ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

  • ಕೊಲ್ಲೂರು:   ದಿನಾಂಕ  15/11/2021  ರಂದು ಮದ್ಯಾಹ್ನ  03.00  ಗಂಟೆಗೆ   ಪಿರ್ಯಾದಿದಾರ ನರಸಿಂಹ  ಕುಲಾಲ್   ಪ್ರಾಯ:- 51 ವರ್ಷ  ತಂದೆ;- ದಿ. ಕಾಳ   ಕುಲಾಲ್  ವಾಸ:- ಕಾರಿಬೈಲು ಬೆಳ್ಳಾಲ  ಗ್ರಾಮ   ಇವರು ಅವರ  ಮೋಟಾರು ಸೈಕಲ್ ನಲ್ಲಿ     ಅವರ   ಮನೆಯಿಂದ    ನೆಂಪು   ಶಾಲೆಗೆ  ನನ್ನ  ಮಗಳನ್ನು   ಮನೆಗೆ   ಕರೆ  ತರಲು  ಹೋಗುತ್ತೀರುವಾಗ ಚಿತ್ತೂರು  ಗ್ರಾಮದ  ಕೊಳಮಾವು ಎಂಬಲ್ಲಿಗೆ    ಮಧ್ಯಾಹ್ನ  03.15 ಗಂಟೆಗೆ    ತಲುಪುವಾಗ್ಗೆ  ಅವರ    ಎದುರುಗಡೆಯಿಂದ   ಒಂದು  KA-20 EC-2614    ನೇ ಮೋಟಾರು  ಸೈಕಲ್  ವಂಡ್ಸೆ  ಕಡೆಗೆ  ಹೋಗುತಿದ್ದು ,  ಹಾಗೂ   ಅವರ  ಎದುರು ಕಡೆಯಿಂದ   ಅಂದರೆ   ವಂಡ್ಸೆ   ಕಡೆಯಿಂದ    ನಂದ್ರೋಳ್ಳಿ   ಕಡೆಗೆ  KA 20 C-3258    ನೇ   ಆಟೋ   ರಿಕ್ಷಾವು   ಬರುತಿದ್ದು, ,ಸದ್ರಿ ಸಮಯ  ಆಟೋ   ರಿಕ್ಷಾ   ಚಾಲಕನು ತನ್ನ   ಆಟೋ   ರಿಕ್ಷಾವನ್ನು  ಅತೀ   ವೇಗ   ಹಾಗೂ   ಅಜಾಗರೂಕತೆಯಿಂದ ಡಾಂಬರು  ರಸ್ತೆಯ   ತೀರಾ   ಬಲ ಬದಿಗೆ  ಚಲಾಯಿಸಿ  ಪಿರ್ಯಾದಿದಾರರ    ಎದುರಿನಿಂದ  ಹೋಗುತಿದ್ದ    ಮೋಟಾರು ಸೈಕಲಗೆ   ಎದುರಿನಿಂದ ಡಿಕ್ಕಿ   ಹೊಡೆದನು, ಪರಿಣಾಮ    ಸದ್ರಿ ಮೋಟಾರು   ಸೈಕಲ್   ಸವಾರ  ಜಗನ್ನಾಥ  ಶೆಟ್ಟಿಯು     ಮೋಟಾರು   ಸೈಕಲ್  ಸಮೇತ   ಡಾಂಬರು  ರಸ್ತೆಗೆ  ಬಿದ್ದನು.  ಸದ್ರಿ  ಸಮಯ   ಪಿರ್ಯಾದಿದಾರರು  ಎತ್ತಿ   ಉಪಚರಿಸಿದ್ದು   ಸದ್ರಿ   ಅಪಘಾತದಿಂದ     ಜಗನ್ನಾಥ   ಶೆಟ್ಟಿಯವರ   ಎಡ ಕೈ ಮೊಣಗಂಟಿನ ಮೂಳೆ   ಮುರಿತ  ಹಾಗೂ ದೇಹದ  ಇನ್ನಿತರ  ಕಡೆಗಳಲ್ಲಿ   ಪೆಟ್ಟಾಗಿದ್ದು,  ನಂತರ  ಪಿರ್ಯದಿದಾರರು ಮತ್ತು     ಅರುಣ್  ಕುಮಾರ ಶೆಟ್ಟಿ    ಬೆಳ್ಳಾಲ ಇಬ್ಬರು     ಸೇರಿ   ಚಿಕಿತ್ಸೆ  ಬಗ್ಗೆ   ಗಾಯಾಳು   ಜಗನ್ನಾಥ  ಶೆಟ್ಟಿ  ಕುಂದಾಪುರ   ನ್ಯೂ ಮೆಡಿಕಲ್  ಸೆಂಟರ್  ಆಸ್ಪತ್ರೆಗೆ   ಕರೆದುಕೊಂಡು   ಹೋಗಿ   ಒಳ ರೋಗಿಯಾಗಿ   ದಾಖಲಿರುವುದಾಗಿದೆ.  ಈ ಅಪಘಾತಕ್ಕೆ KA 20 C-3258  ನೇ   ಆಟೋ ರಿಕ್ಷಾ    ಚಾಲಕ  ಶೇಖರ  ಶೆಟ್ಟಿ    ಯವರ   ಅತೀ ವೇಗ   ಹಾಗೂ   ಅಜಾಗರೂಕತೆಯ   ಚಾಲನೆಯೆ ಕಾರಣವಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪ್ರಾಧ ಕ್ರಮಾಂಕ 43/21 ಕಲಂ:279,337 IPC ಯಂತೆ ಪ್ರಕರಣ ದಾಖಲಿಸಲಾಗಿದೆ.


ಗಂಡಸು ಕಾಣೆ ಪ್ರಕರಣ

  • ಕಾರ್ಕಳ :  ಫಿರ್ಯಾದಿ ಶ್ರೀಶ, ಪ್ರಾಯ: 32 ವರ್ಷ, ತಂದೆ: ಶೇಖರ ರಾವ್, ವಾಸ: ಎಂಪಿಎಂ ಕಾಲೇಜು ರಸ್ತೆ, ಗಾಯತ್ರಿ ಪ್ಯಾಕ್ಟರಿ ಹಿಂದೆ, ಗುಂಡ್ಯಡ್ಕ, ಕುಕ್ಕುಂದೂರು, ಇವರ ಚಿಕ್ಕಪ್ಪ ರಮೇಶ, ಪ್ರಾಯ: 60 ವರ್ಷ ರವರು ದಿನಾಂಕ: 13.11.2021 ರಂದು ಮದ್ಯಾಹ್ನ 2:00 ಗಂಟೆಗೆ  ಕಾರ್ಕಳ ಬಸ್ ಸ್ಟಾಂಡ್ ವಿಜಯ ವೈನ್ಸ್ ಶಾಪ್ ಹತ್ತಿರದಿಂದ ಕಾಣೆಯಾದವರು ಈತನಕ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಚಹರೆ: ರಮೇಶ ಪ್ರಾಯ: 60 ವರ್ಷ, ತಂದೆ: ಸಂಜೀವ, ಎತ್ತರ 5 ಅಡಿ 3 ಇಂಚು”, ಬಿಳಿ ಕೂದಲು, ಸಿಮೆಂಟ್ ಬಣ್ಣದ ಪ್ಯಾಂಟ್‌ ಮತ್ತು ನೀಲಿ ಹಳದಿ ಬಣ್ಣದ ಟಿ-ಶರ್ಟ್ ಧರಿಸುತ್ತಾರೆ, ಇವರಿಗೆ ಮಾತನಾಡಲು ಬರುವುದಿಲ್ಲ ಹಾಗೂ ಕಿವಿಯೂ ಕೇಳುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ  150/2021 ಕಲಂ ಗಂಡಸು ಕಾಣೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣಗಳು

  • ಶಿರ್ವ: ಪಿರ್ಯಾದುದಾರರಾದ ರವಿಕುಮಾರ್ 37  ವರ್ಷ, ಗಂಡ: ದಿ:ಈಶ್ವರ್ , ವಾಸ: ಮಧ್ವಕಾಲನಿ, ಪಡುಬೆಳ್ಳೆ, ಬೆಳ್ಳೆ ಗ್ರಾಮ ಇವರ ತಮ್ಮ ಶ್ರೀನಿವಾಸ, ಪ್ರಾಯ:32 ವರ್ಷ ಇವರು  ಶಿಲ್ಪಿ ಕೆಲಸಮಾಡಿಕೊಂಡಿದ್ದು  ವಿಪರೀತ ಮದ್ಯಪಾನ ಮಾಡುವ ಚಟವಿರುತ್ತದೆ. ಈತನು ವಿಪರೀತ ಕುಡಿತದ ಚಟದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:15/11/2021ರ ಸಂಜೆ 06.00 ಗಂಟೆಯಿಂದ ದಿನಾಂಕ:16/11/2021 ರಂದು ಬೆಳಿಗ್ಗೆ 06.30 ಗಂಟೆಯ ನಡುವಿನ ಅವಧಿಯಲ್ಲಿ ಬೆಳ್ಳೆ ಗ್ರಾಮದ ಪಡುಬೆಳ್ಳೆ ಗೋ ಆಸ್ಪತ್ರೆಯ ಹಿಂದುಗಡೆಯಿರುವ ಸರಕಾರಿ ಜಾಗದ ಹಾಡಿಯಲ್ಲಿನ  ಕಾಟು ಮರದ ಕೊಂಬೆಗೆ ನೈಲಾನ್ ಸೀರೆಯಿಂದ  ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಿರ್ವ ಠಾಣಾ ಯು.ಡಿ.ಆರ್‌ ನಂ.20/2021  U/S 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.  

    ಗಂಗೊಳ್ಳಿ: ಫಿರ್ಯಾದುದಾರರು ಸೂರ್ಯ ಖಾರ್ವಿ ಪ್ರಾಯ 50 ವರ್ಷ ತಂದೆ: ಮಹಾಬಲ ಖಾರ್ವಿ ವಾಸ: ಶೆಟ್ಟಿಮನೆ ದಾಕುಹಿತ್ಲು ಇವರು ತನ್ನ ಹೆಂಡತಿ ಹಾಗೂ ಮಗ ಸಂಜಯ ಪ್ರಾಯ 21 ವರ್ಷ  ರವರೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಮಗ ಸಂಜಯ ನು ಚಿಪ್ಪಿ ಕೆಲಸ ಮಾಡಿಕೊಂಡಿದ್ದು ದಿನಾಂಕ15.11.2021 ರಂದು ರಾತ್ರಿ 20:30 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದು ಸ್ನಾನ ಮಾಡದೇ ಊಟ ಮಾಡದೇ ಮೊಬೈಲ್‌ ತೆಗೆದುಕೊಂಡು ಮನೆಯಿಂದ ಹೊರಗೆ ಹೋಗಿದ್ದು ಪಿರ್ಯಾದಿದಾರರು ಕರೆ ಮಾಡಿ ವಿಚಾರಿಸಿದಲ್ಲಿ ರಾಮ ಮಂದಿರದ ಬಳಿ ಇರುವುದಾಗಿ ತಿಳಿಸಿರುತ್ತಾನೆ. ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಊಟ ಮಾಡಿ ಮಲಗಿದ್ದು ದಿನಾಂಕ 16.11.2021 ರಂದು ಬೆಳಗಿನ ಜಾವ 3:15 ಗಂಟೆಗೆ ಪಿರ್ಯಾದಿದಾರರು ಮೂತ್ರಶಂಕೆಯ ಬಗ್ಗೆ ಎದ್ದು ಮನೆಯ ಎದುರಿನ ಹಾಲ್‌ ನಲ್ಲಿ ಸಂಜಯ್‌ ಮಲಗಿರುವ ಜಾಗಕ್ಕೆ ಬಂದು ನೋಡಲಾಗಿ ಆತನು ಚಾಪೆಯ ಮೇಲೆ ಇಲ್ಲದೇ ಇದ್ದು ಅಲ್ಲಿಯೇ ಮೇಲೆ ಇರುವ ಮರದ ಪಕ್ಕಾಸಿಗೆ ಚಾಪೆಯ ಮೇಲೆ ಹಾಸುವ ತೆಳ್ಳಗಿನ ಬೆಡ್‌ಶೀಟ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದನ್ನು ನೋಡಿ ಆತನ ಕುತ್ತಿಗೆಯಲ್ಲಿದ್ದ ಬೆಡ್‌ಶೀಟ್‌ ಅನ್ನು ಬಿಚ್ಚಿ ಚಿಕಿತ್ಸೆ ಬಗ್ಗೆ 108 ಅಂಬ್ಯುಲೆನ್ಸ್ ನಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತರಿಗೆ ಮೊಬೈಲ್‌ ನೋಡುವ ಚಟವಿದ್ದು ಪಿರ್ಯಾದಿದಾರರು ಬುದ್ದಿ ಹೇಳಿದ್ದು ಇದರಿಂದ ಮನ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಗಂಗೊಳ್ಳಿ ಠಾಣಾ ಯು.ಡಿ.ಆರ್‌ ನಂ.33/2021  U/S 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.      

ಇತ್ತೀಚಿನ ನವೀಕರಣ​ : 16-11-2021 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080