ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಉಡುಪಿ :  ಪಿರ್ಯಾದುದಾರರು ಕು. ಮಾಧುರಿ ಮಾಧವ ಪುರಾಣಿಕ್‌ ಪ್ರಾಯ 23 ವರ್ಷ ತಂದೆ: ಮಾಧವ ಅನಂತ ಪುರಾಣಿಕ್‌  ವಾಸ: ಗೋಪಾಲಕೃಷ್ಣ ದೇವಸ್ಥಾನ, ಹುಲೇಕಲ್‌, ಶಿರಸಿ ತಾಲೂಕು, ಉತ್ತರಕನ್ನಡ ಜಿಲ್ಲೆ ಇವರು ಕೊಣಾಜೆಯಲ್ಲಿ ಎಂ.ಎಸ್ಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ದಿನಾಂಕ 16/09/2021 ರಂದು ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್‌ ನಂಬ್ರ: KA 27 F 617 ನೇದರಲ್ಲಿ ಮಂಗಳೂರಿನಿಂದ ಸ್ವಂತ ಊರಾದ ಶಿರಸಿಗೆ ಹೊರಟಿದ್ದು, ಬೆಳಿಗ್ಗೆ 08:25 ಗಂಟೆಗೆ ಬಸ್ಸು ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ತಲುಪಿದ್ದು, ಪಿರ್ಯಾದುದಾರರು ತಮ್ಮ ಬ್ಯಾಗ್‌ಗಳನ್ನು ಬಸ್ಸಿನ ಸೀಟಿನಲ್ಲಿ ಇಟ್ಟು, ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋಗಿ ಬಂದು ನೋಡಿದಾಗ ಪಿರ್ಯಾದುದಾರರ ಬಾಬ್ತು HP ಕಂಪೆನಿಯ ಲ್ಯಾಪ್‌ಟಾಪ್‌ ಇರುವ ಬ್ಯಾಗ್‌ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಬ್ಯಾಗ್‌ ನಲ್ಲಿ ಲ್ಯಾಪ್‌ಟಾಪ್‌ ಜೊತೆಗೆ ಪಿರ್ಯಾದುದಾರರ ಆಧಾರ್‌ ಕಾರ್ಡ್‌, ವೋಟರ್‌ ಐ.ಡಿ, ಐ.ಡಿ ಕಾರ್ಡ್‌, ಲೈಬ್ರೇರಿ ಕಾರ್ಡ್‌, ಎಟಿಎಂ ಕಾರ್ಡ್‌, ಟಿ.ಸಿ, ಪವರ್‌ ಬ್ಯಾಂಕ್‌ ಡ್ರೈವಿಂಗ್‌ ಲೈಸೆನ್ಸ್‌, ಎಂ.ಐ ಬ್ಯಾಂಡ್‌ ಸೊತ್ತುಗಳು ಸಹ ಇದ್ದು, ಕಳವಾದ ಸೊತ್ತುಗಳ ಮೌಲ್ಯ ರೂ. 35,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 133/2021 ಕಲಂ 379 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು:  ಪಿರ್ಯಾಧಿ ಶ್ರೀಮತಿ ಅಖಿಲಾ (34 ವರ್ಷ) ರವರ ತಂದೆ ಶ್ಯಾಮ ಕೋಟ್ಯಾನ್ (65) ವರ್ಷ ರವರು ತನ್ನ ಹೆಂಡತಿಯೊಂದಿಗೆ ನಿಟ್ಟೆ ಗ್ರಾಮದ ಮಜಾಲು ಮನೆಯಲ್ಲಿ ವಾಸ ವಿದ್ದು, ಶ್ಯಾಮ ಕೋಟ್ಯಾನ್ ರವರು  ಪಡುಬಿದ್ರಿಯ ಹೋಟೇಲಿನಲ್ಲಿ ಕೆಲಸ ಮಾಡುತ್ತಿದ್ದು ಇತ್ತೀಚೇಗೆ ಸುಮಾರು 5 ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದು, ದಿನಾಂಕ: 13/09/2021 ರಂದು ಬೆಳಿಗ್ಗೆ 6:00 ಗಂಟೆಗೆ ಮನೆಯಿಂದ ಹೋದವರು ದಿನಾಂಕ: 14/09/2021 ರ ವರೆಗೂ ಬಾರದ ಕಾರಣ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿರುತ್ತೇನೆ. ಈ ದಿನ ದಿನಾಂಕ: 16/09/2021 ರಂದು 12:00 ಗಂಟೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯವರು ಪೋನ್ ಮಾಡಿ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮಧುರಪಟ್ಟಣ ಬಸದಿಯ ಬಳಿ ಸ್ವರ್ಣ ನದಿಯಲ್ಲಿ ಅಪರಿಚಿತ ಗಂಡಸಿನ ಮೃತ ದೇಹ ದೊರಕಿರುವ ಬಗ್ಗೆ ಮಾಹಿತಿ ಇದ್ದು ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಿದ್ದು ಹೋಗಿ ಗುರುತಿಸಲು ತಿಳಿಸಿದಂತೆ ಅದರಂತೆ ಅಜೆಕಾರಿನ ಶವಗಾರಕ್ಕೆ ಬಂದು ಮೃತ ದೇಹವನ್ನು ನೋಡಿದ್ದು ಇದ್ದು ನಮ್ಮ ತಂದೆಯಾದ ಶ್ಯಾಮ ಕೋಟ್ಯಾನ್ ರವರ ಮೃತ ದೇಹವಾಗಿದ್ದು ಅವರು ಸುಮಾರು 4-5 ವರ್ಷಗಳಿಂದ ಬಿ.ಪಿ,ಶುಗರ್ ಖಾಯಿಲೆ ಹಾಗೂ ಚರ್ಮದ ಅಲರ್ಜಿಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಮನನೊಂದು ಜೀವನದಲ್ಲಿ ಬೇಸರಗೊಂಡು ದಿನಾಂಕ: 13/09/2021 ರಂದು ಮನೆ ಬಿಟ್ಟು ಹೋಗಿದ್ದು, ನದಿಯ ನೀರಿಗೆ ಬಿದ್ದು ಮೃತ ಪಟ್ಟಿರಬಹುದು ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬಿತ್ಯಾದಿ.  ಈ ಬಗ್ಗೆ ಅಜೆಕಾರು ಠಾಣಾ UDR No: 15/2021 U/s 174 CrPC  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ :  ಉಡುಪಿ  ತಾಲೂಕು  ಕೊಡವೂರು  ಗ್ರಾಮದ  ಮಧ್ವನಗರದ  ಮನೆನಂಬ್ರ  19-27 ರಲ್ಲಿ  ವಾಸವಿದ್ದ  ಫಿರ್ಯಾದಿದುದಾರ ಪ್ರಕಾಶ ಪೂಜಾರಿ ,  ಪ್ರಾಯ: 52 ವರ್ಷ ತಂದೆ:  ದಿ||  ಸಂಜೀವ ಮೇಸ್ತ್ರಿ ವಾಸ: ಮನೆನಂಬ್ರ  19-18, ಇಂದಿರಾಸದನ , ಮಧ್ವನಗರ, ಮೂಡಬೆಟ್ಟು, ಕೊಡವೂರು ಅಂಚೆ, ಉಡುಪಿ  ತಾಲೂಕು, ಇವರ  ಅಣ್ಣನಾದ ಅಶೋಕ್‌ ಕುಮಾರ್‌ (57 ವರ್ಷ)ರವರು ವೃತ್ತಿಯಲ್ಲಿ ಬಸ್‌ ಚಾಲಕರಾಗಿದ್ದವರು, ಕಳೆದ  ಹದಿನ್ನೈದು  ವರ್ಷಗಳಿಂದ  ವಿಪರೀತ  ಮದ್ಯಸೇವನೆಯ  ಚಟವುಳ್ಳವರಾಗಿದ್ದು,  ತನ್ನ ವಿಪರೀತ  ಮದ್ಯಸೇವನೆಯ ಚಟದಿಂದ  ಜೀವನದಲ್ಲಿ  ಜಿಗುಪ್ಸೆಗೊಂಡು  ಈ  ದಿನ ದಿನಾಂಕ: 16/09/2021 ರಂದು  ಬೆಳಿಗ್ಗೆ  5:00 ಗಂಟೆಯಿಂದ   6:30 ಗಂಟೆಯ  ಮಧ್ಯಾವಧಿಯಲ್ಲಿ  ಆದಿ  ಉಡುಪಿಯ  ಅಂಬೇಡ್ಕರ್‌  ಭವನದ  ಬಳಿಯಿರುವ  ಸರ್ಕಾರಿ ಬಾವಿಯ ನೀರಿಗೆ  ಹಾರಿ,  ಆತ್ಮಹತ್ಯೆಯನ್ನು  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣಾ ಯುಡಿ ಆರ್  ನಂ -37/2021 ಕಲಂ 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 16-09-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080