ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಹರೀಶ್ (35), ತಂದೆ: ರಾಜು, ವಾಸ: ದರ್ಖಾಸು ಮನೆ, ಮಳಿಯಾಲ್ ಕಟ್ಟೆ, ಇರ್ವತ್ತೂರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 14/11/2021 ರಂದು ಸಂಜೆ 6:30 ಗಂಟೆಗೆ  ಕಾರ್ಕಳ ತಾಲೂಕು ಸಾಣೂರು ಗ್ರಾಮದ ಮುರತಂಗಡಿ ಎಂಬಲ್ಲಿ ಬಸ್ಸಿನಿಂದ ಇಳಿದು ತನ್ನ ಮನೆಯಾದ ಇರ್ವತ್ತೂರಿಗೆ ಹೋಗಲು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಇರ್ವತ್ತೂರು ರಸ್ತೆಯಲ್ಲಿ ಗಂಗಾ ಎಂಬ ಕಟ್ಟಡದ ಮುಂಭಾಗ ತಲುಪಿದಾಗ ಇರ್ವತ್ತೂರು ಕಡೆಯಿಂದ ಮುರತಂಗಡಿ KA-20-EK-4861 ನೇ ನೋಂದಣಿ ಸಂಖ್ಯೆಯ   ಮೋಟಾರ್ ಸೈಕಲ್ ಸವಾರ ರಮೇಶ್ ರಾವ್ ಬಿ ಮೋಟಾರ್ ಸೈಕಲ್ ನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ  ಡಿಕ್ಕಿ ಹೊಡೆದ ರಭಸಕ್ಕೆ ಪಿರ್ಯಾದಿದಾರರ ಎಡ ಕಾಲಿನ ಮೊಣಗಂಟಿನ ಕೆಳಗೆ ಒಳಜಖಂ ಆಗಿದ್ದು, ತಲೆಯ ಹಿಂಬದಿಗೆ ರಕ್ತಗಾಯವಾಗಿರುತ್ತದೆ. ಅಲ್ಲದೆ KA-20-EK-4861  ನೇ ಮೋಟಾರ್ ಸೈಕಲ್ ಸವಾರನಿಗೂ ಮತ್ತು ಹಿಂಬದಿ ಸವಾರಳಿಗೂ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 149/2021 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 15/11/2021 ರಂದು 12;00  ಗಂಟೆಗೆ ಪಿರ್ಯಾದಿದಾರರಾದ ಚೈತ್ರ  ಪೂಜಾರಿ (24),ತಂದೆ: ಸುಧಾಕರ  ಪೂಜಾರಿ, ವಾಸ: ಬ್ರಹ್ಮಶ್ರೀ ಸೂರಜೆಡ್ಡು  ಗುಮ್ಮಲ ಅಂಚೆ ಬೆಳ್ವೆ ಗ್ರಾಮ  ಹೆಬ್ರಿ ತಾಲೂಕು ಇವರು ಹೆಬ್ರಿ  ತಾಲೂಕಿನ  ಬೆಳ್ವೆ ಗ್ರಾಮದ  ಗುಮ್ಮಲ  ಹಳನೀರು  ಎಂಬಲ್ಲಿ  KA-20-EQ-7345  ನೇ ನಂಬ್ರದ ಸ್ಕೂಟಿಯಲ್ಲಿ ಬೆಳ್ವೆ ಕಡೆಗೆ  ಹೋಗುತ್ತಿರುವಾಗ ಬೆಳ್ವೆ  ಕಡೆಯಿಂದ KA-20-B-1741 ನೇ ನಂಬ್ರದ  ಗೂಡ್ಸ್  ವಾಹನವನ್ನು ಅದರ ಚಾಲಕ ಗುಮ್ಮಲ ಕಡೆಗೆ  ಅತೀ ವೇಗ  ಹಾಗೂ ಅಜಾಗರೂಕತೆಯಿಂದ ತೀರಾ  ಬಲಬದಿಗೆ  ಚಲಾಯಿಸಿ ಪಿರ್ಯಾದಿದಾರರು ಚಲಾಯಿಸಿಕೊಂಡು  ಹೋಗುತ್ತಿದ್ದ  ಸ್ಕೂಟಿಗೆ  ಡಿಕ್ಕಿ ಹೊಡೆದಿದ್ದು ಇದರ  ಪರಿಣಾಮ  ಸ್ಕೂಟಿ ಚಲಾಯಿಸುತ್ತಿದ್ದ  ಪಿರ್ಯಾದಿದಾರರು ರಸ್ತೆಯ  ಮೇಲೆ  ಬಿದ್ದಿದ್ದು  ಈ ಸಮಯ ಗೂಡ್ಸ  ವಾಹನದ  ಹಿಂಬದಿಯ ಟಯರ್  ಅವರ ಬಲಕಾಲಿನ ಮೇಲೆ  ಹತ್ತಿ  ಹೋಗಿದ್ದು, ಇದರಿಂದ ಪಿರ್ಯಾದಿದಾರರ ಬಲಕಾಲಿನ ತೊಡೆ ಹಾಗೂ  ಪಾದಕ್ಕೆ ಮೂಳೆಮುರಿತದ ಗಾಯವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 102/2021  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಮಹೇಶ್ ರಾವ್ (53), ತಂದೆ: ಕೆ ನರಸಿಂಗ, ವಾಸ: ದೊಡ್ಡಮನೆ, ಕೌಡೂರು ಗ್ರಾಮ,  ಬೈಲೂರು ಅಂಚೆ, ಕಾರ್ಕಳ ತಾಲೂಕು ಇವರ ತಂದೆ ಕೆ ನರಸಿಂಗ (86) ರವರು ದಿನಾಂಕ 15/11/2021 ರಂದು ಮದ್ಯಾಹ್ನ 15:30 ಗಂಟೆಗೆ ಕಾರ್ಕಳ ತಾಲೂಕು ಕೌಡೂರು ಗ್ರಾಮದ  ದೊಡ್ಡಮನೆ ಬಳಿ ಇರುವ ಬಾವಿಯ ದಂಡೆಯ ಹುಲ್ಲನ್ನು ಬಗ್ಗಿ ಕೀಳುತಿದ್ದಾಗ ಆಕಸ್ಮಿಕವಾಗಿ ಆಯ ತಪ್ಪಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿದವರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಯವರು 16:45 ಗಂಟೆಗೆ ಮೇಲಕ್ಕೆ ಎತ್ತಿ ನೋಡಿದಾಗ ಕೆ ನರಸಿಂಗರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 38/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
  • ಕಾರ್ಕಳ: ಪಿರ್ಯಾದಿದಾರರಾದ ಸಂತೋಷ ಆಚಾರ್ಯ (32), ತಂದೆ: ವಾದಿರಾಜ ಆಚಾರ್ಯ, ವಾಸ: ಪದ್ಮಾವತಿ ನಿವಾಸ, ರಾಜೀವ ನಗರ, ನೀರೆ ಬೈಲೂರು, ನೀರೆ ಗ್ರಾಮ, ಕಾರ್ಕಳ ತಾಲೂಕು ಇವರ ತಂದೆ ವಾದಿರಾಜ ಆಚಾರ್ಯ (65) ರವರು ದಿನಾಂಕ 15/11/2021 ರಂದು ಸಂಜೆ 04:30 ಗಂಟೆಗೆ ನೀರೆ ಗ್ರಾಮದ ರಾಜೀವ ನಗರದ ಪಿರ್ಯಾದಿದಾರರ ವಾಸ್ತವ್ಯದ ಮನೆಯ ಬಚ್ಚಲು ಮನೆಯ ಓಲೆಗೆ ಉರಿ ಹಚ್ಚಲು ಹೋದಾಗ ಆಕಸ್ಮಿಕವಾಗಿ ಸಿಡಿಲು ಬಡಿದಿದ್ದು, ಸಿಡಿಲಿನ ಆಘಾತದಿಂದ ಬಲ ಹಣೆಯ ಬಳಿ ಪೆಟ್ಟಾಗಿ, ಎರಡು ಕಿವಿಗಳಿಂದ ರಕ್ತ ಬಂದು ತೀವೃ ಅಸ್ವಸ್ಥಗೊಂಡವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 39/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಹರೀಶ್ ಅಮೀನ್ (42), ತಂದೆ: ನಾರಾಯಣ ಅಮೀನ್, ವಾಸ: ಶಾಂತ ನಿವಾಸ, ಗುಂಡ್ಯಡ್ಕ, ಕುಕ್ಕುಂದೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರ ಮಾಲಕತ್ವದ ಕಾರ್ಕಳ ತಾಲೂಕು ಕಲ್ಯಾ ಗ್ರಾಮದ, ಕೈಕಂಬ ಮಂಡೆಚ್ಚಾರು ಎಂಬಲ್ಲಿರುವ ಅಡಿಕೆ ತೋಟಕ್ಕೆ ಕಾರ್ತಿಕ್  ಹಾಗೂ ಇತರ ಮೂರು ಜನರು ದಿನಾಂಕ 15/11/2021 ರಂದು 15:45 ಗಂಟೆಗೆ ಅಟೋರಿಕ್ಷಾ ನಂಬ್ರ KA-19-D-7091 ನೇಯದರಲ್ಲಿ ಬಂದು ಅಡಿಕೆ ಹಾಗೂ ತೆಂಗಿನ ಕಾಯಿಗಳನ್ನು ಕಳವು ಮಾಡಿ ಅಟೋರಿಕ್ಷಾಕ್ಕೆ ತುಂಬಿಸುತ್ತಿದ್ದಾಗ  ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತರನ್ನು ಕಂಡು ಮೂವರು ಹಾಡಿಯಲ್ಲಿ ಓಡಿ ಹೋಗಿದ್ದು, ಪಿರ್ಯಾದುದಾರರು ಅವರ ಸ್ನೇಹಿತರೊಂದಿಗೆ ಅಟೋರಿಕ್ಷಾವನ್ನು ಹಾಗೂ ಚಾಲಕನನ್ನು ಬೆನ್ನಟ್ಟಿ ಹಿಡಿದಾಗ ಅಟೋರಿಕ್ಷಾದಲ್ಲಿ ಮೂರು ಗೋಣಿ ಚೀಲಗಳಲ್ಲಿ ಅಡಿಕೆ ಹಾಗೂ ಒಂದು ಗೋಣಿ ಚೀಲದಲ್ಲಿ ತೆಂಗಿನ ಕಾಯಿಗಳಿದ್ದು, ಕಾರ್ತಿಕ್ ಹಾಗೂ ಇತರ ಮೂವರು ಪಿರ್ಯಾದಿದಾರರ ತೋಟಕ್ಕೆ ಬಂದು  30,000/- ರೂಪಾಯಿ ಮೌಲ್ಯದ ಅಡಿಕೆ ಹಾಗೂ ತೆಂಗಿನ ಕಾಯಿಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 132/2021 ಕಲಂ: 447, 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 16-11-2021 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080