ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣಗಳು

  • ಕೋಟ: ಪಿರ್ಯಾದಿ ಸಂಗೀತಾ ಭಟ್ ಪ್ರಾಯ: 40 ವರ್ಷ ತಂದೆ: ಸಂದೀಪ ಅಡಿಗ ವಾಸ:ಅನ್ನಪೂರ್ಣ ನಿಲಯ ಐರೋಡಿ ಗ್ರಾಮ ಇವರು ದಿನಾಂಕ  24/12/2022 ರಂದು  ಬೆಳಿಗ್ಗೆ ಸುಮಾರು 07:04  ಗಂಟೆಗೆ  ಗೋವಾದ ಪಣಜಿಯಿಂದ ಪುತ್ತೂರಿಗೆ ಹೊರಡುವ KSRTC ಬಸ್ ನಂ: KA 21 F 0257  ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಪಿರ್ಯಾದಿದಾರರ ಹಿಂದಿನ ಸೀಟ್ ನಲ್ಲಿ ಹಿಂದಿ ಮಾತನಾಡುವ ವ್ಯಕ್ತಿಗಳು ಕುಳಿತುಕೊಂಡಿರುತ್ತಾರೆ. ಪಿರ್ಯಾದಿದಾರರು ಅವರ ಟ್ರಾಲಿ ಬ್ಯಾಗಿನಲ್ಲಿ ಬಟ್ಟೆ ಬರೆ ಹಾಗೂ ಅದರ ಒಳಗಡೆ ಸಣ್ಣ ವಸ್ತ್ರದ ಚೀಲದಲ್ಲಿ ಚಿನ್ನಾಭರಣ  ಇಟ್ಟು ಟ್ರಾಲಿ ಬ್ಯಾಗಿಗೆ ಬೀಗ ಹಾಕಿ ಅವರು ಕುಳಿತ ಸೀಟಿನ ಕೆಳಗಡೆ ಇಟ್ಟುಕೊಂಡಿರುತ್ತಾರೆ. ಪಿರ್ಯಾದಿದಾರರು ಪ್ರಯಾಣ ಮುಗಿಸಿ ಸುಮಾರು 15:00 ಗಂಟೆಗೆ ಮಾಬುಕಳದಲ್ಲಿ ಇಳಿದಿರುತ್ತಾರೆ. ಪಿರ್ಯಾದಿದಾರರು ಮರುದಿನ ಬೆಳಿಗ್ಗೆ ಎದ್ದು ಟ್ರಾಲಿ ಬ್ಯಾಗನ್ನು ನೋಡಿದಾಗ ಅದರಲ್ಲಿದ್ದ ಚಿನ್ನದ ಆಭರಣಗಳಾದ 1) ಎರಡು ಎಳೆ ಕರಿಮಣಿ ಸರ-1, 2) ಮುತ್ತಿನ ಸರ-1, 3)ಪೆಂಡೆಟ್ ಸಹಿತ ಸರ-1, 4)ಲಾಂಗ್ ಚೈನ್ -1, 5)ಮಕ್ಕಳ ಚೈನ್-2, 6)ಬ್ರಸ್ ಲೈಟ್-3, 7)ಎಲಿಜೆಬೆತ್ ರಾಣಿ ಉಂಗುರ-2, 8)ಉಂಗುರ-3, 9) ಹೆಂಗಸರ ಉಂಗುರ-2, 10)ಮಕ್ಕಳ ಉಂಗುರ-1, 11)ಹೂವಿನಉಂಗುರ-1, 12)ನೆಕ್ಲೇಸ್-1, 13) ಕಿವಿ ಓಲೆ ಜೊತೆ-1, 14)ಬಳೆ-4, 15)ಮಕ್ಕಳ ಸಣ್ಣ ಕಿವಿಯ ಒಲೆ-1 16) ಬೆಳ್ಳಿಯ ಉಡಿದಾರ-3, 17)ಬೆಳ್ಳಿಯ ಕಾಲುಂಗುರ ಒಂದು ಜೊತೆ, 18) ಬೆಳ್ಳಿಯ ಕಿವಿಯೋಲೆ ಒಂದು ಜೊತೆ ಇಟ್ಟ ವಸ್ತ್ರದ ಚೀಲ ಕಾಣೆಯಾಗಿರುತ್ತದೆ. ಅದರ ಒಟ್ಟು ಅಂದಾಜು ಬೆಲೆ ಸುಮಾರು 18 ರಿಂದ 20 ಲಕ್ಷ ಆಗಬಹುದಾಗಿದ್ದೂ ಪಿರ್ಯಾದಿದಾರರಿಗೆ ಬಸ್ ನಲ್ಲಿ ಹಿಂದೆ ಕುಳಿತಿರುವ ಹಿಂದಿ ಮಾತನಾಡುವ ಇಬ್ಬರು ವ್ಯಕ್ತಿಗಳ ಮೇಲೆ ಅನುಮಾನ ಮೂಡಿಬಂದಿರುತ್ತದೆ . ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 06/2023  ಕಲಂ: 379 RW 34 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಫಿರ್ಯಾಧಿ: ಅಭಿಮೋನ್‌ ಜೋಯ್.ಇ (28)  ತಂದೆ: ಜೋಯ್‌ ಇ.ಪಿ ವಾಸ: ವಿನೋಬನಗರ, 2ನೇ ಮೈನ್‌, 13ನೇ ಕ್ರಾಸ್‌, ದಾವಣಗೆರೆ ಇವರ ತಂದೆ ಜಾಯ್‌ ಇ.ಪಿ (61) ರವರಿಗೆ ಬಿಪಿ ಮತ್ತು ಶುಗರ್‌ಖಾಯಿಲೆ ಇದ್ದು ಈ ಬಗ್ಗೆ ಚಿಕಿತ್ಸೆಗೆಂದು ದಿನಾಂಕ: 16/01/2023 ರಂದು ರಾತ್ರಿ 10:00 ಗಂಟೆಗೆ ಕೆ ಎಸ್‌ಆರ್‌ಟಿ ಸಿ ಬಸ್ಸಿನಲ್ಲಿ ದಾವಣಗೆರೆಯಿಂದ ಮಣಿಪಾಲಕ್ಕೆ ತಂದೆಯನ್ನು ಕರೆದುಕೊಂಡು ಹೊರಟಿದ್ದು 17/01/2023 ರಂದು ಬೆಳಿಗ್ಗೆ 05:00 ಗಂಟೆ ಸಮಯಕ್ಕೆ ಕುಂದಾಪುರ ಸಮೀಪ ಬರುವಾಗ ಫಿರ್ಯಾಧಿದಾರರ ತಂದೆಗೆ ವಾಂತಿ ಪ್ರಾರಂಭವಾಗಿ ಅಸ್ವಸ್ಥರಾಗಿ 108 ವಾಹನದಲ್ಲಿ ಹಾಕಿಸಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ 05:30 ಗಂಟೆ ಸಮಯಕ್ಕೆ ಅಲ್ಲಿನ ವೈಧ್ಯಾಧಿಕಾರಿಯವರು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  UDR No 03/2023 ಕಲಂ: 174 CrPC  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಅಜೆಕಾರು: ಪಿರ್ಯಾದಿ: ರಶ್ವೇಕಾ (24) ತಂದೆ : ಶೇಖರ ಮೂಲ್ಯ ವಾಸ: ಅಮೃತನಗರ ರಾಧಾನಾಯ ಶಾಲಾ  ಬಳಿ ಎಣ್ಣೆಹೊಳೆ  ಮರ್ಣೆ ಗ್ರಾಮ ಇವರು ತನ್ನ ತಂದೆ ಶೇಖರ ಮೂಲ್ಯ (53) ತಾಯಿ ಹಾಗೂ ತಮ್ಮ ಹಾಗೂ ಚಿಕ್ಕಪ್ಪನೊಂದಿಗೆ ಮರ್ಣೆ  ಗ್ರಾಮದ ಅಮೃತನಗರದ ಎಣ್ಣೆಹೊಳೆ ರಾಧಾನಾಯಕ್  ಶಾಲಾ ಬಳಿ ಯಲ್ಲಿ ವಾಸ ಮಾಡಿ ಕೊಂಡು ಸಹಕಾರಿ ಸಂಘದಲ್ಲಿ ಕೆಲಸ ಮಾಡಿ ಕೊಂಡಿರುತ್ತಾರೆ. ಪಿರ್ಯಾದಿದಾರರ ತಂದೆ ಶೇಖರ ಮೂಲ್ಯರವರು ಬೇಕರಿಯಲ್ಲಿ  ಕೆಲಸ ಮಾಡಿಕೊಂಡಿದ್ದು ಅವರು ತಲೆನೋವು,ಜ್ವರ ಹಾಗೂ ಅಸೌಖ್ಯದ ಬಗ್ಗೆ ಅಜೆಕಾರಿನ ಖಾಸಗಿ ವೈದ್ಯಾಧಿಕಾರಿಯಿಂದ ಚಿಕಿತ್ಸೆ ಪಡೆದಯುತ್ತಿದ್ದು, ದಿನಾಂಕ: 16/01/20123 ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು ರಾತ್ರಿ ಊಟ ಮಾಡಿ ಮಲಗಿದ್ದು ರಾತ್ರಿ ಸುಮಾರು 10:15 ಗಂಟೆಗೆ ಪಿರ್ಯಾದಿದಾರರ ಚಿಕ್ಕಪ್ಪ ರವೀಂದ್ರರವರು ಪಿರ್ಯಾದಿದಾರರಲ್ಲಿ ನಿಮ್ಮ ತಂದೆ ಶೇಖರರವರು ಬಾತ್‌ ರೂಮ್‌ ನಲ್ಲಿ ಬಿದ್ದಿರುತ್ತಾರೆ  ಎಂದು ತಿಳಿಸಿದ್ದು ಕೂಡಲೇ ಅವರನ್ನು ಉಪಚರಿಸಿ ಖಾಸಗಿ ವಾಹನದಲ್ಲಿ ಕಾರ್ಕಳ ಆಸ್ವತ್ರೆಗೆ ಚಿಕಿತ್ಸೆ ಗಾಗಿ ದಾಖಲಿಸಿದಲ್ಲಿ ವೈದ್ಯಾಧಿಕಾರಿಯವರು  ಚಿಕಿತ್ಸೆ ಕೊಡುವಲ್ಲಿ ಚಿಕಿತ್ಸೆ ಫಲಕಾರಿಯಾಗದೇ  ರಾತ್ರಿ 11:20 ಗಂಟೆಗೆ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ UDR No: 03/2023 U/s 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣಗಳು

  • ಗಂಗೊಳ್ಳಿ: ಪಿರ್ಯಾದಿ: ಸುಷ್ಮಾ (25) ತಂದೆ: ನಾರಾಯಣ ವಾಸ: ಹಿತ್ಲುಮನೆ,ನಾಯಕವಾಡಿ,ಗುಜ್ಜಾಡಿ ಗ್ರಾಮ ಇವರು ಬಂಟ್ವಾಡಿ ಶಾಲೆಯಲ್ಲಿ ಅತಿಥಿ ಶಿಕ್ಷಯಾಗಿ ಕೆಲಸಮಾಡಿಕೊಂಡಿದ್ದು ಎಂದಿನಂತೆ  ದಿನಾಂಕ: 17/01/2023 ರಂದು ತನ್ನ ಚಿಕ್ಕಮ್ಮನ ಮಗನಾದ ನರೇಶನೊಂದಿಗೆ ಅವನ  KA20 ES-2897ನೇ ಡಿಯೋ ಸ್ಕೂಟರಿನಲ್ಲಿ ಸಹಸವಾರಳಾಗಿ ಕುಳಿತುಕೊಂಡು ಶಾಲೆಗೆ ನಾಯಕವಾಡಿ- ಮುಳ್ಳಿಕಟ್ಟೆಯ ಡಾಂಬಾರು ರಸ್ತೆಯಲ್ಲಿ ಹೋಗುತ್ತಿದ್ದಾಗ ಸಮಯ ಸುಮಾರು 09-00 ಗಂಟೆಗೆ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಮೀನು ಮಾರ್ಕೆಟ್‌ನಿಂದ ಸ್ವಲ್ವ ಮುಂದಕ್ಕೆ ಪಿರ್ಯಾದಿದಾರರ ಹಿಂದಿನಿಂದ KA-14 C-3586 ನೇ ನಂಬ್ರದ ಲಾರಿ ಚಾಲಕನು ತನ್ನ ಬಾಬ್ತು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರು ಹೋಗುತ್ತಿದ್ದ ಸ್ಕೂಟರನ್ನು ಓವ್ರ್‌ಟೇಕ್‌ಮಾಡುವ ಭರದಲ್ಲಿ ರಸ್ತೆಯ ತೀರಾ ಎಡಬದಿಗೆ ಬಂದು ಸ್ಕೂಟರಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ಸವಾರ ನರೇಶ ಹಾಗೂ ಪಿರ್ಯಾದಿದಾರರು ಸ್ಕೂಟರ್‌ಸಮೇತ ರಸ್ತೆಗೆ ಬಿದ್ದದ್ದು ಪರಿಣಾಮ ನರೇಶನಿಗೆ ಬಲಕಾಲಿಗೆ ತೀವೃ ಸ್ವರೂಪದ ಜಖಂ ಉಂಟಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 06/2023 ಕಲಂ: 279,338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.    

ಇತ್ತೀಚಿನ ನವೀಕರಣ​ : 17-01-2023 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080