ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಅಮಾಸೆಬೈಲು: ಪಿರ್ಯಾದಿದಾರರಾದ ಸದಾನಂದ ಪೂಜಾರಿ (45), ತಂದೆ: ಕೊಲ್ಲ ಪೂಜಾರಿ, ವಾಸ: ಅರಸಮ್ಮಾಕಾನು ಶೇಡಿಮನೆ ಗ್ರಾಮ ಹೆಬ್ರಿ ತಾಲೂಕು ಇವರು ದಿನಾಂಕ 14/02/2021 ರಂದು ಬೆಳಿಗ್ಗೆ 08:30 ಗಂಟೆಗೆ ತನ್ನ ಮೋಟಾರು ಸೈಕಲ್ ನಲ್ಲಿ  ಶೇಡಿಮನೆಯಿಂದ ಮಾಂಡಿಮೂರುಕೈ ಕಡೆಗೆ ಹೋಗುತ್ತಿದ್ದು  ಶೇಡಿಮನೆ ಗ್ರಾಮದ ಅರಸಮ್ಮಾಖಾನು ಅಡಿಗಳ ಬೆಟ್ಟು ಎಂಬಲ್ಲಿ  ಹೋಗುತ್ತಿರುವಾಗ ಶೇಡಿಮನೆ ಗ್ರಾಮದ ಗಣಪ ಪೂಜಾರಿ(62) ಮತ್ತು ಬಸವ ಪೂಜಾರಿ(65) ವರ್ಷ ಎಂಬುವವರು ರಸ್ತೆ ಬದಿಯಲ್ಲಿ ನೆಡೆದುಕೊಂಡು ಹೋಗುತ್ತಿರುವಾಗ ಶೆಡಿಮನೆ ಕಡೆಯಿಂದ ಮಾಂಡಿಮೂರು ಕೈ ಕಡೆಗೆ ಪಿಕಪ್  ವಾಹನವನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಮುಗಚಿ ಬಿದ್ದು ಮುಂದಕ್ಕೆ ಹೋಗಿ ರಸ್ತೆ ಬದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ, ಗಣಪ ಪೂಜಾರಿ ಮತ್ತು ಬಸವ ಪೂಜಾರಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಗಣಪ ಪೂಜಾರಿಯವರಿಗೆ ಬಲ ಕೈ ಹಾಗೂ ತಲೆಗೆ ಪೆಟ್ಟಾಗಿದ್ದು ಬಸವ ಪೂಜಾರಿಯವರಿಗೆ ಬಲ ಕಾಲಿಗೆ ಪೆಟ್ಟಾಗಿ ಗಾಯ ಗೊಂಡಿರುತ್ತಾರೆ. ಡಿಕ್ಕಿ ಹೊಡೆದ ಪಿಕಪ್  ನಂಬ್ರ KA-20-AA-5410 ಆಗಿರುತ್ತದೆ. ಅದರ ಚಾಲಕ ಕಿರಣ ಪೂಜಾರಿಯವರಾಗಿರುತ್ತಾರೆ. ಅಪಘಾತದಿಂದ ಪಿಕಪ್ ಚಾಲಕನಿಗೂ ಪೆಟ್ಟಾಗಿದ್ದು  ಗಾಯಗೊಂಡ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2021  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಐಡಾ ಲೋಬೋ (62), ಗಂಡ: ದಿ. ಗಿಲ್ಬರ್ಟ್‌ಲೋಬೋ,  ವಾಸ:   ಪುನಾರು ಮನೆ, ಬೆಳ್ಮಣ್‌ ಅಂಚೆ ಮತ್ತು ಗ್ರಾಮ ಉಡುಪಿ ಜಿಲ್ಲೆ ಇವರ ಕೊನೆಯ ತಮ್ಮ ಮೈಕಲ್‌ ಹೆನ್ರಿ ಫೆರ್ನಾಂಡೀಸ್‌ (50)      ಇವರು ಕಾರ್ಕಳ ತಾಲೂಕು ಬೆಳ್ಮಣ್‌ ಗ್ರಾಮದ ಪುನಾರು ಮನೆ ಎಂಬಲ್ಲಿರುವ ವಾಸ್ತವ್ಯದ ಮನೆಯಲ್ಲಿ ಒಬ್ಬರೇ ಇದ್ದು ಹೆಂಡತಿ ಮತ್ತು ಮಗಳು ವಿದೇಶದಲ್ಲಿ ಇರುತ್ತಾರೆ. ಪಿರ್ಯಾದಿದಾರರ ತಮ್ಮ ವಿಪರೀತ ಮದ್ಯಪಾನ ಸೇವಿಸುವ ಚಟವುಳ್ಳವನಾಗಿದ್ದು. ಇದೇ ಕಾರಣದಿಂದ ಮನನೊಂದು ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15/02/2021 ರಂದು ಪಿರ್ಯಾದಿದಾರರ ಮನೆಯಲ್ಲಿ ಊಟ ಮಾಡಿಕೊಂಡು ಹೋದವರು ತನ್ನ ವಾಸ್ತವ್ಯದ ಮನೆಯಲ್ಲಿ ರಾತ್ರಿ 11:00 ಗಂಟೆಯಿಂದ 16/02/2021 ರಂದು ಬೆಳಿಗ್ಗೆ 12:೦೦ ಗಂಟೆಯ ಮಧ್ಯಾವಧಿಯಲ್ಲಿ  ಯಾವುದೋ ವಿಷ ಪದಾರ್ಥವನ್ನು  ಸೇವಿಸಿ ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಗಿರಿಜಾ (73), ಗಂಡ:ಶಂಕರ ಕೆ, ವಾಸ: ಅನುಗ್ರಹ ನಿಲಯ, ಕೋಡಿ ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 16/02/2021 ರಂದು ಬೆಳಿಗ್ಗೆ 11:30 ಗಂಟೆಗೆ ಅವರ ಮನೆಯ ಮೆಟ್ಟಿಲಿನ ಬಳಿ ಕುಳಿತಿರುವಾಗ ಆಪಾದಿತ ರತ್ನಾಕರ ಖಾರ್ವಿ ಪಿರ್ಯಾದಿದಾರರಲ್ಲಿ ನಿಮ್ಮ ಮನೆಯ ಜಾಗವನ್ನು ಅಳತೆ ಮಾಡುತ್ತಿದ್ದೇವೆ, ಈ ಕಾಗದ ಪತ್ರಕ್ಕೆ ಸಹಿ ಹಾಕು ಎಂದು ಹೇಳಿದಾಗ ಪಿರ್ಯಾದಿದಾರರು ನನಗೆ ಯಾವುದೇ  ನೊಟೀಸು ಬಂದಿಲ್ಲ ನಾನು ಸಹಿ ಮಾಡುವುದಿಲ್ಲವೆಂದು ಹೇಳಿದಾಗ  ಜಾಗಕ್ಕೆ  ಅಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲು ಬಡಿದು  ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021 ಕಲಂ:  447, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.       

ಇತ್ತೀಚಿನ ನವೀಕರಣ​ : 17-02-2021 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080