ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಸಂದೀಪ್ ಕುಮಾರ್ (30), ತಂದೆ: ನಾರಾಯಣ ಪೂಜಾರಿ, ವಾಸ: ಹರೀಶ ನಿವಾಸ , ಉಜಿರ್‌ಬೈಲ್ , ಅಡಪ್ಪಾಡಿ, ಪೆರ್ಡೂರು ಗ್ರಾಮ ಮತ್ತು ಅಂಚೆ ಉಡುಪಿ  ತಾಲೂಕು ಇವರು ದಿನಾಂಕ 15/02/2023 ರಂದು ತನ್ನ  ಮೋಟಾರು ಸೈಕಲ್ ನಂಬ್ರ KA-14-EH-7307 ನೇ ದರಲ್ಲಿ ಕೆಲಸ ಮುಗಿಸಿ ಹಿರಿಯಡ್ಕ ಕಡೆಗೆ ವಾಪಾಸು ಬರುತ್ತಿರುವಾಗ  ಸಂಜೆ  7:10 ಗಂಟೆಗೆ ಹಿರಿಯಡ್ಕ ಕಡೆಯಿಂದ KA-20-Z-5974 ನೇ ಕಾರು  ಚಾಲಕ  ಮಿಥುನ್ ತನ್ನ ಕಾರನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲ ಭಾಗಕ್ಕೆ ಬಂದು  ಪಿರ್ಯಾದಿದಾರರ  ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್  ಸಮೇತ ರಸ್ತೆಗೆ ಬಿದ್ದು ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತವಾಗಿದ್ದು ಅಲ್ಲದೆ ಬಲಕೈ ,ಮೊಣ ಕೈ ತರಚಿದ ಗಾಯವಾಗಿರುತ್ತದೆ. ನಂತರ ಅಲ್ಲಿ ಸೇರಿದರು ಅವರನ್ನು ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲ ಅಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 06/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಕಪಿಲ (32), ತಂದೆ : ಬಾಬುರಾಯ ತಳೇಕರ, ವಾಸ : ಕಿನ್ನರ ಭರತಾವಾಡ #33 ಕಿನ್ನರ ಗ್ರಾಮ ಕಾರವಾರ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 15/02/2023 ರಂದು ಕೆ.ಎಸ್.ಆರ್.ಟಿ.ಸಿ. KA-01-F-4900 ನೇ ನಂಬ್ರದ ಬಸ್ಸಿನ ಚಾಲಕ/ನಿರ್ವಾಹಕನಾಗಿ ಕುಮಟಾ ದಿಂದ ಮಂಗಳೂರಿಗೆ ಬರುತ್ತಿದ್ದು, ಬೆಳಗ್ಗೆ 08:50 ಗಂಟೆಗೆ ಉಡುಪಿಗೆ ಬಂದು ಪ್ರಯಾಣಿಕರನ್ನು ಇಳಿಸಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಉಡುಪಿ ಮಂಗಳೂರು ರಸ್ತೆಯಲ್ಲಿ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಬೆಳಗ್ಗೆ 09:15 ಗಂಟೆಗೆ ಊಳಿಯಾರಗೋಳಿ ಗ್ರಾಮದ ಕೋತ್ತಲಕಟ್ಟೆ ಎಂಬಲ್ಲಿ ತಲುಪುತ್ತಿದ್ದಂತೆ KA-20-D-5489 ನೇ ಕಾರಿನ ಚಾಲಕ ಪಿರ್ಯಾದಿದಾರರ ಬಸ್ಸನ್ನು ಓವರ್‌ಟೇಕ್ ಮಾಡಿ ಎಡಬದಿಗೆ ಬಂದು ಯಾವುದೇ ಸೂಚನೆ ಕೊಡದೇ ಓಮ್ಮೇಲೆ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದು, ಇದನ್ನು ಕಂಡು ಪಿರ್ಯಾದಿದಾರರು ತನ್ನ ಬಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು, ಆದರೂ ನಿಯಂತ್ರಣ ತಪ್ಪಿ ಕಾರಿನ ಹಿಂಭಾಗಕ್ಕೆ  ಢಿಕ್ಕಿ ಹೊಡೆದ ಪರಿಣಾಮ ಕಾರಿನಿಂದ ಇಳಿಯುತ್ತಿದ್ದ ವ್ಯಕ್ತಿಗೆ ಕಾರಿನ ಬಾಗಿಲು ಮುಖಕ್ಕೆ ತಾಗಿ ಗಾಯವಾಗಿದ್ದು ಅಲ್ಲಿಗೆ ಬಂದ ಅಂಬುಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಕಡೆಗೆ ಕರೆದುಕೊಂಡು ಹೋಗಿರುತ್ತಾರೆ. ಹಾಗೂ ಬಸ್ಸಿನ ಮುಂಭಾಗದ ಬಂಪರ್ ಹಾಗೂ ಕಾರಿನ ಹಿಂಭಾಗವು ಜಖಂ ಗೊಂಡಿರುತ್ತದೆ. ಅಪಘಾತದ ವಿಚಾರವನ್ನು ಮೇಲಾಧಿಕಾರಿಯವರಿಗೆ ಮಾಹಿತಿ ನೀಡಿ, ಅವರು ದೂರು ದಾಖಲಿಸುವಂತೆ ತಿಳಿಸಿದ ಮೇರೆಗೆ ದೂರು ನೀಡಲು ವಿಳಂಬ ಆಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2023 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರಫೀಕ್‌.ಎಂ (37), ಪೊಲೀಸ್‌ ನಿರೀಕ್ಷಕರು, ಲೋಕಾಯುಕ್ತ ಪೊಲೀಸ್‌ ಠಾಣೆ, ಉಡುಪಿ ಜಿಲ್ಲೆ ಇವರು ಉಡುಪಿ ನಗರ ಪೊಲೀಸ್‌ ಠಾಣೆಯ ಪಕ್ಕದಲ್ಲಿ ಇರುವ ಪೊಲೀಸ್‌ ಅಧಿಕಾರಿಗಳ ವಸತಿಗೃಹದಲ್ಲಿ ತನ್ನ ಸಂಸಾರದೊಂದಿಗೆ ವಾಸವಾಗಿರುವುದಾಗಿದೆ. ಪಿರ್ಯಾದಿದಾರರ ಕಾರು, ಸ್ಕೂಟಿ ಹಾಗೂ ಎರಡು ಸೈಕಲ್‌ಗಳನ್ನು ವಸತಿಗೃಹದ ಪಕ್ಕದಲ್ಲಿನ ಶೆಡ್‌ ನಲ್ಲಿ ನಿಲ್ಲಿಸಿದ್ದು, ದಿನಾಂಕ 13/02/2023 ರಂದು ಬೆಳಿಗ್ಗೆ 09:00 ಗಂಟೆಯಿಂದ ದಿನಾಂಕ 14/02/2023 ರಂದು 18:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಸೈಕಲ್‌ಗಳಿಗೆ ಅಳವಡಿಸಿದ ಬೀಗವನ್ನು ಮುರಿದು ರೂಪಾಯಿ 9,600 ಮೌಲ್ಯದ HERO RAFALE ಕಂಪೆನಿಯ ಕೆಂಪು-ಕಪ್ಪು ಬಣ್ಣದ ಸೈಕಲ್‌-1 ಹಾಗೂ ರೂಪಾಯಿ 6,500/- ಮೌಲ್ಯದ RADIANT AMAZE ENZO ಕಂಪೆನಿಯ ಗ್ರೇ-ಬ್ಲೂ ಬಣ್ಣದ ಸೈಕಲ್‌-1 ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ 2 ಸೈಕಲ್‌ಗಳ ಒಟ್ಟು ಮೌಲ್ಯ ರೂಪಾಯಿ 16,100/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2023 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಕಪಿಲ್ ಶೆಟ್ಟಿ (25), ತಂದೆ: ಕುಶಾಲ್‌ಶೆಟ್ಟಿ, ವಾಸ: ಗೋಳಿಕಟ್ಟೆ ಮನೆ, ಆಲೂರು ಗ್ರಾಮ ಕುಂದಾಪುರ ತಾಲೂಕು ಇವರ ತಂದೆ ಕುಶಾಲ ಶೆಟ್ಟಿ (53)  ಇವರು ಕೃಷಿ ಕೆಲಸ ಮಾಡಿಕೊಂಡಿದ್ದು,  ವಿಪರೀತ ಮದ್ಯ ವ್ಯಸನಿಯಾಗಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16/02/2023 ರಂದು ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ತೋಟದ ಗೇರು ಮರಕ್ಕೆ ಹಗ್ಗ ಕಟ್ಟಿ ಕುತ್ತಿಗೆಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 04/2023 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಸಂಕೇತ (18), ತಂದೆ: ಸಂಜೀವ, ವಾಸ: ಕಳಿನಕೊಠಗಿ, ತಾರಿಬೇರು, ಆಲೂರು ಗ್ರಾಮ ಕುಂದಾಪುರ  ತಾಲೂಕು ಇವರ ತಂದೆ  ಸಂಜೀವ ಪೂಜಾರಿ (50) ರವರು ದಿನಾಂಕ 16/02/2023 ರಂದು 18:00 ಗಂಟೆಗೆ ಕುಂದಾಪುರ ತಾಲೂಕು. ಆಲೂರು ಗ್ರಾಮದ  ಕಳಿನಕೊಠಗಿ, ತಾರಿಬೇರು, ಎಂಬಲ್ಲಿರುವ ಪಿರ್ಯಾದಿದಾರರ ಮನೆಯ ತೋಟಕ್ಕೆ ನೀರು ಬಿಡಲು ಹೋದಾಗ ತೋಟದಲ್ಲಿನ ನೀರಿನ ಪಂಪಸೇಡ್‌ನ ಹಿಂಬದಿಯಲ್ಲಿರುವ ಸೌಪರ್ಣಿಕ ನದಿಯಲ್ಲಿ ಹಾಕಿರುವ ಪುಟ್‌ಬಾಲ್‌ ಪೈಪ್‌ನ್ನು ಸರಿಪಡಿಸುವಾಗ 18:00 ಗಂಟೆಯಿಂದ 19:30 ಗಂಟೆಯ ಮದ್ಯಾವದಿಯಲ್ಲಿ ಪಿರ್ಯಾದಿದಾರರ ತಂದೆ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ  ಉಸಿರುಗಟ್ಟಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 05/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸುಮನ ಶೆಟ್ಟಿ (47), ಗಂಡ: ಭೋಜರಾಜ ಶೆಟ್ಟಿ, ವಾಸ: ಹುಣ್ಸೆಮಕ್ಕಿ,ಹೊಂಬಾಡಿ ಮಂಡಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 15/02/2023 ರಂದು ಸಂಜೆ 6:00 ಗಂಟೆಗೆ ಕೃಷಿ ಭೂಮಿಗೆ ನೀರು ಬಿಡಲು ಹೋದಾಗ ಆರೋಪಿಗಳಾದ 1) ರಮಣಿ ಶೆಟ್ಟಿ, 2) ಚರಣ್‌ ಶೆಟ್ಟಿ, 3)ಶಮಿತಾ ಶೆಟ್ಟಿ, 4) ಜಗನ್ನಾಥ ಶೆಟ್ಟಿ ಇವರು ಅಕ್ರಮ ಪ್ರವೇಶ ಮಾಡಿ ಪೈಪ್‌ಗಳನ್ನು ತುಂಡು ಮಾಡಿ ತೆಗೆದುಕೊಂಡು ಹೋಗಿದ್ದು, ಪಿರ್ಯಾದಿದಾರರಿಗೆ ಆವಾಚ್ಯ ಶಬ್ದಗಳಿಂದ ಬೈದು ಬೆನ್ನಿಗೆ ಹೊಡೆದಿರುತ್ತಾರೆ. ಮುಂದೆ ಬಂದರೆ ಕೈಕಾಲು ಕಡಿಯುವುದಾಗಿ ಹೇಳಿ ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರ ಕೃಷಿ ಪೈಪ್‌ಗಳನ್ನು ಕತ್ತರಿಸಿ ಕೃಷಿ ಗಿಡಗಳನ್ನು ಕಡಿದು 40,000/- ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2023  ಕಲಂ: 447, 323, 504, 506, 354, 427 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-02-2023 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080