ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ 13/03/2022 ರಂದು  ಪಿರ್ಯಾದಿದಾರರಾದ ಸೀಧಾ  ಅಂಜು (20), ತಂದೆ: ಅಜೀಜ್  ಆಹ್ಮದ್,   ವಾಸ: ಉಚ್ಚಿಲ  ಬೆಳಪು ಗ್ರಾಮ  ಉಡುಪಿ  ತಾಲೂಕು  ಹಾಗೂ  ಅವರ  ತಾಯಿ  ಶ್ರೀಮತಿ  ಸಾಜೀದ್  ಬಾನು  ಇವರು KA-20- MC-7573  ನೇ   ನಂಬ್ರದ   ಕಾರಿನಲ್ಲಿ  ಕುಂದಾಪುರ   ತಾಲೂಕಿನ   ಅಂಪಾರು ಗ್ರಾಮದ   ಬಾಳ್ಕಟ್ಟು  ಸೇತುವೆಯ  ಬಳಿ ಕುಂದಾಪುರ  ಕಡೆಯಿಂದ  ಅಂಪಾರು ಕಡೆಗೆ  ಹೋಗುವಾಗ  ಬೆಳ್ಳಗಿನ  ಜಾವ  5:45 ಗಂಟೆಗೆ  ಆರೋಪಿ  ಕಾರನ್ನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ   ಪರಿಣಾಮ  ಕಾರು  ಚಾಲಕನ  ನಿಯಂತ್ರಣ ತಪ್ಪಿ  ರಸ್ತೆಯ ಬಲಬದಿಯ  ಚರಂಡಿಯ ದಿಬ್ಬಕ್ಕೆ  ಡಿಕ್ಕಿ  ಹೊಡೆದ  ಪರಿಣಾಮ ಪಿರ್ಯಾದಿದಾರರು  ಹಾಗೂ  ಅವರ ತಾಯಿ ಶ್ರೀಮತಿ ಸಾಜೀದ್ ಬಾನು  ಇವರಿಗೆ  ರಕ್ತಗಾಯವಾಗಿರುತ್ತದೆ,  ಗಾಯಾಳುಗಳನ್ನು  ಚಿಕಿತ್ಸೆಯ  ಬಗ್ಗೆ  ಕುಂದಾಪುರ ಚಿನ್ಮಯಿ   ಆಸ್ಪತ್ರೆಗೆ   ದಾಖಲು  ಆಗಿರುತ್ತಾರೆ. ಹಾಗೂ ಕಾರು ಸಂಪೂರ್ಣ  ಜಖಂಗೊಂಡಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾಪು: ಪಿರ್ಯಾದಿದಾರರಾದ ಇನಾಯತ್ ಪಾಷಾ (41), ತಂದೆ: ಮಹಮ್ಮದ್ ಗೌಸ್, ವಾಸ: ಸಿದ್ದಾಪುರ ಗ್ರಾಮ  ಜಾಮೀಯ ಮಸೀದಿ ಹತ್ತಿರ  ಅರಕಲಗೂಡು ತಾಲೂಕು ಹಾಸನ ಜಿಲ್ಲೆಇವರು ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದು, ದಿನಾಂಕ 14/03/2022 ರಂದು ತನ್ನ KA-01-AH-4877 ನೇ ಲಾರಿಯನ್ನು ರಾತ್ರಿ 8:30 ಗಂಟೆಗೆ ಮಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಚಲಾಯಿಸಿಕೊಂಡು ಹೊರಟಿದ್ದು, ರಾತ್ರಿ 11:30 ಗಂಟೆಗೆ ಉದ್ಯಾವರದ ಸೇತುವೆ ಬಳಿ ತಲುಪುವಾಗ ಲಾರಿಯ ಜಾಯಿಂಟ್ ಕಟ್ಟಾಗಿದ್ದು, ಲಾರಿಯನ್ನು ರಸ್ತೆಯ ತೀರಾ ಎಡಬದಿಗೆ ಪಾರ್ಕಿಂಗ್ ಲೈಟ್ ಗಳನ್ನು ಆನ್ ಮಾಡಿ ನಿಲ್ಲಿಸಿ, ಲಾರಿಯನ್ನು ಚೆಕ್ ಮಾಡುತ್ತಿರುವಾಗ, ದಿನಾಂಕ 15/03/2022 ರಂದು ಬೆಳಗಿನ ಜಾವ 01:00 ಗಂಟೆಗೆ ಓರ್ವ ಲಾರಿ ಚಾಲಾಕನು ತನ್ನ ಲಾರಿಯನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ   ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಹಿಂಭಾಗ ಮತ್ತು ಟ್ಯಾಂಕರ್ ನ ಮುಂಭಾಗ ಒಂದಕ್ಕೊಂದು ತಾಗಿ  ಟ್ಯಾಂಕರ್ ಚಾಲಕನು  ಮಧ್ಯದಲ್ಲಿ ಸಿಕ್ಕಿಕೊಂಡಿದ್ದು ಅವನನ್ನು ಸಾರ್ವಜನಿಕರ ಸಹಾಯದಿಂದ 108 ಅಂಬುಲೆನ್ಸ ನಲ್ಲಿ  ಉಡುಪಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ  ದಾಖಲಿಸಿದ್ದು, ತನ್ನ ಲಾರಿಗೆ ಡಿಕ್ಕಿ ಹೊಡೆದ ಟ್ಯಾಂಕರ್ ನಂಬ್ರ MH-04-JU-5327 ಆಗಿದ್ದು,  ಇದರ ಚಾಲಕನ ಹೆಸರು ಪ್ರಹ್ಲಾದ ದೇವಡೆ ಎಂಬುದಾಗಿರುತ್ತದೆ. ಪಿರ್ಯಾದಿದಾರರು ಅಪಘಾತದಿಂದ ಹೆದರಿ ದಾವಣಗೆರೆಯಲ್ಲಿರುವ ತನ್ನ ಮಾಲಕರ ಬಳಿ ಹೋಗಿ ಅವರಲ್ಲಿ ಚರ್ಚಿಸಿ  ದೂರು ನೀಡಲು ವಿಳಂಭವಾಗಿರುತ್ತದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ವಂಚನೆ ಪ್ರಕರಣ

  • ಉಡುಪಿ: ದಿನಾಂಕ 21/01/2022 ರಂದು 19:38 ಗಂಟೆಗೆ ಪಿರ್ಯಾದಿದಾರರಾದ ಡಾ. ವಾದಿರಾಜ ಭಟ್ ಜಿ.ಆರ್ (43), ತಂದೆ: ಜಿ. ರಾಮಚಂದ್ರ ಭಟ್, ವಾಸ: ಅಸೋಸಿಯೆಟ್ ಪ್ರೋಫೇಸರ್, ಎಂ.ಐ.ಟಿ. ಮಣಿಪಾಲ ಇವರಿಗೆ  ಬ್ಯಾಂಕ್ ನ ಕೆ. ವೈ.ಸಿ. ಸರಿಪಡಿಸುವ ಬಗ್ಗೆ ಸಂದೇಶವೊಂದು ಬಂದಿದ್ದು, ಪಿರ್ಯಾದಿದಾರರು ಸಂದೇಶವನ್ನು ಓಪನ್ ಮಾಡಿದಾಗ ಅವರ ಇಂಟರ್ ನೆಟ್ ಬ್ಯಾಂಕಿಂಗ್ ನಿಂದ ಕ್ರಮವಾಗಿ 24,998/-, 1,000/- ಮತ್ತು 50/- ಒಟ್ಟು ರೂಪಾಯಿ 26,048/- ಹಣವನ್ನು ಯಾರೋ ಅಪರಿಚಿತ ವ್ಯಕ್ತಿ ಮೋಸದಿಂದ ಆನ್ ಲೈನ್ ಮುಖೇನ ಮಾಡಿ, ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2022 ಕಲಂ: 66(d) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಕೇಶವ (52),  ತಂದೆ: ದಿ. ಸೀನ ಕೋಟ್ಯಾನ್, ವಾಸ: “ಕೀರ್ತನ  ನಿಲಯ” ಆರ್ಯಾಡಿ  ಪಾಂಗಾಳ,ಕಾಪು  ತಾಲೂಕು ಇವರು ಏಣಗುಡ್ಡೆ  ಗ್ರಾಮದ ಕಟಪಾಡಿಯಲ್ಲಿ ಶ್ರೀದೇವಿ ಆಟೋವರ್ಕ್ಸ ಹೆಸರಿನ  ಗ್ಯಾರೇಜ್ ನೆಡೆಸಿಕೊಂಡಿದ್ದು,  ದಿನಾಂಕ 16/03/2022 ರಂದು  15:40 ಗಂಟೆಯ  ಸಮಯಕ್ಕೆ  ಇಬ್ಬರು  ಅಪರಿಚಿತರು ನಂಬ್ರ ಪ್ಲೇಟ್ ಇಲ್ಲದ  ಟಿವಿಎಸ್ ಅಪಾಚೆ ಮೋಟಾರ್ ಸೈಕಲನ್ನು ರಿಪೇರಿಗಾಗಿ ತಂದಿದ್ದು, ಪಿರ್ಯಾದಿದಾರರು  ಅದನ್ನು ರಿಪೇರಿ ಮಾಡಿ ಸಂಜೆ  4:00 ಗಂಟೆಗೆ ವ್ಯಕ್ತಿಗಳಿಗೆ ಕೊಡುವಾಗ ರಿಪೇರಿ ಚಾರ್ಜ 400/-ರೂಪಾಯಿಗಳಾಗುತ್ತದೆ ಎಂದು ಹೇಳಿದ್ದು, ಆಗ ಅವರು ನಮ್ಮಲ್ಲಿ 250/- ರೂಪಾಯಿಗಳಿವೆ ಉಳಿದದ್ದನ್ನು ನಾಳೆ ಕೊಡುತ್ತೇವೆ ಎಂದು ಹೇಳಿದ್ದು, ಪಿರ್ಯಾದಿದಾರರು ಇದಕ್ಕೆ  ಒಪ್ಪದಿದ್ದಾಗ, ಇಬ್ಬರು ವ್ಯಕ್ತಿಗಳು ಪಿರ್ಯಾದಿದಾರರಿಗೆ  ಕೈಯಿಂದ ಹೊಡೆದಿದ್ದು,  ಇನ್ನೊಬ್ಬನು  ಅಲ್ಲಿಯೇ ಇದ್ದ ಇಂಜೀನ್ ಕೇಸಿನಿಂದ ಪಿರ್ಯಾದಿದಾರರ ತಲೆಯ ಎಡಬದಿಗೆ ಹೊಡೆದು  ಜೀವ ಬೆದರಿಕೆ ಹಾಕಿ  ಇಬ್ಬರು ಅದೇ ಮೋಟಾರ್ ಸೈಕಲ್ಲಿನಲ್ಲಿ ಹೋಗಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2022 ಕಲಂ: 323, 504, 324, 506 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 17-03-2022 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080