ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ


 • ಉಡುಪಿ:  ಪಿರ್ಯಾದಿದಾರರಾದ ಶ್ರೀಮತಿ  ಸುಮತಿ, ಪ್ರಾಯ : 65  ವರ್ಷ,  ಗಂಡ: ದಿ||  ಪಿ. ಉದಯ ರಾವ್‌,  ವಾಸ: ಮನೆನಂಬ್ರ 7-1A-14, " ದೇವಿ ಕೃಪಾ " ನ್ಯೂ ಕಾಲೋನಿ, ಕೊಡಂಕೂರು, ನಿಟ್ಟೂರು ಪೊಸ್ಟ್, ಪುತ್ತೂರು, ಉಡುಪಿ ಇವರೊಂದಿಗೆ  ವಾಸವಿದ್ದ  ಇವರ ಗಂಡನಾದ ಪಿ. ಉದಯ್ ರಾವ್‌, (74) ರವರು  ವಿಪರೀತ  ಮದ್ಯವ್ಯಸನದಿಂದಾಗಿ  ಜೀವನದಲ್ಲಿ  ಬೇಸತ್ತು  ದಿನಾಂಕ  08/03/2022  ರಂದು ಮಧ್ಯಾಹ್ನ 12:15  ಗಂಟೆಯ  ಸುಮಾರಿಗೆ  ಮನೆಯ ಬಾತ್‌ರೂಮಿನಲ್ಲಿ  ಸೂಪರ್‌ 505 ಎಂಬ ಕೀಟನಾಶಕವನ್ನು  ಸೇವಿಸಿ, ಅಸ್ವಸ್ಥರಾದವರನ್ನು ಮನೆಯವರು ಚಿಕಿತ್ಸೆಯ  ಬಗ್ಗೆ ಮಣಿಪಾಲ ಕೆಎಂಸಿ  ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ  ಫಲಕಾರಿಯಾಗದೇ  ದಿನಾಂಕ  17/03/2022 ರಂದು  ಬೆಳಿಗ್ಗೆ  08:05 ಗಂಟೆ ಸುಮಾರಿಗೆ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 16/2022 ಕಲಂ: 174 ಸಿಆರ್‌ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಫಿರ್ಯಾದಿದಾರರಾದ ಸತೀಶ್ ಕುಲಾಲ್ (43) ತಂದೆ: ಆನಂದ ಕುಲಾಲ್ ವಾಸ: ಐಶ್ವರ್ಯ ನಿಲಯ, ಕಂಚಿಗುಂಡಿ, ಹರಿಖಂಡಿಗೆ ಅಂಚೆ, ಬೈರಂಪಳ್ಳಿ ಗ್ರಾಮ ಉಡುಪಿ ಇವ ರ ಮಗ ಶ್ರೇಯಸ್ (13)  ತನ್ನ ಸೈಕಲ್‌ನಲ್ಲಿ ದಿನಾಂಕ 16/03/2022 ರಂದು ಬೆಳಿಗ್ಗೆ ಸಮಯ ಸುಮಾರು 8:30 ಗಂಟೆಗೆ ಹರಿಖಂಡಿಗೆ  ಕಂಚಿಗುಂಡಿ ರಸ್ತೆಯಲ್ಲಿ  ಶಾಲೆಗೆ ಹೋಗುವುದಕ್ಕಾಗಿ ಮನೆಯಿಂದ  ಸೈಕಲ್‌ನಲ್ಲಿ  ಬಂದು ಇವರಿಗೆ ಕೈ ಮಾಡಿ  ಸೈಕಲ್‌ನಲ್ಲಿ ಹೋಗುತ್ತಿರುವಾಗ ಸೈಕಲ್ ಸ್ಕಿಡ್ ಆಗಿ ರಸ್ತೆಗೆ ಕವುಚಿ ಬಿದ್ದನು. ಸತೀಶ್ ಕುಲಾಲ್ ರವರು ಓಡಿ ಹೋಗಿ  ಕೂಡಲೆ ಮೇಲಕ್ಕೆತ್ತಿ ನೋಡಲಾಗಿ ಹಣೆಗೆ ರಕ್ತಗಾಯವಾಗಿದ್ದು ಕೂಡಲೇ  ಕಾರಿನಲ್ಲಿ  ಕೆಎಂಸಿ ಮಣಿಪಾಲ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಪರೀಕ್ಷಿಸಿದ ವೈದ್ಯರು ಶ್ರೇಯಸ್ ದಾರಿ ಮಧ್ಯೆಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 10/2022 ಕಲಂ: 174 ಸಿಆರ್‌ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾಧ ಕಾರ್ತಿಕ್  ಕುಮಾರ್, (30), ತಂದೆ ಸದಾನಂದ ಆಚಾರ್ಯ,  ವಾಸ ಆಶ್ರಯ ಕಾಲೊನಿ, ಪತ್ತೊಂಜಿಕಟ್ಟೆ, , ಪೆರ್ವಾಜೆ, ಕಸಬಾ  ಗ್ರಾಮ, ಕಾರ್ಕಳ ಇವರ ತಂದೆ  ಸದಾನಂದ ಆಚಾರ್ಯ (57) ಎಂಬವರು ಮಂಗಳೂರಿನಲ್ಲಿ  ಚಿನ್ನದ ಕೆಲಸ ಮಾಡುತ್ತಿದ್ದು  5 ತಿಂಗಳಿನಿಂದ  ಜೀರ್ಣಶಕ್ತಿಯ ಸಮಸ್ಯೆ ಇದ್ದು ಅದೇ ಕಾರಣದಿಂದ   ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದರು. ಮತ್ತು ಅನಾರೋಗ್ಯದ  ಕಾರಣದಿಂದ ತುಂಬಾ ನೊಂದುಕೊಂಡಿದ್ದರು.  ದಿನಾಂಕ  16/03/2022 ರಂದು ರಾತ್ರಿ 11:00 ಗಂಟೆಗೆ ಮನೆಯಲ್ಲಿ  ಮಲಗಿದ್ದ  ಸದ್ರಿಯವರು  ಬೆಳಿಗ್ಗೆ  ನೋಡಿದಾಗ  ಮನೆಯಲ್ಲಿ ಇಲ್ಲದ ಕಾರಣ  ಹುಡುಕಾಡಿದಾಗ ದಿನಾಂಕ 17/03/2022 ರಂದು ಬೆಳಿಗ್ಗೆ 07:30 ಗಂಟೆಗೆ ಮನೆಯ  ಹಿಂಬದಿ  ಪಕ್ಕಾಸಿಗೆ  ನೇಣುಹಾಕಿಕೊಂಡಿದ್ದರು. ಕೂಡಲೇ ಇಳಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಕಾರ್ಕಳ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಪರೀಕ್ಷಿದ ವೈದ್ಯರು ಸದಾನಂದ ಆಚಾರ್ಯರವರು ಮೃತಪಟ್ಟಿರುವುದಾಗಿ ತಿಳಿಸಿದ್ದು ಸದಾನಂದ ಆಚಾರ್ಯರವರು ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ನೊಂದು  ದಿನಾಂಕ 16/03/2022 ರಂದು ರಾತ್ರಿ 23:00 ಗಂಟೆಯಿಂದ  ದಿನಾಂಕ 17/03/2022 ರ ಬೆಳಿಗ್ಗೆ 07:30 ಗಂಟೆಯ ಮಧ್ಯೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 10/2022 ಕಲಂ: 174 ಸಿಆರ್‌ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿ ಪ್ರಸಾದ್ ಕುಮಾರ್ ಹೆಗ್ಡೆ (42)ತಂದೆ: ಶೇಖರ  ಹೆಗ್ಡೆ ವಾಸ: ಹೇಮಾವತಿ ಮುದ್ದೂರು ನಾಲ್ಕೂರುಗ್ರಾಮ ಬ್ರಹ್ಮಾವರ ರವರ ತೋಟದಲ್ಲಿ  ಸುಮಾರು 4 ತಿಂಗಳಿಂದ ಬಾಗಲಕೋಟೆಯ ನಿವಾಸಿ ರಾಮಣ್ಣ ಮುರಟ್ಟಿ ( 37 ವರ್ಷ) ಇವರು ಕೆಲಸ ಮಾಡಿಕೊಂಡಿದ್ದು. ಈತನು ವಿಪರೀತ ಮದ್ಯಪಾನವನ್ನು ಮಾಡಿಕೊಂಡಿದ್ದು. ಈತನು ಅತನ ಊರಾದ ಬಾಗಲಕೋಟೆಯಲ್ಲಿ ಕಬ್ಬು ಕಟಾವು ಮಾಡುವ ಬಗ್ಗೆ ಅಡ್ವಾನ್ಸ್ ಪಡೆದು ಕೊಂಡಿರುವುದಲ್ಲದೇ ಮುದ್ದೂರು ಪರಿಸರದಲ್ಲಿ ಬೇರೆಯವರಿಂದ ಸಾಲವನ್ನು ಕೇಳಿ ವಿಪರೀತ ಮದ್ಯಪಾನವನ್ನು ಮಾಡಿ  ಮಾನಸಿಕವಾಗಿ ನೊಂದು ನಿನ್ನೆ ದಿನ ದಿನಾಂಕ: 16/03/2022 ರಂದು ಬೆಳಿಗ್ಗೆ 11-30 ಗಂಟೆಯಿಂದ ಮರುದಿನ ದಿನಾಂಕ; 17/03/2022 ರ ಬೆಳಿಗ್ಗೆ 08-30 ಗಂಟೆಯ ಮದ್ಯವಾದಿಯಲ್ಲಿ ನಾಲ್ಕೂರು  ಗ್ರಾಮದ ಮುದ್ದೂರುವಿನ ಭಾರತ್ ವೈನ್ ಶಾಪ್ ನ ಹಿಂದುಗಡೆವಿರುವ ಸರ್ಕಾರಿ ಹಾಡಿಯಲ್ಲಿರುವ ಒಂದು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 13/2022 U/s 174 ಸಿಆರ್‌ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿ ಪ್ರವೀಣ್ (43 ವರ್ಷ) ತಂದೆ: ಸುಂದರ ಕೋಟ್ಯಾನ್ ವಾಸ: ಪಾಂಚಜನ್ಯ, ವಢಬಾಂಡೇಶ್ವರ ,ಮಲ್ಪೆ ಇವ ರು  ದಿನಾಂಕ: 17-03-2022 ರಂದು  ಮಲ್ಪೆ ಬಂದರಿನಲ್ಲಿ  2 ನೇ ಧಕ್ಕೆಯ ಬಳಿ ಇರುವಾಗ ಸಮಯ ಸುಮಾರು 10:00 ಗಂಟೆಗೆ  ಧಕ್ಕೆಯ ನೀರಿನಲ್ಲಿ ಒಂದು ಅಪರಿಚಿತ ಗಂಡಿಸಿನ ಮೃತ ದೇಹ ಕವುಚಿ ಬಿದ್ದ ಸ್ಥಿತಿಯಲ್ಲಿ  ತೇಲುತ್ತಿದ್ದು, ಈಶ್ವರ ಮಲ್ಪೆ ರವರು ಮೃತದೇಹವನ್ನುನೀರಿನಿಂದ ಮೇಲೆತ್ತಿ  ನೋಡಲಾಗಿ ಸುಮಾರು 25 ರಿಂದ 30 ವರ್ಷದ ಗಂಡಸಿನ ಮೃತದೇಹವಾಗಿರುತ್ತದೆ  , ಮೃತ  ಶರೀರದ ಮೇಲೆ  ಕಪ್ಪು ಬಣ್ಣದ   ಜೀನ್ಸ್ ಪ್ಯಾಂಟ್,  ಕಪ್ಪು ಬಣ್ಣದ ಟೀ ಶರ್ಟ್ ಧರಿಸಿರುತ್ತಾನೆ .  ದಿನಾಂಕ: 16-03-2022 ರಂದು  ಧಕ್ಕೆಯ  ಬಳಿ ನಿಲ್ಲಿಸಿದ  ಬೋಟ್ ನಲ್ಲಿ   ಇದ್ದವರು ಯಾವುದೊ ಕಾರಣದಿಂದ  ಧಕ್ಕೆಯ ನೀರಿಗೆ ಬಿದ್ದು  ಮುಳುಗಿ  ಮೃತಪಟ್ಟಿರಬಹುದು ಮೃತನ  ಹೆಸರು ,ವಿಳಾಸ ಪತ್ತೆಯಾಗದ ಕಾರಣ  ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬ್ರ  18 /2022  ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


ಅಪಘಾತ ಪ್ರಕರಣ

 • ಕುಂದಾಪುರ: ಪಿರ್ಯಾದಿ ಗಣೇಶ ಪೂಜಾರಿ ಪ್ರಾಯ 44 ವರ್ಷ ತಂದೆ ಕುಷ್ಟ ಪೂಜಾರಿ ವಾಸ: , ನೂಜಾಡಿ  ಗ್ರಾಮ, ಇವರು ದಿನಾಂಕ 17/03/2022  ರಂದು  ಮಧ್ಯಾಹ್ನ ಸುಮಾರು 02:00  ಗಂಟೆಗೆ, ಕುಂದಾಪುರ ತಾಲೂಕು, ಬಸ್ರೂರು ಗ್ರಾಮದ ಹಟ್ಟಿಕುದ್ರು  ವಿಶ್ವನಾಥ  ಉಳ್ಳೂರು ‌ರವರ ಮನೆಯ ಬಳಿ  ರಸ್ತೆಯಲ್ಲಿ, ಆಪಾದಿತ  ವಸಂತ  ಎಂಬವರು, KA20D-9891ನೇ ಟಿಪ್ಪರ್‌ಲಾರಿಯನ್ನು  ಹಟ್ಟಿಯಂಗಡಿ ಕಡೆಯಿಂದ  ಬಸ್ರೂರು ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ  ಮಾಡಿಕೊಂಡು ರಸ್ತೆಯ ಬಲಬದಿಗೆ ಬಂದು, ಹಟ್ಟಿಕುದ್ರು ಕಡೆಯಿಂದ ಹಟ್ಟಿಯಂಗಡಿ ಕಡೆಗೆ  ಪಿರ್ಯಾದಿದಾರರು  ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA20EH-7780ನೇ ಬೈಕಿಗೆ  ಎದುರುಗಡೆಯಿಂದ  ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರ ಬಲಕೈ ಹಾಗೂ ಬಲಕಾಲಿಗೆ  ಮೂಳೆ ಮುರಿತವಾದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.  ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  39/2022 ಕಲಂ 279,  338,  IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.   


ಇತ್ತೀಚಿನ ನವೀಕರಣ​ : 17-03-2022 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080