ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ:  ಪಿರ್ಯಾದಿ ಡಾ. ವಾಸುದೇವ ಇವರು ದಿನಾಂಕ  17/04/2021 ರಂದು ಕೆಲಸ ಮುಗಿಸಿ ಉಡುಪಿಯಿಂದ ಕಲ್ಸಂಕ ಮಾರ್ಗವಾಗಿ ಗುಂಡಿಬೈಲಿನಲ್ಲಿರುವ ತನ್ನ ಮನೆಗೆ ಮೋಟಾರು ಸೈಕಲ್ ನಂಬ್ರ KA20EU4030 ನೇದರಲ್ಲಿ ಹೋಗುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 1:40 ಗಂಟೆಗೆ ಶಿವಳ್ಳಿ ಗ್ರಾಮದ ಗುಂಡಿಬೈಲು ವಿಜಯತಾರಾ ಹೋಟೇಲ್ ಎದುರು ತಲುಪುವಾಗ ಹಿಂದಿನಿಂದ ಅಂದರೆ ಕಲ್ಸಂಕ ಕಡೆಯಿಂದ ಓರ್ವ ಮೋಟಾರು ಸೈಕಲ್ ಸವಾರ ತನ್ನ ಮೋಟಾರು ಸೈಕಲಿನಲ್ಲಿ ಓರ್ವನನ್ನು ಸಹಸವಾರನನ್ನಾಗಿ ಕೂರಿಸಿಕೊಂಡು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಾಬ್ತು ಮೋಟಾರು ಸೈಕಲಿಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕೈಗೆ ತರಚಿದ ಗಾಯ ಹಾಗೂ ಎಡಕೈಗೆ ಮೂಳೆಮುರಿತ ಉಂಟಾಗಿರುತ್ತದೆ. ಅಫಘಾತಪಡಿಸಿದ ಮೋಟಾರು ಸೈಕಲ್ ಸವಾರ ತನ್ನ ಮೋಟಾರು ಸೈಕಲನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಮೋಟಾರು ಸೈಕಲ್ ನಂಬ್ರ ತಿಳಿದುಬಂದಿರುವುದಿಲ್ಲ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021  ಕಲಂ  279, 338 ಐಪಿಸಿ ಮತ್ತು ಕಲಂ 134 (ಎ) & (ಬಿ) ಐಎಮ್ವಿ ಆಕ್ಟ್ ನಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ: ಪಿರ್ಯಾದಿದಾರರಾದ ಸುಜಿತ್‌ ಸಾಧು ಅಂಚನ್ (35), ತಂದೆ: ಸಾಧು ಕೆ. ಅಂಚನ್‌, ವಾಸ: ದರ್ಖಾಸು ಮನೆ, ನಿಟ್ಟೆ ಗ್ರಾಮ, ದೂಪದಕಟ್ಟೆ ಅಂಚೆ ಕಾರ್ಕಳ ತಾಲೂಕು ಇವರ ತಂದೆ ಸಾಧು ಕೆ. ಅಂಚನ್‌(65)ರವರು ಒಂದು ವರ್ಷದಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮನೆಯಲ್ಲಿದ್ದವರು ದಿನಾಂಕ 16/04/2021 ರಂದು ರಾತ್ರಿ 08:30 ಗಂಟೆಗೆ ಊಟ ಮುಗಿಸಿ ಮನೆಯ ಮುಂದಿನ ಜಗಳಿಯಲ್ಲಿ ಕುಳಿತಿದ್ದವರು ಕಾಣಿಸದೇ ಇದ್ದು ಸುತ್ತ ಮುತ್ತ ಹುಡುಕಾಡಿದಾಗ ಮನೆಯ ಹಿಂದಿನ ಹಾಡಿಯಲ್ಲಿ ಕಾಟು ಮರದ ಕೊಂಬೆಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು ಕೂಡಲೇ ಚಿಕಿತ್ಸೆಯ ಬಗ್ಗೆ ಕಾರ್ಕಳ ಸಿಟಿ ಆಸ್ಪತ್ತೆಗೆ ಕರೆದುಕೊಂಡು ಪರೀಕ್ಷಿಸಿದ ವೈದ್ಯರು ಸಾಧು ಅಂಚನ್‌ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತ ಸಾಧು ಅಂಚನ್‌ರವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದವರು ಈ ಬಗ್ಗೆ ಚಿಕಿತ್ಸೆ ಪಡೆದರೂ ಗುಣಮುಖರಾಗದೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16/04/2021 ರಂದು ರಾತ್ರಿ 09:00  ಗಂಟೆಯಿಂದ 10:30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಹಿಂದಿನ ಹಾಡಿಯಲ್ಲಿ ಕಾಟು ಮರದ ಕೊಂಬೆಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಹರೀಶ ಹೊಳ್ಳ (33), ತಂದೆ:ಅನಂತ ಪದ್ಮನಾಭ ಹೊಳ್ಳ, ವಾಸ; “ಅನಂತ ಲಕ್ಷ್ಮೀ ನಿಲಯ”  , ಶಂಕರ ಕಲಾ ಮಂದಿರ ಹತ್ತಿರ ಉಪ್ಪುಂದ ಗ್ರಾಮ. ಬೈಂದೂರು ತಾಲೂಕು ಇವರ ಅಣ್ಣನ ಮಗಳು ರಕ್ಷಿತಾ (22) ರವರು ಉದ್ಯಾವರದ ಆಯುರ್ವೇದಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಇ ಎಮ್.ಎಸ್ ವ್ಯಾಸಂಗ ಮುಗಿಸಿ  ಒಂದು ವಾರದ ಹಿಂದೆ ಮನೆಗೆ ಬಂದಿದ್ದು ದಿನಾಂಕ17/04/2021 ರಂದು ರಾತ್ರಿ 1:30 ಗಂಟೆಗೆ ಬಿ.ಇ ಎಮ್.ಎಸ್ ಅಂತಿಮ ವರ್ಷದ ಫಲಿತಾಂಶವನ್ನು ಆನ್ ಲೈನ್ ನಲ್ಲಿ ಮನೆಯವರೊಂದಿಗೆ ಸೇರಿ ನೋಡಿದ್ದು ರಕ್ಷಿತಾ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದು ಅದೇ ವಿಷಯಕ್ಕೆ ಮನನೊಂದು  ಬೇಸರದಲ್ಲಿ  ರಾತ್ರಿ 02:00 ಗಂಟೆಗೆ ಪಿರ್ಯಾದಿದಾರರ ಅಣ್ಣ, ಅತ್ತಿಗೆಯೊಂದಿಗೆ ಮಲಗಿಕೊಂಡಿದ್ದು ಬೆಳಿಗ್ಗೆ 06:30 ಗಂಟೆಗೆ ಎದ್ದು ನೋಡಿದಾಗ ರಕ್ಷಿತಾ ಇಲ್ಲದೇ ಇದ್ದುದ್ದರಿಂದ ನಂತರ ಹುಡುಕಲಾಗಿ ಮನೆಯ ಎದುರಿನ ಬಾವಿಯಲ್ಲಿ ರಕ್ಷಿತಾ ರವರ ಮೃತದೇಹವು ನೀರಿನಲ್ಲಿ ತೇಲಾಡುತ್ತಿದ್ದು ಅಗ್ನಿಶಾಮಕ ದಳದವರನ್ನು ಕರೆಯಿಸಿ ಮೃತ ಶರೀರವನ್ನು ಮೇಲಕ್ಕೆತ್ತಿದ್ದು, ಈ ಘಟನೆಗೆ ರಕ್ಷಿತಾ ಬಿ.ಇ ಎಮ್.ಎಸ್ ಫಲಿತಾಂಶದಲ್ಲಿ  ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದು ಅದೇ ವಿಷಯಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ  ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2021 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 17-04-2021 05:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080