ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಹೆಬ್ರಿ: ದಿನಾಂಕ 15/09/2021 ರಂದು ಜಿನದತ್ತ (42) ಇವರು ತನ್ನ KA-19 R-3377 ನೇ ಮೋಟಾರ್ ಸೈಕಲ್ ನ್ನು ಮುನಿಯಲ್ ಕಡೆಯಿಂದ ವರಂಗ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದು ಅವರು ಸಮಯ ಸುಮಾರು ಸಂಜೆ 6:10 ಗಂಟೆಗೆ ವರಂಗ ಗ್ರಾಮದ ವರಂಗ ಕೆಲ್ ಟೆಕ್ ಸಮೀಪದ ರಸ್ತೆಯ ತಿರುವಿನ ಬಳಿ ತಲುಪಿದಾಗ ಅವರ ಎದುರುಗಡೆಯಿಂದ KA-02 D-0869 ನೇ ಲಾರಿಯನ್ನು ಅದರ ಚಾಲಕ ಅಬ್ದುಲ್ ಹಫೀಜ್ ಇವರು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದ ಪರಿಣಾಮ ಲಾರಿಯ ಬಲಬದಿಯ ಹಿಂದಿನ ಚಕ್ರವು ಮೋಟಾರ್ ಸೈಕಲ್ ಗೆ ತಾಗಿದ ಪರಿಣಾಮ ಜಿನದತ್ತ ಇವರು ಮೋಟಾರ್ ಸೈಕಲ್ ಸಮೇತ  ರಸ್ತೆಯ ಎಡಬದಿಗೆ ರಸ್ತೆಗೆ ಬಿದಿದ್ದು ಅವರ ಹಿಂದುಗಡೆಯಿಂದ ಬರುತ್ತಿದ್ದ KA-19 AC-3707 ನೇ ಈಚರ್ ವಾಹನವನ್ನು ಅದರ ಚಾಲಕ ಮಂಜೇಗೌಡ ಇವರ ನಿರ್ಲಕ್ಷತನದ ಚಲಾಯಿಸಿ ರಸ್ತೆಯಲ್ಲಿ ಬಿದ್ದಿದ್ದ ಸವಾರ ಜಿನದತ್ತ ಇವರನ್ನು ಮೋಟಾರ್ ಸೈಕಲ್ ಸಮೇತ ಸ್ವಲ್ಪ ದೂರದ ವರೆಗೆ ಎಳೆದು ಕೊಂಡು ಹೋಗಿ ರಸ್ತೆಯ ಬದಿಯಲ್ಲಿ ನಿಂತು ಕೊಂಡಿತ್ತು. ಇದರಿಂದ ಜಿನದತ್ತ ಇವರಿಗೆ ಎದೆಗೆ ಅಳವಾದ ಹರಿದ ತೀವ್ರ ಸ್ವರೂಪದ ಗಾಯವಾಗಿರುವುದಲ್ಲದೇ ದೇಹದ ಇನ್ನಿತ್ತರ ಕಡೆಗೆ ರಕ್ತಗಾಯವಾಗಿ ಸ್ಥಳದಲ್ಲಿ ಮೃತ ಪಟ್ಟಿದ್ದು. ಈ ಅಪಘಾತವು ಲಾರಿಯ ಚಾಲಕ ಅಬ್ದುಲ್ ಹಫೀಜ್ ಮತ್ತು ಈಚರ್ ಲಾರಿಯ ಚಾಲಕ ಮಂಜೇಗೌಡ ಇವರುಗಳ ನಿರ್ಲಕ್ಷತನದ ಚಾಲನೆಯಿಂದ ಅಗಿರುತ್ತದೆ, ಎಂಬುದಾಗಿ ರತ್ನಾಕರ ಪೂಜಾರಿ (41) ತಂದೆ: ಕಾಡಿಯಾ ಪೂಜಾರಿ ವಾಸ: ಪೆರ್ಮಾನು ಮಾತಿಬೆಟ್ಟು ವರಂಗ ಗ್ರಾಮ ಹೆಬ್ರಿ ಇವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2021 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ದಿನಾಂಕ 14/09/2021 ರಂದು ಪಿರ್ಯಾದಿದಾರರಾದ ಸಾದಾಬ್  ನಿಸಾರ್  ಅಹಮ್ಮದ್  ಸೈಯದ್   (25) ತಂದೆ ನಿಸಾರ ಆಹಮ್ಮದ್ ಸೈಯದ್ ವಾಸ- ಮನೆ ನಂಬ್ರ 251 NH 66 ಮಾಣಿಕ್ ಬಾಗ ಅಟೋಮೋಬೈಲ್ ಎದುರು  ಬಾಳೀಗುಳೀ ಅಂಚೆ ಮತ್ತು ಅಲ್ಗೇರಿ ಗ್ರಾಮ ಅಂಕೋಲಾ ತಾಲೂಕು  ಉತ್ತರಕನ್ನಡ ಇವರು ತನ್ನ ಅಕ್ಕ ನಯಾಮಾಬಿ ಎನ್ ಸೈಯದ್ ರವರ KA-30 S-3547 ನೇ ಸ್ಕೂಟರನಲ್ಲಿ    ಹಿಂಬದಿ ಕುಳಿತು ಸ್ಕೂಟರನ್ನು ಕಲ್ಸಂಕ ಕಡೆಯಿಂದ ಅಂಬಾಗಿಲು ಕಡೆಗೆ ಸವಾರಿ ಮಾಡುತ್ತಾ ಸಮಯ ಸುಮಾರು ರಾತ್ರಿ 8:55 ಘಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ತಾಂಗದಗಡಿ ಶ್ರಿ   ವೀರಾಂಜೆನೇಯ ಗುಡಿ ಬಳಿ ತಲುಪವಾಗ ನಯಾಮಾಬಿ ಎನ್ ಸೈಯದ್ ರವರು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿ  ತೀರಾ  ಬಲಬದಿಗೆ  ಬಂದು  ರಸ್ತೆಯ  ಡಿವೈಡರಗೆ  ಡಿಕ್ಕಿ  ಹೊಡೆದ  ಪರೀಣಾಮ ಸ್ಕೂಟರ ಸಮೇತ  ರಸ್ತೆಗೆ ಬಿದ್ದು ಸಾದಾಬ್ ನಿಸಾರ್  ಅಹಮ್ಮದ್  ಸೈಯದ್ ರವರಿಗೆ ಎಡ ಕೈ ಗೆ ಮೋಳೆಮುರಿತ ಮತ್ತು ಎರಡೂ ಕಾಲುಗಳಿಗೆ ಮೋಳೆ ಮುರಿತ ಉಂಟಾಗಿ ಆದರ್ಶ ಅಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆ ಪಡೆಯುತಿದ್ದು ಸ್ಕೂಟರ ಸವಾರೆಗೆ ತರಚಿದ ಗಾಯವಾಗಿದ್ದು ಹೊರರೋಗಿಯಾಗಿ  ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾಧ ಶ್ರೀಮತಿ ಮಂಜಕ್ಕ (38) ಗಂಡ: ಹನುಮಂತಪ್ಪ ವಾಸ:ಬಾಚಿನಗುಡ್ಡ, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ ಇವರು ಕಾಪು ತಾಲೂಕು,ಬಡಾಗ್ರಾಮದ ಕೃಷ್ಣ ಶೆಟ್ಟಿ ಎಂಬವರ ಕೃಷ್ಣ ಹೋಲೋಬ್ಲಾಕ್ಸ್ ಬಳಿ ಇರುವ ಮನೆಯಲ್ಲಿ ಗಂಡ , ಇಬ್ಬರು ಹೆಣ್ಣುಮಕ್ಕಳ ಜೊತೆ ವಾಸವಾಗಿರುತ್ತಾರೆ ,ಕೂಲಿ ಕೆಲಸ ಮಾಡಿ ಬಂದ ಸಂಬಳದ ಉಳಿತಾಯವಾಗಿ ನಗದು ರೂಪಾಯಿ 2,52,000/- ರೂಪಾಯಿಯನ್ನು ತನ್ನ ಮನೆಯ ಕಬ್ಬಿಣದ ಟೇಬಲಿನ ಡ್ರಾವರುಗಳಲ್ಲಿ ಇರಿಸಿ ಎಂದಿನಂತೆ ದಿನಾಂಕ 15/09/2021 ರಂದು ಬೆಳಗ್ಗೆ 08:30 ಗಂಟೆಗೆ ಶ್ರೀಮತಿ ಮಂಜಕ್ಕ ರವರ ಮಕ್ಕಳು ಶಾಲೆಗೆ ಹೋದ ಬಳಿಕ ಇವರು ಮನೆಯ ಬಾಗಿಲಿಗೆ ಬೀಗ ಹಾಕಿ ಕೃಷ್ಣ ಶೆಟ್ಟಿಯವರ ಮನಗೆ ಕೂಲಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ 13:00 ಗಂಟೆಗೆ ಶ್ರೀಮತಿ ಮಂಜಕ್ಕ ರವರ ಮಗಳು ಗಂಗಮ್ಮ ಶಾಲೆಯಿಂದ ಬಂದು ಶ್ರೀಮತಿ ಮಂಜಕ್ಕ ಇವರಲ್ಲಿ ಮನೆಯ ಕೀ ಕೇಳಿ ಪಡೆದು ಮನೆಗೆ ಹೋಗಿ ಮನೆಯ ಬಾಗಿಲನ್ನು ತೆರೆದು ನೋಡಿದಾಗ, ಡ್ರಾವರ್ ತೆರೆದುಕೊಂಡು ಬ್ಯಾಗ್ ಗಳು  ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದು ಈ ವಿಚಾರವನ್ನು ಗಂಗಮ್ಮ ತಿಳಿಸಿದಾಗ, ಶ್ರೀಮತಿ ಮಂಜಕ್ಕ ರವರು ಮನಗೆ ಬಂದು ನೋಡಿದ್ದು, ಯಾರೋ ಕಳ್ಳರು ಮನೆಯ ಹಿಂಭಾಗದ ಮರದ ಬಾಗಿಲನ್ನು ಬಲವಂತವಾಗಿ ದೂಡಿ ತುಂಡಾದ ಬಾಗಿಲಿನ ಮೂಲಕ ಒಳ ಪ್ರವೇಶಿಸಿ  ಕಬ್ಬಿಣದ ಟೇಬಲ್ ನಲ್ಲಿ ಮೇಲಿನ ಡ್ರಾವರ್ ನಲ್ಲಿ ಇರಿದ್ದ 500 ರೂಪಾಯಿ ಮುಖಬೆಲೆಯ 20,000 ರುಪಾಯಿಯ 12 ಕಟ್ಟುಗಳು(2,40,000/=), ಹಾಗೂ ಕೆಳಗಿನ ಡ್ರಾವರ್ ನಲ್ಲಿ ಇರಿಸಿದ್ದ 500 ರೂಪಾಯಿ ಮುಖಬೆಲೆಯ 12,000 ರೂಪಾಯಿಗಳನ್ನು ಯಾರೋ ಕಳ್ಳರು ಬೆಳಗ್ಗೆ 08:30 ಗಂಟೆಯಿಂದ ಮದ್ಯಾಹ್ನ 13:00 ಗಂಟೆಯ ಮದ್ಯ ಅವದಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಒಟ್ಟು ನಗದು 2,52,000/ ರೂಪಾಯಿ ಆಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2021 ಕಲ: 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 12//09/2021 ರಂದು 13:30 ಗಂಟೆಯ ಸಮಯಕ್ಕೆ ಸದಾಶಿವ ಆರ್. ಗವರೋಜಿ  ಪಿಎಸ್‌ಐ ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ ಕುಂದಾಪುರ ತಾಲೂಕು ಹಂಗಳೂರು  ಗ್ರಾಮದ ಚೆನ್ನಯ್ಯ ಶೆಟ್ಟಿ –ಚಿಕ್ಕಮ್ಮ ದೇವಸ್ಥಾನದ ಬಳಿ  ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆಂದು ಬಂದ  ಖಚಿತ ಮಾಹಿತಿ ಮೇರೆಗೆ  ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ 13:45 ಗಂಟೆಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ಚೆನ್ನಯ್ಯ ಶೆಟ್ಟಿ –ಚಿಕ್ಕಮ್ಮ ದೇವಸ್ಥಾನ ತಲುಪಿ  ಇಲಾಖಾ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ 4 ಜನರು ಸುತ್ತುವರಿದು ಕುಳಿತುಕೊಂಡಿದ್ದು ಅಂದರ್ ಬಾಹರ್ ಎಂಬ ಇಸ್ಪೀಟ್ ಆಟದಲ್ಲಿ ಹಣವನ್ನು ಪಣವಾಗಿಟ್ಟು  ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 14:00  ಗಂಟೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1) ಗಣೇಶ (47), 2).ಅಖಿಲೇಶ್ ಪೂಜಾರಿ (24), 3)ಸಂತೋಷ (37), 4) ನಾಗೇಂದ್ರಪೂಜಾರಿ(32) ಇವರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅವರುಗಳು ತಾವು ಇಸ್ಪೀಟ್ ಜುಗಾರಿ ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಟ ಆಡುತ್ತಿದ್ದುದಾಗಿ ಒಪ್ಪಿಕೊಂಡಿದ್ದರಿಂದ ಅವರನ್ನು ವಶಕ್ಕೆ ಪಡೆದು ಆರೋಪಿತರು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 3800/, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52, ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸದ್ರಿ ದೂರನ್ನು ಠಾಣಾ NC No 195/PTN/KND/2021 ರಂತೆ ದಾಖಲಿಸಿ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2021 ಕಲಂ:87 ಕರ್ನಾಟಕ ಪೊಲೀಸ್‌ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 14/09/2021 ರಂದು ಅಶೋಕ್ ಕುಮಾರ್ ಪಿ.ಎಸ್.ಐ-2 ಉಡುಪಿ ನಗರ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಮಾನ್ಯ ಆಸ್ಕರ್ ಪೆರ್ನಾಂಡಿಸ್ ರವರ ಮೃತ ದೇಹ ಉಡುಪಿಗೆ ಆಗಮನದ ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗ, 16:45 ಗಂಟೆ ಸುಮಾರಿಗೆ ಕೆಲವು ಜನರು ಬೊರ್ಡ ಹೈಸ್ಕೂಲ್ ಎದುರು ಸಾರ್ವಜನಿಕ ಸ್ಥಳದಲ್ಲಿ ಸೇರಿ ಸಾಂಕೇತಿಕವಾಗಿ ದೆಹಲಿಯ ರಾಬಿಯಾ ಸೈಪಿ, ಸಿವಿಲ್ ಡಿಫೆನ್ಸ್ ಮಹಿಳಾ ಪೊಲೀಸ್ ಅಧಿಕಾರಿ ರವರ ಮೇಲೆ ನಡೆದ ಅತ್ಯಾಚಾರ ಮತ್ತು ಆಕೆಯ ಹತ್ಯೆಯನ್ನು ಖಂಡಿಸಿ ಮತ್ತು ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಪ್ರಾರಂಭಿಸಿರುವುದಾಗಿ ದೊರೆತ ಮಾಹಿತಿಯಂತೆ ಅಶೋಕ್ ಕುಮಾರ್ ಪಿ.ಎಸ್.ಐ-2 ರವರು ಸಿಬ್ಬಂದಿಯವರೊಂದಿಗೆ  ಸ್ಧಳಕ್ಕೆ ಹೋಗಿ ನೋಡಲಾಗಿ  ಸದ್ರಿ ಸ್ಥಳದಲ್ಲಿ ಸುಮಾರು 200-300 ಜನರು ಸೇರಿದ್ದು, ಅವರುಗಳಿಗೆ ಸದ್ರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಇಲ್ಲವಾಗಿ ತಿಳಿ ಹೇಳಿದರೂ ಕೂಡ ಅವರುಗಳು ಪ್ರತಿಭಟನೆ ಮುಂದುವರೆಸಿ, ಜಾಥಾ ಮಾಡಲು ಮುಂದಾಗಿದ್ದು, ಅವರುಗಳಿಗೆ ಪೊಲೀಸ್ ಇಲಾಖೆಯಿಂದ ಅಥವಾ ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆದುಕೊಂಡಿಲ್ಲವಾಗಿ ಮನವರಿಕೆ ಮಾಡಿದರೂ ಕೂಡಾ ಸಂಘಟನೆಗಾರರಾದ 1) ಅಬ್ದುಲ್ ಮಜೀದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಎಸ್.ಡಿ.ಪಿ.ಐ, ಉಡುಪಿ ಜಿಲ್ಲೆ, 2) ಅಬ್ದುಲ್ ಬಶೀರ್ ಸದಸ್ಯರು, ಎಸ್.ಡಿ.ಪಿ.ಐ, ಉಡುಪಿ 3) ಇಲ್ಯಾಸ್ ಸಾಸ್ತಾನ ,4) ಇಲ್ಯಾಸ್ ತುಂಬೆ, 5) ಮೌಸಂ ಮೌಲಾನಾ 6) ಇಬ್ರಾಹಿಂ ಕೋಟಾ, 7)ಉಮಾನಾಥ ಕೋಟ್ಯಾನ್, 8) ಮಹಮ್ಮದ್ ಅಜಾದಿ, 9) ಜಮೀರ ಅಹ್ಮದ್ ರಶೀದ್, 10)ಮಾರ್ಟಿನ್ ಲೂಯಿಸ್, 11) ಶ್ರೀಮತಿ ನಜೀಮ್ ಝರಾಯ, 12) ಶ್ರೀಮತಿ ರಹೀಮಾ 13) ಶ್ರೀಮತಿ ನಾಝಿ , 14)ಶಿವರಾಮ  ದೇವಾಡಿಗ, 15)ಮಹಮ್ಮದ್ ಸಾಹದ್, 16)ಸಿಯಾನ್ ಕಂಡ್ಲೂರು, 17)ಅಬ್ದುಲ್ ರೆಹಮಾನ್, 18)ಮೊಹಮ್ಮದ್ ಶಾಹಿದ್, 19)ಮುಕ್ತಾರ್, 20) ಅಸದ್, 21)ಸಲೀಂ,22)ರೆಹಮಾನ್, 23)ಜಮೀರ್ ಅಹ್ಮದ್, 24)ಮಹಮ್ಮದ್ ಶರೀಪ್, 25)ವಿಘ್ನೇಶ್, 26)ಮೊಹಮ್ಮದ್ ರಫೀಕ್, 27), ಸಚಿನ್ ಆಚಾರ್ಯ, ,28)ರೆಹಮತುನ್ನೀಸಾ 29)ರಫೀಕ್- 30)ಅಬ್ದಲ್ ರೆಹಮಾನ್ 31)ಇಸ್ಮಾಯಿಲ್ ಹುಸೈನ್. 32)ಸಾದಿಕ್, 33)ಅಬ್ದಲ್ ವಾಜೀದ್ 34)ಇರ್ಪಾಜ್, 35)ಲಿಯಾಖತ್ ರವರ ನೇತೃತ್ವದಲ್ಲಿ ಅಶೋಕ್ ಕುಮಾರ್ ಪಿ.ಎಸ್.ಐ-2 ರವರ ಸೂಚನೆಯನ್ನು ಉಲ್ಲಂಘಿಸಿ ಬೋರ್ಡ ಹೈ ಸ್ಕೂಲ್ ಬಳಿ ಪ್ರತಿಭಟನೆ ನಡೆಸಿ ಅಲ್ಲಿಂದ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿಯ ವರೆಗೆ ಘೋಷಣೆಯನ್ನು ಕೂಗುತ್ತಾ, ಜಾಥ ನಡೆಸಿ ಸದ್ರಿ ಸ್ಧಳದಲ್ಲಿ ಕೂಡ ಪ್ರತಿಭಟನೆ ನಡೆಸಿ ಘೋಷಣೆಯನ್ನು ಕೂಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 131/2021 ಕಲಂ: 107, 109, 112 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 16-09-2021 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080