ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 16/02/2021 ರಂದು ರಾತ್ರಿ 08:00 ಗಂಟೆಗೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ತ್ರಿವಿಕ್ರಮ ಕಿಣಿ ಎಂಬುವವರ ಮನೆಯ ಸಮೀಪ  ಹಾದು ಹೋಗುವ ಉಡುಪಿ-ಕಾರ್ಕಳ ಸಾರ್ವಜನಿಕ ರಸ್ತೆಯಲ್ಲಿ ಪಿರ್ಯಾದಿದಾರರಾದ ವಿಠಲ ದೇವಾಡಿಗ (65), ತಂದೆ:ದಿ.ಸದಿಯಾ ದೇವಾಡಿಗ, ವಾಸ:ದುಗ್ಗಣ್ಣಬೆಟ್ಟು ಕುಕ್ಕುಂದೂರು ಗ್ರಾಮ ಕಾರ್ಕಳ ತಾಲೂಕು, ಉಡುಪಿ ಇವರು  ನಡೆದುಕೊಂಡು ಬರುತ್ತಿರುವಾಗ ಬೈಲೂರು ಕಡೆಯಿಂದ  KA-20-X-0529 ನೇ ಮೋಟಾರ್‌ಸೈಕಲ್‌ನ್ನು ಅದರ ಸವಾರ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎಡ ಹಣೆಗೆ  ಎಡಕಾಲಿನ ಮೊಣಗಂಟಿಗೆ ರಕ್ತಗಾಯವಾಗಿ ಕೋಲು ಕಾಲು ಜಖಂ ಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 15/02/2021  ರಂದು ಬೆಳಿಗ್ಗೆ  ಪಿರ್ಯಾದಿದಾರರಾದ ಕಿಶೋರ್‌ ಕೆ. (41), ತಂದೆ:- ವಿ.ಕುಚೇಲಯ್ಯ, ವಾಸ:- ಶ್ರೀ ಲಕ್ಷ್ಮಿ ಎ.ಎಲ್‌ ಹೆಬ್ಬಾರ್‌ ಕಾಂಪ್ಲೆಕ್ಸ್‌, ಬಿ.ಟಿ.ಆರ್‌ ರಸ್ತೆ, ಕುಂದಾಪುರ ಇವರು ತನ್ನ ದ್ವಿಚಕ್ರ ವಾಹನದಲ್ಲಿ ಕುಂದಾಪುರ ಪೇಟೆಯಿಂದ ಮನೆ ಕಡೆಗೆ ಹೋಗುತ್ತಿರುವಾಗ ಕುಂದಾಪುರ –ಉಡುಪಿ ಸರ್ವಿಸ್‌ ರಸ್ತೆಯಲ್ಲಿ  ಕುಂದಾಪುರದ ಹಳೆಯ ಮಿಥುನ್‌ ಕಾಂಪ್ಲೆಕ್ಸ್‌ ಬಳಿ ತಲುಪುವಾಗ ಬಸ್ರೂರು ಮೂರು ಕೈ ಕಡೆಯಿಂದ ಶಾಸ್ತ್ರಿ ಪಾರ್ಕ್‌ ಕಡೆಗೆ ವಿರುದ್ದ ದಿಕ್ಕಿನಲ್ಲಿ ಆಪಾದಿತ ಗಣೇಶ್‌ ಆಚಾರಿ KA-20-EL-9698 ನೇ ಜ್ಯುಪಿಟರ್‌ ಮೋಟಾರ್‌ ಸೈಕಲ್‌ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬರುತ್ತಾ ರಸ್ತೆಯಲ್ಲಿ ತನ್ನ ತೀರಾ ಬಲಬದಿಗೆ ಮೋಟಾರ್‌ ಸೈಕಲ್‌ ನ್ನು ಸವಾರಿ ಮಾಡಿ ಸರ್ವಿಸ್‌ ರಸ್ತೆಗೆ ಹೊಂದಿಕೊಂಡಿದ್ದ ಕುಂದಾಪುರ ಬಿ.ಟಿ.ಆರ್‌ ರಸ್ತೆಯಿಂದ ಸರ್ವಿಸ್ ರಸ್ತೆಗೆ ಬರಲು ನಿಂತುಕೊಂಡಿದ್ದ ಶ್ರೀಮತಿ ಅನಾಲಿನಿ .ಬಿ ರವರ KA-20-MA-135 ಸ್ವಿಪ್ಟ್‌ ಕಾರಿಗೆ ಮುಂಭಾಗದ ನಂಬರ್‌ಪ್ಲೇಟ್‌ಗೆ ಡಿಕ್ಕಿ ಹೊಡೆದು ಮೊಟಾರ್‌ಸೈಕಲ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿತ್ತಾರೆ. ಅಪಘಾತದ ಪರಿಣಾಮ 2 ವಾಹನಗಳು ಜಖಂ ಗೊಂಡಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಮನುಷ್ಯ ಕಾಣೆ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಸುರೇಂದ್ರ (30), ತಂದೆ: ಕುಷ್ಟ ಪೂಜಾರಿ, ವಾಸ: ಹಕ್ಲಮನೆ ತಲ್ಲೂರು ಗ್ರಾಮ ಕುಂದಾಪುರ ತಾಲೂಕು ಇವರ ಬಾವ ಚಂದ್ರ ಪೂಜಾರಿ (50) ರವರು ಹಕ್ಲು ಮನೆ ತಲ್ಲೂರು  ಗ್ರಾಮದಲ್ಲಿ ವಾಸವಾಗಿದ್,ದು ದಿನಾಂಕ 14/02/2021 ರಂದು ತಂದೆಯ ಮನೆಯಾದ ತೋಟದ ಮನೆ ಕನ್ಯಾನ ಎಂಬಲ್ಲಿಗೆ ಬಂದಿದ್ದು ದಿನಾಂಕ 16/02/2021 ರಂದು ಮಧ್ಯಾಹ್ನ 02:30 ಗಂಟೆಯ ಸಮಯಕ್ಕೆ ತಲ್ಲೂರಿಗೆ ಹೋಗುವುದಾಗಿ ಹೇಳಿ ಹೋದವರು ಬಂದಿರುವುದಿಲ್ಲ. ಅಕ್ಕ ಪಕ್ಕದಲ್ಲಿ ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-02-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080