ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರರಕರಣ

 • ಕುಂದಾಪುರ: ದಿನಾಂಕ  14/11/2022 ರಂದು ರಾತ್ರಿ 10:30 ಗಂಟೆಗೆ,  ಕುಂದಾಪುರ  ತಾಲೂಕಿನ, ಕೊಟೇಶ್ವರ  ಗ್ರಾಮದ  ಮೆಜೆಸ್ಟಿಕ್‌ ‌ಹಾಲ್‌ ‌‌ಬಳಿ, ಪಶ್ಚಿಮ ಬದಿಯ NH ರಸ್ತೆಯಲ್ಲಿ, ನೊಂದಣಿ ನಂಬ್ರ ತಿಳಿಯದ ಯಾವುದೋ ಲಾರಿ ಚಾಲಕ,  ಲಾರಿಯನ್ನು ಉಡುಪಿ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಶಮಿತ್‌ (22), ತಂದೆ: ಪ್ರಕಾಶ್‌, ವಾಸ: ಕೋತಗೋಡು, ತೆಕ್ಕೂರು ಗ್ರಾಮ, ಶೃಂಗೇರಿ ತಾಲೂಕು, ಚಿಕ್ಕಮಗಳೂರು ಜಿಲ್ಲೆ ಇವರು  KA-20-EY-8858 TVSನೇ ಎಂಟಾಕ್‌‌ ಸ್ಕೂಟರ್‌‌ನಲ್ಲಿ ಅಪ್ತಾಬ್‌‌ ಹುಸೇನ್‌‌ರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರ್‌‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿರುತ್ತಾನೆ. ಈ ಅಪಘಾತದಿಂದ  ಪಿರ್ಯಾದಿದಾರರಾದ ಶಮಿತ್‌‌ರವರ ಬಲಕಾಲಿಗೆ ಮೂಳೆ ಮುರಿತವಾದ ಗಾಯ, ಎಡಕಾಲಿಗೆ ಮತ್ತು ಎಡಕೈಗೆ ತರಚಿದ ರಕ್ತಗಾಯ, ಅಪ್ತಾಬ್‌‌ ಹುಸೇನ್‌‌ರವರ ಬಲಕಾಲಿಗೆ ಮೂಳೆ ಮುರಿತವಾದ ಗಾಯ, ಹೊಟ್ಟೆಗೆ ಒಳನೋವು,  ಮೈ ಕೈಗೆ ತರಚಿದ ಗಾಯವಾಗಿದ್ದು, ಶಮಿತ್‌‌ರವರು  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಅಪ್ತಾಬ್‌‌ ಹುಸೇನ್‌‌ರವರು ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ  ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 122/2022  ಕಲಂ: 279, 338 ಐಪಿಸಿ   & 134 (A)& (B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ಹೆಂಗಸು ಕಾಣೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ರವಿರಾಜ್‌ ಶೆಟ್ಟಿ ಜಿ, ತಂದೆ: ಮಹಾಬಲ ಶೆಟ್ಟಿ, ವಾಸ: ಶಿವಕೃಪಾ, ಮೂಡುಗರಡಿ ರಸ್ತೆ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಾಯಿ ಶ್ರೀಮತಿ ವನಜ ಶೆಟ್ಟಿ(74) ಎಂಬುವವರಿಗೆ ಮರೆವು ಖಾಯಿಲೆ ಇದ್ದು, ಅವರು ದಿನಾಂಕ 14/11/2022 ರಂದು ಬೆಳಿಗ್ಗೆ ಜಾವ 05:00 ಗಂಟೆಗೆ ಮನೆಯಿಂದ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 193/2022 ಕಲಂ : ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿದಾರರಾದ ರಿಸಿಮುನ್ನಿ  ಪಾಸ್ವಾನ್ (36), ತಂದೆ: ಶ್ರೀರಾಮ  ಪಾಸ್ವಾನ್,  ವಾಸ, ಸಚೌಲಿಯಪಟಾನಿಯ  ದೇವಾನಿಯ  ಜಿಲ್ಲೆ   ಉತ್ತರ  ಪ್ರದೇಶ  ಹಾಲಿ  ಕೆ,ಆರ್ ಪುರಂ  ಬೆಂಗಳೂರು ಇವರ ತಮ್ಮ ವಸಿಷ್ಠ  ಪಾಸ್ವಾನ್ (34) ಇವರು ಸಂಬಂಧಿಕರಾದ  ವಿಫಿನ್  ಹಾಗೂ  ರಾಮಾನಿ ಇವರೊಂದಿಗೆ ಕೆಲಸದ  ಬಗ್ಗೆ ಕುಂದಾಪುರ  ತಾಲೂಕಿನ ಶಂಕರನಾರಾಯಣ ಗ್ರಾಮದ ಮೂಡ ಬೈಲ್ಲೂರು ಎಂಬಲ್ಲಿಗೆ ಬಂದಿದ್ದು, ಅಲ್ಲಿ ಕೆಲಸ  ಮಾಡಿಕೊಂಡಿದ್ದವನು ದಿನಾಂಕ 14/11/2022 ರಂದು ರಾತ್ರಿ 8:00 ಗಂಟೆಗೆ  ಅಲ್ಲಿಯೇ  ಇದ್ದ  ತೋಟದ  ಪಂಪಸೆಟ್   ಶೆಡ್‌‌ನಲ್ಲಿ ಇರುವ  ಕರೆಂಟ್‌‌ಗೆ  ಮೊಬೈಲ್  ಚಾರ್ಜ  ಹಾಕಲು   ಹೋದಾಗ  ಆಕಸ್ಮಿಕವಾಗಿ  ಕರೆಂಟ್  ಶಾಕ್ ಹೊಡೆದಿದ್ದು, ಕೂಡಲೇ  ಆತನನ್ನು ಕುಂದಾಪುರ  ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ  ಅಲ್ಲಿ  ಆತನನ್ನು   ಪರೀಕ್ಷಿಸಿದ   ವೈದ್ಯರು  ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 38/2022  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಮಣಿಪಾಲ: ದಿನಾಂಕ 14/11/2022 ರಂದು ರಾತ್ರಿ 08:30 ಗಂಟೆಯಿಂದ 9:30 ಗಂಟೆಯ ನಡುವೆ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ದಶರಥ ನಗರ ಎಂ. ಎಂ. ಟವರ್ಸ್‌ನ ಪ್ಲ್ಯಾಟ್‌ ನಂ: 204 ರಲ್ಲಿ ವಾಸವಿದ್ದ ಡಿನ್‌ ಲಿಯು ಚೊಂಗ್‌ (19) ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಪ್ಲ್ಯಾಟ್‌ನ ವಾಡ್ರೋಬ್‌  ಹ್ಯಾಂಡಲ್‌ಗೆ ಸ್ಕಿಪ್ಪಿಂಗ್‌ ರೋಪ್‌ ನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 42/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ಸುಧೀರ್  ಮಡಿವಾಳ (35), ತಂದೆ: ಗೋಪಾಲ ಮಡಿವಾಳ, ವಾಸ; ಆಶಾ ನಿಲಯ ಆರ್ಭಿ ಮನೆ ಹೆಬ್ರಿ ಗ್ರಾಮ ಹೆಬ್ರಿ ತಾಲೂಕು ಇವರ ಮನೆಯ ಕಡೆಗೆ ಹೋಗುವ ಏಳಾಳಿ ರಸ್ತೆಯು ಸಾರ್ವಜನಿಕ ರಸ್ತೆಯಾಗಿದ್ದು.  ಇದೇ ರಸ್ತೆಯಲ್ಲಿ ಶಕುಂತಳಾ ಶೆಡ್ತಿ, ಸುಮತಿ ಮಡಿವಾಳ್ತಿ, ವಸಂತ ಶೆಟ್ಟಿ ಮತ್ತು ಅಮ್ಮಣ್ಣಿ ಮಡಿವಾಳ್ತಿ ಇವರುಗಳು ಇದೇ ರಸ್ತೆಯಲ್ಲಿ ತಮ್ಮ ತಮ್ಮ ಮನೆಗೆ ನಡೆದುಕೊಂಡು ಅಥವಾ ವಾಹನದಲ್ಲಿ ಹೋಗುವುದಾಗಿದೆ.  ದಿನಾಂಕ 14/11/2022 ರಂದು ಮದ್ಯಾಹ್ನ 2:00 ಗಂಟೆಗೆ  ಆರೋಪಿತರಾದ ಶೋದನ್ ಶೆಟ್ಟಿ, ಮತ್ತು ಸ್ವಾಗತ್ ಶೆಟ್ಟಿ ರವರು ಸಾರ್ವಜನಿಕ ರಸ್ತೆಗೆ ಹಾನಿ ಮಾಡುವ ಉದ್ದೇಶದಿಂದ ಹಾಗೂ ಯಾರು ರಸ್ತೆಯಲ್ಲಿ ನಡೆದುಕೊಂಡು ಹೋಗದಂತೆ ಮತ್ತು ವಾಹನದಲ್ಲಿ ಹೋಗಲು ಅಗದಂತೆ ಅಡ್ಡಿ ಮಾಡುವ ಉದ್ದೇಶದಿಂದ ರಸ್ತೆಗೆ ಅಡ್ಡವಾಗಿ ಕಲ್ಲನ್ನು ಇಟ್ಟು 3 ಚೀಲದಷ್ಟುವಿರುವ ಗ್ಲಾಸ್ ಪುಡಿಗಳನ್ನು ತಂದು ರಸ್ತೆಯ ಉದ್ದಕ್ಕೂ ಹಾಕಿ ಸಾರ್ವಜನಿಕರು ಸಂಚಾರ ಮಾಡದಂತೆ ಹಾನಿವುಂಟು ಮಾಡಿರುವುದಲ್ಲದೇ ವಿಚಾರಿಸಿದಾಗ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ: 431, 290, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ . 

ಇತ್ತೀಚಿನ ನವೀಕರಣ​ : 16-11-2022 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080