ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ದಿನೇಶ್ ಕುಲಾಲ್ (46) , ತಂದೆ: ದಿ. ಕಾಂಪರ ಕುಲಾಲ್, ವಾಸ: ‘’ಕದಳಿಪ್ರಿಯ’’ ಪಕ್ಕಾಲು, ಪೆರ್ಡೂರು ಗ್ರಮ ಮತ್ತುಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ:15/03/2023 ರಂದುಬೆಳಿಗ್ಗೆ ಬಾಡಿಗೆ ಬಗ್ಗೆ ಪಕ್ಕಾಲಿಗೆ ಹೋಗಿ ನಂತರ ಅಲ್ಲಿಂದ  ಬುಕ್ಕಿಗುಡ್ಡೆ ಮಾರ್ಗವಾಗಿ ಹೋಗುತ್ತಾ ಪೆರ್ಡೂರು ಗ್ರಮದ ಗೋಳಿಬೆಟ್ಟು ಎಂಬಲ್ಲಿಗೆ 8:45 ಕ್ಕೆ ತಲುಪುವಾಗ  ಎದುರಿನಿಂದ ಬುಕ್ಕಿಗುಡ್ಡೆ ಕಡೆಯಿಂದ KA-20-EE-5680 ಮೋಟಾರು ಸೈಕಲ್ ಸವಾರ ಸತೀಶ್ ಶೆಟ್ಟಿ ರವರು ತನ್ನ ಮೋಟಾರು ಸೈಕಲ್‌‌ನನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ಸವಾರ ಹಾಗೂ ಸಹಸವಾರಳು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಸಹಸವಾರಳಿಗೆ ತಲೆಯ ಹಣೆಯ ಭಾಗಕ್ಕೆ ತೀವ್ರ ರಕ್ತಗಾಯವಾಗಿ ಮಾತನಾಡುತ್ತಿರಲಿಲ್ಲ. ಸವಾರನಿಗೆ ಕೈಮತ್ತು ಕಾಲಿಗೆ  ತರಚಿದ ಗಾಯವಾಗಿದ್ದು ಪಿರ್ಯಾದಿದಾರರು ಮತ್ತು ಅಕ್ಕಪಕ್ಕದವರು ಸೇರಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಅಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 15/2023  ಕಲಂ: : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕುಂದಾಪುರ: ದಿನಾಂಕ 15/03/2023 ರಂದು ಮದ್ಯಾಹ್ನ 03:30 ಗಂಟೆಗೆ, ಕುಂದಾಪುರ  ತಾಲೂಕಿನ, ತಲ್ಲೂರು ಗ್ರಾಮದ  ತಲ್ಲೂರು ಚರ್ಚ್‌ಬಳಿ  ರಸ್ತೆಯಲ್ಲಿ, ಆಪಾದಿತ ನಾರಾಯಣ ಪೂಜಾರಿ  KA-20-B-5338 ನೇ  ಆಟೋ ರಿಕ್ಷಾವನ್ನು ಹಟ್ಟಿಯಂಗಡಿ ಕಡೆಯಿಂದ ತಲ್ಲೂರು  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಸೀತಾರಾಮ ಶೆಟ್ಟಿ  ಎಂಬುವವರು KA-20- EM- 9426 ನೇ TVS Vego ಸ್ಕೂಟರ್‌ನಲ್ಲಿ ಪಿರ್ಯಾದಿದಾರರಾದ  ಶ್ರೀಮತಿ ಶರಾವತಿ (40), ಗಂಡ: ಪ್ರವೀರ ಶೆಟ್ಟಿ, ವಾಸ : ಮಂಜೂಷಾ ಚೀನಿಬೆಟ್ಟು , ಹಟ್ಟಿಯಂಗಡಿ ಗ್ರಾಮ ಕುಂದಾಪುರ ತಾಲೂಕು ಇವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು  ಬರುತ್ತಿರುವಾಗ, ಸ್ಕೂಟರ್‌ನ್ನು ಓವರ್‌ಟೇಕ್‌ ಮಾಡುತ್ತ ಹಿಂದಿನಿಂದ ಅಪಘಾತಪಡಿಸಿದ ಪರಿಣಾಮ, ಪಿರ್ಯಾದಿದಾರರ  ಬಲಕೈಯ ಮಣಿಗಂಟಿನ ಮೇಲ್ಭಾಗಕ್ಕೆ ಮೂಳೆ ಮುರಿತ ಗಾಯ,  ಬಲ ಮುಂಗಾಲು  ಗಂಟಿಗೆ , ಬಲಭುಜ ಹಾಗೂ ಮುಖದ ಬಲಭಾಗಕ್ಕೆ ತರಚಿದ ರಕ್ತಗಾಯವಾಗಿದ್ದು, ಸೀತಾರಾಮ ಶೆಟ್ಟಿಯವರಿಗೆ ಬಲ ಕೈ, ಬಲಕಾಲಿಗೆ ತರಚಿದ ಗಾಯವಾಗಿ ಪಿರ್ಯಾದಿದಾರರು  ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದು, ಹಾಗೂ ಸೀತಾರಾಮ ಶೆಟ್ಟಿಯವರು ಚಿಕಿತ್ಸೆ ಪಡೆದು ಬಿಡುಗಡೆಗೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2023 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಸ್ವಾಭಾವಿಕ ಮರಣ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ವೇಣುಗೋಪಾಲ (70), ತಂದೆ: ದಿ. ರಾಮಕೃಷ್ಣ ರಾವ್, ವಾಸ: ಉಳ್ಳೂರು, ಕೆಮ್ಮುಂಡೇಲು ಅಂಚೆ, ಎಲ್ಲೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ, ಇವರ ಹೆಂಡತಿಯ ತಮ್ಮ ಕೃಷ್ಣ ರಾವ್(65) ರವರ ಹೆಂಡತಿ ಹಾಗೂ ಮಕ್ಕಳು ಬೆಂಗಳೂರಿನಲ್ಲಿದ್ದು, ಅವರು ಪಲಿಮಾರು ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಅವರು ಪಾರ್ಶ್ವವಾಯು ಖಾಯಿಲೆಯಿಂದ  ಬಳಲುತ್ತಿದ್ದು, ದಿನಾಂಕ 16/03/2023 ರಂದು ಕಾಪು ತಾಲೂಕು ನಂದಿಕೂರು ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ದೇವರ ಜಾತ್ರೆಯ ಪ್ರಯುಕ್ತ ನಂದಿಕೂರಿನ ಅಡ್ವೆಯಲ್ಲಿರುವ ಅವರ ಮಾವನ ಮನೆ ಶ್ರೀನಿವಾಸ ನಿಲಯಕ್ಕೆ ಬಂದಿದ್ದು, ಸಂಜೆ 17:00 ಗಂಟೆಯ ವೇಳೆಗೆ  ಮನೆಯ ನೆಲದ ಮೇಲೆ ಕುಳಿತವರು ಒಮ್ಮಲೇ ಕುಸಿದು ಬಿದ್ದು, ತೀವ್ರ ಅಸ್ವಸ್ಥಗೊಂಡಿರುತ್ತಾರೆ. ನಂತರ ಅವರನ್ನು ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ತೋರಿಸಿ, ಅಲ್ಲಿನ ವೈದ್ಯರ ಸಲಹೆಯಂತೆ ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ  ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯರು ಪರೀಕ್ಷಿಸಿ ಕೃಷ್ಣ ರಾವ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 06/2023, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬೈಂದೂರು: ದಿನಾಂಕ 16/03/2023 ರಂದು ನಿರಂಜನ ಗೌಡ ಬಿ ಎಸ್,  ಪೊಲೀಸ್ ಉಪನಿರೀಕ್ಷಕರು, ಬೈಂದೂರು ಠಾಣೆ ಇವರು ಸಿಬ್ಬಂದಿಗಳೊಂದಿಗೆ ಉಡುಪಿ ಜಿಲ್ಲೆಯ ಗಡಿಭಾಗವಾದ ಶಿರೂರು ಗ್ರಾಮದ ಶಿರೂರು  ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ 13:40 ಗಂಟೆಗೆ ಭಟ್ಕಳ ಕಡೆಯಿಂದ ಬಂದ  ಹುಂಡೈ ಕಂಪೆನಿಯ ವೆನ್ಯೂ ಮಾದರಿಯ  ನೊಂದಣಿ ಸಂಖೈ ಇಲ್ಲದ (ಚಾಸಿಸ್ ನಂಬ್ರ MALFC81BLPM428542, ಇಂಜಿನ್ ನಂಬ್ರ G4LAPM428118) ಕಾರನ್ನು ನಿಲ್ಲಿಸಿ  ಪರಿಶೀಲಿಸಲಾಗಿ ಕಾರಿನ ಹಿಂಬದಿಯ ಸೀಟಿನ ಕೆಳಗೆ ಪ್ಲಾಸ್ಟಿಕ್ ಚೀಲದ ಕಟ್ಟು ಇದ್ದು  ಅದರಲ್ಲಿ ಹಣ ಇರುವುದು ಕಂಡು ಬಂದಿದ್ದು  ಕಾರಿನ ಚಾಲಕನಲ್ಲಿ ಹಣದ ಬಗ್ಗೆ ಯಾವುದೇ ದಾಖಲೆ ಇರುವ ಬಗ್ಗೆ ವಿಚಾರಿಸಿದ್ದು, ಯಾವುದೇ ದಾಖಲೆ ಇರುವುದಿಲ್ಲವಾಗಿ ತಿಳಿಸಿರುತ್ತಾರೆ. ನಂತರ  ಕಟ್ಟನ್ನು ಬಿಡಿಸಿ ಪರಿಶೀಲಿಸಿದಾಗ 100 ರೂ ಮುಖಬೆಲೆಯ 3000 ನೋಟುಗಳು, 200 ರೂ ಮುಖಬೆಲೆಯ 1000 ನೋಟುಗಳು  ಹಾಗೂ 500 ರೂ ಮುಖಬೆಲೆಯ 3000 ನೋಟುಗಳು ಇದ್ದು ಒಟ್ಟು 20 ಲಕ್ಷ ಹಣ ಇದ್ದಿರುತ್ತದೆ.  ಹಣದ ಬಗ್ಗೆ ಯಾವುದೇ ದಾಖಲೆ ಇಲ್ಲವೆಂದು ತಿಳಿಸಿದ ಮೇರೆಗೆ ಹಣವನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಅರೋಪಿ ಬಶೀರ್ (42),ತಂದೆ: ದಾವುದ್,  ವಾಸ: ಮಂಜಿಲಪಲ್ಕೆ ಶಿರ್ಲಾಲು ಬೆಳ್ತಂಗಡಿ ತಾಲೂಕು  ಯಾವುದೇ ದಾಖಲೆ ಇಲ್ಲದೇ ರೂ 20 ಲಕ್ಷ ನಗದು ಹಣವನ್ನು  ಕಾರಿನಲ್ಲಿಸಾಗಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ  ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023 ಕಲಂ: 98 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಪ್ರತಿಮಾ ರಾಣೆ (42), ಗಂಡ; ಧರ್ಮ ರಾಜ್, ವಾಸ; ಪುರಸಭೆ ಸದಸ್ಯರು, ಕಾರ್ಕಳ ಇವರು ಕಾರ್ಕಳ ಪುರಸಭಾ ಸದಸ್ಯರಾಗಿದ್ದು ಕಾರ್ಕಳ ತಾಲೂಕು ಮಾರಿಗುಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸ್ವಯಂ ಸೇವಕರಾಗಿರುತ್ತಾರೆ. ದಿನಾಂಕ 12/03/2023 ರಂದು ಬೆಳಿಗ್ಗೆ 10:45 ಗಂಟೆಗೆ ದೇವಸ್ಥಾನದ ಊಟದ ವಿಚಾರವಾಗಿ ವಾಟ್ಸಾಪ್‌ನಲ್ಲಿ ಬಂದ ಸಂದೇಶದ ಬಗ್ಗೆ ಆಪಾದಿತ ರಮಿತಾ ಕೋಂ: ಶೈಲೇಂದ್ರ , ಎಸ್‌ವಿ ಟಿ ಸರ್ಕಲ್, ಕಾರ್ಕಳ ಇವರು ಪಿರ್ಯಾದಿದಾರರನ್ನು ಉದ್ದೇಶಿಸಿ ಪುರಸಭಾ ಕಟ್ಟಡದ ಬಳಿ ಸಾರ್ವಜನಿಕವಾಗಿ ಸಾರ್ವಜನಿಕ ಸಮ್ಮುಖದಲ್ಲಿ  ಸಾರ್ವಜನಿಕವಾಗಿ ನಿಂದಿಸಿದ್ದು, ಇದೇ ವಿಚಾರವನ್ನು ವಾಟ್ಸಾಪ್ ಮೂಲಕ ಬಂದಿರುವ ಬಗ್ಗೆ ಆರೋಪಿಯು ಪಿರ್ಯಾದಿದಾರರಲ್ಲಿ ವಾಟ್ಸಾಪ್ ಸಂದೇಶವನ್ನು  ನೀವೇ ಕಳುಹಿಸಿ ಕೊಟ್ಟಿರುತ್ತೀರಾ ? ಎಂದು ಆಪಾದಿತಳು ದಿನಾಂಕ 14/03/2023 ರಂದು  ಮದ್ಯಾಹ್ನ 1:45 ಗಂಟೆಗೆ  ಪುರಸಭಾ ರಸ್ತೆಯಲ್ಲಿ  ಪಿರ್ಯಾದಿದಾರರನ್ನು ಅಡ್ಡಕಟ್ಟಿ ಗಲಾಟೆ ಮಾಡಿ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2023 ಕಲಂ: 341, 504 ಐಪಿಸಿ ಮತ್ತು 3(1)(S),3(2)(v-a) SC/ST (POA)  Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 16/03/2023 ರಂದು ಪ್ರಸನ್ನ ಎಂ. ಎಸ್ , ಪೊಲೀಸ್‌ ಉಪನಿರೀಕ್ಷಕರು,  ಕಾರ್ಕಳ ನಗರ  ಪೊಲೀಸ್‌ ಠಾಣೆ ಇವರು ಸಾಣೂರು ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಕರ್ತವ್ಯ ಮುಗಿಸಿ  ಸಾಣೂರು ಪುಲ್ಕೇರಿ, ಗ್ಯಾಸ್‌ ಗೋಡೌನ್‌, ಅನಂತಶಯನ ಮುಖಾಂತರ ಗಸ್ತು ಮಾಡುತ್ತಾ  ಕಾರ್ಕಳ ಕಸಬಾ ಗ್ರಾಮದ ಸ್ವರಾಜ್ ಮೈದಾನದ ಬಳಿ ಬಂದಾಗ ಆರೋಪಿತರಾದ 1) ನವನೀತ್‌ (33), ತಂದೆ; ಯಲ್ಲಪ್ಪ ಎಸ್‌, ವಾಸ;  ರಾಧಾಕೃಷ್ಣ  ನಿವಾಸ, ಮೀನುಗಾರಿಕೆ ಇಲಾಖೆಯ ರಸ್ತೆ, ಕಾರ್ಕಳ, 2) ಪುನೀತ್‌ ಕುಮಾರ್‌ (35),  ತಂದೆ; ಯಲ್ಲಪ್ಪ ಎಸ್‌, ವಾಸ;  ರಾಧಾಕೃಷ್ಣ  ನಿವಾಸ, ಮೀನುಗಾರಿಕೆ ಇಲಾಖೆಯ ರಸ್ತೆ, ಕಾರ್ಕಳ,   3) ಶರತ್‌ ಕುಮಾರ್‌ (27),  ತಂದೆ; ಯಲ್ಲಪ್ಪ ಎಸ್‌, ವಾಸ;  ರಾಧಾಕೃಷ್ಣ  ನಿವಾಸ, ಮೀನುಗಾರಿಕೆ ಇಲಾಖೆಯ ರಸ್ತೆ, ಕಾರ್ಕಳ, 4) ಅಜಯ್‌ (25), ತಂದೆ; ಅಶೋಕ, ವಾಸ;  ದುರ್ಗಾನುಗ್ರಹ ನಿಲಯ, ಮೀನುಗಾರಿಕೆ ಇಲಾಖೆಯ ರಸ್ತೆ, ಕಾರ್ಕಳ ಕಸಬಾ ಗ್ರಾಮ,ಕಾರ್ಕಳ ತಾಲೂಕು ಇವರು  ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮದ್ಯವನ್ನು ಸೇವಿಸುತ್ತಿದ್ದವರನ್ನು ವಿಚಾರಣೆ ನಡೆಸಿ 180 ml ನ Radicȯ 8 PM ಎಂದು ಬರೆದಿರುವ ಖಾಲಿ ಪ್ಯಾಕೆಟ್‌ಗಳು ಮತ್ತು 4 ಪ್ಲಾಸ್ಟಿಕ್‌ ಲೋಟಗಳನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2023 ಕಲಂ: 15(ಎ), 32(3) KE ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು: ದಿನಾಂಕ 16/03/2023 ರಂದು ಬೆಳಿಗ್ಗೆ ಈರಣ್ಣ ಶಿರಗುಂಪಿ , ಪೊಲೀಸ್‌ ಉಪನಿರೀಕ್ಷಕರು, ಕೊಲ್ಲೂರು ಪೊಲೀಸ್‌ ಠಾಣೆ ಇವರು  ರೌಂಡ್ಸ್‌‌ ಕರ್ತವ್ಯದಲ್ಲಿದಾಗ ಕೊಲ್ಲೂರು ಗ್ರಾಮದ  ಸೌರ್ಪಣಿಕ  ಸ್ನಾನಘಟ್ಟದಲ್ಲಿ ಸಾರ್ವಜನಿಕ ಸುಲಭ ಶೌಚಾಲಯ ಸಮೀಪ  ಸೌರ್ಪಣಿಕ ನದಿಗೆ ಹಾಕಿದ ತಡೆಗೋಡೆಯ  ಮೂಲೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಶರಾಬು ಸೇವನೆ ಮಾಡುತ್ತಿದ್ದ  ನವೀನ್‌ಕುಮಾರ್‌(28). ತಂದೆ: ಕೃಷ್ಣಮೂರ್ತಿ . ವಾಸ: ನಂಬ್ರ: 22  1 ನೇ ಕ್ರಾಸ್‌1 ನೇ ಮೈನ್‌ಮಥುರ ನಗರ  ನಾಗರ ಬಾವಿ  ಬೆಂಗಳೂರು ಉತ್ತರ  ತಾಲೂಕು ಬೆಂಗಳೂರು ಎಂಬಾತನ  ವಶದಿಂದ  Kingfisher ಎಂದು ಬರೆದಿರುವ ಶರಾಬಿಗೆ ನೀರು ಮಿಶ್ರಣ ಮಾಡಿರುವ  ಪ್ಲಾಸ್ಟಿಕ ಬಾಟಲಿ -1 , Bagpier Whicky 180  ml  ನ ಸ್ಯಾಚೆಟ್ -1,  ಹಾಗೂ ಖಾಲಿ  ಸ್ಯಾಚೆಟ್ -1,  ಪ್ಲಾಸ್ಟಿಕ್ ಲೋಟ -1  ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2023 ಕಲಂ:15 (ಎ) ಕರ್ನಾಟಕ ಅಬಕಾರಿ ಕಾಯ್ಡೆ ಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಬ್ರಹ್ಮಾವರ: ಪಿರ್ಯಾದಿದಾರರಾದ ಸುರೇಶ ವಾಲ್ಮೀಕಿ (47), ತಂದೆ: ದಿ. ಶಿವಪ್ಪ, ವಾಸ: ಸವೂರ್‌, ಚೆಳ್ಳಿ ಹಾಳ ಅಂಚೆ, ಸವನೂರು ತಾಲೂಕು, ಹಾವೇರಿ ಜಿಲ್ಲೆ ಇವರು  ತನ್ನ ಹೆಂಡತಿ ಶಾರದ ಹಾಗೂ ಮಕ್ಕಳಾದ 1 ನೇ ಆರೋಪಿ ಆಂಜನೇಯ ಮತ್ತು 2 ನೇ ಆರೋಪಿ ಅರ್ಜುನರೊಂದಿಗೆ  ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ, ದೂಪದಕಟ್ಟೆಯ ಬಳಿ ಇರುವ ಚಂದ್ರಶೇಖರ ಶೆಟ್ಟಿ ರವರ ಬಾಡಿಗೆ ಮನೆಯಲ್ಲಿ ವಾಸವಿದ್ದು ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿರುವುದಾಗಿದೆ. ದಿನಾಂಕ 14/03/2023 ರಂದು ಪಿರ್ಯಾದಿದಾರರು  ಕೊರಂಗ್ರಪಾಡಿಯಲ್ಲಿ ತರಕಾರಿ ವ್ಯಾಪಾರ ಮುಗಿಸಿ ರಾತ್ರಿ 10:25 ಗಂಟೆಯ ಸಮಯಕ್ಕೆ ಮನೆಗೆ ಬಂದಾಗ ಮನೆಯಲ್ಲಿದ್ದ 1 ನೇ ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ಸಾಸ್ತಾನ ಸಂತೆ  ಮಾಡಿದ್ದು ಹೇಳಿಕೊಂಡು ಬಂದಿದ್ದೀಯ ಎಂದು ಬೈಯಲು ಪ್ರಾರಂಭಿಸಿದನು, ಆಗ ಪಿರ್ಯಾದಿದಾರರು ಸಹ ಮಾತನಾಡುತ್ತಾ ಮನೆಯ ಒಳಗೆ ಹೋಗಿ ನೀರು ಕುಡಿದು ವಾಪಸ್ಸು ಬರುವಾಗ ರಾತ್ರಿ 10:40 ಗಂಟೆಗೆ ಮನೆಯ ಹಾಲಿನಲ್ಲಿದ್ದ 1 ನೇ ಆರೋಪಿ ಕಬ್ಬಿಣದ ಪೈಪನ್ನು ಹಿಡಿದುಕೊಂಡಿದ್ದವನು ಏಕಾಏಕಿ ತೆಗೆದು ಪಿರ್ಯಾದಿದಾರರ ಬಲಕಾಲಿಗೆ ಹೊಡೆದನು, ಅದೇ ಸಮಯ 2 ನೇ ಆರೋಪಿಯು ಕೈಯಿಂದ ದೂಡಿರುತ್ತಾನೆ. ಈ ಹಲ್ಲೆಯಿಂದ ಪಿರ್ಯಾದಿದಾರರ ಕಾಲಿಗೆ ನೋವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಪಿರ್ಯಾದಿದಾರರು ಹೆಂಡತಿ ಮಕ್ಕಳಿಗೆ ಸಂತೆ ವ್ಯಾಪಾರವನ್ನು ಹೇಳಿಕೊಟ್ಟಿದ್ದು ಈಗ ಅವರೆಲ್ಲರೂ ಬೇರೆ ಬೇರೆ ವ್ಯಾಪಾರವನ್ನು ಮಾಡುತ್ತಿದ್ದು ಅದೇ ವಿಚಾರದಲ್ಲಿ ಹಲ್ಲೇ ನಡೆಸಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2023 : ಕಲಂ 504, 323, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
   

ಇತ್ತೀಚಿನ ನವೀಕರಣ​ : 17-03-2023 09:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080