ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿ ಮಹೇಂದ್ರ ಜಿ ಇವರು ದಿನಾಂಕ 16.12.2022 ರಂದು ತನ್ನ ಸ್ನೇಹಿತರಾದ ನಿಹಾಲ್ ಮತ್ತು ನಿಖಿಲ್ ರವರೊಂದಿಗೆ ನಿಖಿಲ್ ಬಾಬ್ತು KA 20 EE 8861 ನೇ ಮೋಟಾರ್ ಸೈಕಲ್ ನಲ್ಲಿ ಕೆಳ ಪರ್ಕಳ ಕಡೆಯಿಂದ ಉಡುಪಿ ಕಡೆಗೆ NH 169(A) ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿರುತ್ತಾರೆ, ಮೋಟಾರ್ ಸೈಕಲ್ ನ್ನು ನಿಹಾಲ್ ಸವಾರಿ ಮಾಡುತ್ತಿದ್ದು, ಪಿರ್ಯಾದಿದಾರರ ಸ್ನೇಹಿತ ನಿಖಿಲ್ ಮಧ್ಯದಲ್ಲಿ ಮತ್ತು ಪಿರ್ಯಾದಿದಾರರು ನಿಖಿಲ್ ನ ಹಿಂಬದಿಯಲ್ಲಿ ಕುಳಿತುಕೊಂಡಿರುತ್ತಾರೆ, ಸಮಯ ಸುಮಾರು 01:50 ಗಂಟೆಗೆ ಮಣಿಪಾಲದ ಟೈಗರ್ ಸರ್ಕಲ್ ನ ಸ್ವಲ್ಪ ಮುಂದೆ ತಲುಪಿದಾಗ ಆರೋಪಿ ನಿಹಾಲ್ ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿದ್ದು ಮೋಟಾರ್ ಸೈಕಲ್ ನ ನಿಂತ್ರಯಣ ತಪ್ಪಿ ರಸ್ತೆಯ ಬಲ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಜಾರಿ ಕೆಳಗೆ ಬಿದ್ದಿದ್ದು, ನಿಖಿಲ್ ಹಿಮ್ಮಖವಾಗಿ ರಸ್ತೆಗೆ ಬಿದ್ದಿದ್ದು, ನಿಹಾಲ್ ಕೂಡಾ ಮೊಟಾರ್ ಸೈಕಲ್ ಸಮೇತ್ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರಿಗೆ ಬಲಗೈ ಹಾಗೂ ಎಡಗಾಲಿನ ಮೊಣಗಂಟಿನ ಬಳಿ ತರಚಿದ ಗಾಯ, ಕೆಳ ತುಟಿಗೆ ಗಾಯವಾಗಿದ್ದು, ನಿಖಿಲ್ ನ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು ಪ್ರಜ್ಞೆ ಇರಲಿಲ್ಲ, ಆರೋಪಿ ನಿಹಾಲ್ ನಿಗೆ ಎಡಗೈ ಮೊಣಗಂಟಿನ ಬಳಿ ಮೂಳೆ ಮುರಿತದ ಗಾಯ ಉಂಟಾಗಿರುತ್ತದೆ, ಅಲ್ಲಿದ್ದ ಸ್ಥಳೀಯರು ಗಾಯಾಳುಗಳನ್ನು  ಅಂಬುಲೆನ್ಸ್ ನಲ್ಲಿ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಸಮಯ ಸುಮಾರು 02.10 ಗಂಟೆಗೆ ಆಸ್ಪತ್ರೆಗೆ ತಲುಪುವಾಗ ನಿಖಿಲ್ ರವರು ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 216/2022, ಕಲಂ: 279,337,338,  304(ಎ) ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-12-2022 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080