ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಸದಾಶಿವ ಕೆ. ಅಮೀನ್‌(56), ತಂದೆ: ದಿ. ಕಡ್ತ ಪೂಜಾರಿ, ವಾಸ: ಅಚ್ಚಡ ಸುಬಾಸ್ ನಗರ ಅಂಚೆ, ಸರಕಾರಿಗುಡ್ಡೆ, ಮೂಡಬೆಟ್ಟು ಗ್ರಾಮ, ಕಾಪು ತಾಲೂಕು, ಉಡುಪಿ  ಜಿಲ್ಲೆ ಇವರು ದಿನಾಂಕ 15/12/2021 ರಂದು ತನ್ನ ಮೋಟಾರು ಸೈಕಲ್‌ ನಂಬ್ರ KA-20-EX-5846 ನೇ ದರಲ್ಲಿ ಕರ್ತವ್ಯ ಮುಗಿಸಿಕೊಂಡು ಉಡುಪಿಯಿಂದ ತನ್ನ ಮನೆಯಾದ ಸುಭಾಸ್‌ನಗರಕ್ಕೆ ಕಟಪಾಡಿ ಸುಭಾಸ್‌ನಗರ ಮಾರ್ಗವಾಗಿ ಮನೆಗೆ ಹೋಗುತ್ತಿರುವ ಮಧ್ಯಾಹ್ನ 3:10 ಗಂಟೆಗೆ ಕುರ್ಕಾಲು ಜಂಕ್ಷನ್‌ತಲುಪುವಾಗ ಎದುರುಗಡೆಯಿಂದ  ಶಿರ್ವ ಕಡೆಯಿಂದ ಉಡುಪಿ ಕಡೆಗೆ KA-51-AD-1077 ನೇ ಆನಂದ ಬಸ್ಸಿನ ಚಾಲಕ ಕೆ. ಅಬ್ದುಲ್‌ ತಾನು ಚಲಾಯಿಸುತ್ತಿದ್ದ ಬಸ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಬರದಲ್ಲಿ ರಸ್ತೆಯ ತೀರಾ ಬದಿಗೆ ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಕಾಲಿನ ಮೂಳೆ ಮುರಿತದ ಜಖಂ ಹಾಗೂ ಬಲಕಾಲಿನ ಬೆರಳುಗಳಿಗೆ ರಕ್ತಗಾಯ ಅಲ್ಲದೆ ಬಲಕೈಗೆ ಮಣಿಗಂಟಿನ ಬಳಿ ಮೂಳೆ ಮುರಿತದ ಜಖಂ ಆಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2021, ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 15/12/2021 ರಂದು ಸದಾಶಿವ ಆರ್. ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಉಪ್ಪಿನಕುದ್ರು  ಗ್ರಾಮದ ವಾಸು ದೇವಸ್ಥಾನದ ಬಳಿ ಇರುವ ಅಂಗಡಿಯ ಬಳಿ  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ಬಂದಂತೆ ದಾಳಿ ನಡೆ ಆಪಾದಿತ ಕುಮಾರ ಶೇರಿಗಾರ (49), ತಂದೆ: ದಿ. ಮಾಧವ ಶೇರಿಗಾರ, ವಾಸ: ಕಮಲಜ್ಯೋತಿ ನಿಲಯ ವಾಸು ದೇವಸ್ಥಾನದ ಬಳಿ ಉಪ್ಪಿನಕುದ್ರು ಗ್ರಾಮ ಕುಂದಾಪುರ ತಾಲೂಕು ಎಂಬಾತನಿಂದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 450/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 133/2021 ಕಲಂ:78 (i) (iii)  KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 15/12/2021 ರಂದು ಸದಾಶಿವ ಆರ್. ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ  ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ತಲ್ಲೂರು  ಗ್ರಾಮದ ತಲ್ಲೂರು ಜಂಕ್ಷನ್ ಬಳಿ ಇರುವ ಅಂಗಡಿಯ ಬಳಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ಬಂದಂತೆ ದಾಳಿ ನಡೆಸಿ ಆಪಾದಿತ ) ಶೇಷ ದೇವಾಡಿಗ (71), ತಂದೆ: ದಿ. ಕೊರಗ ದೇವಾಡಿಗ, ವಾಸ: ಮೂಡಾಯನ ಮನೆ ಹಟ್ಟಿಕುದ್ರುಬಸ್ರೂರು ಗ್ರಾಮ ಕುಂದಾಪುರ ತಾಲೂಕು ಎಂಬಾತನಿಂದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 425/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 134/2021  ಕಲಂ:78 (i) (iii)  KP ACT  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 15/12/2021 ರಂದು ಹೆಬ್ರಿ ಗ್ರಾಮದ ಹೆಬ್ರಿ ಮೀನು ಮಾರ್ಕೇಟ್ ಬಳಿ ರಸ್ತೆಯ ಬದಿಯಲ್ಲಿ  ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಎಂಬ ಆಟ ಆಡುತ್ತಿರುವುದಾಗಿ ಮಹೇಶ.ಟಿ.ಎಮ್, ಪೊಲೀಸ್ ಉಪನಿರೀಕ್ಷಕರು, ಹೆಬ್ರಿ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ ಆರೋಪಿತ ಪ್ರಮೋದ (26), ತಂದೆ: ಸಾಧೂ ಪೂಜಾರಿ, ವಾಸ: ಅಮ್ಮುಂಜೆ ತೆಂಕಬೆಟ್ಟು ಅಂಚೆ ಉಪ್ಪೂರು ಗ್ರಾಮ ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ 1930/- ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ-1  ಹಾಗೂ ಬಾಲ್ ಪೆನ್ನು-1 ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2021 ಕಲಂ: 78 (3) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಹರಿಪ್ರಸಾದ್ (38), ತಂದೆ: ಶೀನ ಪೂಜಾರಿ, ವಾಸ: ಇಂದ್ರಾಳಿ ದುರ್ಗಾ ನಗರ, ಮಂಚಿಕೋಡಿ ಪೋಸ್ಟ್ ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಅಣ್ಣ ವಿಠ್ಠಲ ಪೂಜಾರಿ (42) ರವರು ಕಳೆದ ನಾಲ್ಕು ತಿಂಗಳಿನಿಂದ TB ಮತ್ತು ಹೃದಯಕ್ಕೆ ಸಂಬಂದಿಸಿದ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಮಣಿಪಾಲ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ದಿನಾಂಕ 15/12/2021 ರಂದು ಮಧ್ಯಾಹ್ನ ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಕೆಮ್ಮು ಕಾಣಿಸಿಕೊಂಡು ರಕ್ತ ವಾಂತಿ ಮಾಡಿದರಿಂದ ಚಿಕಿತ್ಸೆಯ ಬಗ್ಗೆ ಮಣಿಪಾಲ KMC ಆಸ್ಪತ್ರೆಗೆ 03:55 ದಾಖಲಿಸಲಾಗಿ ಪರೀಕ್ಷಿಸಿದ ವೈದ್ಯರು ವಿಠ್ಠಲ ಪೂಜಾರಿಯವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 44/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-12-2021 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080