ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಶಂಕರನಾರಾಯಣ: ಫಿರ್ಯಾದಿ ಪ್ರಥ್ವಿ ಇವರು ಶಂಕರನಾರಾಯಣ ಮದರ್ ಥೆರೆಸಾ ಶಾಲೆಯಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು,  ದಿನಾಂಕ 15/12/2022 ರಂದು ಬೆಳಿಗ್ಗೆ  08:10 ಗಂಟೆಗೆ ಸಿದ್ಧಾಪುರದಿಂದ ಶಂಕರನಾರಾಯಣದ ಶಾಲೆಗೆ ಬರಲು ಕೆಎ.15.ಎ.3528 ನೇ ನಂಬ್ರದ ಗಜಾನನ ಬಸ್ಸಿನಲ್ಲಿ ಕುಳಿತುಕೊಂಡು ಬೆಳಿಗ್ಗೆ ಸುಮಾರು 08:25 ಗಂಟೆಗೆ ಸಿದ್ಧಾಪುರ ಗ್ರಾಮದ ಕಾರೆಬೈಲು ಎಂಬಲ್ಲಿ ಶಂಕರ ನಾರಾಯಣ ಕಡೆಗೆ ಬರುತ್ತಿರುವಾಗ ಆರೋಪಿಯು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಮದ್ಯದ ಹೊಂಡಕ್ಕೆ ಹಾರಿಸಿದಾಗ ಪಿರ್ಯಾದುದಾರರು ಬಸ್ಸಿನ ಒಳಗಡೆ ಶೀಟ್‌‌ನ ಮೇಲಕ್ಕೆ ಹಾರಿ ಕೆಳಕ್ಕೆ ಶೀಟ್ ‌ನ  ಮೇಲೆ  ಬಿದಿದ್ದು ಇದರ , ಪರಿಣಾಮ ಪಿರ್ಯಾದುದಾರ ತಲೆ, ತುಟಿಗೆ ರಕ್ತಗಾಯವಾಗಿ ಮೇಲ್‌‌ದವಡೆಯ 3 ಹಲ್ಲುಗಳು ಜಖಂಗೊಂಡಿದ್ದು, ಅದರಲ್ಲಿ 1 ಹಲ್ಲು ಕಿತ್ತುಹೋಗಿದ್ದು, ಚಿಕಿತ್ಸೆಯ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 137/2022  ಕಲಂ: 279,   338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಕೋಟ: ಪಿರ್ಯಾದಿ ಚಂದ್ರ ಕುಲಾಲ ಇವರ ಹಿರಿಯ ಮಗ ಚೇತನ್ 21 ವರ್ಷ ಈತನು ಸುಮಾರು 6 ತಿಂಗಳ ಹಿಂದೆ ಹೊಟೇಲ್ ಉದ್ಯೋಗದ ಬಗ್ಗೆ ಬೆಂಗಳೂರಿಗೆ  ಹೋಗಿರುವುದಾಗಿದೆ. ಹಾಗೂ ಮನೆಯವರಿಗೆ ಮೊಬೈಲ್ ನಲ್ಲಿ ಯೋಗಕ್ಷೇಮ ವಿಚಾರಿಸುತ್ತಿದ್ದು  ನಂತರ ಕೊನೆಯದಾಗಿ ದಿನಾಂಕ 19/11/2022ರಂದು ಕರೆ ಮಾಡಿದವನು ನಂತರ ಯಾವುದೇ ಸಂಪರ್ಕಕ್ಕೆ ಸಿಗದೇ ಇದ್ದು ,ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗದೇ ಕಾಣೆಯಾಗಿರುತ್ತಾನೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 223/2022 ಕಲಂ: ಮನುಷ್ಯ ಕಾಣೆ  ಯಂತೆ  ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

 • ಗಂಗೊಳ್ಳಿ: ದಿನಾಂಕ: 15/12/2022 ರಂದು ಸಂದೀಪ ಖಾರ್ವಿ ಹಾಗೂ ನಿತಿನ್‌ ಖಾರ್ವಿ ಎಂಬವರು ಗಂಗೊಳ್ಳಿ ಗ್ರಾಮದ ಇಂದೂಧರ ದೇವಸ್ಥಾನದ ಬಳಿ ಇರುವ  ಪಿರ್ಯಾದಿ ದೇವೇಂದ್ರ ಖಾರ್ವಿ ಇವರ ಮನೆಗೆ ಹೋಗುವ ಮಣ್ಣು ರಸ್ತೆಯಲ್ಲಿ  ಜೆ,ಸಿ,ಬಿಯಿಂದ ಕೆಲಸ ಮಾಡಿಸುತ್ತಿದ್ದು, ಸದ್ರಿ ರಸ್ತೆ ಕಾಮಗಾರಿಯನ್ನು ಮಾಡುವಾಗ ಸಮಯ ಸುಮಾರು 11:30 ಗಂಟೆಗೆ  ರಸ್ತೆಯ ಬದಿಯಲ್ಲಿರುವ ಪಿರ್ಯಾದಿದಾರರಿಗೆ ಸಂಬಂದಿಸಿದ ಜಾಗವನ್ನು ರಸ್ತೆ ನಿರ್ಮಾಣಕ್ಕೆ ಸೇರಿಸಿಕೊಂಡಿರುದನ್ನು ಪಿರ್ಯಾದಿದಾರರು ನೋಡಿ ವಿಚಾರಿಸಿದಾಗ, ಆಪಾದಿತ ಸಂದೀಪ ಖಾರ್ವಿ ಮಾತಿನ ಚಕಮಕಿ ನಡೆಸಿದ್ದು ಆ ಸಮಯ ನಿತಿನ್‌ ಖಾರ್ವಿಯು  ಪಿರ್ಯಾದಿದಾರರಿಗೆ ಬೈದು ನಾವು 16 ಅಡಿ ರಸ್ತೆ ಮಾಡುತ್ತೇವೆ ಕೇಳಲು ನೀನು ಯಾರು ಎಂದು ಹೇಳಿ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ರಸ್ತೆಯಲ್ಲಿರುವ ಒಂದು ಕಲ್ಲ ನ್ನು ತೆಗೆದುಕೊಂಡು ಪಿರ್ಯಾದಿದಾರರ ಮುಖಕ್ಕೆ ಹೊಡೆದನು. ಅಲ್ಲದೇ ಸಂದೀಪ ಖಾರ್ವಿಯು ಕೈಯಿಂದ ಪಿರ್ಯಾದಿದಾರರ ಬಲಕೈಗೆ ಹಾಗೂ ಬೆನ್ನಿಗೆ ಗುದ್ದಿದ್ದು ಆ ಸಮಯ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಆಸುಪಾಸಿನವರು ಬರುವುದನ್ನು ನೋಡಿದ  ಆಪಾದಿತರು “ಈ ದಿನ ಇಷ್ಷಕ್ಕೆ ಬಿಟ್ಟಿದ್ದೇವೆ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 111/2022 ಕಲಂ: 341, 323, 324, 504, 506 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕಾರ್ಕಳ: ಪಿರ್ಯಾದಿ ಜಹೀರ್ ಅಹಮ್ಮದ್ ಬೇಗ್ ಇವರು ತನ್ನ ತಮ್ಮ ಮುನೀರ್‌ ಅಹ್ಮದ್‌ ಈತನು ಕಾರ್ಕಳ ಕಸಬಾ ಗ್ರಾಮದ ಸರ್ಕಾರಿ ಆಸ್ಪತ್ರೆಯ ಬಳಿ ಹೊಂದಿರುವ ಅಡಿಕೆ ತೋಟವನ್ನು ನೋಡಿಕೊಳ್ಳುತ್ತಿದ್ದು ಈ ಅಡಿಕೆ ತೋಟದಲ್ಲಿ ದಿನಾಂಕ 9/12/2022 ರಂದು ರಾತ್ರಿ ಸುಮಾರು 2 ಪ್ಲಾಸ್ಟಿಕ್‌ ಗೋಣಿ ಚೀಲದಷ್ಟು 8000/- ರೂಪಾಯಿ ಮೌಲ್ಯದ ಅಡಿಕೆಯನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಆ ಬಳಿಕ ಕೆಲಸದಾಳುಗಳಾದ ಹನುಮಂತಪ್ಪ ಹಾಗೂ ರಂಗನಾಥರವರು ತೋಟದಲ್ಲಿ ಕಾವಲು ಕಾಯುತ್ತಿದ್ದು. ದಿನಾಂಕ 14/12/2022 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಮುನೀರ್‌ ಅಹ್ಮದ್‌ ಇವರ ಅಡಿಕೆ ತೋಟದ ಸಮೀಪ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರೂ ವ್ಯಕ್ತಿಗಳನ್ನು ಕೆಲಸದಾಳುಗಳಾದ ಹನುಮಂತಪ್ಪ ರಂಗನಾಥ ಹಾಗೂ ಸ್ಥಳೀಯರು ಹಿಡಿದು ಪೊಲೀಸನವರಿಗೆ ಒಪ್ಪಿಸಿದ್ದು ಪಿರ್ಯಾದಿದಾರರು ಈ ದಿನ ದಿನಾಂಕ 15/12/2022 ರಂದು ಬೆಳಿಗ್ಗೆ 7:30 ಗಂಟೆಗೆ ಮುನೀರ್‌ ಅಹ್ಮದ್‌ರವರ ಅಡಿಕೆ ತೋಟಕ್ಕೆ ಹೋಗಿ ನೋಡಿದಾಗ ಸುಮಾರು ರೂ 3000/- ಮೌಲ್ಯದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದು ಕೆಲಸದವರು ಹಿಡಿದುಕೊಟ್ಟ ಊರಿನ ರೊನಾಲ್ಡ್‌ ಡಿಸೋಜಾ ಹಾಗೂ ಉಮೇಶ ಎಂಬವರೇ ತನ್ನ ತಮ್ಮನ ಅಡಿಕೆ ತೋಟದಲ್ಲಿ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನ ಇರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 151/2022 ಕಲಂ 379 ಜೊತೆಗೆ 34 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ ‌‌

 • ಪಡುಬಿದ್ರಿ: ಪಿರ್ಯಾದಿ ಪ್ರಸಾದ್ ಕುಮಾರ್ ಇವರ ತಂದೆ ವಾಸುದೇವ ಸಾಲ್ಯಾನ್ (65 )ಎಂಬುವರು ಸಮುದ್ರದ ಬದಿಯಲ್ಲಿ ಬಲೆ ಹಾಕಿ ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ:15.12.2022 ರಂದು ಕಾಪು ತಾಲೂಕು ನಡ್ಸಾಲು ಗ್ರಾಮದ ಕಾಡಿಪಟ್ಣದ ಸುಶೀಲ್ ಕಾಂಚನ್ ಎಂಬುವರ ಮನೆಯ ಎದುರು ಸಮುದ್ರದ ಕಿನಾರೆಯಲ್ಲಿ ಮೀನುಗಾರಿಕೆ ಮಾಡುತ್ತಿರುವ ಸಮಯ ಸುಮಾರು 15:15 ಗಂಟೆಯ ವೇಳೆಗೆ ಎಲ್ಲಿಂದಲೋ ಹಾರಿ ಬಂದ ಕಣಜದ ಹುಳುಗಳ ಗುಂಪು ಪಿರ್ಯಾದಿದಾರರ ತಂದೆಗೆ ಹಾಗೂ ಶಂಕರ್ ಅಮೀನ್ ಮತ್ತು ಚಂದ್ರಶೇಖರ ಮೆಂಡನ್ ಎಂಬುವರಿಗೆ ಕಚ್ಚಿದ್ದು, ಈ ವೇಳೆ ಪಿರ್ಯಾದಿದಾರರ ತಂದೆ ವಾಸುದೇವ ಸಾಲ್ಯಾನ್ ರವರು ಕಣಜದ ಹುಳುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಮುದ್ರದ ಕಡೆಗೆ ಹೋಗಿ ಸಮುದ್ರದ ನೀರಿಗೆ ಹಾರಿರುತ್ತಾರೆ. ಕಣಜದ ಹುಳುಗಳ ದಾಳಿ ತಪ್ಪಿಸಲು ಸಮುದ್ರದ ನೀರಿಗೆ ಹಾರಿ ನೀರಿನಲ್ಲಿ ಮುಳುಗಿದ್ದರಿಂದಲೋ ಅಥವಾ  ಕಣಜದ ಹುಳುಗಳ ಕಡಿತದಿಂದಲೋ ವಾಸುದೇವ ಸಾಲ್ಯಾನ್ ರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯು.ಡಿ.ಆರ್ 31/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಪಡುಬಿದ್ರಿ: ಪಿರ್ಯಾದಿ ಪ್ರಭು ಇವರು ನಡ್ಸಾಲು ಗ್ರಾಮದ ಪಡುಬಿದ್ರಿಯ ಅರವಿಂದ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಗಾರೆ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿ ದಾರರ ಚಿಕ್ಕಮ್ಮನ ಮಗ ಶಿವರಾಜು (26) ಎಂಬುವನು ಸುಮಾರು ಒಂದೂವರೆ ತಿಂಗಳ ಹಿಂದೆ ಪಡುಬಿದ್ರಿಗೆ ಕೆಲಸಕ್ಕೆಂದು ಬಂದು ಪಿರ್ಯಾದಿದಾರರ ಜೊತೆ ಅವರ ರೂಮಿನಲ್ಲಿಯೇ ವಾಸವಾಗಿದ್ದವನು,  ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದವನಾಗಿರುತ್ತಾನೆ. ಸದ್ರಿ ಶಿವರಾಜನು ಈ ದಿನ ದಿನಾಂಕ:15.12.2022 ರಂದು ಕೆಲಸಕ್ಕೆ ಹೋಗದೇ ಬಾಡಿಗೆಯ ರೂಮಿನಲ್ಲಿ ಇದ್ದವನು ಬೆಳಿಗ್ಗೆ 11:00 ಗಂಟೆಯಿಂದ ಸಂಜೆ 19:00 ಗಂಟೆಯ ಮದ್ಯಾವಧಿಯಲ್ಲಿ ರೂಮಿನಲ್ಲಿ ಯಾರು ಇಲ್ಲದ ಸಮಯ ವಿಪರೀತ ಮದ್ಯಪಾನ ಮಾಡಿ ಕುಡಿತದ ನಶೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯು.ಡಿ.ಆರ್ 32/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕೋಟ: ಫಿರ್ಯಾದಿ ಜಯರಾಮ ಪಕ್ಕದ ಮನೆಯಲ್ಲಿ ವಾಸವಾಗಿರುವ ಸುರೇಶ್‌ (28 ವರ್ಷ) ರವರು ವಿಪರೀತ ಸರಾಯಿ ಕುಡಿಯುವ ಚಟ ಇದ್ದು ಅದೇ ಕಾರಣದಿಂದ ಇತ್ತೀಚೆಗೆ ತೀರಾ ಆರೋಗ್ಯ ಸಮಸ್ಯೆ ಕೂಡಾ ಕಾಣಿಸಿಕೊಂಡಿದ್ದು, ಸದ್ರಿಯವರು ಈ ದಿನ ದಿನಾಂಕ: 15.12.2022 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಅಲ್ಲಿ ವಿಪರೀತ ಸರಾಯಿ ಕುಡಿದು ರಕ್ತವಾಂತಿಯಾದ ಕಾರಣ ಆತನನ್ನು ಅವನೊಂದಿಗೆ ಕೆಲಸ ಮಾಡುವವರು ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದು, ಆತನಿಗೆ ಈ ದಿನ ಸಂಜೆ ಸುಮಾರು 7:00 ಗಂಟೆಗೆ ಪುನಃ ರಕ್ತವಾಂತಿಯಾಗಿ ತೀವ್ರ ಅಸ್ವಸ್ಥಗೊಂಡು ಮನೆಯಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯು.ಡಿ.ಆರ್ 52/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 16-12-2022 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080