ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

 • ಪಡುಬಿದ್ರಿ: ಪಿರ್ಯಾದಿ ಪೆಡ್ರಿಕ್ ಡೊನಾಲ್ಡ್ ಡಿಸೋಜಾ ಪ್ರಾಯ 59 ವರ್ಷ ತಂದೆ: ದಿ. ಡೆನ್ನಿಸ್ ಡಿಸೋಜಾ  ವಾಸ: ಮನೆ ನಂಬ್ರ 6/19, ಮರಿಯ ಕೃಪಾ ಹೌಸ್, ಕೋಡಿಕಲ್ ಕ್ರಾಸ್, ಅಶೋಕನಗರ ಅಂಚೆ, ದೇರೆಬೈಲು ಗ್ರಾಮ, ಮಂಗಳೂರು ಇವರು ಅವರ ಸ್ನೇಹಿತ ಮಹೇಶ್ ಮುಗ್ಲಿ ಎಂಬವರ ಬಾಬ್ತು KA 19 Y 5899 ನೇ ನಂಬ್ರದ ಮೋಟಾರ್ ಸೈಕಲ್‌ ನ್ನು ಪಡೆದು  ಮಂಗಳೂರಿನಿಂದ ಕಾಪು ಎಂಬಲ್ಲಿಗೆ ಹೋಗಿ ಕಾಪುವಿನಲ್ಲಿ ಮೋಟಾರ್ ಸೈಕಲ್‌ ನ್ನು ನಿಲ್ಲಿಸಿ ಮಜೂರು ಎಂಬಲ್ಲಿಗೆ ರಿಕ್ಷಾದಲ್ಲಿ ಹೋಗಿ ತನ್ನ ಕೆಲಸ ಮುಗಿಸಿ ವಾಪಾಸು ಕಾಪುವಿನಿಂದ ಮಂಗಳೂರಿಗೆ ಹೋಗಲು ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ- ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ಬರುತ್ತಾ ಸಮಯ 15:45 ಗಂಟೆಗೆ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ಬುದಗಿ ಪೆಟ್ರೋಲ್ ಬಂಕ್ ಬಳಿ ಪಿರ್ಯಾದಿದಾರರ ಎದುರು ಲಾರಿಯೊಂದು ಡಿವೈಡರ್ ಬಳಿ ಹೋಗುತ್ತಿದ್ದು ಅದರ ಎಡಬದಿಯಿಂದಾಗಿ ಓವರ್ ಟೇಕ್ ಮಾಡಿ  ಮುಂದಕ್ಕೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಹಿಂದಿನಿಂದ KA 19 MG 8541 ನೇ ನಂಬ್ರದ ಕಾರನ್ನು ಅದರ ಚಾಲಕ ಸರ್ವೇಶ್ ಸಾಮಗ ಎಂಬವರು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಕಾರಿನ ಬಾನೆಟ್ ಮೇಲೆ ಬಿದ್ದು ಕಾರು ಸ್ವಲ್ಪ ದೂರ ಪಿರ್ಯಾದಿಯನ್ನು ಹಾಗೂ ಮೋಟಾರ್ ಸೈಕಲ್‌ ನ್ನು ಎಳೆದುಕೊಂಡು ಹೋಗಿ ನಿಂತಿದ್ದು ಬಳಿಕ ಪಿರ್ಯಾದಿ ರಸ್ತೆಗೆ ಬಿದ್ದಿರುತ್ತಾರೆ. ಸದ್ರಿ ಅಪಘಾತದಿಂದ ಪಿರ್ಯಾದಿದಾರರ ಎರಡೂ ಕಾಲುಗಳಿಗೆ, ಪಾದಗಳಿಗೆ, ಕೈಗಳ ಬೆರಳುಗಳಿಗೆ, ಬಲಕೈ ತಟ್ಟಿಗೆ, ಬಲಕೈ ಮೊಣಗಂಟಿಗೆ, ಹಣೆಗೆ, ಸೊಂಟಕ್ಕೆ ತರಚಿದ ಗಾಯ  ಹಾಗೂ ಸೊಂಟಕ್ಕೆ  ಎಲುಬು ಮುರಿತದ ಗಾಯವಾಗಿದ್ದು ಚಿಕಿತ್ಸೆ  ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆ  ಬಗ್ಗೆ  ಮಂಗಳೂರಿನ ಎಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ 279,338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: ಕಮಲಾ ಪೂಜಾರ್ತಿ (90) ರವರು ಪ್ರಾಯಸ್ಥರಾಗಿದ್ದು ಮನೆಯಲ್ಲಿಯೇ ಇರುವುದಾಗಿದೆ. ಕಮಲಾ ಪೂಜಾರ್ತಿ ರವರು ದಿನಾಂಕ: 17/01/2022 ರಂದು ಬೆಳಿಗ್ಗೆ 8:00 ಗಂಟೆಯಿಂದ 10:00 ಗಂಟೆಯ ಮಧ್ಯಾವಧಿಯಲ್ಲಿ ಮಗ ಶೇಖರ ಪೂಜಾರಿ ರವರ ಮನೆಯಿಂದ ದೇವಿ ರವರ ಮನೆಗೆ ಮನೆಯ ಬಳಿ ಇರುವ ಆವರಣವಿಲ್ಲದ ಬಾವಿಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಅವರ ಮೈ ವಾಲಿ ಆಕಸ್ಮಿಕವಾಗಿ ಅವರ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣಗಳು:

 • ಕಾರ್ಕಳ ನಗರ :  ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಸ.ನಂ 147/1 ರಲ್ಲಿ 1.53 ಎಕ್ರೆ  ಮತ್ತು ಸ ನಂ 147/2 ರಲ್ಲಿ 0.21 ಎಕ್ರೆ  ಸ್ಥಿರಾಸ್ತಿ ಫಿರ್ಯಾದುದಾರರಾದ ಶ್ರೀಮತಿ ಲಲಿತ ಪೂಜಾರ್ತಿ (54ವರ್ಷ) ರವರ ಹಕ್ಕಿನ ಸ್ಥಿರಾಸ್ತಿ ಆಗಿದ್ದು ಫಿರ್ಯಾದುದಾರರ ಕುಟುಂಬದೊಳಗೆ  ದಿನಾಂಕ 03-06-2017  ರಂದು ಮಾನ್ಯ ಪ್ರಿನ್ಸಿಪಾಲ್  ಸಿವಿಲ್ ಜಡ್ಜ್  ಉಡುಪಿ ನ್ಯಾಯಾಲಯದಲ್ಲಿ  ಆರ್ ಎ ನಂಬ್ರ 26/2013 ರಂತೆ ಆದ ಫೈನಲ್ ಡಿಕ್ರಿಯ ಡಿ ಶೆಡ್ಯೂಲ್‌ನಲ್ಲಿ ಫಿರ್ಯಾದುದಾರರ ಹಿಸ್ಸೆಗೆ ಬಂದಿರುತ್ತದೆ. ಅಪಾದಿತನು ಫಿರ್ಯಾದುದಾರರ ತಮ್ಮನಾಗಿದ್ದು ಫಿರ್ಯಾದುದಾರರ  ಸ್ಥಿರಾಸ್ತಿಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದುದಾರರು ನೆಟ್ಟು ಬೆಳೆಸಿದ ಕೃಷಿಯನ್ನು ಹಾಳುಮಾಡಿ ಮರಗಳನ್ನು ಕಡಿದಿರುತ್ತಾನೆ. ದಿನಾಂಕ 16-01-2022 ರಂದು ಫಿರ್ಯಾದುದಾರರ ಮಗ ಮತ್ತು ಸೊಸೆಯೊಂದಿಗೆ ಸದ್ರಿ ಸ್ಥಿರಾಸ್ತಿಗೆ ಸಂಜೆ17-00 ಗಂಟೆಗೆ ಹೋಗುತ್ತಿದ್ದಾಗ ಅಪಾದಿತನು ಅಡ್ಡವಾಗಿ ನಿಂತು ಸ್ಥಿರಾಸ್ತಿಗೆ ಹೋಗಲು ಬಿಡುವುದಿಲ್ಲ ನೀವು ಹೇಗೆ ಹೋಗುತ್ತೀರಿ ನಾನು ನೋಡಿಕೊಳ್ಳುತ್ತೇನೆ.ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2022  ಕಲಂ 447,427,341,504  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಗಂಗೊಳ್ಳಿ: ಫಿರ್ಯಾದಿದಾರರಾದ ಡಾ ಪೌರವ ಶೆಟ್ಟಿ ರವರು 13 ವರ್ಷಗಳಿಂದ ಕುಂದಾಪುರ ತಾಲೂಕು ಆಲೂರು ಗ್ರಾಮದ, ಆಲೂರು ಶ್ರೀ ಮೂಕಾಂಬಿಕಾ ಕ್ಲಿನಿಕ್  ನಲ್ಲಿ  ವೈದ್ಯಕೀಯ ವೃತ್ತಿ ಮಾಡಿಕೊಂಡಿದ್ದು ಎಂದಿನಂತೆ ದಿನಾಂಕ: 16-01-2022 ರಂದು ಕ್ಲಿನಿಕ್ ನಲ್ಲಿ ಕರ್ತವ್ಯ ನಿರತನಾಗಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿರುವಾಗ  ಮದ್ಯಾಹ್ನ ಸುಮಾರು 12:30 ಗಂಟೆಗೆ ಫಿರ್ಯಾದಿದಾರರ ಪರಿಚಯದ ಹರ್ಕೂರು ನಾರ್ಕಳಿ ಬಾಳೆಗುಡ್ಡೆ ನಿವಾಸಿಗಳಾದ ಮಂಜುನಾಥ ಹಾಗೂ ಪ್ರವೀಣ ಎಂಬವರು ಮೋಟಾರ್  ಸೈಕಲ್ ನಲ್ಲಿ ಕ್ಲಿನಿಕ್ ಗೆ ಬಂದು  ಫಿರ್ಯಾದಿದಾರರಲ್ಲಿ ನಮ್ಮ ಸಂಬಂಧಿಯೊಬ್ಬರು ಅನಾರೋಗ್ಯ ಪೀಡಿತರಾಗಿದ್ದು ತಕ್ಷಣ ಚಿಕಿತ್ಸೆ ನೀಡಲು ಮನೆಗೆ ಬರಬೇಕೆಂದು ತಿಳಿಸಿದಾಗ ಫಿರ್ಯಾದಿದಾರರು ಕ್ಲಿನಿಕ್ ನಲ್ಲಿರುವ ರೋಗಿಗಳನ್ನು ಬಿಟ್ಟು ಅಲ್ಲಿಗೆ ಬರಲು ಕಷ್ಟವಾಗುತ್ತದೆ. ಸಾಧ್ಯವಾದಲ್ಲಿ ಅವರನ್ನು ಕ್ಲಿನಿಕ್ ಗೆ ಕರೆದುಕೊಂಡು ಬನ್ನಿ, ತುಂಬಾ ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಸಾಗಿಸುವುದೇ ಸೂಕ್ತ ಎಂದು ಅವರಿಗೆ ತಿಳಿಸಿದಾಗ ಆಪಾದಿತರು ನೀವು ಕೂಡಲೇ ಮನೆಗೆ ಬರಬೇಕು ಅಲ್ಲೇ ಚಿಕಿತ್ಸೆ ನೀಡಬೇಕೆಂದು ತಿಳಿಸಿದಾಗ ಫಿರ್ಯಾದಿದಾರರು ತುಂಬ ಹೊತ್ತಿನಿಂದ ಕ್ಲಿನಿಕ್ ನಲ್ಲಿ ಕಾಯುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಬರುವುದಾಗಿ ತಿಳಿಸಿದಾಗ ಆಪಾದಿತರು ಒಮ್ಮೆಲೇ ಕ್ಲಿನಿಕ್ ಒಳಗೆ ಬಂದು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಕಾಲು ಮುರಿಯುವುದಾಗಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ  ಕ್ಲಿನಿಕ್‌ ಒಳಗಿನ ಬಾಗಿಲನ್ನು ಗಟ್ಟಿಯಾಗಿ ದೂಡಿ ಹೊರಗೆ ನಿಲ್ಲಿಸಿದ್ದ ಬೈಕ್ ನಲ್ಲಿ ಹೊರಟು ಹೋಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 03/2022  ಕಲಂ: 3, 4 The Prevention of Violence against Doctors, Medical Professionals and Medical Institutions Bill 2018 & 504,   506 ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 17-01-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080