ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 16/03/2021 ರಂದು ಸಂಜೆ 4:40  ಗಂಟೆಗೆ  ಅಂಬಲಪಾಡಿ ಗ್ರಾಮದ ಕರಾವಳಿ ಬೈಪಾಸ್ ಬಳಿ ಇರುವ ಸಾಗರಗಂಗಾ ಕಟ್ಟಡದ ಎದುರು 169(ಎ)ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ಓರ್ವ ಅಪರಿಚಿತ ಗಂಡಸು ನಿಂತಿದ್ದಾಗ ಅದೇ ಸಮಯದಲ್ಲಿ ಕರಾವಳಿ ಜಂಕ್ಷನ್ ಕಡೆಯಿಂದ ಮಲ್ಪೆ ಕಡೆಗೆ KA-20-AA-1202 ನೇ ಟಿಪ್ಪರ್ ಲಾರಿ ಚಾಲಕ ಹರೀಶ ತನ್ನ ಟಿಪ್ಪರ್ ಲಾರಿಯನ್ನು ಚಲಾಯಿಸಿಕೊಂಡು ಬಂದು ಸಾಗರಗಂಗಾ ಕಟ್ಟಡದ ಎದುರು ದುಡುಕುತನ ಮತ್ತು ನಿರ್ಲಕ್ಷತನದಿಂದ ತೀರಾ ಎಡಬದಿಗೆ ಚಲಾಯಿಸಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಆ ಗಂಡಸು ರಸ್ತೆಗೆ ಬಿದ್ದು ಲಾರಿಯ ಹಿಂಭಾಗದ ಚಕ್ರದ ಅಡಿಗೆ ಸಿಲುಕಿ ಗಂಭೀರ ಗಾಯವಾಗಿ ಮಾತನಾಡದೇ ಇದ್ದವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

 • ಉಡುಪಿ: ದಿನಾಂಕ 16/03/2021 ರಂದು ಮದ್ಯಾಹ್ನ 14:30  ಗಂಟೆಗೆ ಮಂಜಪ್ಪ ಡಿ.ಅರ್, ಪೊಲೀಸ್ ನಿರೀಕ್ಷಕರು, ಡಿಸಿಐಬಿ ಉಡುಪಿ ಇವರಿಗೆ ಉಡುಪಿಯ ಕುಂಜಿಬೆಟ್ಟು ಕೆಇಬಿ ವಸತಿ ಗೃಹದ ಬಳಿ ಇರುವ ವಿಮಲಾ ಪದ್ಮನಾಭ ಕಟ್ಟಡದ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ  ಮಾರಾಟ ಮಾಡಲು ಬಂದಿರುವುದಾಗಿ ದೊರೆತ ಮಾಹಿತಿಯಂತೆ ದಾಳಿ ನಡೆಸಿ ಆರೋಪಿತರಾದ 1) ಕೆ ಎಸ್ ಗೌತಮ್ ಗೌಡ (23), ತಂದೆ: ಜೈಶಂಕರ್, ವಾಸ:ಝೆನ್ ಗಾರ್ಡನ್, ಕಿತ್ತೂರು ಚೆನ್ನಮ್ಮ ರಸ್ತೆ, ಅಜ್ಜರಕಾಡು, ಉಡುಪಿ. ಸ್ವಂತ ಊರು: ದರಸೆಕಟ್ಟೆ, ಕಪ್ಪರನಕೊಪ್ಪಲು ಗ್ರಾಮ, ಪಾಂಡವಪುರ ಸಕ್ಕರೆ ಕಾರ್ಖಾನೆ ಬಳಿ, ಪಾಂಡವಪುರ, ಮಂಡ್ಯ ಜಿಲ್ಲೆ, 2) ವಿಕ್ಕಿ ದಯಾಳ್ @ ವಿಕ್ಕಿ (21), ತಂದೆ: ಲಕ್ಷ್ಮಣ, ವಾಸ:ಭಾಗ್ಯವಂತಿ, ವಿಜಯನಗರ, ಕೆಎಂಸಿ ವಸತಿಗೃಹದ ಬಳಿ, ಮಣಿಪಾಲ, ಸ್ವಂತ ಊರು: ಬಸವರಾಜ ಸರ್ಕಲ್ 2ನೇ ಮನೆ, ಮಾರಿಯಮ್ಮಗುಡಿ ಹತ್ತಿರ, ಬೆಳಗಾವಿ ನಗರ, ಬೆಳಗಾವಿ ಜಿಲ್ಲೆ ಇವರನ್ನು ವಶಕ್ಕೆ ಪಡೆದು ಅವರ ವಶದಲ್ಲಿ ಕೆಂಪು ಬಣ್ಣದ ಪ್ಲಾಸ್ಟಿಕ್‌ ತೊಟ್ಟೆಯಲ್ಲಿದ್ದ 1050 ಗ್ರಾಂ ತೂಕದ 30,000/- ರೂಪಾಯಿ ಮೌಲ್ಯದ ಗಾಂಜಾ ಹಾಗೂ ರೂಪಾಯಿ 20,000/- ಮೌಲ್ಯದ ಸ್ಯಾಮ್‌ ಸಾಂಗ್ ಗ್ಯಾಲೆಕ್ಸಿ ಹಾಗೂ 25,000/- ಮೌಲ್ಯದ ONE PLUS ಮೊಬೈಲ್ ಮೊಬೈಲ್‌ ಫೋನ್‌ನ್ನು ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ: 8(C) ಜೊತೆಗೆ 20(b)(II)(B)NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿದಾರರಾದ ಗಾಯತ್ರಿ ಇವರು ತೆಂಕನಿಡಿಯೂರು ಗ್ರಾಮ ಪಂಚಾಯತ್ ನ  ಅಧ್ಯಕ್ಷರಾಗಿದ್ದು,  ದಿನಾಂಕ 16/03/2021 ರಂದು ಆರೋಪಿತರಾದ ಸುರೇಶ್‌ ನಾಯಕ್‌, ಸತೀಶ್‌ ನಾಯಕ್‌, ಮೀನಾ ಪಿಂಟೋ, ಪೃಥ್ವಿರಾಜ್‌ ಶೆಟ್ಟಿ ಹಾಗೂ ವಿಷ್ಣುನಗರದ ಲಲಿತಾ ಆಚಾರ್ತಿ ಇವರು ತೆಂಕನಿಡಿಯೂರು ಗ್ರಾಮ ಪಂಚಾಯತ್‌ ಸದಸ್ಯರಾಗಿದ್ದು ಪಿರ್ಯಾದಿದಾರರು ಪಂಚಾಯತ್‌ ಕಛೇರಿಯಲ್ಲಿದ್ದಾಗ ಆರೋಪಿತರು ಬೆಳಿಗ್ಗೆ11:00 ಗಂಟೆಗೆ ಏಕಾಏಕಿ ತೆಂಕನಿಡಿಯೂರು ಪಂಚಾಯತ್ ಕಛೇರಿಗೆ ಬಂದು ಪಿರ್ಯಾದಿದಾರರಿಗೆ ನಿಂದನೆ ಮಾಡಿ ಬೆದರಿಕೆ ಒಡ್ಡಿ ಆವಾಚ್ಯ ಶಬ್ದ ಬಳಸಿ ಬೈಯ್ದು  ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಹೇಳನಕಾರಿಯಾಗಿ ಮಾನಹಾನಿ ಮಾಡಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021 ಕಲಂ:  504, 506 & 34 ಐಪಿಸಿ ಮತ್ತು  3(1)(r)(s), 3(2)(v-a)  Sc St Act ರಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕಾರ್ಕಳ: ದಿನಾಂಕ 16/03/2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರಾದ ನಾರಾಯಣ ಶೆಟ್ಟಿಗಾರ್‌ (63), ತಂದೆ:ಕೊರಗ ಶೆಟ್ಟಿಗಾರ್‌, ವಾಸ:ಸತ್ಯ ನಿವಾಸ ಮುರತ್ತಗಂಡಿ ಮನೆ ಸಾಣೂರು ಅಂಚೆ ಮತ್ತು ಗ್ರಾಮ ಕಾರ್ಕಳ ಇವರು ಸಾಣೂರು ಗ್ರಾಮದ ಮುರತಂಗಡಿಯ ಮಥಾಯಿಸ್ ಫಾರ್ಮ್‌ನ ಎದುರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಬುಟ್ಟಿಯಲ್ಲಿ ಫೈನಾಪಲ್‌ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಪಿರ್ಯಾದಿದಾರರ ಪರಿಚಯದ ಸೇಬಿನ್ ತನ್ನ ಅಶೋಕ್‌ ಲೈಲಾಂಡ್‌ ಮಿನಿ ಟೆಂಪೋವನ್ನು ಫೈನಾಪಲ್‌ ಬುಟ್ಟಿಯ ಬದಿಯಲ್ಲಿ ಅಡ್ಡವಾಗಿ ನಿಲ್ಲಿಸಿದ್ದು ಈ ಸಮಯ ಅಲ್ಲಿಯೇ ಇದ್ದ ಸುಬೀನ್‌ ಮತ್ತು ಆತನ ತಾಯಿ ಸಿಂಧೂ ಅವರು ಪಿರ್ಯಾದಿದಾರರನ್ನು ಉದ್ದೇಶೀಸಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ ಸುಬೀನ್ ಪಿರ್ಯಾದಿದಾರರನ್ನು ಕೈಗಳಿಂದ ದೂಡಿ ಹಾಕಿದಾಗ ಪಿರ್ಯಾದಿದಾರರು ನೆಲಕ್ಕೆ ಬೀಳುವುದನ್ನು ಕಂಡು ಪಕ್ಕದಲ್ಲಿ ಇದ್ದ ಸಂದೀಪ್‌ ಮತ್ತು ವಿಬಿನ್ ರವರು ಪಿರ್ಯಾದುದಾರರ ಬೆನ್ನಿಗೆ, ಸೊಂಟಕ್ಕೆ ತುಳಿದು ಕೈಗಳಿಂದ ಹಲ್ಲೆ ನಡೆಸಿದ್ದ ಪರಿಣಾಮ ನೆಲಕ್ಕೆ ಬಿದ್ದು ಅವರ ಎಡಕಾಲಿನ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ. ಅಲ್ಲದೇ ಆಪಾದಿತರು ಪಿರ್ಯಾದಿದಾರರನ್ನು ಉದ್ದೇಶಿಸಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2021 ಕಲಂ: 143,147, 341, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ದಿನಾಂಕ 16/03/2021 ರಂದು ಬೆಳಿಗ್ಗೆ 11:15 ಗಂಟೆಗೆ ತೆಂಕನಿಡಿಯೂರು ಗ್ರಾಮ ಪಂಚಾಯತ್‌ನ ಸರ್ಕಾರಿ ಕಟ್ಟಡದ ಮುಖ್ಯದ್ವಾರವನ್ನು ಕೆಂಪು ಕಲ್ಲಿನಲ್ಲಿ ಕಟ್ಟಿ ಇದನ್ನು ಸರ್ಕಾರಿ ರಜಾ ದಿನಗಳಾದ 13/03/2021 ಮತ್ತು 14/03/2021 ರಂದು ಯಾರಿಗೂ ತಿಳಿಯದಂತೆ ಹಾಗೂ ಸಾಮಾನ್ಯ ಸಭೆಗಳಲ್ಲಿ ಯಾವುದೇ ನಿರ್ಣಯವನ್ನು ಮಾಡದೇ ಪಂಚಾಯತ್‌ ಸದಸ್ಯರ ಗಮನಕ್ಕೆ ತರದೇ ಏಕಾಏಕೀ ಈ ಕಾಮಗಾರಿಯನ್ನು ಕಾನೂನು ವಿರುದ್ದವಾಗಿ ಮಾಡಿರುತ್ತಾರೆ. ಇದನ್ನು ಪಿರ್ಯಾದಿದಾರರಾದ ಧನಂಜಯ್ ಕುಂದರ್(41), ತಂದೆ: ಬಿ ಶೆಷಪ್ಪ, ವಾಸ: ವಿಷ್ಣುಮೂರ್ತಿ ನಗರ, ಕೆಳರ್ಕಾಳಬೆಟ್ಟು , ಉಡುಪಿ ತಾಲೂಕು ಇವರು  ತಾಲೂಕು ಪಂಚಾಯತ್ ಸದಸ್ಯನಾಗಿ ಪ್ರಶ್ನಿಸಲು ಹೋದಾಗ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ, ಉಪಾಧ್ಯಕ್ಷರಾದ ಅರುಣ್ ಜತ್ತನ್ , ಸದಸ್ಯರಾದ ಪ್ರಶಾಂತ್ ಹೆಬ್ಬಾರ್, ವಿನೋದ್, ಶರತ್ ಕುಮಾರ್ ಬೈಲಕೆರೆ, ಮಾಲಿನಿ, ಸತೀಶ್, ವಿಕೀತಾ ಸುರೇಶ್, ಇವರುಗಳು ಸೇರಿ ಅವಾಚ್ಯವಾಗಿ ಬೈದು ಮೈಗೆ ಕೈ ಹಾಕಿ ಬೆದರಿಕೆ ನೀಡಿ ಹಲ್ಲೆಗೆ ಮುಂದಾಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 323, 504, 506 ಮತ್ತು 34 ಐಪಿಸಿ  3(1)(r)(s) &  3(2)(v-a)  Sc St Act  ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 17-03-2021 09:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080