ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ಉಷಾ ಶೆಟ್ಟಿ (56), ಗಂಡ: ಜಯರಾಮ ಶೆಟ್ಟಿ,  ಪ್ರಭಾರ ಕಾರ್ಯದರ್ಶಿ, ಬಾರ್ಕೂರು ಗ್ರಾಮ ಪಂಚಾಯತ್, ಕಚ್ಚೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರಿಗೆ ದಿನಾಂಕ 17/03/2021 ರಂದು ಬೆಳಿಗ್ಗೆ 08:45 ಗಂಟೆಗೆ ಮಾಹಿತಿ ಬಂದ ಮೇರೆಗೆ ಕಚ್ಚೂರು ಗ್ರಾಮದ ಹಾಲೆಕೋಡಿ ಎಂಬಲ್ಲಿ ಹೋಗಿ ನೋಡಿದಾಗ ಹಾಲೆಕೋಡಿ ಸ್ಟೀವನ್ ಫೆರ್ನಾಂಡೀಸ್ ಎಂಬುವವರ ಹೊಯಿಗೆ ಧಕ್ಕೆಯ ಸಮೀಪ ಸೀತಾನದಿಯ ದಡದ ಬಳಿ ಸುಮಾರು 45 ರಿಂದ 50 ವರ್ಷ ಪ್ರಾಯದ ಗಂಡಸಿನ ಮೃತ ಶರೀರ ಇರುವುದು ಕಂಡು ಬಂದಿರುತ್ತದೆ.  ಅಪರಿಚಿತ ವ್ಯಕ್ತಿಯ ಮೃತ ಶರೀರವು ಕೊಳೆತು ಹೋಗಿದ್ದು,  ವ್ಯಕ್ತಿಯು ಸುಮಾರು 2-3 ದಿನಗಳ ಹಿಂದೆ ಎಲ್ಲಿಯೋ ಹೊಳೆಯ ಬದಿಯಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ  ಉದ್ದೇಶದಿಂದ ಹೊಳೆಯ ನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರ ಬಹುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಗುರುರಾಜ್ ಆಚಾರಿ, ತಂದೆ: ಶೇಷಗಿರಿ ಆಚಾರ್ಯ, ವಾಸ: 4-204, ನಾಡ ಪಡುಕೋಣೆ, ಬೈಂದೂರು ತಾಲೂಕು ಇವರು ದಿನಾಂಕ 07/03/2021 ರಂದು 16:00 ಗಂಟೆಗೆ ಕೋಡಿ ಕಿನಾರಾ ರಸ್ತೆಯಿಂದ ವಾಪಾಸು ಕಾರಿನಲ್ಲಿ ಮನೆಗೆ ಹೋಗುತ್ತಿರುವುದಾಗ ಆರೋಪಿತರಾದ 1) ಪ್ರಕಾಶ, 2) ಕೃಷ್ಣ ಗೋಪಾಡಿ ಇವರು KA-20-MA-9379 ಕಾರನ್ನು ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಕಾರಿನ ಸನಿಹಕ್ಕೆ ಬಂದಿದ್ದು, ಪಿರ್ಯಾದಿದಾರರು ಕಾರಿನಿಂದ ಇಳಿದು ಕಾರನ್ನು ಪರಿಶೀಲಿಸುತ್ತಿರುವಾಗ ಆಪಾದಿತರು ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ನೆಲಕ್ಕೆ ಬೀಳಿಸಿ ನಂತರ ಕಾಲಿನಿಂದ ಪಿರ್ಯಾದಿದಾರರ ಮರ್ಮಾಂಗಕ್ಕೆ ತುಳಿದು ಒಳನೋವುಂಟು ಮಾಡಿ,  ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿದಾರರ ತಲೆಗೆ ಕಲ್ಲಿನಿಂದ ಬಲವಾಗಿ ಹೊಡೆದಿದ್ದು ತಪ್ಪಿಸಿಕೊಂಡಾಗ ಪಿರ್ಯಾದಿದಾರರ ಕಣ್ಣಿಗೆ ಕಲ್ಲು ತಾಗಿ ತೀವ್ರ ಗಾಯ ಹಾಗೂ ಮೂಗಿನಿಂದ ರಕ್ತಸ್ರಾವವಾಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2021  ಕಲಂ:  323, 324, 504, 506, 326, 307 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 17-03-2021 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080