ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹೆಬ್ರಿ: ದಿನಾಂಕ 15/10/2021 ರಂದು ಆದಿತ್ಯ ಎಂಬುವವರು ತನ್ನ KA-19-EH-1275 ನೇ  ಮೋಟಾರ್ ಸೈಕಲ್ ನಲ್ಲಿ ಅದರ್ಶ ಎಂಬುವವರನ್ನು ಸಹಸವಾರನಾಗಿ ಕುಳ್ಳೀರಿಸಿಕೊಂಡು ಪರ್ಕಳದಿಂದ ಹೊರಟು ಹೆಬ್ರಿ ಗ್ರಾಮದ ಹೆಬ್ರಿ ಮೇಲ್ಪೇಟೆಯಲ್ಲಿರುವ  ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಆಗುಂಬೆ ಕಡೆಗೆ ಹೋಗಲು ಪೆಟ್ರೋಲ್ ಬಂಕ್ ನಿಂದ ಹೊರಟು ಬೆಳಿಗ್ಗೆ 09:30 ಗಂಟೆಗೆ ರಸ್ತೆಯ ಬದಿಗೆ ಬಂದಾಗ ಅವರ ಎದುರುಗಡೆಯಿಂದ ಅಂದರೆ ಆಗುಂಬೆ ಕಡೆಯಿಂದ KA-31-M-5535 ನೇ ಮಾರುತಿ ಓಮ್ನಿ ಕಾರನ್ನು ಅದರ ಚಾಲಕ ರೋಶನ್ ಎಂ ಖಾನ್ ರವರು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಬಂಕ್ ನಲ್ಲಿ ಪೆಟ್ರೋಲ್ ಹಾಕುವ ಸಲುವಾಗಿ ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ನಿರ್ಲಕ್ಷತನದಿಂದ ಓಮ್ನಿ ಕಾರನ್ನು ಬಲಕ್ಕೆ  ತಿರುಗಿಸಿ ಆದಿತ್ಯ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಅವರಿಬ್ಬರು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದು ಸವಾರ ಆದಿತ್ಯ ರವರಿಗೆ ಬಲ ಭುಜದ ಬಳಿ ಮತ್ತು ಬಲ ಕುತ್ತಿಗೆಯ ಬಳಿ ಗುದ್ದಿದ ನೋವಾಗಿದ್ದು. ಬಲಕೈಯ ಹೆಬ್ಬೆರಳಿಗೆ ಗಾಯವಾಗಿರುತ್ತದೆ. ಸಹ ಸವಾರ ಆದರ್ಶ ರವರಿಗೆ ಬಲಕೈಯ ಮುಂಗೈ ಬಳಿ ಮೂಳೆ ಮುರಿತವಾಗಿದ್ದು.  ಬಲ ಮತ್ತು ಎಡಕೈಯ ಹೆಬ್ಬೆರಳಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ:,279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ:  ಪಿರ್ಯಾದಿದಾರರಾದ ಚಂದ್ರಯ್ಯ ಆಚಾರ್ (57), ತಂದೆ: ದಿ: ಶೀನ ಆಚಾರ್, ವಾಸ: ಗಿರಿ ಚಂದನ ಮನೆ, ದೊಳಬೆ ಆಲೂರು ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 08/10/2021 ರಂದು ತನ್ನ KA-20-EV-1789 ನೇ ಟಿ.ವಿ.ಎಸ್. ಜ್ಯುಪಿಟರ್ ಸ್ಕೂಟರ್ ನಲ್ಲಿ ಶಂಕರ ಆಚಾರ್ಯರವರನ್ನುಸಹ ಸವಾರನಾಗಿ ಕುಳ್ಳಿರಿಸಿಕೊಂಡು ಚಿತ್ತೂರಿನಿಂದ ಮುಳ್ಳಿಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಂಜೆ 7:30 ಗಂಟೆಗೆ ಮುಳ್ಳಿಕಟ್ಟೆ ಕಡೆಯಿಂದ ಚಿತ್ತೂರು ಕಡೆಗೆ ದೇವಪ್ಪ ನಾಯ್ಕ್ ಎಂಬುವವರು KA-20-MA-3965 ನೇ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದು, ಪಿರ್ಯಾದಿದಾರರು ಹಾಗೂ ಸಹ ಸವಾರರು ರಸ್ತೆಯ ಮೇಲೆ ಬಿದ್ದಿದ್ದು ಪಿರ್ಯಾದಿದಾರರ ಎಡಕಾಲಿಗೆ ಗುದ್ದಿದ ಒಳನೋವು ಹಾಗೂ ಬಲ ಮುಂಗೈಗೆ ತರಚಿದ ಗಾಯವಾಗಿದ್ದು ಸಹ ಸವಾರ ಶಂಕರ ಆಚಾರ್ಯರವರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ದಿನಾಂಕ 14/10/2021 ರಂದು ಪಿರ್ಯಾದಿದಾರರಿಗೆ ವಿಪರೀತ ಕಾಲು ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 97/2021  ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 14/10/2021  ರಂದು ಶಿವ  ಮತ್ತು ಸೀತ ಎಂಬುವವರು ಪುಲ್ಕೇರಿ ಬೈಪಾಸ್  ಕಡೆಯಿಂದ  ಕರಿಯಕಲ್ಲು ಕಡೆಗೆ  ತಮ್ಮ  ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರ್ಕಳ ಕಸಬಾದ  ಕರಿಯಕಲ್ಲು ಶನೀಶ್ವರ ಕಟ್ಟೆಯ ಹತ್ತಿರ 19:00 ಗಂಟೆಗೆ ತಲುಪುವಾಗ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ  ಬಜಾಜ್ ವಿಕ್ರಾಂತ್ ಮೋಟಾರ್  ಸೈಕಲ್ KA-20-EM-7066  ನ್ನು ಅದರ ಸವಾರ ನಜರುಲ್ಲಾ ಬೇಗ್ ಅತೀವೇಗ ಮತ್ತು  ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹಿಂದಿನಿಂದ ಡಿಕ್ಕಿ ಹೊಡೆದ ರಿಣಾಮ ಶಿವ ರವರಿಗೆ ಹಣೆಗೆ ರಕ್ತಗಾಯವಾಗಿದ್ದು , ಸೀತರವರಿಗೆ ಎರಡೂ  ಕಾಲುಗಳಿಗೆ ಮೂಳೆ ಮುರಿತದ  ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2021 ಕಲಂ: 279. 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಸಂತೋಷ (26), ತಂದೆ ಶ್ರೀನಿವಾಸ ನಾಯ್ಕ್, ಮುದ್ದಣನಗರ, ಸಾಣೂರು ಗ್ರಾಮ ಇವರು ದಿನಾಂಕ 15/10/2021 ರಂದು ತನ್ನ ಸಂಬಂಧಿಕರ ಮಾರುತಿ ಓಮಿನಿ KA-51-3901 ನ್ನು ಚಲಾಯಿಸಿಕೊಂಡು ತನ್ನ ಮನೆಯಿಂದ ಸಾಣೂರು ಮಹಾಮಾಯಿ ದೇವಸ್ಥಾನದ ಕಡೆಗೆ ಹೋಗುತ್ತಿರುವ ಮಧ್ಯಾಹ್ನ 12:45 ಗಂಟೆಗೆ ಸಾಣೂರು ಸ್ಮಶಾನದ ಹತ್ತಿರ ತಲುಪುವಾಗ ಒಳಗಿನ ರಸ್ತೆಯಿಂದ ಮುಖ್ಯ ರಸ್ತೆ ಕಡೆಗೆ ಮಾರುತಿ ಸುಜುಕಿ ಬ್ರೆಝ ಕಾರು ನಂಬ್ರ KA-19-MH-3222 ನೇದನ್ನು ಅದರ ಚಾಲಕನು ನಿರ್ಲಕ್ಷ್ಯತನದಿಂದ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮಾರುತಿ ಓಮಿನಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಯಾವುದೇ ಗಾಯ ನೋವು ಆಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ : ದಿನಾಂಕ 15/10/2021 ರಂದು 14:30 ಗಂಟೆಗೆ ಪಿರ್ಯಾದಿದಾರರಾದ ಸುದರ್ಶನ ಎಸ್ ಎಂ (28), ತಂದೆ: ಮಂಚಯ್ಯ, ವಾಸ: ಮುತ್ತೆಗೆರೆ ರಸ್ತೆ  ಆಶ್ರಯ ಕಾನ್ವೆಂಟ್ಸ್  ಎದುರು  ದುದ್ದು ಹೋಬಳಿ  ಮಂಡ್ಯ ಇವರು ಸ್ನೇಹಿತರಾದ ರಮೇಶ, ಚೆಂಚೆ ಗೌಡ, ನಿರಂಜನ್ , ಕಾರ್ತಿಕ್ ,  ಅಕ್ರಂ,  ಬಸವೇಶ, ಸುದರ್ಶನ,  ವಿಶ್ವಾಸ್  ಎಲ್ಲರೂ ಸೇರಿ ಬೈಕ್ ನಲ್ಲಿ  ಪ್ರವಾಸದ ನಿಮಿತ್ತ ಮಲ್ಪೆ ಬೀಚ್ ಗೆ ಬಂದಿದ್ದು , ಎಲ್ಲರೂ ಸೇರಿ  ಸಮುದ್ರ ನೀರಿನಲ್ಲಿ ಆಟವಾಡುತ್ತಿರುವಾಗ 2:30 ಗಂಟೆಗೆ  ಅವರುಗಳಲ್ಲಿ ವಿಶ್ವಾಸ್ (23) ರವರು ಕಾಣಿಸದೆ ಇದ್ದು ಹುಡುಕಾಡಿದ್ದಲ್ಲಿ ಸಿಕ್ಕಿರುವುದಿಲ್ಲ, ನಂತರ ಮಲ್ಪೆ ಬೀಚ್ ನ ಲೈಪ್ ಗಾರ್ಡ್ ನವರು  ಬೋಟಿನಲ್ಲಿ ತೆರಳಿ ಹುಡುಕಾಡಿ ವಿಶ್ವಾಸ ಮೃತದೇಹವನ್ನು ಸಮುದ್ರ ತೀರಕ್ಕೆ ತಂದಿರುತ್ತಾರೆ, ವಿಶ್ವಾಸ್ ಸಮುದ್ರ ನೀರಿನಲ್ಲಿ ಆಟವಾಡುತ್ತಿರುವಾಗ ಸಮುದ್ರ ನೀರಿನ ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ಪಿರ್ಯಾದಿದಾರರಾದ ಸಂತೋಷ್ ಕುಲಾಲ್ (36), ತಂದೆ: ಸಂಜೀವ ಕುಲಾಲ್, ವಾಸ: ಕಕ್ಕೆಕಾಡು, ದರ್ಕಾಸು ಮನೆ ಕಡ್ತಲ ಗ್ರಾಮ ಕಾರ್ಕಳ ತಾಲೂಕು ಇವರ ತಂದೆ ಸಂಜೀವ ಕುಲಾಲ್ (76) ಎಂಬುವವರು ಪಿರ್ಯಾದಿದಾರರೊಂದಿಗೆ ವಾಸಮಾಡಿಕೊಂಡಿದ್ದು,  ಅಸ್ತಮಾ, ಬಿ.ಪಿ ಹಾಗೂ ಹೃದಯ ಸಂಬಂದಿ ಖಾಯಿಲೆಗಳಿಂದ ಬಳಲುತ್ತಿದ್ದು, ಈ ಬಗ್ಗೆ ಮನೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು ಅಲ್ಲದೇ ಸಾರಾಯಿ ಕುಡಿಯುವ ಚಟವನ್ನು ಕೂಡಾ ಹೊಂದಿರುತ್ತಾರೆ. ಈ ಎಲ್ಲಾ ಖಾಯಿಗಳಿಂದ ಬಳಲುತ್ತಿದ್ದವರು ಎಷ್ಟೇ ಔಷದಿ ಪಡೆದುಕೊಂಡರೂ ಕೂಡಾ ಖಾಯಿಲೆ ವಾಸಿಯಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂದು ಮಾನಸೀಕ ಖಿನ್ನತೆಗೆ ಒಳಗಾಗಿ ದಿನಾಂಕ  15/10/2021 ರಂದು ಬೆಳಿಗ್ಗೆ 08:00 ಗಂಟೆಯಿಂದ ಸಂಜೆ 5:30 ಗಂಟೆಯ ಮದ್ಯಾವಧಿಯಲ್ಲಿ. ಮನೆಯಲ್ಲಿ ಯಾರೂ ಇಲ್ಲದ  ಸಮಯದಲ್ಲಿ  ಮನೆಯ ಮುಂದೆ ಹಾಕಿರುವ ಚಪ್ಪರದ ಜಂತಿಗೆ ಚೂಡಿದಾರದ ಶಾಲನ್ನು ಕಟ್ಟಿ ಉರುಳು ಹಾಕಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 18/2021 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕುಂದಾಪುರ: ದಿನಾಂಕ 12/10/2021 ರಂದು ಪಿರ್ಯಾದಿದಾರರಾದ ಶ್ರೀಮತಿ ಪ್ರಭಾವತಿ, ಗಂಡ: ರವಿಂದ್ರ ಶೆಟ್ಟಿ, ವಾಸ: ಚೀನಿಬೆಟ್ಟು ಮೇಲ್ಮನೆ ಹಟ್ಟಿಯಂಗಡಿ ಗ್ರಾಮ ಕುಂದಾಪುರ ತಾಲೂಕು ಇವರು ಮನೆಯಲ್ಲಿರುವಾಗ ಬೆಳಿಗ್ಗೆ 07:00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ತಾಯಿಯ ಅಣ್ಣನ ಮಗ ಶ್ರೀನಿವಾಸ ಶೆಟ್ಟಿ ಎಂಬುವವರು ಮನೆಯನ್ನು ದ್ವಂಸಗೊಳಿಸಲು ಬಂದಿದ್ದು ಆಗ ಪಿರ್ಯಾದಿದಾರರು ತಡೆದಾಗ ಆಪಾದಿತ  ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ನಂತರ ಪಿರ್ಯಾದಿದಾರರ ಮನೆಗೆ ಕಬ್ಬಿಣದ ಸಲಾಖೆಯಿಂದ ಗೋಡೆಗೆ ಚುಚ್ಚಿ ಚುಚ್ಚಿ ತಿವಿದು ಸಂಪೂರ್ಣ ನೆಲಸಮ ಮಾಡಿ ಹಾನಿಗೊಳಿಸಿರುತ್ತಾನೆ. ಈ ಸಮಯದಲ್ಲಿ ಶ್ರೀನಿವಾಸ ಶೆಟ್ಟಿಯವರಿಗೆ ಅವರ ತಂದೆ ಸೀತಾರಾಮ ಶೆಟ್ಟಿ ಸಹಕರಿಸಿರುತ್ತಾರೆ ಮತ್ತು ಈ ಬಗ್ಗೆ ಪಿರ್ಯಾದಿದಾರರ ತಾಯಿ ಶ್ರೀನಿವಾಸನಲ್ಲಿ ಕೇಳಲು ಹೋದಾಗ ಹೊಡೆಯಲು ಬಂದಿರುತ್ತಾನೆ. ಹಾಗೂ ಅವಾಚ್ಯವಾಗಿ ಬೈದಿದ್ದು, ಈ ಕೃತ್ಯಕ್ಕೆ ಸೀತಾರಾಮ ಶೆಟ್ಟಿಯವರ ಕುಮ್ಮಕ್ಕೆ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  65/2021 ಕಲಂ: 354, 323,.504, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 16-10-2021 10:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080