಿದಾರರ ದನದ ಮೌಲ್ಯ 20,000/- ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2021  ಕಲಂ:  8,11 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯಿದೆ. ಮತ್ತು  ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 16/04/2021ರಂದು  ಪಿರ್ಯಾದಿದಾರರಾದ ಉಡುಪಿ  ಸಂಚಾರ  ಪೊಲೀಸ್‌ಠಾಣೆಯ  ಎಎಸ್‌ಐಯವರಾದ ಚಂದ್ರಶೇಖರ ಇವರು ಸಿಬ್ಬಂದಿ ಯವರ  ಜೊತೆಯಲ್ಲಿ  ಕರಾವಳಿ  ಬೈಪಾಸ್‌ ಬಳಿ   ವಾಹನ  ತಪಾಸಣೆ  ಕರ್ತವ್ಯದಲ್ಲಿ  ನಿರತರಾಗಿದ್ದ  ಸಮಯ   ಸಂಜೆ  6:15  ಗಂಟೆಗೆ  ಓರ್ವ  ವ್ಯಕ್ತಿ  ಓಡಿ ಬಂದು ‘ ಏ  ಪೊಲೀಸರೆ ನೀವು  ವಾಹನ ಚೆಕ್‌ ಮಾಡಲು ಏನು ಅಧಿಕಾರ  ಇದೆ? ’  ಎಂದು  ಹೇಳಿ,  ಏಕಾಏಕಿ  ಫಿರ್ಯಾದುದಾರರ  ಎಡಕೆನ್ನೆಗೆ  ಬಲವಾಗಿ   ಹೊಡೆದ  ಪರಿಣಾಮ , ಫಿರ್ಯಾದುದಾರರ ಕನ್ನಡಕ  ಒಡೆದುಹೋಗಿದ್ದು,  ಆರೋಪಿತನು  ಫಿರ್ಯಾದುದಾರರ  ಷರ್ಟಿನ  ಕಾಲರ್‌ ಪಟ್ಟಿಯನ್ನು   ಹಿಡಿದು ಎಳೆದಾಡಿ,  ಉರುಡಾಟ  ಮಾಡಿದ್ದಲ್ಲದೇ  ಬಿಡಿಸಲು  ಬಂದ  ಸಾರ್ವಜನಿಕರಿಗೂ  ಕೂಡಾ  ಕೈಯಿಂದ  ಹೊಡೆದು,  ಕಾಲಿನಿಂದ  ತುಳಿದು   ಹಲ್ಲೆ  ಮಾಡಿದ್ದು,  ಸದ್ರಿ ಆರೋಪಿಯ  ಹೆಸರು  ಶಿವಕುಮಾರ್ ಆಸಂಗಿ(21ವ) ತಂದೆ: ದೇವಪ್ಪ ಆಸಂಗಿ ವಾಸ:ಐಹೊಳೆ, ಬಾಗಲಕೋಟೆ ಎಂಬುದಾಗಿ   ತಿಳಿದುಬಂದಿರುತ್ತದೆ  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2021 ಕಲಂ:323,332,353 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-04-2021 10:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080