ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ 

  • ಬ್ರಹ್ಮಾವರ: ದಿನಾಂಕ 10/09/2022 ರಂದು ಪಿರ್ಯಾದಿದಾರರಾದ ವಾಲ್ಸಟನ್‌ ಡಿಸೋಜಾ (20), ತಂದೆ: ವೆಲೈಂಟನ್‌ ಡಿಸೋಜಾ, ವಾಸ: ಟ್ರನಿಟಿ ಹೌಸ್‌, ಜಾತಬೆಟ್ಟು ಶಾಲೆಯ ಬಳಿ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಂದೆಯಾದ ವೆಲೈಂಟನ್‌ ಡಿಸೋಜಾ ರವರು ಅವರ KA-20-EZ-3287 ನೇ ಮೋಟಾರ್‌ ಸೈಕಲನ್ನು ಸವಾರಿ ಮಾಡಿಕೊಂಡು ಬ್ರಹ್ಮಾವರದಿಂದ ಉಪ್ಪೂರಿಗೆ ರಾಹೆ 66 ರಲ್ಲಿ ಹೊರಟು ಹೇರೂರು ಗ್ರಾಮದ ಹೇರೂರು ಸೇತುವೆಯ ಬಳಿ ರಾತ್ರಿ 9:00 ಗಂಟೆಗೆ ತಲುಪುವಾಗ ಅವರು ಮೋಟಾರ್‌ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸೇತುವೆಯ ಮೇಲೆ ರಸ್ತೆಯಲ್ಲಿ ನೀರು ನಿಂತಿರುವುದನ್ನು ನೋಡಿ ಒಮ್ಮೇಲೆ ಬ್ರೇಕ್‌ ಹಾಕಿದಾಗ ಹತೋಟಿ ತಪ್ಪಿ ಸ್ಕೀಡ್‌ ಆಗಿ ಬಿದ್ದ ಪರಿಣಾಮ ವೆಲೈಂಟನ್‌ ಡಿಸೋಜಾ ರವರ ಕುತ್ತಿಗೆಯ ಕೆಳಭಾಗದಿಂದ ಸೊಂಟದ ವರೆಗೆ ತೀವ್ರ ಒಳಜಖಂ ಆಗಿ ಕೈಕಾಲು ಸ್ವಾಧೀನ ಕಳೆದುಕೊಂಡಿರುತ್ತಾರೆ. ಗಾಯಗೊಂಡ ವೆಲೈಂಟನ್‌ ಡಿಸೋಜಾ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ದಾಖಲಿಸಿ, ವೈಧ್ಯರ ಸಲಹೆ ಯಂತೆ ದಿನಾಂಕ 11/09/2022 ರಂದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ದಿನಾಂಕ 20/09/2022 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿ ವಿಶ್ರಾಂತಿಯಲ್ಲಿ ಇರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 168/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 15/10/2022 ರಂದು 18:45 ಗಂಟೆಗೆ ಪಿರ್ಯಾದಿದಾರಾದ ಶ್ರೀಪತಿ ಭಟ್‌ (62) ,ತಂದೆ: ದಿ|| ಅನಂತ ಭಟ್‌, ವಾಸ: ಕುಕ್ಕುದಕಟ್ಟೆ ಮನೆ, ಹೊಳೆಮಠ, ಕೆರ್ವಾಶೆ ಗ್ರಾಮ & ಅಂಚೆ, ಕಾರ್ಕಳ ತಾಲೂಕು ಇವರ ತಂಗಿಯ ಗಂಡ ಚಿದಂಬರ ಚಿಪ್ಲೂಣ್‌ಕರ್‌ ಎಂಬವರು ತನ್ನ ಟಿವಿಎಸ್‌ ಎಕ್ಸೆಲ್‌ ಸೂಪರ್‌ KA-20-EA-6155 ರಲ್ಲಿ ಬಜಗೋಳಿ ಕಡೆಯಿಂದ ತಮ್ಮ ಮನೆ ಕೆರ್ವಾಶೆಗೆ ಹೋಗುವರೇ ಕಾರ್ಕಳ ತಾಲೂಕು ಮಾಳ ಗ್ರಾಮದ ಕೂಡಬೆಟ್ಟು ಕೆರ್ವಾಶೆ ಡಾಮಾರು ರಸ್ತೆಯಲ್ಲಿ ಬರುತ್ತಿದ್ದ ಸಮಯ ಅದೇ ರಸ್ತೆಯಲ್ಲಿ ಅದೇ ದಿಕ್ಕಿನಿಂದ KA-20-AB-2568 ನೇ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಓವರ್‌ಟೇಕ್‌ ಮಾಡುವಾಗ ರಸ್ತೆಯಲ್ಲಿ ಸ್ಕೂಟಿಯಲ್ಲಿ ಬರುತ್ತಿದ್ದ ಪಿರ್ಯಾದಿಯ ತಂಗಿ ಗಂಡನಿಗೆ ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿರುವುದಾಗಿದೆ. ಡಿಕ್ಕಿ ಹೊಡೆತಕ್ಕೆ ಗಾಯಾಳುವಿಗೆ ತಲೆ, ಬಲಕೆನ್ನೆ ಕೈಕಾಲುಗಳಿಗೆ ಗುದ್ದಿದ ಮತ್ತು ರಕ್ತ ಗಾಯವಾಗಿದ್ದು ಮೊಪೆಡ್‌ ಕೂಡಾ ಸ್ವಲ್ಪ ಜಖಂಗೊಂಡಿದ್ದಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 132/2022 ಕಲಂ: 279, 337, ಭಾದಸಂ ಕಲಂ 134(ಎ) 134 (ಬಿ) ಮೋ. ವಾ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಕಳವು ಪ್ರಕರಣ 

  • ಪಡುಬಿದ್ರಿ: ಪಿರ್ಯಾದಿದಾರರಾದ ಮಾಸಪ್ಪ ಮಾದರ ಪ್ರಾಯ:40 ವರ್ಷ, ತಂದೆ: ದುರ್ಗಪ್ಪ ,ವಾಸ:ದುರ್ಗಮ್ಮನ ಗುಡಿಬಳಿ ವಡಗೇರಿ ಗುಡುರು ಗ್ರಾಮ, ಹುನಗುಂದ ತಾಲೂಕು ಬಾಗಲಕೋಟೆ ಜಿಲ್ಲೆ ಇವರು ತೆಂಕ ಎರ್ಮಾಳಿನ ಆಯಿಶಾ ಇಬ್ರಾಹಿಂ ರವರ ಬಾಡಿಗೆ ಮನೆಯಲ್ಲಿ ವಾಸವಿದ್ದು, ದಿನಾಂಕ: 02/10/2022 ರಂದು ಸಂಜೆ 06:00 ಗಂಟೆಗೆ ಬಾಡಿಗೆ ಮನೆಗೆ ಬೀಗ ಹಾಕಿ ತನ್ನ ಸಂಸಾರದೊಂದಿಗೆ ಸ್ವಂತ ಊರಾದ ಬಾಗಲಕೋಟೆಗೆ ಹೋಗಿರುತ್ತಾರೆ. ದಿನಾಂಕ: 16/10/2022 ರಂದು ಬೆಳಿಗ್ಗಿನ ಜಾವ 04:30 ಗಂಟೆಗೆ ವಾಪಾಸ್ಸು ಬಂದು ಮನೆಯ ಹತ್ತಿರ ತಲುಪುವಾಗ ಒಬ್ಬ ಅಪರಿಚಿತ ವ್ಯಕ್ತಿಯು KA-19-EB-5322 ನಂಬ್ರದ ಸ್ಕೂಟರ್ ನೊಂದಿಗೆ ಮನೆಯ ಎದುರು ನಿಂತುಕೊಂಡಿದ್ದು ಪಿರ್ಯಾದಿದಾರರನ್ನು ನೋಡಿದ ಕೂಡಲೇ ಸ್ಕೂಟರನ್ನು ಬಿಟ್ಟು ಮನೆಯ ಹಿಂಬದಿಯಿಂದ ಓಡಿ ಹೋಗಿರುತ್ತಾನೆ. ಪಿರ್ಯಾದಿದಾರರು ಬಾಡಿಗೆ ಮನೆಯ ಬೀಗ ತೆಗೆಯಲು ಹೋದಾಗ ಬಾಗಿಲಿನ ಬೀಗ ಒಡೆದು ಬಾಗಿಲು ಅರೆ ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಬಟ್ಟೆಬರೆಗಳು ಎಲ್ಲಾ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು, ಮನೆಯೊಳಗಿದ್ದ ಕಬ್ಬಿಣದ ಪಟ್ಟಿಗೆಯ ಬೀಗವನ್ನು ತುಂಡರಿಸಿ ತೆರೆದಂತಿದ್ದು, ನೋಡಿದಾಗ ಅದರಲ್ಲಿದ್ದ ನಗದು 20,000/- ರೂ, 20 ಗ್ರಾಂ ತೂಕದ ಬೆಳ್ಳಿಯ ಉಡುದಾರ, ಒಂದು ಗ್ರಾಂ ತೂಕದ ಚಿನ್ನದ ತಾಯಿತ-1, 5 ಗ್ರಾಂ ತೂಕದ ಚಿನ್ನದ ಸರ-1, 1 ಗ್ರಾಂ ತೂಕದ ಮಗುವಿನ ಕಿವಿಯ ಚಿನ್ನದ ಗುಂಡು-1 ಕಳವಾಗಿರುತ್ತದೆ. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ. 25,000/- ರೂ, ಹಾಗೂ ನಗದು 20,000/- ಆಗಿರುತ್ತದೆ. ಸ್ಕೂಟರ್ ಬಿಟ್ಟು ಓಡಿ ಹೋದ ವ್ಯಕ್ತಿಯು ದಿನಾಂಕ:15/10/2022 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ 16/10/2022 ರ ಬೆಳಗ್ಗಿನ ಜಾವ 4:30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾವುದೋ ಸಾಧನದಿಂದ ಮೀಟಿ ತುಂಡರಿಸಿ ಒಳ ಹೊಕ್ಕಿ ಮನೆಯೊಳಗಿದ್ದ ಕಬ್ಬಿಣದ ಪೆಟ್ಟಿಗೆಯ ಬೀಗವನ್ನು ತುಂಡರಿಸಿ ನಗದು ಹಾಗೂ ಚಿನ್ನದ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿ ಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಜೋಸೆಫ್ ಫ್ರಾನ್ಸಿಸ್ ಡಿಸೋಜಾ (65),ತಂದೆ: ದಿವಂಗತ ಥೋಮಸ್ ಡಿಸೋಜಾ,ವಾಸ: ಸೆರೆನಿಟಿ ವಿಲ್ಲಾ, ಹೆಪೆಜಾರು, ಬಜಗೋಳಿ ಅಂಚೆ, ಮುಡಾರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ಮನೆಯಲ್ಲಿ ದಿನಾಂಕ: 14/10/2022 ಬೆಳಿಗ್ಗೆ 10:00 ಗಂಟೆಯಿಂದ 15/10/2022 ರಂದು ಮದ್ಯಾಹ್ನ ಸುಮಾರು 2:00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮನೆಯ ಗೇಟನ್ನು ತೆಗೆದು ಬದಿಗಿರಿಸಿ, ಮನೆಯ ಮುಂಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ತೆರೆದು, ಮನೆಯೊಳಗೆ ಪ್ರವೇಶಿಸಿ, ಮನೆಯೊಳಗೆ ಶೋಕೇಸ್ ನಲ್ಲಿ ಇಟ್ಟಿದ್ದ ಕಾರಿನ ಕೀಯನ್ನು ತೆಗೆದು ಮನೆಯ ಮುಂಭಾಗದಲ್ಲಿ ಕಾರು ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ನಿಲ್ಲಿಸಿದ್ದ ಸಿಲ್ವರ್ ಬಣ್ಣದ MH-04-GM-9724 ನೇ ನಂಬ್ರದ ಮಾರುತಿ ಸುಜುಕಿ ಕಂಪನಿಯ ಸ್ವಿಪ್ಟ್ ಡಿಜೈರ್ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಕಾರಿನ ಮೌಲ್ಯ 3,00,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 133/2022 ಕಲಂ:457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಬೈಂದೂರು: ಪಿರ್ಯಾದಿದಾರರಾದಲಕ್ಷ್ಮೀ ದೇವಾಡಿಗ ಪ್ರಾಯ : 67 ವರ್ಷ, ಗಂಡ : ಶುಕ್ರ ದೇವಾಡಿಗ, ವಾಸ : ಮಕ್ಕಿಗದ್ದೆಮನೆ, ನಾಯ್ಕನಕಟ್ಟೆ, ಕೆರ್ಗಾಲ್ ಗ್ರಾಮ, ಬೈಂದೂರು ತಾಲೂಕು ಹಾಗೂ ಅವರ ತಂಗಿ ಕಾವೇರಿ ಎಂಬುವವರಿಗೂ ಜಾಗದ ತಕರಾರು ಇರುತ್ತದೆ. ಈ ವಿಚಾರದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿ ವಿಚಾರಣೆಯಲ್ಲಿ ಇರುತ್ತದೆ. ಹೀಗಿರುತ್ತಾ ದಿನಾಂಕ : 15/10/2022 ರಂದು ಮಧ್ಯಾಹ್ನ 01:30 ಗಂಟೆಗೆ ಪಿರ್ಯಾದಿದಾರರಿಗೂ ಅವರ ತಂಗಿ ಕಾವೇರಿ ರವರಿಗೂ ತಕರಾರು ಇರುವ ಜಾಗದಲ್ಲಿರುವ ವಿದ್ಯುತ್ ಕಂಬದಿಂದ ಪಿರ್ಯಾದಿದಾರರ ತಂಗಿ ಕಾವೇರಿ ರವರ ಮನೆಗೆ ವಿದ್ಯುತ್ ಸರ್ವೀಸ್ ವೈಯರ್ ಎಳೆಯಲು ಬಂದಿದ್ದು ಇದನ್ನು ನೋಡಿದ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ತಿಮ್ಮಯ್ಯ ಬಳಿ ಈ ಜಾಗದಲ್ಲಿ ತಕರಾರು ಇದೆ ನ್ಯಾಯಾಲಯದಲ್ಲಿ ದಾವೆ ವಿಚಾರಣೆಯಲ್ಲಿದೆ ನ್ಯಾಯಾಲಯದ ತೀರ್ಪು ಬರುವ ತನಕ ಯಾವುದೇ ಕೆಲಸ ಮಾಡಬೇಡಿ ಎಂದು ಹೇಳಿದ್ದಕ್ಕೆ ಪಿರ್ಯಾದಿದಾರರ ಜೊತೆ ತಿಮ್ಮಯ್ಯ ಜಗಳ ಪ್ರಾರಂಭಿಸಿದ್ದು ಆ ಸಮಯ ಕಾವೇರಿ ದೇವಾಡಿಗ ಮತ್ತು ಆಕೆಯ ಮಕ್ಕಳಾದ ಗಣೇಶ ದೇವಾಡಿಗ, ದಿನೇಶ್ ದೇವಾಡಿಗ ಮತ್ತು ನೆರೆಕೆರೆ ಮನೆಯ ರೇವತಿ ಎಂಬವರು ಪಿರ್ಯಾದಿದಾರರ ಬಳಿ ಓಡಿ ಬಂದು ಗಣೇಶ ದೇವಾಡಿಗನು ಕಬ್ಬಿಣದ ರಾಡ್ ಹಿಡಿದುಕೊಂಡು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಸರಳಿನಿಂದ ಪಿರ್ಯಾದಿದಾರರ ಗಲ್ಲಕ್ಕೆ ಹೊಡೆದಿದ್ದು ಪಿರ್ಯಾದಿದಾರರ ಬಾಯಲ್ಲಿ ರಕ್ತ ಬಂದಿರುತ್ತದೆ. ಆ ಸಮಯ ತಿಮ್ಮಯ್ಯನು ರಕ್ತ ಬರುವಂತೆ ಹೊಡೆಯಬೇಡಿ ಎಂದು ಹೇಳಿದ್ದು ಆಗ ಎಲ್ಲರೂ ಹಿಡಿದುಕೊಂಡು ಕೈಯಿಂದ ಗುದ್ದಿ ಒಳನೋವು ಮಾಡಿರುತ್ತಾರೆ. ನಂತರ ಕಾವೇರಿ ರೇವತಿ ಇಬ್ಬರೂ ಪಿರ್ಯಾದಿದಾರರನ್ನು ಹಿಡಿದುಕೊಂಡು ಗಣೇಶ, ದಿನೇಶ, ತಿಮ್ಮಯ್ಯ ರವರುಗಳು ಕೈಯಿಂದ ಪಿರ್ಯಾದಿದಾರರ ಬೆನ್ನಿಗೆ, ಎದೆಗೆ, ಹೊಟ್ಟೆಯ ಭಾಗಕ್ಕೆ ಗುದ್ದಿ ನೋವು ಉಂಟು ಮಾಡಿ ಇನ್ನೊಮ್ಮೆ ನಮ್ಮ ವಿಷಯಕ್ಕೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  207/2022 ಕಲಂ: 341, 504, 506, 354, 323, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 16-10-2022 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080