ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಫಿರ್ಯಾದಿ ನಾಗೇಂದ್ರ ಇವರು ದಿನಾಂಕ 15-09-2022 ರಂದು ಸಂಜೆ ಸುಮಾರು 7:00 ಗಂಟೆಗೆ ಗೋಬಿ ಅಂಗಡಿಯಲ್ಲಿರುವಾಗ ಅವರ  ಪರಿಚಯದ ನಾಗ ಮೊಗವೀರರವರು ಮನೆಯಿಂದ ಯಡ್ತರೆ ಜಂಕ್ಷನ್ ಗೆ ಬಂದು, ರಾಹೆ 66ರ ಚತುಷ್ಷಥ ರಸ್ತೆಯ ಬೈಂದೂರು ಕುಂದಾಪುರ ರಸ್ತೆಯನ್ನು ದಾಟಿ, ಮೂಡೂರ ಪೂಜಾರಿಯವರ ಅಂಗಡಿ ಕಡೆಗೆ ಹೋಗಲು ರಾಹೆ 66ರ ಚತುಷ್ಪಥ ರಸ್ತೆಯಲ್ಲಿ ಯು-ಟರ್ನ್ ಬಳಿ ರಸ್ತೆ ದಾಟಲು ನಿಂತುಕೊಂಡಿರುವಾಗ ಕುಂದಾಫುರ ಕಡೆಯಿಂದ ಬೈಂದೂರು ಕಡೆಗೆ NL 01 AE 8535 ನೇ ಲಾರಿ ಚಾಲಕ ರಾಹುಲ್ ಶಿಂಧೆ ಎಂಬಾತನು ಆತನ ಬಾಬ್ತು ಲಾರಿಯನ್ನು ರಾಹೆ 66ರ ಚತುಷ್ಪಥ ರಸ್ತೆಯಲ್ಲಿ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಯು-ಟರ್ನ್ ಬಳಿ ಲಾರಿಯನ್ನು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಯು-ರ್ಟನ್ ಬಳಿ ನಿಂತಿದ್ದ ನಾಗ ಮೊಗವೀರರವರಿಗೆ ಢಿಕ್ಕಿ ಹೊಡೆದನು. ಪರಿಣಾಮ ನಾಗ ಮೊಗವೀರರವರು ರಸ್ತೆಯ ಮೇಲೆ ಎಸೆಯಲ್ಪಟ್ಟು, ಅವರ  ತಲೆಯು ರಸ್ತೆಗೆ ಬಡಿದಿರುತ್ತದೆ. ಅಪಘಾತ ನೋಡಿದ ಫಿರ್ಯದಿದಾರರು  ಕೂಡಲೇ ಅಲ್ಲಿಗೆ ಓಡಿ ಹೋಗಿ ಪ್ರಸಾದ್, ಮಂಜುನಾಥ ಹಾಗೂ ಇತರರೊಂದಿಗೆ ಸೇರಿ ರಸ್ತೆಯ ಮೇಲೆ ಬಿದ್ದಿದ್ದ ನಾಗ ಮೊಗವೀರರವರನ್ನು ಎತ್ತಿ ಉಪಚರಿಸಿ ನೋಡಲಾಗಿ ನಾಗ ಮೊಗವೀರವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ರಕ್ತ ಬರುತ್ತಿತ್ತು, ಗಾಯಗೊಂಡ ನಾಗಮೊಗವೀರರವರನ್ನು ಚಿಕಿತ್ಸೆ ಬಗ್ಗೆ ಕಾರಿನಲ್ಲಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು. ನಾಗಮೊಗವೀರರವರನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಮಂಜುನಾಥರವರು ಫಿರ್ಯಾದುದಾರರಿಗೆ ಕರೆ ಮಾಡಿ ನಾಗ ಮೊಗವೀರರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರ ಸ್ಥಿತಿ ಗಂಭೀರವಾಗಿದೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ನಾಗಮೊಗವೀರರವರು ಚಿಕಿತ್ಸೆಯಲ್ಲಿರುತ್ತಾ ರಾತ್ರಿ 11:35 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 187/2022 ಕಲಂ. 279 , 304 (A) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ: ದಿನಾಂಕ: 14/09/2022  ರಂದು ಪಿರ್ಯಾದಿ ಶಶಿಕಾಂತ್ ರಾವ್ ಇವರ ಅಕ್ಕ ರೂಪ ರವರು ಕಡಂದಲೆಯಿಂದ ಮುಂಡ್ಕೂರಿಗೆ ನಿಟ್ಟೆಯವರ ಡೆಂಟಲ್ ಕ್ಲಿನಿಕ್ ಗೆ ಚಿಕಿತ್ಸೆಯ ಬಗ್ಗೆ  KA 19 C 4747 ನೇ ಶ್ರಾವಣ್ ಬಸ್ಸಿನಲ್ಲಿ ಬರುತ್ತಿರುವಾಗ ಸಮಯ ಸುಮಾರು ಅಪರಾಹ್ನ 02:55 ಗಂಟೆಗೆ ಮುಂಡ್ಕೂರು ಗ್ರಾಮದ ನಿಟ್ಟೆಯವರ ಡೆಂಟಲ್ ಕ್ಲಿನಿಕ್ ಬಳಿ ಬಸ್ಸಿನಿಂದ ಇಳಿಯುತ್ತಿರುವಾಗ ಬಸ್ಸಿನ ಚಾಲಕನು ಬಸ್ಸನ್ನು ಸರಿಯಾಗಿ ನಿಲ್ಲಿಸದೆ ಒಮ್ಮೆಲೆ ಮುಂದಕ್ಕೆ ಚಲಾಯಿಸಿದ್ದರಿಂದ ಹಾಗೂ ಬಸ್ಸಿನ ನಿರ್ವಾಹಕ ಯಾವುದೇ ಸೂಚನೆಯನ್ನು ನೀಡದೆ ಇದ್ದುದರಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ರೂಪರವರು ಬಸ್ಸಿನಿಂದ ಕೆಳಗೆ ಬಿದ್ದ ಪರಿಣಾಮ ರೂಪರವರ ತಲೆಯ ಹಿಂಬದಿಗೆ ಹಾಗೂ ಸೊಂಟಕ್ಕೆ ಪೆಟ್ಟಾಗಿರುತ್ತದೆ, ಈ ಅಪಘಾತದಿಂದ ಗಾಯಗೊಂಡ ರೂಪರವರು ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ, ರೂಪರವರು ಬಸ್ಸಿನಿಂದ ಕೆಳಗೆ ಇಳಿಯುತ್ತಿರುವಾಗ ಬಸ್ಸಿನ ಚಾಲಕನು ಬಸ್ಸನ್ನು ಸರಿಯಾಗಿ ನಿಲ್ಲಿಸದೆ ಒಮ್ಮೆಲೆ ಮುಂದಕ್ಕೆ ಚಲಾಯಿಸಿದ್ದರಿಂದ ಹಾಗೂ ಅದರ ಚಾಲಕನು ಯಾವುದೇ ಸೂಚನೆಯನ್ನು ನೀಡದಿರುವುದೆ ಈ ಅಪಘಾತಕ್ಕೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 120/2022 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ

  • ಕುಂದಾಪುರ : ದಿನಾಂಕ: 15-09-2022 ರಂದು ಪವನ್‌ ನಾಯಕ್‌, ಪಿ.ಎಸ್‌.ಐ,  ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ  ರವರು ಸಿಬ್ಬಂದಿಯವರ ಜೊತೆ ರೌಂಡ್ಸ್  ಕರ್ತವ್ಯದಲ್ಲಿರುವ ಸಮಯ   ಕುಂದಾಪುರ ತಾಲೂಕು ಕಂದಾವರ ಗ್ರಾಮದ ಮೂಡ್ಲಕಟ್ಟೆ ಕಾಲೇಜು ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ನಿಷೇದಿತ ಮಾಧಕ ದ್ರವ್ಯ ಗಾಂಜಾ  ಸೇವಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ 19:15 ಗಂಟೆಗೆ ಸ್ಥಳಕ್ಕೆ ಹೋಗಿ ಆರೋಪಿ ಭೀಮ್‌ ಸಿಂಗ್‌ ಈತನನ್ನು ವಿಚಾರಿಸಿ ಬಳಿಕ ಆರೋಪಿಯನ್ನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪಡಿಸುವ ಸಲುವಾಗಿ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿವರ ಮುಂದೆ ಹಾಜರುಪಡಿಸಿದಲ್ಲಿ ವೈದ್ಯಾಧಿಕಾರಿ ವರು  ಆರೋಪಿತನನ್ನು   ಪರೀಕ್ಷಿಸಿ   ನಿಷೇದಿತ ಮಾದಕ ದ್ರವ್ಯ ಗಾಂಜಾ ಸೇವನೆ   ಮಾಡಿದ್ದಾಗಿ ವರದಿಯನ್ನು ನೀಡಿರುತ್ತಾರೆ. ಈ ಬಗ್ಗೆ ಕುಂದಾಪುರ  ಗ್ರಾಮಾಂತರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 47/2022 ಕಲಂ: 27(b)   NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ : ದಿನಾಂಕ: 15-09-2022 ರಂದು ಪವನ್‌ ನಾಯಕ್‌, ಪಿ.ಎಸ್‌.ಐ,  ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ  ರವರು ಸಿಬ್ಬಂದಿಯವರ ಜೊತೆ ರೌಂಡ್ಸ್  ಕರ್ತವ್ಯದಲ್ಲಿರುವ ಸಮಯ   ಕುಂದಾಪುರ ತಾಲೂಕು ಕಂದಾವರ ಗ್ರಾಮದ ಮೂಡ್ಲಕಟ್ಟೆ ಕಾಲೇಜು ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ನಿಷೇದಿತ ಮಾಧಕ ದ್ರವ್ಯ ಗಾಂಜಾ  ಸೇವಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ 19:05 ಗಂಟೆಗೆ ಸ್ಥಳಕ್ಕೆ ಹೋಗಿ ಆರೋಪಿ ಖುಷಿ ರಾಮ್‌ ಈತನನ್ನು  ವಿಚಾರಿಸಿ ಬಳಿಕ ಆರೋಪಿಯನ್ನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪಡಿಸುವ ಸಲುವಾಗಿ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿವರ ಮುಂದೆ ಹಾಜರುಪಡಿಸಿದಲ್ಲಿ ವೈದ್ಯಾಧಿಕಾರಿ ಯವರು  ಆರೋಪಿತನನ್ನು   ಪರೀಕ್ಷಿಸಿ   ನಿಷೇದಿತ ಮಾದಕ ದ್ರವ್ಯ ಗಾಂಜಾ ಸೇವನೆ   ಮಾಡಿದ್ದಾಗಿ ವರದಿಯನ್ನು ನೀಡಿರುತ್ತಾರೆ. ಈ ಬಗ್ಗೆ ಕುಂದಾಪುರ  ಗ್ರಾಮಾಂತರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 46/2022 ಕಲಂ: 27(b)   NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಲ್ಪೆ:  ದಿನಾಂಕ 14/09/2022 ರಂದು 11:00  ಗಂಟೆಗೆ ಪಿಎಸ್ಐ ಸುಷ್ಮಾ ಜಿ ಭಂಡಾರಿ ರವರು ರೌಂಡ್ಸ ಕರ್ತವ್ಯದಲ್ಲಿರುವಾಗ ಪಡುತೋನ್ಸೆ  ಗ್ರಾಮದ ಹೂಡೆ ಜಂಕ್ಷನ್ ಬಳಿ ಒಬ್ಬ ವ್ಯಕ್ತಿ ನಿಂತಿದ್ದು,ಆತನನ್ನು  ವಿಚಾರಿಸಲಾಗಿ ಆತನ ತನ್ನ ಹೆಸರು ಮೊಹಮ್ಮದ್ ಸಮೀರ್ ಎಂದು ತಿಳಿಸಿದ್ದು ಅವನ  ಬಾಯಿಯಿಂದ ಗಾಂಜಾದಂತಹ ವಾಸನೆ ಬಂದಿರುತ್ತದೆ. ಅವನು ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಇದ್ದು ಅವನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ಬಗ್ಗೆ  ಪ್ರೊಫೆಸರ್ ಅಂಡ್ ಹೆಡ್  ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು  ಇವರನ್ನು ಪರೀಕ್ಷಿಸಿದ ವೈದ್ಯರು ಮೊಹಮ್ಮದ್ ಸಮೀರ್, ಇವರು ಗಾಂಜಾ ಸೇವನೆ ಮಾಡಿದ್ದಾಗಿ ವರದಿಯನ್ನು ನೀಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 78/2022 ಕಲಂ: 27(b)   NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ: ದಿನಾಂಕ 14-09-2022 ರಂದು 17:00 ಗಂಟೆಗೆ ಸದಾಶಿವ ಆರ್ ಗವರೋಜಿ, ಪಿ.ಎಸ್.ಐ. ಕುಂದಾಪುರ ಪೊಲೀಸ್ ಠಾಣೆ ಇವರು ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ಕಸಬಾ ಗ್ರಾಮದ ಮೀನು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ  ಠಾಣಾ ಸಿಬ್ಬಂದಿ  ಶ್ರೀಮತಿ ರಮ್ಯಾರವರು ನೀಡಿದ  ಖಚಿತ ಮಾಹಿತಿ ಮೇರೆಗೆ  ಸಿಬ್ಬಂದಿಯವರೊಂದಿಗೆ   ಇಲಾಖಾ ವಾಹನದಲ್ಲಿ  17:25 ಗಂಟೆಗೆ ಸದ್ರಿ ಸ್ಥಳಕ್ಕೆ  ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ಕಸಬಾ ಗ್ರಾಮದ ಮೀನು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು, 00 ರಿಂದ 99 ರ ಒಳಗೆ ಯಾವುದೇ ನಂಬರ್‌ ಬಂದರೆ 1/-ರೂ ಗೆ 70/-ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ನಂಬ್ರ ಬರೆದು ಕೊಡುತ್ತಿದ್ದು, ಮಟ್ಕಾ ಜುಗಾರಿ ಆಟ ಆಡುತ್ತಿದ್ದುದನ್ನು  ಖಚಿತಪಡಿಸಿಕೊಂಡು, ಸ್ಥಳಕ್ಕೆ ಪಂಚಾಯತುದಾರರನ್ನು ಬರಮಾಡಿಕೊಂಡು 17:40 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು , ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಸುಖೇಶ್ ಆಚಾರಿ ಪ್ರಾಯ 30 ವರ್ಷ ತಂದೆ:  ಉಮೇಶ್ ಆಚಾರಿ,ವಾಸ: ಫೇರಿ ರಸ್ತೆ, ಕುಂದಾಪುರ ಕಸಬಾ ಗ್ರಾಮ ಕುಂದಾಪುರ ಈತನನ್ನು ಹಿಡಿದಾಗ ಆತನು ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ತನ್ನ ತಪ್ಪಿತವನ್ನು ಒಪ್ಪಿಕೊಂಡಿದ್ದು  ಆತನ  ಹೆಸರು ವಿಳಾಸ ತಿಳಿದು, ಆಪಾದಿತನನ್ನು ವಶಕ್ಕೆ ಪಡೆದು ಆತನಿಂದ  ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 570/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾಧೀನಪಡಿಸಿ ಕೊಳ್ಳಲಾಯಿತು. ಈ ಬಗ್ಗೆ ಕುಂದಾಪುರ  ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 103/2022 ಕಲಂ: 78 (i) (iii) KP ACT ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

ಅಸ್ವಾಭಾವಿಕ ಮರಣ ಪ್ರಕರಣ ‌

  • ಕೊಲ್ಲೂರು: ಪಿರ್ಯಾದಿ ವಿಜಯ್  ದೇವಾಡಿಗರವರ  ಅಣ್ಣನಾದ  ಸಂಜೀವ ದೇವಾಡಿಗ (48)  ರವರು  ಕಳೆದ  10-12  ವರ್ಷಗಳಿಂದ  ಮಾನಸಿಕ ಖಾಯಿಲೆ  ಹಾಗೂ  ಪೀಡ್ಸ್  ಮತ್ತು  ಉಬ್ಬಸ  ಖಾಯಿಲೆಯಿಂದ ಬಳಲುತ್ತಿದವರು  ಕುಂದಾಪುರ ಸರಕಾರಿ ಆಸ್ಪತ್ರೆ ಮತ್ತು ಆಲೂರು  ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದು  ಅಲೆಮಾರಿ  ಜೀವನ ನಡೆಸುತ್ತಿದ್ದವರು  ಸರಿಯಾಗಿ ಮನೆಗೆ ಹೋಗದೇ ಮಾರಣಕಟ್ಟೆ ಪರಿಸರ ಇತರೇ ಕಡೆಗಳಲ್ಲಿ  ಉಳಿಯುತಿದ್ದು  ಅಪರೂಪಕೊಮ್ಮೆ  ಮನೆಗೆ ಬಂದು ಹೋಗುತ್ತಿದವರು ದಿನಾಂಕ: 02/08/20222 ರಂದು  ಮನೆಗೆ ಬಂದು   ದಿನಾಂಕ  03-08-2022 ರಂದು ಬೆಳಿಗ್ಗೆ  06-00 ಗಂಟೆ  ಮನೆಯಿಂದ  ಹೋದವರನ್ನು ಬಳಿಕ ಯಾರಿಗೂ ಎಲ್ಲಿಯೂ  ನೋಡಲು ಸಿಗದೇ  ಪಿರ್ಯಾಧಿದಾರರು  ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ನಿನ್ನೆ ದಿನ ದಿನಾಂಕ: 15/09/2022 ರಂದು ಸಂಜೆ 5:30 ಗಂಟೆಗೆ  ಚಿತ್ತೂರು ಗ್ರಾಮದ  ದ್ಯಾಸಕೇರಿ  ಎಂಬಲ್ಲಿ ಕೊಲ್ಲೂರು ಮೂಕಾಂಬಿಕಾ  ಅಭಯಾರಣ್ಯದ ಪಹರೆಗೆ  ಕಟ್ಟಿಗೆ ಹೋದ  ಮಹಿಳೆಯರಿಗೆ   ಕಾಡಿನಲ್ಲಿ ಒಂದು ಗಂಡಸಿನ ಮೃತಶರೀರ ಕೊಳೆತು ಅಸ್ಥಿಪಂಜರ  ಮಾತ್ರ ಇರುವುದು ಕಂಡಿರುವುದಾಗಿ  ಸ್ಥಳೀಯರಲ್ಲಿ ತಿಳಿಸಿದಂತೆ   ಪಿರ್ಯಾಧಿದಾರರು  ಸ್ಥಳೀಯರೊಂದಿಗೆ  ಹೋಗಿ   ಹುಡುಕಲಾಗಿ ವಿಪರೀತ ಮಳೆ ಮತ್ತು  ಕತ್ತಲಾಗಿರುವುದರಿಂದ  ಸರಿಯಾದ ಬೆಳಕಿನ ವ್ಯವಸ್ಥೆ  ಇಲ್ಲದೇ  ಕಾಡಿನಲ್ಲಿ  ದಾರಿ ತಿಳಿಯದೇ ವಾಪಸು ಬಂದು  ಈ ದಿನ ದಿನಾಂಕ:  16-09-2022 ರಂದು   ಬೆಳಿಗ್ಗೆ 06:00 ಗಂಟೆಗೆ ಪಿರ್ಯಾಧಿದಾರರು  ಸ್ಥಳೀಯರೊಂದಿಗೆ  ಕಾಡಿನಲ್ಲಿ  ಹೋಗಿ ಹುಡುಕಾಡುತ್ತಿದಾಗ  06:45 ಗಂಟೆಗೆ  ದ್ಯಾಸಕೇರಿ ವನ್ಯ ಜೀವಿ ವಲಯದ ಆಭಯಾರಣ್ಯದ ಜನಸಂಚಾರವಿಲ್ಲದ ಕಾಲು ದಾರಿಯಲ್ಲಿ  ಸಂಪೂರ್ಣ ಕೊಳೆತು ಹೋದ ಮೃತಶರೀರದ ಅಸ್ಥಿಪಂಜರ ಪತ್ತೆಯಾಗಿದ್ದು ಮೃತ ಶರೀರದ ಮೈ  ಮೇಲೆ ಇರುವ  ಬಟ್ಟೆಗಳು ಮತ್ತು ಚಪ್ಪಲಿಯನ್ನು  ಪಿರ್ಯಾಧಿದಾರರು ನೋಡಿ ಗುರುತಿಸಿ  ಇದು  ಸಂಜೀವ  ದೇವಾಡಿಗ  ಮೃತಶರೀರ ಆಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯು.ಡಿ.ಆರ್ 11/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 16-09-2022 06:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080