ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 15/02/2022 ರಂದು KA-20-D-5264ನೇ ಅಶೋಕ ಲೇ ಲ್ಯಾಂಡ್ ವಾಹನದ ಚಾಲಕ ದಯಾನಂದ.ಹೆಚ್ ರವರು ರೂಫಿಂಗ್ ಶೀಟ್ ಮತ್ತು ಪೈಫ್ಸ್ ಗಳನ್ನು ವಾಹನದ ಹೊರಗಡೆಯಲ್ಲಿ ಮಾನವ ಪ್ರಾಣಕ್ಕೆ ಅಪಾಯಕಾರಿ ರೀತಿಯಲ್ಲಿ ತುಂಬಿಸಿ ತನ್ನ ವಾಹನವನ್ನು ಬಲೈಪಾದೆ ಕಡೆಯಿಂದ ಸಂತೆಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದು, ಕರಾವಳಿ ಜಂಕ್ಷನ್ ನ ಫ್ಲೆ ಓವರ್  ಮೇಲುಗಡೆ ತಲುಪುವಾಗ ಸಂಜೆ 4:30 ಗಂಟೆಗೆ  KA-51-AG-3263ನೇ ಈಚರ್ ವಾಹನದ ಚಾಲಕ ಅಶ್ರಫ್.ಐ ರವರು ತನ್ನ ವಾಹನವನ್ನು ಬಲೈಪಾದೆ ಕಡೆಯಿಂದ ಸಂತೆಕಟ್ಟೆ ಕಡೆಗೆ ಚಲಾಯಿಸಿಕೊಂಡು ಬಂದು KA-20-D-5264ನೇ ಅಶೋಕ ಲೇ ಲ್ಯಾಂಡ್ ವಾಹನಕ್ಕೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಹಿಂದುಗಡೆಯಿಂದ ಒಮ್ಮೆಲೇ ಡಿಕ್ಕಿ ಹೊಡೆದ ಪರಿಣಾಮ ಈಚರ್ ವಾಹನದ ಮುಂಭಾಗವು ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2022 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ದಿನಾಂಕ 16/02/2022 ರಂದು ಪಿರ್ಯಾದಿದಾರರಾದ ಮೊಹಮ್ಮದ್ ಇಮ್ತಿಯಾಜ್ (45), ತಂದೆ : ದಿ. ಅಬ್ದುಲ್ ಅಜೀಜ್,  ವಾಸ : ದುರ್ಗಾ ನಗರ ಕುಂಜೂರು ಎಲ್ಲೂರು ಗ್ರಾಮ ಪಣಿಯೂರು ಅಂಚೆ ಕಾಪು  ತಾಲೂಕು ಉಡುಪಿ ಜಿಲ್ಲೆ ಇವರು ಆಟೋ ರಿಕ್ಷಾ ನಂಬ್ರ KA-20-AB-. 3530 ನೇದನ್ನು ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗುತ್ತಿರುವಾಗ ಮಧ್ಯಾಹ್ನ 1:50 ಗಂಟೆಯ ಸಮಯಕ್ಕೆ ಮೂಳೂರು  ಗ್ರಾಮದ  ಸುನ್ನಿ ಸೆಂಟರ್  ಹತ್ತಿರ  ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಮಂಗಳೂರು ಕಡೆಯಿಂದ ರಾಕೇಶ  ರವರು  ತನ್ನ ಕಾರು ನಂಬ್ರ KA-20-Z-8505 ನೇದನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋ ರಿಕ್ಷಾದ ಹಿಂಭಾಕ್ಕೆ  ಢಿಕ್ಕಿ ಹೊಡೆದ ಪರಿಣಾಮ  ಆಟೋ ರಿಕ್ಷಾ ಎಡಭಾಗಕ್ಕೆ ಪಲ್ಟಿಯಾಗಿದ್ದು, ಪಿರ್ಯಾದಿದಾರರು ಕೆಳಗೆ ಬಿದ್ದು, ಪಿರ್ಯಾದಿದಾರರ ಎದೆಗೆ ಗುದ್ದಿದ್ದ ನೋವು ಹಾಗೂ ಬಲಕೈಗೆ ಒಳಪೆಟ್ಟಾದ ಗಾಯವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ತೇಜಸ್ ಎ (21), ತಂದೆ: ಆನಂದ ವಿ, ವಾಸ: ನಂಬ್ರ 23, 9 ನೇ ಕ್ರಾಸ್, ಇಟ್ಟಮಡು, ಚೌಡೇಶ್ವರಿ ಶಾಲೆಯ ಹತ್ತಿರ, ಬಿಎಸ್‌ಕೆ ಸ್ಟೇಜ್, ಬನಶಂಕರಿ, 3 ನೇ ಹಂತ, ಬೆಂಗಳೂರು ದಕ್ಷಿಣ ಇವರು ತನ್ನ  ಮಿತ್ರರಾದ ಕೌಶಿಕ್, ನಾಗಶ್ರೀ ಮತ್ತು ವೈಷ್ಣವಿ ಎಂಬುವವರೊಂದಿಗೆ ಕೌಶಿಕ್‌ನ ಸಂಬಂಧಿಕರಾದ ನಾಗರಾಜ ಎಂಬುವರ ಮಾರುತಿ ವ್ಯಾಗನರ್ KA-05-MP-6344  ಕಾರಿನಲ್ಲಿ ಬೆಂಗಳೂರಿನಿಂದ ದಿನಾಂಕ 13/02/2022 ರಂದು ಪ್ರವಾಸಕ್ಕೆ ಹೊರಟಿದ್ದು ದಿನಾಂಕ 15/02/2022 ರಂದು ಉಡುಪಿಯಿಂದ ಕಾರ್ಕಳ ಮೂಲಕ ಕಾರ್ಕಳ–ಹೆಬ್ರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರ್ಕಳದಿಂದ ಹೆಬ್ರಿ ಕಡೆಗೆ ಹೋಗುತ್ತಾ ಮಧ್ಯಾಹ್ನ 2:00 ಗಂಟೆಗೆ ಹಿರ್ಗಾನ ಗ್ರಾಮದ ಹಾರ್ಜಡ್ಡು ಕ್ರಾಸ್ ಬಳಿ ತಲುಪುವಾಗ ಕಾರನ್ನು ಕೌಶಿಕ್‌ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ರಸ್ತೆಯ ಬದಿಗೆ ಹೋಗಿ  ಮಗುಚಿ ಬಿದ್ದು ಕಾರಿನ ಮುಂದಿನ ಎಡಬದಿ ಸೀಟಿನಲ್ಲಿ ಕುಳಿತಿದ್ದ ಪಿರ್ಯಾದಿದಾರರಿಗೆ ಎಡಕೈ ಬೆರಳಿಗೆ ಮತ್ತು ಮೂಗಿನ ಕೆಳಗೆ ತರಚಿದ ಗಾಯವಾಗಿತ್ತು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವೈಷ್ಣವಿಗೆ ಕುತ್ತಿಗೆಯ ಹತ್ತಿರ ಎಡಬದಿ ಮತ್ತು ಎಡಬದಿ ತೋಳಿನಲ್ಲಿ ಒಳಜಖಂ ಆಗಿದ್ದು ನಾಗಶ್ರೀ ಯವರ ಎಡಕೈಗೆ ತರಚಿದ ಗಾಯವಾಗಿರುತ್ತದೆ. ಕಾರು ಚಾಲನೆ ಮಾಡುತ್ತಿದ್ದ ಕೌಶಿಕ್‌ಗೆ ಎಡಭುಜ ಮತ್ತು ಮುಖಕ್ಕೆ ರಕ್ತ ಗಾಯವಾಗಿರುತ್ತದೆ. ಕಾರು ಸಂಪೂರ್ಣ ಜಖಂಗೊಂಡಿದ್ದು ಚಿಕಿತ್ಸೆಯ ಬಗ್ಗೆ  ಕಾರ್ಕಳ ಸಿಟಿ ಆಸ್ಪತ್ರೆಗೆ ಬಂದಾಗ ಪಿರ್ಯಾದಿದಾರರನ್ನು, ವೈಷ್ಣವಿ, ನಾಗಶ್ರೀಯವರನ್ನು ಹೊರರೋಗಿಯಾಗಿ ಮತ್ತು  ಕೌಶಿಕ್‌ ರವರನ್ನು ಒಳ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಸುರೇಶ ಅಮೀನ್ (51), ತಂದೆ: ಕೊರ್ಗು ಅಮೀನ, ವಾಸ: ಕಾಡೂರು ಶಾಲೆಯ ಬಳಿ ಕಾಡೂರು ಗ್ರಾಮ ಉಡುಪಿ ಜಿಲ್ಲೆ ಇವರ ತಮ್ಮ ಹರೀಶ (38) ಇವರು ಆವರ್ಸೆ ಗ್ರಾಮದ ಆವರ್ಸೆ ಶಾಲೆಯ ಬಳಿಯಿರುವ ತನ್ನ ಹೆಂಡತಿ ಮನೆಯಲ್ಲಿ ವಾಸವಾಗಿದ್ದವರುದಿನಾಂಕ 10/02/2022 ರಂದು 13:00 ಗಂಟೆಯ ಸಮಯಕ್ಕೆ ತಾನು ಮೀನುಗಾರಿಕೆಗೆಂದು ಮಲ್ಪೆಗೆ  ಹೋಗುವುದಾಗಿ ತಿಳಿಸಿ ಬೈಕನ್ನು ಮನೆಯಲ್ಲಿಯೇ ಇಟ್ಟು ಹೋಗಿದ್ದು ಕೆಲಸಕ್ಕೆ ಹೋಗದೇ ವಾಪಾಸ್ಸು ಮನೆಗೂ ಬಾರದೇ ಎಲ್ಲಿಯೋ ಕಾಣೆಯಾಗಿದ್ದು ನೆರೆಕೆರೆ ಯವರಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2022 ಕಲಂ: MAN MISSING  ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 17-02-2022 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080