ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 15/10/2021  ರಂದು ರಾತ್ರಿ 8:30 ಗಂಟೆಗೆ ಕುಂದಾಪುರ  ತಾಲೂಕಿನ ತಲ್ಲೂರು ಗ್ರಾಮದ ಕುಂತಿಯಮ್ಮ ದೇವಸ್ಥಾನದ ಬಳಿ ರಸ್ತೆಯಲ್ಲಿ ಆಪಾದಿತ ವಿಜಯ ಖಾರ್ವಿ KA-20-D-5285ನೇ ಅಟೋರಿಕ್ಷಾ ವನ್ನು ಗುಲ್ವಾಡಿ ಕಡೆಯಿಂದ ತಲ್ಲೂರು ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಅಟೋರಿಕ್ಷಾ ವನ್ನು ರಸ್ತೆಯ ತೀರ ಬಲಬದಿಗೆ ಚಲಾಯಿಸಿ, ತಲ್ಲೂರು ಕಡೆಯಿಂದ ಗುಲ್ವಾಡಿ ಕಡೆಗೆ ನಿತಿನ್‌ ‌ಪೂಜಾರಿ ಎಂಬುವವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA-20-EB-5888ನೇ  ಬೈಕಿಗೆ ಎದುರುಗಡೆಯಿಂದ ಡಿಕ್ಕಿ  ಹೊಡೆದ ಪರಿಣಾಮ, ನಿತಿನ್‌ ‌ಪೂಜಾರಿಯವರ ತಲೆಗೆ, ಬಲಎದೆಗೆ ಒಳಜಖಂ ಗಾಯ ಹಾಗೂ ಕೈ ಕಾಲುಗಳಿಗೆ ತರಚಿದ ರಕ್ತಗಾಯವಾಗಿ ಕುಂದಾಪುರ  ಆದರ್ಶ  ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ  ಬಗ್ಗೆ ಮಣಿಪಾಲ  ಕೆ.ಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆಪಾದಿತ  ವಿಜಯ ಖಾರ್ವಿ ರವರು ಸಹ ಕುಂದಾಪುರ ಆದರ್ಶ  ಆಸ್ಪತ್ರೆಯಲ್ಲಿ  ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 14/10/2021 ರಂದು 19:30  ಗಂಟೆಗೆ ಆರೋಪಿ KA-20-EJ-6787 ನೇ ನಂಬ್ರದ ಸ್ಕೂಟಿಯನ್ನು   ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಅಂಪಾರು ಮಹಿಷಮರ್ದಿನಿ ಹಾಲ್‌‌ಗೆ ಹೋಗುವ ದಾರಿಯಿಂದ ಸ್ವಲ್ಪ ಮುಂದುಗಡೆ ಕುಂದಾಪುರ-ಅಂಪಾರು ರಾಜ್ಯ ರಸ್ತೆಯಲ್ಲಿ ಅಂಪಾರು ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಕುಂದಾಪುರ ಕಡೆಯಿಂದ ಅಂಪಾರು ಕಡೆಗೆ ಕೃಷ್ಣ ಮೂರ್ತಿ ಇವರು ಚಲಾಯಿಸಿಕೊಂಡು ಬರುತ್ತಿದ್ದ KA-20-X-8627 ನಂಬ್ರದ   ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ KA-20-X-8627 ನಂಬ್ರದ ಮೋಟಾರ್  ಸೈಕಲ್‌ ಸವಾರ ಗಂಭೀರ ಗಾಯಗೊಂಡು ಉಡುಪಿ  ಆದರ್ಶ ಆಸ್ಪತ್ರೆಯಲ್ಲಿ ಅರೆಪ್ರಜ್ಜಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ: 279, 338 ಐಪಿಸಿ ಮತ್ತು 134 (ಬಿ) ಮೊ.ವಾ. ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ದಿನಾಂಕ 13/10/2021 ರಂದು ಪಿರ್ಯಾದಿದಾರರಾದ ಮಂಜುನಾಥ (42), ತಂದೆ: ಶಂಕರ, ವಾಸ, ಹನ್ಕಿ, ಹಳ್ಳಿಹೊಳೆ ಗ್ರಾಮ  ಬೈಂದೂರು ತಾಲೂಕು ಇವರ ತಾಯಿ ಶ್ರೀಮತಿ ಲಕ್ಷ್ಮಿ(64) ರವರು ಮನೆಯ ಪಕ್ಕೆ ತೋಟದಲ್ಲಿ ಹುಲ್ಲು ಕೊಯ್ಯುತ್ತಿರುವಾಗ 11:30 ಗಂಟೆಗೆ ಅವರ ಎಡಕೈಯ ಮಧ್ಯದ ಬೆರಳಿನ ತುದಿಗೆ ಯಾವುದೇ ವಿಷಪೂರಿತ ಹಾವು ಕಚ್ಚಿ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 14/10/2021 ರಂದು ವೈದ್ಯರ ಸಲಹೆಯಂತೆ ಲಕ್ಷ್ಮಿರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ.ಮಣಿಪಾಲ ಆಸ್ಪತ್ರೆಯ ಐ.ಸಿ.ಯು. ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು ದಿನಾಂಕ 15/10/2021 ರಂದು ಬೆಳಿಗ್ಗೆ 05:30 ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಲಕ್ಷ್ಮಿ ರವರು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 38/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರಕ್ಷಿತ್‌ ಶೆಟ್ಟಿ (31), ತಂದೆ: ಯಶವಂತ್‌ ಶೆಟ್ಟಿ, ವಾಸ: ಮನೆ ನಂಬ್ರ: 1-41 ವಾರಿಜ ಕಂಪೌಂಡ್‌, ಕುಂಜಿಗುಡ್ಡೆ, ಅಂಬಲ್ಪಾಡಿ ಗ್ರಾಮ, ಉಡುಪಿ ತಾಲೂಕು ಇವರ ಮನೆಯಲ್ಲಿ ದಿನಾಂಕ 15/10/2021 ರಂದು 16:00 ಗಂಟೆಯಿಂದ 23:15 ಗಂಟೆ ನಡುವೆ  ಯಾರೂ ಇಲ್ಲದ  ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಜೋರಾಗಿ ತಳ್ಳಿ ಒಳ ಪ್ರವೇಶಿಸಿ, ಬೆಡ್‌ರೂಮಿನಲ್ಲಿ ಕಪಾಟಿನಲ್ಲಿರುವ ಸ್ಟೀಲ್‌ ಡಬ್ಬದಲ್ಲಿದ್ದ 10 ಗ್ರಾಂ ತೂಕದ ಮಕ್ಕಳ ಚಿನ್ನದ ಸರಗಳು-2, 6 ಗ್ರಾಂ ತೂಕದ ಮಕ್ಕಳ ಚಿನ್ನದ ಉಂಗುರಗಳು-3,  12 ಗ್ರಾಂ ತೂಕದ ಮಕ್ಕಳ ಬಳೆಗಳು-2, 4 ಗ್ರಾಂ ತೂಕದ ಮಕ್ಕಳ ದೃಷ್ಟಿ ಬಳೆಗಳು-2, 10 ಗ್ರಾಂ ತೂಕದ ಮಕ್ಕಳ ಕಿವಿ ಓಲೆ- 5ಜೊತೆ, 3 ಗ್ರಾಂ ತೂಕದ ಕಿವಿಯ ಓಲೆ-  1 ಜೊತೆ ಒಟ್ಟು 45 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಮೌಲ್ಯ ರೂಪಾಯಿ 1,80,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 150/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಗುಣಲತಾ ಶೆಟ್ಟಿ (55), ಗಂಡ: ತಾರಾನಾಥ ಶೆಟ್ಟಿ, ವಾಸ: ಮನೆ ನಂಬ್ರ: 1-39, ಸೀತಾ ನಿಲಯ, ಅಂಬಲ್ಪಾಡಿ ಗ್ರಾಮ, ಉಡುಪಿ ತಾಲೂಕು ಇವರ ಮನೆಯಲ್ಲಿ ದಿನಾಂಕ 15/10/2021 ರಂದು 18:00 ಗಂಟೆಯಿಂದ 23:30 ಗಂಟೆ ನಡುವೆ ಯಾರೂ ಇಲ್ಲದ  ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಾಲ್‌ನ ಹಂಚುಗಳನ್ನು ತೆಗೆದು ಒಳಪ್ರವೇಶಿಸಿ, ಗೋದ್ರೇಜ್‌ನ ಬಾಗಿಲು ತೆಗೆದು ಅದರಲ್ಲಿದ್ದ ನಗದು ರೂಪಾಯಿ 5000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ . ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 151/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಅಶೋಕ್ ನಾಯಕ್ (37), ತಂದೆ: ವಿಠಲ ನಾಯಕ್, ವಾಸ:  ವಿಠಲ ನಿವಾಸ, ಪಳ್ಳಿ ಜಂಕ್ಷನ್, ಪಳ್ಳಿ ಗ್ರಾಮ ಕಾರ್ಕಳ ತಾಲೂಕು ಇವರು ತನ್ನ ಮನೆಯಲ್ಲಿ ಕಪ್ಪು ಬಣ್ಣದ ಗೋವನ್ನು ಸಾಕುತ್ತಿದ್ದು ಅದು ದೇಶಿ ತಳಿ ಆಗಿದ್ದು, ರೂಪಾಯಿ 25,000/- ಬೆಲೆ ಬಾಳುವುದಾಗಿರುತ್ತದೆ. ದಿನಾಂಕ 14/10/2021 ರಂದು ಬೆಳಿಗ್ಗೆ 09:00 ಗಂಟೆಗೆ ಎಂದಿನಂತೆ ದನವನ್ನು ಹಟ್ಟಿಯಿಂದ ಮೇಯಲು ಬಿಟ್ಟಿದ್ದು, ಅದೇ ದಿನ ರಾತ್ರಿಯೂ ದನವು ಎಂದಿನಂತೆ ಮನೆಗೆ ವಾಪಾಸು ಬಂದಿರುವುದಿಲ್ಲ. ಹಟ್ಟಿಯಿಂದ ಮೇಯಲು ಬಿಟ್ಟಿರುವ ಪಿರ್ಯಾದಿದಾರರ ದನವು ಪಳ್ಳಿ ಪೇಟೆ ಸುತ್ತ ಮುತ್ತ ಸುತ್ತಾಡಿಕೊಂಡು ಮೇಯುತ್ತಿದ್ದು ದನ ಎಂದಿನಂತೆ ರಾತ್ರಿ ಹಟ್ಟಿಗೆ ಬಾರದೇ ಇದ್ದುದರಿಂದ ಪಿರ್ಯಾದಿದಾರರು ಅವರ ಗೆಳೆಯರು ದಿನಾಂಕ 15/10/2021 ರಂದು ಪಳ್ಳಿ ಪೇಟೆಯಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದಲ್ಲಿ ಸಿಗಲಿಲ್ಲ. ಪಿರ್ಯಾದಿದಾರರ  ದನವನ್ನು ದಿನಾಂಕ 14/10/2021 ರಂದು ಬೆಳಿಗ್ಗೆ 09:00 ಗಂಟೆಯಿಂದ ದಿನಾಂಕ 16/10/2021 ರಂದು ಬೆಳಿಗ್ಗೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಸಾಧ್ಯತೆ ಇರುತ್ತದೆ. ದಿನಾಂಕ 15/10/2021 ರಂದು  02:00  ಗಂಟೆಯ ಸಮಯ ಒಂದು ರಿಟ್ಜ್  ಕಾರು ಪಳ್ಳಿ ಪೆಟ್ರೋಲ್ ಪಂಪ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸ್ವಲ್ಪ ಸಮಯ ನಿಂತಿದ್ದು ಬಳಿಕ ಕಾರು ಉಡುಪಿ ಕಡೆಗೆ ತೆರಳಿರುವ ದೃಶ್ಯಾವಳಿಗಳು  ಪೆಟ್ರೋಲ್ ಪಂಪ್‌ನ ಸಿಸಿ ಟಿವಿ ಕ್ಯಾಮೇರಾದಲ್ಲಿ  ಸೆರೆಯಾಗಿರುವುದನ್ನು ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರರ ಗೆಳೆಯ ರಾಜೇಶ್ ಆಚಾರ್ಯರವರು ನೋಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.        

ಇತ್ತೀಚಿನ ನವೀಕರಣ​ : 16-10-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080