ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ ಪ್ರಸನ್ನ ಪದ್ಮರಾಜ್ (50) ಗಂಡ: ಡಾ: ಪದ್ಮರಾಜ್ ಹೆಗ್ಡೆ, ವಿಳಾಸ : ಬಿ-2502-103, ರಾಯಲ್ ಅಂಬೆಸಿ, ವಿದ್ಯಾ ರತ್ನ ನಗರ, ಮಣಿಪಾಲ ಇವರು ಕಳೆದ ವಾರ ಕೋ ಆಪರೇಟಿವ್‌ ‌ಬ್ಯಾಂಕ್‌ನಿಂದ 4 ಲಕ್ಷ ರೂಪಾಯಿ ಹಣವನ್ನು ಡ್ರಾ  ಮಾಡಿ ಆ ಪೈಕಿ 50 ಸಾವಿರ ಹಣವನ್ನು ಬೆಡ್ ರೂಂ ನ ವಾರ್ಡ್ ರೂಬ್‌ನಲ್ಲಿ ಇಟ್ಟು ಹೋಗಿದ್ದು ದಿನಾಂಕ 16/02/2022 ರಂದು ರಾತ್ರಿ 8:30 ಗಂಟೆಗೆ ಪ್ರಸನ್ನ ಪದ್ಮರಾಜ್ ರವರು ಬೆಂಗಳೂರಿನಿಂದ ವಾಪಾಸ್ ಬಂದು ವಾರ್ಡ್ ರೂಬ್ ತೆಗೆದು ನೋಡಿದಾಗ 50 ಸಾವಿರ ಹಣ ಇರಲಿಲ್ಲ ಅನುಮಾನಗೊಂಡ ಪ್ರಸನ್ನ ಪದ್ಮರಾಜ್ ರವರು ಲಾಕರನ್ನು ಪರಿಶೀಲನೆ ಮಾಡಿದಾಗ ಕಳೆದ ವರ್ಷ ಅಕ್ಟೋಬರ್ 15 ರಂದು ರಾತ್ರಿ  ಸುಮಾರು 10:30 ಗಂಟೆಗೆ ಲಾಕರ್ ನಲ್ಲಿಟ್ಟಿದ್ದ ಒಟ್ಟು 4 ಲಕ್ಷ ರೂಪಾಯಿ ಮೌಲ್ಯದ ವಿವಿಧ ನಮೂನೆಯ 8 ಬಂಗಾರದ ಬಳೆಗಳು, ಹಾಗೂ ಒಂದು ಡೈಮಂಡ್ ಉಂಗುರ  ಕಳವಾಗಿರುವುದು ಕಂಡು ಬಂದಿರುತ್ತದೆ. ಸದರಿ ಆಭರಣ ಮತ್ತು ನಗದು ಹಣವನ್ನು ಮನೆ ಕೆಲಸದ ರಾಧಾರವರೇ ಕಳವು ಮಾಡಿ ತೆಗೆದುಕೊಂಡು ಹೋಗಿರುವ ಅನುಮಾನ ಇರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 26/2022 ಕಲಂ: 381 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಬಿ,ಎಚ್, ಶಿವರಾಮ್ ಆಚಾರ್ಯ (58) ತಂದೆ: ದಿ: ಹೊನ್ನಯ್ಯ ಆಚಾರ್ಯ ವಾಸ: ಶ್ರೀ ದೇವಿಕ್ರಪಾ, ಮಹಾಲಚ್ಚಿಲ್ ಹೌಸ್, ಬೋಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರ ತಂದೆ ದಿವಂಗತ ಹೊನ್ನಯ್ಯ ಆಚಾರ್ಯ ರವರಿಗೆ ಇಬ್ಬರು ಹೆಂಡತಿಯರಿದ್ದು ಅವರ ಮೊದಲನೆ ಹೆಂಡತಿಯ ಮಗ ವಿಶ್ವನಾಥ್ ಆಚಾರ್ಯ ರವರು ಮೃತಪಟ್ಟ ಬಳಿಕ ಅವರ ಮಗ ದಿನೇಶ್ ಆಚಾರ್ಯರವರು ತಂದೆಯ ಜಾಗದ ವಿಚಾರದಲ್ಲಿ ಬಿ,ಎಚ್, ಶಿವ ರಾಮ್ ಆಚಾರ್ಯ ಇವರೊಂದಿಗೆ ಪ್ರತಿದಿನ ಗಲಾಟೆ ಮಾಡುತ್ತಿದ್ದು ದಿನಾಂಕ 11/02/2022 ರಂದಯ ದಿನೇಶನು ಬಿ,ಎಚ್, ಶಿವ ರಾಮ್ ಆಚಾರ್ಯ ರವರ ಪಟ್ಟಾ ಜಾಗದಲ್ಲಿ ಇರುವ ದಾರಿಗೆ ಇರುವ ಕಲ್ಲನ್ನು ಇಟ್ಟಿದ್ದು ಆ ಕಲ್ಲನ್ನು ತೆಗೆಯವಂತೆ ಬಿ,ಎಚ್, ಶಿವ ರಾಮ್ ಆಚಾರ್ಯ ರವರು ದಿನೇಶ್ ಆಚಾರ್ಯನಲ್ಲಿ ಹೇಳಿದ್ದರೂ ದಿನೇಶ್ ಆಚಾರ್ಯನು ಕಲ್ಲನ್ನು ತೆಗೆಯದೇ ಇದ್ದು ಇದರಿಂದಾಗಿ ಬಿ,ಎಚ್, ಶಿವ ರಾಮ್ ಆಚಾರ್ಯ ರವರಿಗೆ ಹಾಗೂ ಅವರ ನೆರೆಕೆರೆಯ ಸುಮಾರು ಐದಾರು ಮನೆಯವರಿಗೆ  ನಡೆದಾಡಲು ದಾರಿ ಇಲ್ಲದ ಕಾರಣ ದಿನಾಂಕ 17/02/2022 ರಂದು ಬೆಳಿಗ್ಗೆ 09:00 ಗಂಟೆಗೆ ದಾರಿಯಲ್ಲಿನ ಕಲ್ಲು ತೆಗೆಯುತ್ತಿರುವಾಗ ಆರೋಪಿ ದಿನೇಶ್ ಆಚಾರ್ಯನು ಕೈಯಲ್ಲಿ ಪ್ಲಾಸ್ಟಿಕ್ ಪೈಪ್ ಹಿಡಿದುಕೊಂಡು ಅಲ್ಲಿಗೆ ಬಂದು ಒಮ್ಮೆಲೆ ಬಿ,ಎಚ್, ಶಿವ ರಾಮ್ ಆಚಾರ್ಯ ರವರನ್ನು ತಡೆದು ನಿಲ್ಲಿಸಿ ಅವಾಚ್ಯಶಬ್ದಗಳಿಂದ ಬೈದು ಪೈಪಿಂದ ಇವರ ಬೆನ್ನಿಗೆ ಹಲ್ಲೆ ಮಾಡಿ ಹೊಟ್ಟೆಗೆ ಕಾಲಿನಿಂದ ತುಳಿದು ಕೈಯಿಂದ ಇವರ ಎಡಕೆನ್ನೆಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 18/2022 ಕಲಂ: 341,504,323,324,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಆಶಾ (35)ಗಂಡ: ರಾಘವೇಂದ್ರ ಕುಂದರ್ ವಾಸ: ಅನ್ವಿತ್ ನಿಲಯ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಬ್ರಹ್ಮಾವರ  ಇವರು ದಿನಾಂಕ 14/02/2022 ರಂದು ರಾತ್ರಿ ಸುಮಾರು 10.00 ಗಂಟೆಗೆ ಮನೆಯ ಬಳಿಯ ರಾಮ ಮಂದಿರದ ವಾರ್ಷಿಕೋತ್ಸವ ಪೂಜೆ ಮುಗಿಸಿ ವಾಪಾಸ್ಸು ಮನೆಗೆ ಬರುತ್ತಿರುವಾಗ ಇವರ ಪರಿಚಯದವರೇ ಆದ ಉದಯ ಹಾಗು ನಿಖಿಲ್ ಎಂಬುವವರು ಪಂಚಾಯತ್ ಕಾಮಗಾರಿಯ ಆಕ್ಷೇಪದ ವಿಚಾರದಲ್ಲಿ ಆಶಾ ರವರನ್ನು ಮನೆಯ ಸಮೀಪ ಬೈಕ್ ನಲ್ಲಿ ಬಂದು ಅಡ್ಡಗಟ್ಟಿ ಅವಾಚ್ಯವಾಗಿ ನಡೆದುಕೊಂಡು ಉದಯನು ಹಿಡಿದು ಎಳೆದಾಡಿದಾಗ ಆಶಾ ರವರು ಜೋರಾಗಿ ಕೂಗಿಕೊಂಡಾಗ ಅವರ ಗಂಡ ಬಂದುದನ್ನು ನೋಡಿ ಆರೋಪಿತರು ಓಡಿ ಹೋಗಿರುತ್ತಾರೆ. ಆರೋಪಿಗಳು ಚೇತನನ ಕುಮ್ಮಕ್ಕಿನಿಂದ ಈ ರೀತಿ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 16/2022 ಕಲಂ: 341,354,354(B),504, 506, 109 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-02-2022 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080