ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಧನಂಜಯ ಎಸ್ (29), ತಂದೆ:ಸುರೇಶ್ ಪೂಜಾರಿ, ವಾಸ: “ಮಾತೃ ನಿಲಯ” ಮನೆ ನಂ: 162ಎ, ಅತ್ರಾಡಿ –ಪರೀಕಾ ರಸ್ತೆ ಆತ್ರಾಡಿ ಅಂಚೆ ಮತ್ತು ಗ್ರಾಮ,  ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 13/01/2023 ರಂದು ತನ್ನ KA-20-EH-8768 ನೇ ಸ್ಕೂಟರನ್ನು ಉಡುಪಿ ಎಂ.ಜಿ.ಎಂ ಕಡೆಯಿಂದ ಮಣಿಪಾಲ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ರಾತ್ರಿ 11:15 ಗಂಟೆಗೆ ಮಣಿಪಾಲ ಲಕ್ಷೀಂದ್ರ ನಗರದ ನ್ಯಾಚುರಲ್ ಐಸ್ ಕ್ರೀಂ ಅಂಗಡಿಯ ಎದುರು ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ತಲುಪುವಾಗ ಹಿಂದಿನಿಂದ KA-19-MF-6849 ನೇ ಕಾರು ಚಾಲಕ ಪರಶುರಾಮ  ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾತಿಸಿ ಪಿರ್ಯಾದಿದಾರರ ಸ್ಕೂಟರ್ ಗೆ ಹಿಂಬದಿಯಿಂದ ಡಿಕ್ಕಿ ಹೋಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಕೆನ್ನೆಗೆ ಗಾಯವಾಗಿದ್ದು ಮತ್ತು ಎಡಕಾಲು ಮೂಳೆ ಮುರಿತ ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಶ್ವೇತರಾಜ  (64), ತಂದೆ: ದಿ. ಎ. ಗೋವಿಂದ,  ವಾಸ: ಮನೆ ನಂಬ್ರ 2-67-1, ಬಬ್ಬುಸ್ವಾಮಿ ದೇವಸ್ಥಾನದ ಹತ್ತಿರ ಅಂಬಲಪಾಡಿ, ಅಂಬಲಪಾಡಿ ಗ್ರಾಮ, ಉಡುಪಿ ತಾಲೂಕು ಇವರ  ತಮ್ಮ ಸುಮಂತ ಕುಮಾರ್ (52) ರವರು  ದಿನಾಂಕ 16/01/2023 ರಂದು ಮದ್ಯಾಹ್ನ 03:00 ಗಂಟೆಯಿಂದ 03:45 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಮ.ನಂ 2-67-1, ಬಬ್ಬುಸ್ವಾಮಿ ದೇವಸ್ಥಾನದ ಹತ್ತಿರ ವಿರುವ ವಾಸ್ತವ್ಯದ ಮನೆಯಲ್ಲಿ ಕೋಣೆಯ ಪಕ್ಕಾಸಿಗೆ ಸೀರೆಯನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 03/2023 ಕಲಂ: 174   CrPC ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಶಹಜಾನ್‌ ಖಾಝಿ (83), ತಂದೆ: ದಿ. ಖಾಝಿ ಮಹಮ್ಮದ್‌ ಹುಸೇನ್‌, ವಾಸ : ಮನೆ ನಂಬ್ರ: 5-76(6) ಮೂನ್‌ಲೈಟ್‌, ಭೀಮಾನಗರ, ಬೈಲೂರು, 76 ಬಡಗುಬೆಟ್ಟು ಗ್ರಾಮ , ಉಡುಪಿ  ತಾಲೂಕು ಇವರು ದಿನಾಂಕ 24/12/2022 ರಂದು ಬೊಂಬಾಯಿಗೆ ಹೋಗಿದ್ದು, ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದು, ದಿನಾಂಕ 15/01/2023 ರಂದು ಸಿಸಿಟಿವಿ ಕಾರ್ಯನಿರ್ವಹಿಸದೇ ಇದ್ದುದರಿಂದ ನೆರೆಮನೆಯ ಭಾಸ್ಕರ ರವರಿಗೆ ಮನೆಯನ್ನು ನೋಡಿ ಬರುವಂತೆ ತಿಳಿಸಿದಾಗ ಅವರು ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಮುರಿದಿರುವುದಾಗಿ ತಿಳಿಸಿದ್ದು, ಅದರಂತೆ  ಬಂದು ನೋಡಲಾಗಿ ಮನೆಯ ಎದುರಿನ ಬಾಗಿಲಿನ ಚಿಲಕವನ್ನು ಮುರಿದಿರುವುದು ಕಂಡು ಬಂದಿದ್ದು, ಯಾರೋ ಕಳ್ಳರು ದಿನಾಂಕ 15/01/2023 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ16/01/2023ರಂದು ಬೆಳಿಗ್ಗೆ 10:00 ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2023 ಕಲಂ: 454, 457, 380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 16/01/2023 ರಂದು ಉಡುಪಿ ತಾಲೂಕು, ಮೂಡನಿಡಂಬೂರು ಗ್ರಾಮದ ಟೌನ್ ಹಾಲ್ ಬಳಿಯ ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಮತ್ತು  Methamphetamine Durg ಮಾರಾಟ ಮಾಡಲು ಹೊಂದಿದ್ದ 1. ರಾಘವೇಂದ್ರ ದೇವಾಡಿಗ (41), ತಂದೆ: ಕಡಿಯಾಳಿ ವೆಂಕಟಪ್ಪ ದೇವಾಡಿಗ, ವಾಸ: ನಂಬ್ರ 1-51, ಮೇಲ್ಮನೆ, ದೇವಸ್ಥಾನ ಬೆಟ್ಟು, ಬೆಲ್ಲಾರ್ ಪಡಿ, ಹಿರಿಯಡ್ಕ ಗ್ರಾಮ, ಉಡುಪಿ ತಾಲೂಕು, 2. ಜಗದೀಶ್‌ ಪೂಜಾರಿ (32), ತಂದೆ:ಶಿವಪ್ಪ ಪೂಜಾರಿ, ವಾಸ:ಮೆರಾಕಿ ಪ್ಲಾಟ್‌, 1 ನೇ ಮಹಡಿ, ವಾಗ್ಲೆ ಸ್ಟೋರ್‌ ಬಳಿ, ಅವೆವೂರು ರಸ್ತೆ, 80 ಬಡಗುಬೆಟ್ಟು, ಉಡುಪಿ ಇವರನ್ನು ಮಂಜುನಾಥ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರು ದಾಳಿ ನಡೆಸಿ, ಆರೋಪಿಗಳನ್ನು ದಸ್ತಗಿರಿಗೊಳಿಸಿ 1 ಕೆ.ಜಿ 176 ಗ್ರಾಂ ತೂಕದ ಗಾಂಜಾ , 10 ಗ್ರಾಂ ತೂಕದ Methamphetamine Durg, ನಂಬ್ರ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಆಕ್ಟಿವಾ ಸ್ಕೂಟರ್ 1, ಮೊಬೈಲ್‌ಪೋನ್- 2,  ವೇಯಿಂಗ್‌ಮೀಶನ್-1,ಪೌಡರ್‌ಪ್ಯಾಕ್‌ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್‌ ಕವರ್-17 ವಶಪಡಿಸಿಕೊಂಡಿರುವುದಾಗಿರುತ್ತದೆ. ಸ್ವಾಧೀನಪಡಿಸಿಕೊಂಡ Methamphetamine Durg ಮೌಲ್ಯ ರೂಪಾಯಿ 45,000/- ಆಗಿರುತ್ತದೆ. ಗಾಂಜಾದ ಮೌಲ್ಯ ರೂಪಾಯಿ 28,000/-ಸ್ಕೂಟರ್‌ನ ಮೌಲ್ಯ ರೂಪಾಯಿ 80,000/- ಆಗಿರುತ್ತದೆ. ಸ್ವಾಧೀನಪಡಿಸಿಕೊಂಡಿರುವ 2 ಮೊಬೈಲ್ ಪೋನ್‌ಗಳ ಮೌಲ್ಯ ರೂಪಾಯಿ 55,000/-, ವೇಯಿಂಗ್ ಮಿಷನ್‌ ಮೌಲ್ಯ ರೂಪಾಯಿ 1,000/-ಆಗಿದ್ದು, ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 2,09,000/- ಆಗಿರುತ್ತದೆ. ಈ ಬಗ್ಗೆ ಸೆನ್‌ ಅಪರಾಧ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2023 ಕಲಂ : 22(b), 8(C), 20(b)(ii) (B) ಎನ್.ಡಿ.ಪಿ.ಎಸ್. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-01-2023 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080