ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ:  ಬ್ರಹ್ಮಾವರ ತಾಲೂಕು ಹೊಸೂರು ಗ್ರಾಮದ ಕರ್ಜೆ ಓಂ ಗಣೇಶ ಮನೆ ನಂ: 1-155 ನೇದರ ವಾಸದ ಮನೆಯಲ್ಲಿ   ಪಿರ್ಯಾದಿ: ರಕ್ಷಿತ್‌ಆರ್‌ಎಸ್‌(22 ವಷ) ತಂದೆ: ರಾಮಕೃಷ್ಣ ಶ್ಯಾನುಭೋಗ್‌ವಾಸ: ಮನೆ ನಂಬ್ರ: 1-155, ಓಂ ಗಣೇಶ, ಕಜೆ ಅಂಚೆ, ಹೊಸೂರು ಗ್ರಾಮ, ಇವರ ತಾಯಿ ವಿಜಯಲಕ್ಷ್ಮೀ ಆರ್‌ಶ್ಯಾನುಭೋಗ್‌(54 ವರ್ಷ) ರವರು ದಿನಾಂಕ: 13.02.2023 ರಂದು ಬೆಳಿಗ್ಗೆ 8.00 ಗಂಟೆಗೆ ಮನೆಯ ಹಾಲ್‌ನಲ್ಲಿ ಜಾರಿ ಬಿದ್ದು ಬಲಕಾಲಿನ ಮಣಿಗಂಟಿನ ಬಳಿ ನೋವು ಇರುವುದಾಗಿ ತಿಳಿಸಿದ್ದು, ಆ ನಂತರ ಬ್ರಹ್ಮಾವರ ಜೀವನ್‌ಜ್ಯೋತಿ, ಹೈಟೆಕ್‌ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಸಿದ್ದು, ಪರಿಕ್ಷಿಸಿದ ವೈದ್ಯಾಧಿಕಾರಿಯವರು ಹೊಟ್ಟೆಯಲ್ಲಿ ಇನ್‌ಸ್ಪೆಕ್ಷನ್‌ಆಗಿರುವುದಾಗಿ ತಿಳಿಸಿದ್ದು, ದಿನಾಂಕ: 16.02.2023 ರಂದು ರಾತ್ರಿ 10.15 ಗಂಟೆಗೆ ವಿಜಯಲಕ್ಷ್ಮೀ ಆರ್‌ಶ್ಯಾನುಭೋಗ್‌ರವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 14/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಿರ್ವಾ: ಪಿರ್ಯಾದಿ: ನಿಕೇಶ್,(36ವರ್ಷ), ತಂದೆ:ವಾಸುಪೂಜಾರಿ, ವಾಸ: ಮನೆ ನಂ 1-146, ಬಗರಾಜ ಮನೆ, ಹಲಸಿನಕಟ್ಟೆ ಪೋಸ್‌, ಪಿಲಾರು ಗ್ರಾಮ, ಇವರ ತಂದೆ: ವಾಸು ಪೂಜಾರಿ  (62 ವರ್ಷ) ರವರು  ವಿಪರೀತವಾಗಿ  ಕುಡಿತದ ಚಟವನ್ನು ಹೊಂದಿದ್ದು ಹಾಗೂ ಲಿವರ್ ಖಾಯಿಲೆಯಿಂದ  ಬಳಲುತ್ತಿದ್ದು, ಇದೇ  ಕಾರಣದಿಂದ  ಮನನೊಂದು ದಿನಾಂಕ 16.02.2023  ರಂದು ರಾತ್ರಿ  9:00 ಗಂಟೆಯಿಂದ ದಿನಾಂಕ:17/02/2023 ಬೆಳಿಗ್ಗೆ 07.30 ಗಂಟೆಯ ನಡುವಿನ ಅವಧಿಯಲ್ಲಿ ಪಿಲಾರು ಗ್ರಾಮದ ಹಲಸಿನಕಟ್ಟೆಯ ಮನೆಯಲ್ಲಿ  ಯಾವುದೋ ವಿಷ ಪದಾರ್ಥ  ಸೇವಿಸಿ ಆತ್ಮಹತ್ಯೆಮಾಡಿಕೊಂಡು ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯುಡಿಆರ್ ನಂ. 3/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಪಿರ್ಯಾದಿ: ಕಿರಣ್‌ ದೇವಾಡಗ, ಪ್ರಾಯ: 32 ವರ್ಷ, ತಂದೆ: ಸತೀಶ್‌ ದೇವಾಡಿಗ, ವಾಸ: ಕುಂಟಲ್ಪಾಡಿ, ಬಿಂದಾನಗರ, ಕಸಬಾ ಗ್ರಾಮ ಇವರು ತಂದೆ, ತಾಯಿ, ತಂಗಿ, ಅಜ್ಜಿ ವಿಮಲ ದೇವಾಡಿಗ(85) ರವರೊಂದಿಗೆ ಮುಂಬೈನಲ್ಲಿ ವಾಸವಾಗಿದ್ದು ದಿನಾಂಕ: 01.02.2023 ರಂದು ತಂಗಿ ಮದುವೆಗೆ ಕಾರ್ಕಳ ತಾಲೂಕು ಕಸಬಾ ಗ್ರಾಮದ ಕುಂಟಲ್ಪಾಡಿ ಬಿಂದಾನಗರ ಎಂಬಲ್ಲಿಗೆ ಬಂದಿದ್ದು  ದಿನಾಂಕ: 17.02.2023 ರಂದು ಬೆಳಗ್ಗೆ 06:30 ಗಂಟೆಗೆ ತಂದೆ, ತಂಗಿ ಹಾಗೂ ತಂಗಿ ಗಂಡರವರೊಂದಿಗೆ ಕಟೀಲು ದೇವಾಸ್ಥಾನಕ್ಕೆ ಹೋಗಿ ವಾಪಾಸು 11:00 ಗಂಟೆಗೆ ಮನೆಗೆ ಬಂದಾಗ ಅಜ್ಜಿ ವಿಮಲ ದೇವಾಡಿಗ ರವರು ಟಾಯ್ಲೆಟ್‌ ನೊಳಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದವರನ್ನು ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ಕಾರ್ಕಳ ಪ್ರತಿಭಾ ನರ್ಸಿಂಗ್‌ ಹೋಂಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ನಂತರ 11:50 ಗಂಟೆಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ವಿಮಲ ದೇವಾಡಿಗ ರವರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ ನಂ 7/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಮಾದಕ ವಸ್ತು ಸೇವನೆ ಪ್ರಕರಣ

  • ಕುಂದಾಪುರ: ದಿನಾಂಕ 17.02.2023 ರಂದು ಪಿರ್ಯಾದಿ ಬಿ ನಂದಕುಮಾರ ಪೊಲೀಸ್‌ ನಿರೀಕ್ಷಕರು ಕುಂದಾಪುರ ಪೊಲೀಸ್ ಠಾಣೆ ಇವರು  ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ   ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಕರ್ತವ್ಯದಲ್ಲಿರುವ ಸಮಯ ಬಾತ್ಮೀದಾರರೊಬ್ಬರು ಕರೆ ಮಾಡಿ ಉಪ್ಪಿನಕುದ್ರು ಗ್ರಾಮದ ಮಾರನ ಮನೆ ಎಂಬಲ್ಲಿಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ  ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು ಅದರಂತೆ, ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ  10:00 ಗಂಟೆಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಓರ್ವ ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿ ಹೆಸರು ವಿಳಾಸ ತಿಳಿದುಕೊಂಡು ಆತನಿಗೆ ಮಾಹಿತಿ ನೀಡಿ ವೈದ್ಯಕೀಯ ತಪಾಸಣೆ ಬಗ್ಗೆ ಠಾಣಾ ಸಿಬ್ಬಂದಿಯವರ ಮುಖೇನ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಇತನನ್ನು  ಪರೀಕ್ಷಿಸಿದ ವೈದ್ಯರು ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ  ದಿನಾಂಕ: 17/02/2023 ರಂದು 11:50 ಗಂಟೆಗೆ ವರದಿ ನೀಡಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 20/2023 ಕಲಂ:27(b)   NDPS Act ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 17.02.2023 ರಂದು ಪಿರ್ಯಾದಿ ಪ್ರಸಾದ್‌ ಕುಮಾರ್‌ ಕೆ ಪಿಎಸ್‌ಐ (ತನಿಖೆ) ಪೊಲೀಸ್‌ ಉಪನಿರೀಕ್ಷಕರು ಇವರು  ಠಾಣಾ ಸರಹದ್ದಿನಲ್ಲಿ ಸಿಬ್ಬಂದಿಯವರೊಂದಿಗೆ  ಇಲಾಖಾ ಮೋಟಾರು ಸೈಕಲ್‌ ನಲ್ಲಿ  ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಕರ್ತವ್ಯದಲ್ಲಿರುವ ಸಮಯ ಬಾತ್ಮೀದಾರರೊಬ್ಬರು ಕರೆ ಮಾಡಿ ತಲ್ಲೂರ್‌  ಗ್ರಾಮದ ತಲ್ಲೂರ್‌ ಜಂಕ್ಷನ್ ಎಂಬಲ್ಲಿಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ  ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದು ಅದರಂತೆ, ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ  10:30 ಗಂಟೆಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಓರ್ವ ವ್ಯಕ್ತಿ ತೂರಾಡಿಕೊಂಡು ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿ ಹೆಸರು ವಿಳಾಸ ತಿಳಿದುಕೊಂಡು ಆತನಿಗೆ ಮಾಹಿತಿ ನೀಡಿ ವೈದ್ಯಕೀಯ ತಪಾಸಣೆ ಬಗ್ಗೆ ಠಾಣಾ ಸಿಬ್ಬಂದಿಯವರ ಮುಖೇನ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಇತನನ್ನು  ಪರೀಕ್ಷಿಸಿದ ವೈದ್ಯರು ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ  ದಿನಾಂಕ: 17/02/2023 ರಂದು 11:51 ಗಂಟೆಗೆ ವರದಿ ನೀಡಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 21/2023 ಕಲಂ: 27(b) NDPS Act ರಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿ: ಇವರು ಎಸ್.ಬಿ.ಐ ಹಾಗೂ ಐ.ಸಿ.ಐ.ಸಿ ಬ್ಯಾಂಕ್ ಕಾರ್ಕಳ ಶಾಖೆಗಳಲ್ಲಿ ಎಸ್.ಬಿ ಖಾತೆಗಳನ್ನು  ಹೊಂದಿದ್ದು, ದಿನಾಂಕ: 04-02-2023 ರಂದು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ  Felix Dais ಎಂಬ ಹೆಸರಿನ ಫೇಸ್ ಬುಕ್ ಖಾತೆದಾರ ಪರಿಚಯವಾಗಿ ತಾನು ಯೂರೋಪಿನ ಸ್ರೈಪ್ರಸ್ ಎಂಬಲ್ಲಿ ವಾಸವಾಗಿದ್ದಾಗಿ ನಂಬಿಸಿ, ವ್ಯಾಲೆಂಟೈನ್ಸ್ ಡೇ ಗೆ ಗಿಫ್ಟ್ ಐಟಂಗಳ ಪಾರ್ಸೆಲ್ ನ್ನು ಕಳುಹಿಸುವುದಾಗಿ ತಿಳಿಸಿ ಅದರ ಫೊಟೋ ವನ್ನು ಹಾಗೂ  ಮೆಸೇಜ್ ಗಳನ್ನು ವಾಟ್ಸ್ ಅಫ್ ನಂಬ್ರ ದ ಮುಖೇನ ಕಳುಹಿಸಿದ್ದು,ಇದನ್ನು ಪಿರ್ಯಾಧಿದಾರರು ನಂಬಿದ್ದು,  ನಂತ್ರ ದಿನಾಂಕ:13-02-2023 ರಂದು ದೆಹಲಿ ಏರ್ ಫೋರ್ಟ್ ಸಿಬ್ಬಂದಿ ಎಂದು ಮೊಬೈಲ್ ನಂಬ್ರ: 9870189535 ನೇದರಿಂದ  ಕರೆ ಮಾಡಿ  ಪಾರ್ಸಲ್ ನ ಗ್ರೌಂಡ್ ಪಾಸ್ ಮಾಡಲು ರೂ.47,000/- ಹಣವನ್ನು ಡಿಪಾಸಿಟ್ ಮಾಡುವಂತೆ ತಿಳಿಸಿದ್ದು, ಅದರಂತೆ ಅವರು ಸೂಚಿಸಿದ ಬ್ಯಾಂಕ್ ಖಾತೆಗೆ ತನ್ನ ಹೆಚ್.ಡಿ.ಎಫ್.ಸಿ ಬ್ಯಾಂಕ್ ನಿಂದ ಹಣ ಡಿಪಾಸಿಟ್ ಮಾಡಿದ್ದು, ನಂತ್ರ ಬೇರೆ ಬೇರೆ ರೀತಿಯಾಗಿ ಹೇಳಿ ಹಣವನ್ನು ಡಿಪಾಸಿಟ್ ಮಾಡುವಂತೆ ಹೇಳಿದ್ದು, ಅದರಂತೆ ಕ್ರಮಮಾಗಿ ತನ್ನ ಹೆಚ್.ಡಿ.ಎಫ್.ಸಿ ಬ್ಯಾಂಕ್ ನಿಂದ ದಿನಾಂಕ: 14-02-2023 ರಂದು ರೂ. 1,00,000/-, 79,500/-, ಹಾಗೂ ತನ್ನ  ಎಸ್.ಬಿ ಐ ಬ್ಯಾಂಕ್ ನಿಂದ ದಿನಾಂಕ: 15-02-2023 ರಂದು ರೂ.3,00,000/-, 1,00,000/-, 1,37,000/- ಒಟ್ಟು ರೂ. 7,63,500/- ಹಣವನ್ನು  ಮೋಸದಿಂದ ಡಿಪಾಸಿಟ್ ಮಾಡಿಸಿ ಕೊಂಡು,ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2023  ಕಲಂ 66(C), 66(D), ಐ.ಟಿ. ಆಕ್ಟ್.ರಂತೆ ಪ್ರಕರಣ ದಾಖಲಿಸಲಾಗಿದೆ.
         

ಇತ್ತೀಚಿನ ನವೀಕರಣ​ : 17-02-2023 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080