ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ವಿಠಲ (30), ತಂದೆ: ಮಹಾಬಲ  ಖಾರ್ವಿ, ವಾಸ: ಬಬ್ರಿ ಮನೆ, ಮಡಿಕಲ್ , ಉಪ್ಪುಂದ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ  14/10/2022  ರಂದು ಸಂಜೆ 5:30 ಗಂಟೆಗೆ ಉಪ್ಪುಂದ ಗ್ರಾಮದ ಜನತಾ ಕಾಲೋನಿಯ ರಾಘವೇಂದ್ರ ಪೂಜಾರಿಯವರ ಅಂಗಡಿಗೆ ಹೋಗಿದ್ದು ಆ ಸಮಯ ಅವರ ತಮ್ಮ ಅವಿನಾಶ್ KA-20-EP-5566 ನೇ ಮೋಟಾರು ಸೈಕಲ್ ನ್ನು ಅಂಬಾಗಿಲು ಪೇಟೆ ಕಡೆಯಿಂದ ಮಡಿಕಲ್ ರಸ್ತೆಯಲ್ಲಿ ಚಲಾಯಿಸಿಕೊಂಡು  ರಾಘವೇಂದ್ರ ಪೂಜಾರಿಯವರ ಅಂಗಡಿ ಬಳಿ ಬಂದಾಗ ಎದುರಿನಿಂದ ಮಡಿಕಲ್ ಕಡೆಯಿಂದ ಉಪ್ಪುಂದ ಕಡೆಗೆ  KA-20-EN-6574 ನೇ TVS JUPITER ಸ್ಕೂಟರ್ ಸವಾರ ನಾಗರಾಜ ಮೋಟಾರು ಸೈಕಲ್ ನಲ್ಲಿ ನಾಗೇಂದ್ರ ಖಾರ್ವಿ ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ರಸ್ತೆಯ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ತಮ್ಮ ಅವಿನಾಶ್ ರವರ  ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದು,  ಎರಡೂ  ಮೋಟಾರು ಸೈಕಲ್ ಸವಾರರು ರಸ್ತೆಗೆ ಬಿದ್ದಿರುತ್ತಾರೆ. ಅಪಘಾತದ ಪರಿಣಾಮ ನಾಗೇಂದ್ರ ಖಾರ್ವಿಗೆ ಬಲಭುಜಕ್ಕೆ ಒಳಜಖಂ ಹಾಗೂ ಹಣೆಗೆ, ಮೂಗಿಗೆ, ಕೈಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ, ನಾಗರಾಜ ಖಾರ್ವಿಯವರಿಗೆ ಎಡಕಾಲಿಗೆ, ಹಣೆಗೆ ತರಚಿದ ಗಾಯವಾಗಿರುತ್ತದೆ, ಅವಿನಾಶ್ ರವರಿಗೆ ಎಡಕಣ್ಣಿನ ಹುಬ್ಬಿಗೆ, ಕೆನ್ನೆಗೆ, ಎಡಕೈ ಕಿರುಬೆರಳಿಗೆ ರಕ್ತಗಾಯವಾಗಿರುತ್ತದೆ, ಗಾಯಗೊಂಡ ನಾಗೇಂದ್ರ ಖಾರ್ವಿ ಹಾಗೂ ಅವಿನಾಶ್ ರವರನ್ನು ಚಿಕಿತ್ಸೆಯ ಬಗ್ಗೆ ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು  ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 206/2022 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಈಶ್ವರ್ (47), ತಂದೆ: ಆನಂದ ಪುತ್ರನ್, ವಾಸ: ಬಲರಾಮ ನಗರ , ಬೀಚ್ ಕೊಳ ,ಮಲ್ಪೆ ಕೊಡವೂರು ಗ್ರಾಮ ಇವರಿಗೆ ದಿನಾಂಕ 29/09/2022  ರಂದು ಬೆಳಿಗ್ಗೆ  ಸಾರ್ವಜನಿಕರು ಕರೆ ಮಾಡಿ ಕೊಡವೂರು ಗ್ರಾಮದ  ಪಡುಕೆರೆ  ಶನೀಶ್ವರ  ಮಂದಿರದ ಎದುರು ಪಾಪನಾಶಿನಿ ಹೊಳೆಯಲ್ಲಿ ಒಂದು ಅಪರಿಚಿತ  ಗಂಡಸಿನ ಮೃತದೇಹ ತೇಲುತ್ತಿರುವುದಾಗಿ  ಮಾಹಿತಿ ಬಂದ ಮೇರೆಗೆ  ಪಿರ್ಯಾದಿದಾರರು  ಹೋಗಿ ಮೃತದೇಹವನ್ನು ನೀರಿನಿಂದ ಮೇಲೆತ್ತಿ ನೋಡಲಾಗಿ ಸುಮಾರು 30-35 ವರ್ಷದ ಗಂಡಸಿನ ಮೃತದೇಹವಾಗಿರುತ್ತದೆ.  .ಮೃತ ಅಪರಿಚಿತ ಗಂಡಸು  ಮಲ್ಪೆ ಮೀನಾಕ್ಷಿ  ಹೋಟೆಲ್  ಬಳಿ  ಹಾಗೂ ರಾಯಲ್  ಬಾರ್ ಬಳಿ ಸುತ್ತಾಡಿಕೊಂಡಿದ್ದು ,ಮಾನಸಿಕ ಅಸ್ವಸ್ಥನಾಗಿದ್ದು , ಈತನು ದಿನಾಂಕ 28/09/2022  ರಂದು ಆಕಸ್ಮಿಕ ವಾಗಿ ಕಾಲುಜಾರಿ ಪಾಪನಾಶಿನಿ ಹೊಳೆಯ ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 57/2022 ಕಲಂ: 174   ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ನಿತ್ಯಾನಂದ ಒಳಕಾಡು(65), ತಂದೆ: ದಿ|| ರಾಮ, ವಾಸ: ’ನಿಮ್ಮ ಮನೆ’,  ಮನೆ  ನಂಬ್ರ  4-419(ಎ) ಶಾಂತಿ ನಗರ  ಮುಖ್ಯರಸ್ತೆ,  ಮಣಿಪಾಲ, ೮೦ನೇ ಬಡಗುಬೆಟ್ಟು  ಗ್ರಾಮ,  ಉಡುಪಿ ಇವರಿಗೆ ದಿನಾಂಕ 03/09/2022ರಂದು ಸಂಜೆ 4:30 ಗಂಟೆಗೆ ಸಾರ್ವಜನಿಕರು ಕರೆ ಮಾಡಿ  ಉಡುಪಿ ತಾಲ್ಲೂಕು  ಮೂಡನಿಡಂಬೂರು  ಗ್ರಾಮದ ಶಾಂಭವಿ (ಸಂಭ್ರಮ) ಹೋಟೆಲ್‌ ಪಕ್ಕದ ಖಾಲಿ ಷೆಡ್‌ನ ಜಗುಲಿಯ ಮೇಲೆ  ಓರ್ವ  ಯುವಕನು  ಪ್ರಜ್ಞಾಹೀನ ಸ್ಥಿತಿಯಲ್ಲಿ  ಮಲಗಿರುವುದಾಗಿ  ತಿಳಿಸಿದಂತೆ ಪಿರ್ಯಾದಿದಾರರು  ಸ್ಥಳಕ್ಕೆ  ತೆರಳಿ ಅಪರಿಚಿತ  ಯುವಕನನ್ನು  ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ  ಕರೆದುಕೊಂಡು  ಹೋದಲ್ಲಿ  ಸಂಜೆ  05:00  ಗಂಟೆ ಸುಮಾರಿಗೆ  ಪರೀಕ್ಷಿಸಿದ  ವೈದ್ಯರು ಯುವಕನು  ಅದಾಗಲೇ  ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತನು ಅಪರಿಚಿತನಾಗಿದ್ದು, ಹೊರ ಜಿಲ್ಲೆಯ ವಲಸೆ ಕಾರ್ಮಿಕನಂತೆ ಕಂಡು ಬರುತ್ತಿದ್ದು, ಆತನ  ವಾರಸುದಾರರ  ಪತ್ತೆಯ  ಬಗ್ಗೆ  ಪ್ರಮುಖ ದಿನ  ಪತ್ರಿಕೆಗಳಲ್ಲಿ  ಹಾಗೂ ಸಾಮಾಜಿಕ  ಜಾಲತಾಣಗಳಾದ  ಫೇಸ್‌ಬುಕ್  ಮತ್ತು  ವಾಟ್ಸಾಫ್‌ಗಳಲ್ಲಿ  ಪ್ರಕಟಣೆ ನೀಡಿದ್ದಾಗ್ಯೂ  ಇದುವರೆಗೂ ಪತ್ತೆಯಾಗದೇ ಇರುವುದಾಗಿದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 40/2022 ಕಲಂ: 174   ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಸಾಗರ (25), ತಂದೆ: ನಾಗರಾಜ , ವಾಸ: ಆದಿಶಕ್ತಿ ದೇವಸ್ಥಾನದ ಹತ್ತಿರ, ಒಂಬತ್ತು ದಂಡಿಗೆ, ಪಡುಕೇರಿ, ಕುಂದಾಪುರ ಕಸಬ ಗ್ರಾಮ, ಕುಂದಾಪುರ ತಾಲೂಕು ಇವರ ತಾಯಿ ಸುಮನ (58) ರವರಿಗೆ ಸಣ್ಣ ಪ್ರಮಾಣದ ಪಾರ್ಶ್ವವಾಯು ಖಾಯಿಲೆ ಇದ್ದು ಇದೇ ವಿಚಾರದಲ್ಲಿ ಮನನೊಂದು ದಿನಾಂಕ 15/10/2022 ರಂದು ಸಂಜೆ 04:30 ಗಂಟೆಯಿಂದ 05:15 ಗಂಟೆಯ ಮದ್ಯಾವಧಿಯಲ್ಲಿ ಕುಂದಾಪುರ ಕಸಬ ಗ್ರಾಮದ ಪಡುಕೇರಿ ಒಂಬತ್ತು ದಂಡಿಗೆ, ಆದಿಶಕ್ತಿ ದೇವಸ್ಥಾನದ ಬಳಿ ಇರುವ ಪಿರ್ಯಾದಿದಾರರ ಮನೆಯ ಹಿಂಬದಿ ಇರುವ ಬಾವಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದವರನ್ನು ಅಕ್ಕ ಪಕ್ಕದ ಮನೆಯವರ ಸಹಾಯದಿಂದ ಮೇಲಕ್ಕೆತ್ತಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು  ಉಪಚರಿಸಿ ಚಿಕಿತ್ಸೆ ಬಗ್ಗೆ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 37/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಉಡುಪಿ: ದಿನಾಂಕ 15/10/2022 ರಂದು ಮಂಜುನಾಥ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಶೇಷಾದ್ರಿ ನಗರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು MDMA ಪೌಡರ್ ಮಾರಾಟ ಮಾಡಲು ಹೊಂದಿದ್ದ 1. ರಾಘವೇಂದ್ರ ದೇವಾಡಿಗ (41), ತಂದೆ: ಕಡಿಯಾಳಿ ವೆಂಕಟಪ್ಪ ದೇವಾಡಿಗ, ವಾಸ: ನಂಬ್ರ 1-51, ಮೇಲ್ಮನೆ, ದೇವಸ್ಥಾನ ಬೆಟ್ಟು, ಬೆಲ್ಲಾರ್ ಪಡಿ, ಹಿರಿಯಡ್ಕ ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು  ದಸ್ತಗಿರಿಗೊಳಿಸಿ, ಆರೋಪಿಯಿಂದ 4.61 ಗ್ರಾಂ ತೂಕದ MDMA ಪೌಡರ್, KA- 15-EC- 8656 ನಂಬ್ರದ ಸ್ಕೂಟರ್, 1 ಮೊಬೈಲ್ ಪೋನ್,  ವೇಯಿಂಗ್ ಮೆಷಿನ್-1, ನೀಲಿ ಬಣ್ಣದ ಬ್ಯಾಗ್-1, MDMA ಪೌಡರ್ ಪ್ಯಾಕ್ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್ ಕವರ್-21, ನಗದು ರೂಪಾಯಿ 2300/- ವಶಪಡಿಸಿಕೊಂಡಿರುವುದಾಗಿರುತ್ತದೆ. 2 ನೇ ಆರೋಪಿ ಇಮ್ರಾನ್  1 ನೇ ಆರೋಪಿಗೆ ಮಾರಾಟ ಮಾಡಲು  MDMA ಪೌಡರ್  ನೀಡಿದ ಬಗ್ಗೆ ಆರೋಪಿಯು ನುಡಿದಿರುತ್ತಾನೆ. ಸ್ವಾಧೀನಪಡಿಸಿಕೊಂಡ MDMA ಪೌಡರ್ ಮೌಲ್ಯ ರೂಪಾಯಿ  20,745/- ಆಗಿರುತ್ತದೆ. ಸ್ಕೂಟರ್‌ನ  ಲ್ಯ ರೂಪಾಯಿ 30,000/- ಆಗಿರುತ್ತದೆ. ಸ್ವಾಧೀನಪಡಿಸಿಕೊಂಡಿರುವ  ಮೊಬೈಲ್ ಫೋನ್ ಮೌಲ್ಯ ರೂಪಾಯಿ 5,000/-, ವೇಯಿಂಗ್ ಮೆಷಿನ್ ನ ಮೌಲ್ಯ ರೂಪಾಯಿ 1,000/-, ನೀಲಿ ಬಣ್ಣದ ಬ್ಯಾಗ್‌ ಮೌಲ್ಯ ರೂಪಾಯಿ 500/- ಆಗಿರುತ್ತದೆ. ಹಾಗೂ ನಗದು ರೂಪಾಯಿ 2,300/- ಆಗಿದ್ದು  ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಸ್ವತ್ತುಗಳ ಒಟ್ಟು ಮೌಲ್ಯನ ರೂಪಾಯಿ 59,545/ - ಆಗಿರುತ್ತದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2022 ಕಲಂ: 22(ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಚರಣರಾಜ್ (27), ತಂದೆ: ಎಲ್ ಗೋಪಾಲ, ವಾಸ: ಬಿ.ಹೆಚ್.ಎಮ್ ರಸ್ತೆ,ನಂದಿಬೆಟ್ಟು, ಕುಂದಾಪುರ ಕಸಬ ಗ್ರಾಮ, ಕುಂದಾಪುರ ಇವರು ದಿನಾಂಕ 14/10/2022 ರಂದು ರಾತ್ರಿ 11:00 ಗಂಟೆಗೆ ಕುಟುಂಬದ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿ ಸ್ನೇಹಿತ ಶರತ್ ಎಂಬುವವರೊಂದಿಗೆ  ಬೈಕನಲ್ಲಿ ಬರುತ್ತಿರುವಾಗ   ಕೋಟೇಶ್ವರ ಅಂಡರ್‌ ಪಾಸ್ ರಸ್ತೆಯಲ್ಲಿ KA-20-Z-6412 ನೇಯ ಬೊಲೆರೋ ವಾಹನದಲ್ಲಿ ಪಿರ್ಯಾದಿದಾರರ ಪರಿಚಯಸ್ಥರಾದ ಸಂಪತ್ ಮತ್ತು ಮಿಥುನ್ ಹಾಗೂ ಇತರೇ 6-7 ಜನರು ವೇಗವಾಗಿ ರಸ್ತೆಯ ವಿರುದ್ದ ದಿಕ್ಕಿನಿಂದ ಬಂದು, ಪಿರ್ಯಾದಿದಾರರ ಬೈಕ್ ಗೆ ಅಡ್ಡ ಬಂದಿದ್ದು,  ಇದನ್ನು ಪ್ರಶ್ನಿಸಿದ ಪಿರ್ಯಾದಿದಾರರು ಮತ್ತು ಅವರ ಸ್ನೇಹಿತ ಶರತ್ ರವರಿಗೆ  ಆಪಾದಿತರು ಗಾಡಿಯಿಂದ ಇಳಿದು ಅವಾಚ್ಯ ಶಬ್ದಗಳಿಂದ ನಿಂದಿಸಿ  ಹಲ್ಲೆ ನಡೆಸಿ ಕೊಲೆ ಮಾಡುತ್ತೇನೆಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಆಪಾದಿತರ ಕೃತ್ಯದಿಂದ ಪಿರ್ಯಾದಿದಾರರ ಮುಖ ಮತ್ತು ದೇಹಕ್ಕೆ ರಕ್ತಗಾಯವಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 114/2022 ಕಲಂ: 143, 147, 341, 504, 323, 506  ಜೊತೆಗೆ 149 ಐಪಿಸಿ & ಕಲಂ: 3 (1) (r) (s), 3(2) (v-a) SC/ST (POA) Act 1989 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-10-2022 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080